ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದಬಾರಂದಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಮುದಾಯ ಆರೋಗ್ಯ ಧಿಕಾರಿ ಸತೀಶ್ ಹಾಗೂ ಪಿಎಚ್ಸಿ ದಿವ್ಯ ಅವರಿಂದ ಆರೋಗ್ಯ ಅರಿವು ಹಾಗೂ ವಿದ್ಯಾರ್ಥಿಗಳಿಗೆ ತಪಾಸಣೆ ಕಾರ್ಯಕ್ರಮ ಮತ್ತು ಗಂಗೊಳ್ಳಿ ಮುಖ್ಯ ಆರಕ್ಷಕ ಮಂಜುನಾಥ್ ಅವರಿಂದ ಕಾನೂನು ಅರಿವು ಹಾಗೂ ಉತ್ತಮ ಶಿಸ್ತಿನ ಜೀವನ ಮೂಡಿಸುವ ಕಾರ್ಯಕ್ರಮ ನಡೆಯಿತು.
ಇಂದಿನ ಮಕ್ಕಳು ಉತ್ತಮ ಆರೋಗ್ಯ ರೂಪಿಸುವ ಕುರಿತಾಗಿ ಆಹಾರ ಸೇವನೆ ಕುರಿತು ವ್ಯದ್ಯಾಧಿಕಾರಿ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷ ಮೂಲಕ ತಿಳಿಸಿ ನಂತರ ವೈದ್ಯಕಿಯ ತಪಾಸಣೆ ನೆಡೆಸಿದರು.
ಪ್ರಭಾರ ಮುಖ್ಯ ಶಿಕ್ಷಕರಾದ ತಾರಾ ನಿರೂಪಿಸಿ, ಶಿಕ್ಷಕಿ ವಸಂತಿ ಧನ್ಯವಾದ ಸಲ್ಲಿಸಿದರು.












