Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ತಾಲೂಕಿನಲ್ಲಿ ನೀರಿನ ಸಮಸ್ಯೆ ಎದುರಿಸಲು ಸಜ್ಜಾಗಿ: ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕರಿಂದ ಸೂಚನೆ
    ಊರ್ಮನೆ ಸಮಾಚಾರ

    ತಾಲೂಕಿನಲ್ಲಿ ನೀರಿನ ಸಮಸ್ಯೆ ಎದುರಿಸಲು ಸಜ್ಜಾಗಿ: ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕರಿಂದ ಸೂಚನೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ‘ಈ ಬಾರಿ ನಿರೀಕ್ಷೆಯಂತೆ ಮಳೆ ಬಾರದೆ ಇರುವುದರಿಂದ ಕುಂದಾಪುರ, ಬೈಂದೂರು ತಾಲೂಕಿನಲ್ಲಿ ನೀರಿನ ಕೊರತೆಯಿದ್ದು, ಈಗಿನಿಂದಲೇ ನೀರಿನ ಸಮಸ್ಯೆ ಎದುರಿಸಲು ಸಜ್ಜಾಗಬೇಕು’ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

    Click Here

    Call us

    Click Here

    ಅವರು ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕುಂದಾಪುರ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವರದಿ ಪ್ರಕಾರ ಬೈಂದೂರಲ್ಲಿ ಶೇ. 27 ಹಾಗೂ ಕುಂದಾಪುರದಲ್ಲಿ ಶೇ. 16ರಷ್ಟು ಮಳೆ ಕೊರತೆಯಾಗಿದೆ. ಮಳೆಮಾಪನ ಸರಿಯಾಗಿ ನಿರ್ವಹಣೆಯಾಗಿದ್ದಲ್ಲಿ, ಇನ್ನಷ್ಟು ಹೆಚ್ಚಿನ ಕೊರತೆ ಕಾಣುತ್ತಿತ್ತು. ಉಪ್ಪು ನೀರಿನ ಸಮಸ್ಯೆ ಇರುವ ಕಡೆ ಡಿಸೆಂಬರ್‌ನಿಂದಲೇ ಕೊರತೆಯಾಗಬಹುದು. ಈ ಕಾರಣಕ್ಕಾಗಿ ಈ ಬಾರಿ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾಗಿದ್ದು, ಕೃಷಿಕರಿಗೂ ನೆರವಾಗಬೇಕು ಎಂದರು.

    ಈ ಬಾರಿಯ ಮಳೆಗೆ 16 ಕಡೆ ತೋಟಗಳಿಗೆ, 4.5 ಎಕರೆ ಪ್ರದೇಶಕ್ಕೆ ಹಾನಿಯಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳಿದರು. ವಾರಾಹಿ ನದಿಯ ಮಾಣಿ ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 31.5 ಟಿಎಂಸಿ ಇದ್ದು, ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಶೇ 30ರಷ್ಟು ಸಂಗ್ರಹ ಕೊರತೆಯಾಗಿದೆ ಎಂದು ವಾರಾಹಿ ಎಂಜಿನಿಯ‌ರ್ ಮಾಹಿತಿ ನೀಡಿದರು.

    ಕೃಷಿಗೆ ಸ್ವಲ್ಪ ದಿನ ಬಿಟ್ಟು, ಈಗ ಮತ್ತೆ ನೀರು ನಿಲ್ಲಿಸಿರುವುದಾಗಿ ಕೆಡಿಪಿ ಸದಸ್ಯ ಹರಿಪ್ರಸಾದ್‌ ಶೆಟ್ಟಿ ತಿಳಿಸಿದರು. ಕುಂದಾಪುರ, ಬೈಂದೂರಿನ ಕಿಂಡಿ ಅಣೆಕಟ್ಟುಗಳ ಪೈಕಿ ಕೆಲವು ಕಡೆ ಹಲಗೆ ಹಾಕಲಾಗಿದೆ. ಮಳೆ ಬಂದಿದ್ದರಿಂದ ನಿಲ್ಲಿಸಲಾಗಿದೆ. ಮತ್ತೆ ಹಲಗೆ ಆರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಶೀಘ್ರ ಹಲಗೆ ಅಳವಡಿಸಲು ಕ್ರಮ ಕೈಗೊಳ್ಳಿ ಎಂದು ಶಾಸಕ ಗಂಟಿಹೊಳೆ ಸೂಚಿಸಿದರು.

    ಮಳೆಮಾಪನ ಕೇಂದ್ರಗಳ ನಿರ್ವಹಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅವರು, ಮಳೆಮಾಪನ ಕೇಂದ್ರಗಳು ಸರಿಯಾಗಿ ಮಳೆಯ ವಿವರವನ್ನು ದಾಖಲಿಸಿದ್ದಲ್ಲಿ ಕುಂದಾಪುರ ತಾಲ್ಲೂಕನ್ನೂ ಬರಪೀಡಿತ ಪಟ್ಟಿಗೆ ಸೇರಿಸಲು ಪ್ರಯತ್ನಿಸಬಹುದಿತ್ತು ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಅಧಿಕಾರಿಗಳು, ಬೈಂದೂರು ತಾಲ್ಲೂಕನ್ನು ಬರ ಪಟ್ಟಿಗೆ ಸೇರಿಸುವ ಸಂಬಂಧ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

    Click here

    Click here

    Click here

    Call us

    Call us

    ತಾಲ್ಲೂಕು ಆಸ್ಪತ್ರೆಗೆ ಹೆಚ್ಚು ಜನ ಬರುತ್ತಿದ್ದಾರೆ. ಆದರೆ ರಶೀದಿಗಾಗಿ ಗಂಟೆಗಟ್ಟಲೆ ಕಾಯಬೇಕಾಗಿದೆ. ವೈದ್ಯರ ಮಧ್ಯೆ ಸಮನ್ವಯ ಕೊರತೆಯಿದೆ ಎಂದು ಸದಸ್ಯ ರಮೇಶ್‌ ಶೆಟ್ಟಿ ವಕ್ವಾಡಿ ಆರೋಪಿಸಿದರು. ಆದಷ್ಟು ಶೀಘ್ರ ಆಸ್ಪತ್ರೆಯಲ್ಲಿ ವೈದ್ಯರ ಸಭೆ ನಡೆಸಿ, ಇದನ್ನು ಇತ್ಯರ್ಥಪಡಿಸಿ. ಸಾಧ್ಯವಾಗದಿದ್ದರೆ, ಆರೋಗ್ಯ ರಕ್ಷಾ ಸಮಿತಿ ಸಭೆ ಕರೆಯಿರಿ ಎಂದು ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಆಸ್ಪತ್ರೆ ಆಡಳಿತಾಧಿಕಾರಿಗೆ ಸೂಚಿಸಿದರು.

    ಚರ್ಮ ರೋಗ ತಜ್ಞರ ನೇಮಿಸುವಂತೆ ಸದಸ್ಯೆ ಜ್ಯೋತಿ ವಿ. ಪುತ್ರನ್ ಒತ್ತಾಯಿಸಿದರು. ನಮ್ಮಲ್ಲಿ 56 ಹುದ್ದೆ ಮಂಜೂರಾಗಿದ್ದು, 36 ಭರ್ತಿಯಾಗಿ, 20 ಹುದ್ದೆ ಖಾಲಿ ಇದೆ. ಫೀಲ್ಡ್‌ ಸ್ಟಾಫ್ ಹುದ್ದೆಗಳು ಖಾಲಿ ಇವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆ. ಪ್ರೇಮಾನಂದ್‌ ತಿಳಿಸಿದರು.

    ಮುಚ್ಚಿರುವ ಸರ್ಕಾರಿ ಶಾಲೆಗಳ ಕಟ್ಟಡ ಬೀಳುವ ಮೊದಲು ದುರಸ್ತಿ ಮಾಡಿ, ಅಲ್ಲಿನ ಸ್ವತ್ತುಗಳನ್ನು ಕಾಪಾಡಿ ಎಂದು ಸದಸ್ಯ ಶರತ್‌ ಕುಮಾ‌ರ್ ಶೆಟ್ಟಿ ಒತ್ತಾಯಿಸಿದರು. ಇದಕ್ಕೆ ಬೈಂದೂರು ವಲಯ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ ಅವರು, ಮರವಂತೆ, ಸಂತೋಷ ನಗರದಲ್ಲಿನ ಮುಚ್ಚಿದ ಶಾಲೆಗಳ ಬೆಂಚ್‌ ಡೆಸ್ಕ್‌ಗಳನ್ನು ಪಕ್ಕದ ಶಾಲೆಗೆ ಸ್ಥಳಾಂತರಿಸಿದ್ದೇವೆ. ದುರಸ್ತಿಗೆ ಸ್ಥಳೀಯ ಗ್ರಾ.ಪಂ ಮುಂದಾಗಬೇಕು ಎಂದರು. ‘ಈ ಶಾಲೆಗಳು ಚುನಾವಣಾ ಬೂತ್ ಕೂಡ ಆಗಿರುವುದರಿಂದ ಶಿಕ್ಷಣ ಇಲಾಖೆ ಕೂಡ ಗಮನ ಹರಿಸಬೇಕು’ ಎಂದು ಶಾಸಕ ಗಂಟಿಹೊಳೆ ಸಲಹೆ ನೀಡಿದರು.

    ಕಂಡೂರಿನಲ್ಲಿ ಹೊಸದಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸೇತುವೆಯನ್ನು ಬೇರೆ ಜಾಗದಲ್ಲಿ ಮಾಡಬೇಕಾದರೆ ಭೂಸ್ವಾಧೀನ, ಸರ್ವಿಸ್ ರಸ್ತೆ ಸಹಿತ ಈಗಿರುವ ₹55 ಕೋಟಿ ಜತೆಗೆ ಹೆಚ್ಚುವರಿ ₹12 ಕೋಟಿ ಬೇಕಾಗಬಹುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಹೊಸ ಸೇತುವೆ ನಿರ್ಮಾಣದ ಕುರಿತು ಕಾಳಜಿ ವ್ಯಕ್ತಪಡಿಸಿದ ಶಾಸಕ ಕೊಡ್ಲಿ ಅವರು, ಸೇತುವೆ ನಿರ್ಮಾಣಕ್ಕೆ 2-3 ವರ್ಷ ಆಗಬಹುದು. ಅಷ್ಟು ಕಾಲ ಸಂಚಾರ ಸ್ಥಗಿತಗೊಳಿಸುವುದು ಕಷ್ಟ. ಸುರಕ್ಷತಾ ದೃಷ್ಟಿಯಿಂದ ಆದಷ್ಟು ಬೇಗ ಘನ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿ ಎಂದು ಶಾಸಕರು ಸೂಚಿಸಿದರು.

    ಕೊಲ್ಲೂರಿಗೆ ತೆರಳುವ ಚಿತ್ತೂರು– ಕೊಲ್ಲೂರು ರಸ್ತೆ ವಾಹನಗಳು ಸಂಚಾರ ಮಾಡದಂತಹ ದುಃಸ್ಥಿತಿಗೆ ತಲುಪಿದೆ. ನವರಾತ್ರಿ ಹಬ್ಬ ಸಮೀಪಿಸುತ್ತಿದೆ. ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ದೇಶ-ವಿದೇಶದಿಂದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ನವರಾತ್ರಿಯ ಮೊದಲು ತೇಪೆ ಹಚ್ಚಿಯಾದರೂ, ಹದಗೆಟ್ಟಿರುವ ರಸ್ತೆಯನ್ನು ದುರಸ್ತಿ ಮಾಡುವಂತೆ ಶಾಸಕ ಗುರುರಾಜ್ ಗಂಟಿಹೊಳೆ ಸೂಚಿಸಿದರು.

    ಕೆಡಿಪಿ ಸದಸ್ಯರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಜ್ಯೋತಿ ನಾಯ್ಕ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಉದಯ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಮಹೇಶ್ ಕೆ.ಜಿ, ತಹಶೀಲ್ದಾ‌ರ್ ಪ್ರದೀಪ್ ಕುರ್ಡೇಕರ್, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಂಗೊಳ್ಳಿ: ಪೌಷ್ಟಿಕ ಆಹಾರ ಮಾಸಾಚರಣೆ ಹಬ್ಬ

    29/09/2026

    ಸೇವಾ ಸಂಕಲ್ಪ ಅಭಿಯಾನ: ಮಹಿಳಾ ಮೋರ್ಚಾ ವತಿಯಿಂದ ʼಅಂಗನ್ ಕಾ ಮಿಲನ್ʼ ಕಾರ್ಯಕ್ರಮ

    29/09/2026

    ಆರೋಹಣ ತರಬೇತಿ ಸಮ್ಮೇಳನ: ಕೃಷ್ಣಮೂರ್ತಿ ಹೈಕಾಡಿಗೆ ‘ಪ್ರೇರಣಾ ಪ್ರಶಸ್ತಿʼ ಪ್ರದಾನ

    29/09/2026
    Leave A Reply Cancel Reply

    seven − 5 =

    Call us

    Click Here

    Call us

    Call us

    Call us
    Highest Viewed Recently
    • ತಾಲೂಕಿನಲ್ಲಿ ನೀರಿನ ಸಮಸ್ಯೆ ಎದುರಿಸಲು ಸಜ್ಜಾಗಿ: ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕರಿಂದ ಸೂಚನೆ
    • ಗಂಗೊಳ್ಳಿ: ಪೌಷ್ಟಿಕ ಆಹಾರ ಮಾಸಾಚರಣೆ ಹಬ್ಬ
    • ಉಡುಪಿ ಮಹಾತ್ಮ ಗಾಂಧೀ ಎಮೊರಿಯಲ್ ಸಂಧ್ಯಾ ಕಾಲೇಜಿನಲ್ಲಿ ʼಹಿಂದಿ ದಿವಸ್ʼ ಆಚರಣೆ
    • ಸೇವಾ ಸಂಕಲ್ಪ ಅಭಿಯಾನ: ಮಹಿಳಾ ಮೋರ್ಚಾ ವತಿಯಿಂದ ʼಅಂಗನ್ ಕಾ ಮಿಲನ್ʼ ಕಾರ್ಯಕ್ರಮ
    • ಆರೋಹಣ ತರಬೇತಿ ಸಮ್ಮೇಳನ: ಕೃಷ್ಣಮೂರ್ತಿ ಹೈಕಾಡಿಗೆ ‘ಪ್ರೇರಣಾ ಪ್ರಶಸ್ತಿʼ ಪ್ರದಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.