ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಸಂಘ ರತ್ನ ಹಾಗೂ ಭಾರತ ಸಂಘ ಸಿರಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಫ್ರೆಂಡ್ಸ್ ಸರ್ಕಲ್ ರಿ. ಮೀನು ಮಾರ್ಕೆಟ್ ರಸ್ತೆ ಕುಂದಾಪುರ ಇದರ 36ನೇ ವರ್ಷದ ಪುರಸಭಾ ವ್ಯಾಪ್ತಿಯ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವು ಕುಂದಾಪುರದ ಬಿಆರ್ ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ನಾಯ್ಕ್ ಸಭಾಧ್ಯಕ್ಷತೆ ವಹಿಸಿ ಫ್ರೆಂಡ್ಸ್ ಸರ್ಕಲ್ ಸಂಸ್ಥೆಯು ಕಳೆದ 35 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸುತ್ತಿದ್ದು ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಪದವಿಪೂರ್ವ ವಿದ್ಯಾರ್ಥಿಗಳಿಗೂ ವಿಸ್ತರಿಸಲಿದೆ ಎಂದು ನುಡಿದರು . ಮುಖ್ಯ ಅತಿಥಿಯಾದ ಚೇತನಾ ಕಿರಣ್ ಮಕ್ಕಳಿಗೆ ಜೀವನ ಮೌಲ್ಯ , ಉತ್ತಮ ಸಂಸ್ಕಾರ ಹಾಗೂ ಆದರ್ಶ ಜೀವನ ಶೈಲಿ ಬಗ್ಗೆ ನುಡಿದರು . ಇನ್ನೋರ್ವ ಮುಖ್ಯ ಅತಿಥಿಯಾದ ಡಾ. ಅಶೋಕ್ ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯ, ಆಹಾರ ಸೇವನೆ ದೈಹಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಮತ್ತೋರ್ವ ಮುಖ್ಯ ಅತಿಥಿಯಾಗಿ ಬಿ.ಆರ್ ರಾಯರ ಹಿಂದೂ ಶಾಲೆಯ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕಗಳು ಮತ್ತು ಮಾದಕ ವಿರೋಧಿ ಜಾಗೃತಿ ಕೋಶ ಇವುಗಳ ಆಶ್ರಯದಲ್ಲಿ ಕುಂದಾಪುರ ಅಬಕಾರಿ ಉಪ ವಿಭಾಗದ ಕಚೇರಿಯ ಸಹಯೋಗದೊಂದಿಗೆ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ “ಮಾದಕ ದ್ರವ್ಯಗಳು ಮತ್ತು ಮನೋವಿಕಾರಕ ಪದಾರ್ಥಗಳು ಮತ್ತು ಸಂಬAಧಿತ ಕಾಯ್ದೆ” ವಿಷಯದ ಕುರಿತು ಉಪನ್ಯಾಸ ನಡೆಯಿತು. ಸಂಪನ್ಮೂಲ ವ್ಯಕ್ತಿ ಕುಂದಾಪುರದ ಉಪ ಅಬಕಾರಿ ಅಧೀಕ್ಷಕ ಶ್ರೀ ಪ್ರಭುಗೌಡ ಎಂ. ಪಾಟೀಲ್ ಅವರು ಮಾತನಾಡಿ, ವಿವಿಧ ರೀತಿಯ ಮಾದಕ ದ್ರವ್ಯಗಳು, ಅವುಗಳ ಸೇವನೆಯ ಲಕ್ಷಣಗಳು, ದೇಹದಲ್ಲಿ ಅವುಗಳ ಉಳಿಯುವ ಅವಧಿ, ದುಷ್ಪರಿಣಾಮಗಳು ಹಾಗೂ ಈ ರೀತಿಯ ವ್ಯಸನಗಳಿಂದ ದೂರವಿರುವ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲಾರದ ಡಾ. ಕೆ. ಉಮೇಶ್ ಶೆಟ್ಟಿ ವಹಿಸಿದ್ದರು. ಉಪಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ರಾಜೇಶ್ ಶೆಟ್ಟಿ ವಕ್ವಾಡಿ, ಪೂಜಾ ಕುಂದರ್ ಮತ್ತು ಮಾದಕ ವಿರೋಧಿ ಜಾಗೃತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘ ರಿ. ಉಡುಪಿ, ಕುಂದಾಪುರ ವಲಯ ಮಂಗಳವಾರ ಕುಂದಾಪುರದ ಹೋಟೆಲ್ ಶೇರೋನ್ ನಲ್ಲಿ ಮೇಕಪ್ ಕಾರ್ಯಗಾರವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾದ ರೇಖಾ ಅರ್ ಆಚಾರ್ಯ, ಜಿಲ್ಲಾ ಅಧ್ಯಕ್ಷರಾದ ಸುನಿತಾ ಗಣೇಶ್, ಮಾಜಿ ಜಿಲ್ಲಾ ಅಧ್ಯಕ್ಷರಾದ ಕಿಶ್ವರ್ ಜಹಾನ್ , ತರಬೇತುದಾರರಾದ ರೇಖಾ ಜಯರಾಮ್, ಕಾರ್ಯದರ್ಶಿಯಾದ ಪ್ರಮೀಳಾಪುತ್ರನ್, ಕೋಶಾಧಿಕಾರಿಯಾದ ಮಾಲತಿ ದೇವಾಡಿಗ, ಇವರೆಲ್ಲರೂ ಸೇರಿ ದೀಪ ಬೇಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮೇಕಪ್ ತರಬೇತಿದಾರರಾದ ಮಂಗಳೂರಿನ ರೇಖಾ ಜಯರಾಮ್ ಅವರು ತರಬೇತಿಯನ್ನು ಅತ್ಯುತ್ತಮವಾಗಿ ನಡೆಸಿಕೊಟ್ಟರು. ಹಾಗೆಯೇ ಅಂತಿಮವಾಗಿ ಎಲ್ಲರಿಗೂ ಸರ್ಟಿಫಿಕೇಟ್ ನೀಡುವುದರ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಪ್ಪುಂದ ವರಲಕ್ಷೀ ಚಾರಿಟೇಬಲ್ ಟ್ರಸ್ಟ ವತಿಯಿಂದ ದತ್ತು ಸ್ವೀಕರಿಸಲ್ಪಟ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷರ ಮುಂಜುನಾಥ ಎಸ್. ಸೇವಾ ನಿವೃತಿಗೊಂಡಿದ್ದು ಅವರಿಗೆ ಬಿಳ್ಕೋಡುಗೆ ಮತ್ತು ಅಭಿನಂದನಾ ಸಮಾರಂಭವು ಜುಬಿಜೂರು ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ಸಭಾಭವನದಲ್ಲಿ ನಡೆಯಿತು. ಉದ್ಯಮಿ ಡಾ. ಗೋವಿಂದಬಾಬು ಪೂಜಾರಿ ಮಾತನಾಡಿ, ಮುಖ್ಯಶಿಕ್ಷಕ ಮಂಜುನಾಥ ಇವರು ಕೇವಲ 74ಮಕ್ಕಳು ಇರುವ ಶಾಲೆಗೆ ಬಂದು ತನ್ನ ಪರಿಶ್ರಮದಿಂದ ವಿವಿಧ ಸವಾಲುಗಳನ್ನು ಎದುರಿಸಿ, ಎಲ್.ಕೆ.ಜಿ., ಯುಕೆಜಿ ತರಗತಿಗಳನ್ನು ಪ್ರಾರಂಭಿಸಿ, ಶಾಲೆಗೆ ವಿವಿಧ ಮೂಲ ಸೌಕರ್ಯಗಳನ್ನು ದೊರಕಿಸಿಕೊಟ್ಟು ಪ್ರಸ್ತುತ 185 ವಿದ್ಯಾರ್ಥಿಗಳು ಇರವಂತೆ ಮಾಡಿರುವುದು ಮುಖ್ಯಶಿಕ್ಷಕರ ಸಾಧನೆ ಸಮಾಜಕ್ಕೆ ಮಾದರಿಯಾಗಿದೆ ಅವರ ಈ ಸಾಧನೆಯು ಪ್ರತಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್, ಶಾಲಾಬಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಮತ್ತು ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನ, ಶಾಲಾ ಶಿಕ್ಷಕರ ಬಳಗ, ವಿದ್ಯಾರ್ಥಿಗಳ ವತಿಯಿಂದ ಸೇವಾ ನಿವೃತ್ತರಾದ ಮುಖ್ಯೋಪಾಧ್ಯಾಯ ಮುಂಜುನಾಥ ಎಸ್. ಅವರನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಗರದ ಚರ್ಚ್ ರಸ್ತೆಯಲ್ಲಿ ಮೇ 31ರಂದು ನಸುಕಿನ ಜಾವ ಬಾರ್ಕೂರಿನ ಐವನ್ ರಿಚರ್ಡ್ ಮಸ್ಕರೇನಸ್ (45) ಅವರನ್ನು ರೈಫಲ್ನಿಂದ ಗುಂಡಿಕ್ಕಿ ಕೊಲೆಗೈದ ಪ್ರಕರಣದ ಆರೋಪಿ ಡೆರಿಕ್ ಕ್ರಾಸ್ತ (55) ಎಂಬಾತನನ್ನು ಬುಧವಾರ ಕುಂದಾಪುರ ಪೊಲೀಸರು ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಆರೋಪಿಯನ್ನು ಭಟ್ಕಳದ ಬೆಳಕೆ ಗ್ರಾಮದ ಹೇರಬುಡಿಕೆ ಎಂಬಲ್ಲಿ ಆ.1 ರಂದು ಪೊಲೀಸರು ಬಂಧಿಸಿದ್ದು ಹೆಚ್ಚಿನ ತನಿಖೆಗಾಗಿ ಆ.2 ರಂದು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ವಿಚಾರಣೆ ಬಹುತೇಕ ಮುಗಿದ ಹಿನ್ನೆಲೆಯಲ್ಲಿ ಬುಧವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಇದನ್ನೂ ಓದಿ ►ಕುಂದಾಪುರ: ನಡು ರಸ್ತೆಯಲ್ಲೇ ಗುಂಡಿಕ್ಕಿ ವ್ಯಕ್ತಿಯ ಕೊಲೆ. ಆರೋಪಿ ಪರಾರಿ – https://kundapraa.com/?p=100278 . ಇದನ್ನೂ ಓದಿ ► ಕುಂದಾಪುರ: ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಆರೋಪಿ ಡೇರಿಕ್ ಕ್ರಾಸ್ಟಾ ಬಂಧನ – https://kundapraa.com/?p=100341 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರತಿ ಕಾಲೇಜುಗಳಲ್ಲಿ “ಡ್ರಗ್ಸ್ ವಿರೋಧಿ ಸಂಘʼ’ ವನ್ನು ಆರಂಭಿಸಿ ಅದರ ಮೂಲಕ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿಯನ್ನು ಮೂಡಿಸಬೇಕು ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕೊಡ್ಗಿ ಅಭಿಪ್ರಾಯಪಟ್ಟರು. ಅವರು ಬುಧವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಯುವಜನ ಮತ್ತು ಕ್ರೀಡಾ ಸಚಿವಾಲಯ ಮೈ ಭಾರತ್, ಉಡುಪಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಮಹಾವಿಷ್ಣು ಯೂಥ್ ಕ್ಲಬ್, ಹೆರಗೋಡು ಕಟ್ಬೆಲ್ತೂರು, ಇವರು ಸಹಯೋಗದಲ್ಲಿ ಆಯೋಜಿಸಿದ್ದ ‘ನಶಾ ಮುಕ್ತ ಯುವ” ವಿಕಸಿತ ಭಾರತಕ್ಕಾಗಿ ‘ ಕಾರ್ಯಕ್ರಮದಲ್ಲಿ ಉದ್ಧೇಶಿಸಿ ಮಾತನಾಡಿದರು. ಶಾಲಾ ಕಾಲೇಜುಗಳ ಮೂಲಕ ಈ ತರಹದ ಕಾರ್ಯಕ್ರಮಗಳು ನಡೆದಾಗ ಡ್ರಗ್ಸ್ ವಿರೋಧಿ ಅಭಿಯಾನಕ್ಕೆ ಅರ್ಥಪೂರ್ಣ ಯಶಸ್ಸು ದೊರೆಯುತ್ತದೆ. ಉತ್ತಮ ಜೀವನ ಪಡೆಯುವತ್ತ ಗಮನಹರಿಸಬೇಕು ಭವಿಷ್ಯದ ಭಾರತದ ಉತ್ತಮ ಪ್ರಜೆಗಳಾಗುವ ಮತ್ತು 2047ರ ವಿಕಸಿತ ಭಾರತದ ಕನಸು ನನಸಾಗುವತ್ತ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು. ಮಾದಕ ವಸ್ತುಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿಕ್ಷಣ, ಆಡಳಿತ, ಸಂಘಟನೆ, ಜಾನಪದ ಹೀಗೆ ಹಲವು ಕ್ಷೇತ್ರಗಳಲ್ಲಿ ಅನುಪಮ ಸಾಧನೆ, ಸಿದ್ಧಿಗಳಿಂದ ಖ್ಯಾತರಾಗಿದ್ದ ಪ್ರೊ. ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ-2026ಕ್ಕೆ ಜಾನಪದದ ಪ್ರಸಿದ್ಧ ವಿದ್ವಾಂಸ, ಸಂಶೋಧಕ ಹಾಗೂ ಲೇಖಕರಾದ ಡಾ. ಕನರಾಡಿ ವಾದಿರಾಜ ಭಟ್ ಆಯ್ಕೆಯಾಗಿದ್ದಾರೆ. ಡಾ. ಕನರಾಡಿ ಭಟ್ ಅವರು ಕರಾವಳಿಯ ಕನ್ನಡ ಮತ್ತು ತುಳು ಸಾಹಿತ್ಯದ ಹಿರಿಯ ಚಿಂತಕರಾಗಿದ್ದಾರೆ. 1951ರ ಜು.2ರಂದು ಉಡುಪಿ ಜಿಲ್ಲೆಯ ಮಣಿಪುರ ಗ್ರಾಮದ ಕನರಾಡಿಯಲ್ಲಿ ಲಕ್ಷ್ಮೀನಾರಾಯಣ ಭಟ್ ಮತ್ತು ಕಮಲಮ್ಮ ದಂಪತಿ ಪುತ್ರರಾಗಿ ಜನಿಸಿದ ಅವರು ಬಾಲ್ಯದಿಂದಲೇ ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಅಧ್ಯಯನದತ್ತ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದರು. ಶಿಕ್ಷಣದೊಂದಿಗೇ ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದು, ಕರಾವಳಿಯ ಸಾಂಸ್ಕೃತಿಕ ಪರಂಪರೆಯ ಅಧ್ಯಯನ ಮತ್ತು ದಾಖಲಾತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಪಾಡ್ದನಗಳು, ಜೋಕ್ಲೆ ಪದೋಕ್ಲು, ತುಳು ಜನಪದ ಕತೆಗಳು, ಮೂಕಜ್ಜಿ, ಮಗೆ ಬರೆವು ಕಲ್ತೆ, ಮೂಕಾಂಬಿಕಾ ಕ್ಷೇತ್ರ ಕೊಲ್ಲೂರು ಮುಂತಾದುವು ಅವರ ಖ್ಯಾತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕುಂದಾಪುರ ವಿಧಾನಸಭಾ ಕ್ಷೇತ್ರದ ತೆಕ್ಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ-66ರ ಪಕ್ಕದಲ್ಲಿರುವ ಗುರು ಬ್ರಹ್ಮ ಜನರಲ್ ಸ್ಟೋರ್‌ನಲ್ಲಿ ಸೋಮವಾರ ತಡ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದ ಅಂಗಡಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಅವರು ಬೆಂಗಳೂರಿನಲ್ಲಿ ಇದ್ದ ಕಾರಣ,ತಕ್ಷಣವೇ ಅಂಗಡಿ ಮಾಲೀಕ ಸಂತೋಷ್ ಮಡಿವಾಳ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿವರ ಪಡೆದುಕೊಂಡಿದ್ದರು. ಧೈರ್ಯ ತುಂಬುವುದರ ಜೊತೆಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಲದೆ ಬುಧವಾರ ಕುಂದಾಪುರಕ್ಕೆ ಆಗಮಿಸಿದ ಶಾಸಕರು ಅವಘಡದ ನಡೆದ ಅಂಗಡಿಯ ಮಾಲಿಕನೊಂದಿಗೆ ಮಾಹಿತಿ ಪಡೆದು ಧೈರ್ಯ ತುಂಬಿ ಸಹಕಾರ ನೀಡುವುದಾಗಿ ಹೇಳಿದರು. ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್, ಪ್ರಮುಖರಾದ ಶ್ರೀನಾಥ್ ಶೆಟ್ಟಿ ತೆಕ್ಕಟ್ಟೆ, ವಿನೋದ್ ದೇವಾಡಿಗ, ಕಿರಣ್ ಪೂಜಾರಿ ತೆಕ್ಕಟ್ಟೆ, ಆನಂದ್ ಕಾಂಚನ್, ಗಣೇಶ್ ಮೊಗವೀರ, ಸುಧೀಂದ್ರ ಗಾಣಿಗ, ಧ್ರುವ ತೆಕ್ಕಟ್ಟೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ವಿಶ್ವ ರಾಮಕ್ಷತ್ರಿಯ ಮಹಾಸಂಘ ರಿ. ವತಿಯಿಂದ ಡಿಸೆಂಬರ್ 20, 2026ರಂದು ಬ್ರಹ್ಮಾವರದಲ್ಲಿ ನಡೆಯಲಿರುವ ರಾಮಕ್ಷತ್ರಿಯರ ವೃತ್ತಿಪರರ ಸಮಾವೇಶದ ಪೂರ್ವಭಾವಿ ಸಭೆಯು ಆಗಸ್ಟ್ 2, 2026ರಂದು ಬೆಂಗಳೂರಿನ ವಿಜಯನಗರದ ಕದಂಬ ಸಾಮ್ರಾಟ್ ಹೋಟೆಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಎಚ್. ಆರ್. ಶಶಿಧರ್ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಪೋಲೋ ಆಸ್ಪತ್ರೆಯ ಹೃದಯರೋಗ ತಜ್ಞ ಡಾ. ಕೆ.ಬಿ. ಪ್ರಸಾದ್, ಮಲ್ಲಿಕ್ ಇಂಡಸ್ಟ್ರೀಸ್‌ನ ಇಂಜಿನಿಯರ್ ಎಂ.ಜಿ. ಲಕ್ಷ್ಮೀನಾರಾಯಣ, ಹಿರಿಯ ವಕೀಲ ಡಿ. ಕೆ. ಮಂಜುನಾಥ್, ಬೆಂಗಳೂರಿನ ಸಂಯೋಜಕ ಸುರೇಶ್ ಬಿಜುರಾರು ಹಾಗೂ ಸಮಾವೇಶದ ಅಧ್ಯಕ್ಷ ಅಶೋಕ್ ಬೆಟ್ಟಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವು ರಾಮಚಂದ್ರ ಗಂಗೊಳ್ಳಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಬಳಿಕ ಕೆ. ನಾಗರಾಜ್ ಕಾಮಧೇನು ಅವರು ಕಾರ್ಯಕ್ರಮದ ಉದ್ದೇಶವನ್ನು ಪ್ರಾಸ್ತಾವಿಕವಾಗಿ ವಿವರಿಸಿ, ಡಿಸೆಂಬರ್‌ನಲ್ಲಿ ನಡೆಯಲಿರುವ ಸಮಾವೇಶದ ಮಹತ್ವವನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವೃತ್ತಿಪರರು ಭಾಗವಹಿಸಿ, ಸಮಾವೇಶವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ರೋಟರಿ ಸೇರಿದಂತೆ ವಿವಿಧ ಸಾಮಾಜಿಕ ಸಂಘ- ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರಕಾಶ್ ಶೆಟ್ಟಿ ಶೇರ್ಡಿ ಗೈನಾಡಿಮನೆ ಅವರು ಪ್ರತಿಷ್ಠಿತ ಕುಂದಾಪುರ ತಾಲೂಕು ಯುವ ಬಂಟರ ಸಂಘಕ್ಕೆ 2026- 28ನೇ ಸಾಲಿನ ನೂತನ ಗೌರವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ . ಮೂಲತಃ ಕುಂದಾಪುರದವರಾದ ಪ್ರಕಾಶ್ ಶೆಟ್ಟಿ ಅವರು ದಾಂಡೇಲಿಯಲ್ಲಿ ಶ್ರೀ ದುರ್ಗಾ ಕನ್ಸ್ಟ್ರಕ್ಷನ್ ಇದರ ಆಡಳಿತ ನಿರ್ದೇಶಕರಾಗಿ ಹಾಗೂ ಶ್ರೀ ದುರ್ಗಾ ಹಾರ್ಡ್ ವೇರ್ ಮತ್ತು ಪೇಂಟ್ಸ್ ಇದರ ಆಡಳಿತ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕವಾಗಿ ಬಹುಮುಖಿ ನೆಲೆಯಲ್ಲಿ ತೊಡಗಿಕೊಂಡ ದಾಂಡೇಲಿಯ ಕಲಾಶ್ರೀ ಸಂಸ್ಥೆ ಮತ್ತು ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಶಂಕನಾರಾಯಣ ಇಲ್ಲಿನ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಮಂಗಳೂರಿನ ಪಟ್ಲ ಪೌಂಡೇಶನ್ ಟ್ರಸ್ಟಿಯಾಗಿ, ದಾಂಡೇಲಿಯ ರೋಟರಿ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ, ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾಗಿ, ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ …
