ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು ಗುರುವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಕಾಂಗ್ರೆಸ್ ಮುಖಂಡರುಗಳಾದ ವಿನಯ ಕುಮಾರ್ ಸೊರಕೆ, ಉದಯ ಶೆಟ್ಟಿ ಮುನಿಯಾಲು, ಅಶೋಕ್ ಕುಮಾರ್ ಕೊಡವೂರು, ಅರವಿಂದ ಪೂಜಾರಿ ನಾಡ, ರಮೇಶ್ ಗಾಣಿಗ ಕೊಲ್ಲರು, ಶೇಖರ್ ಪೂಜಾರಿ ಉಪ್ಪುಂದ, ಹರೀಶ್ ಕುಮಾರ್ ಶೆಟ್ಟಿ ಮೊದಲಾದವರು ಜೊತೆಗಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ದುಬೈ: ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬೈ ) ಯು ಜೆ.ಎಸ್.ಸ್. ಖಾಸಗಿ ಶಾಲೆಯ ಆಡಿಟೋರಿಯಂನಲ್ಲಿ ಸಂಗೀತ ಸೌರಭ -2024 ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕನ್ನಡಿಗರು ದುಬೈನ ಅಧ್ಯಕ್ಷರು, ಉಪಾಧ್ಯಕ್ಷರು, ಗೌರವಾನ್ವಿತ ಗಣ್ಯರು, ಪದಾಧಿಕಾರಿಗರು ದೀಪ ಬೆಳೆಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಕನ್ನಡಿಗರು ದುಬೈ ನ ನೂತನ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ. ಅವರು ನೆರವೇರಿದರು. ಅರುಣ್ ಕುಮಾರ್ ಅವರು ಮಾತನಾಡುತ್ತ, ಕನ್ನಡಿಗರು ದುಬೈನ ಕಳೆದ 20 ವರ್ಷದ ಸಾಧನೆಗಳ ಪಟ್ಟಿಗಳನ್ನು ವಿವರಿಸಿತ್ತಾ, ದುಬೈಯಲ್ಲಿ ಸತತ ಎರಡು ದಶಕಗಳಿಂದ ಸಂಗೀತ ಸೌರಭ ಮತ್ತು ಕರ್ನಾಟಕ ರಾಜ್ಯೋತ್ಸವ ನಡೆಸಿಕೊಂಡು ಬಂದಿರುವ ಏಕೈಕ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಹಾಗೂ ಸಂಗೀತ ಸೌರಭದ ಮೂಲಕ ಹೊಸ ಹೊಸ ಮೈಲುಗಲ್ಲು ಸೃಷ್ಟಿಸಿರುವ ಏಕೈಕ ಸಂಘ ಎಂದು ತಿಳಿಸಿದರು. ಇಂತಹ ದೊಡ್ಡ ಜವಾಬ್ದಾರಿಯನ್ನು ಕೊಟ್ಟಿರುವ ಕನ್ನಡಿಗರು ದುಬೈನ ಮಾಜಿ ಅಧ್ಯಕ್ಷರುಗಳಾದ ಸಾದನ್ ದಾಸ್, ವೀರೇಂದ್ರ ಬಾಬು, ಉಮಾ…
181 ವಿದ್ಯಾರ್ಥಿಗಳಿಗೆ 600 ಕ್ಕಿಂತ ಅಧಿಕ ಅಂಕ. ಕೆಟಗರಿ ವಿಭಾಗದಲ್ಲಿ 10ಮಂದಿಗೆ ಅಖಿಲ ಭಾರತ ಮಟ್ಟದ ಟಾಪ್ 1000 ದ ಒಳಗೆ ರ್ಯಾಂಕ್.ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಅಖಿಲ ಭಾರತ ಮಟ್ಟದ ಯುಜಿ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಒಂದೇ ಕ್ಯಾಂಪಸನ ಕ್ಲಾಸ್‌ರೂಮ್ ವ್ಯವಸ್ಥೆಯಲ್ಲಿ 600 ಅಂಕಗಳ ಮೇಲೆ 181 ವಿದ್ಯಾರ್ಥಿಗಳು ಅಂಕ ಪಡೆಯುವ ಮೂಲಕ ಆಳ್ವಾಸ್ ಸಾರ್ವಕಾಲಿಕ ಸಾಧನೆಯನ್ನು ಮೆರೆದಿದೆ. ಆಳ್ವಾಸ ಪ,ಪೂ ಕಾಲೇಜಿನ ವಿದ್ಯಾರ್ಥಿಗಳು 670ಕ್ಕೂ ಅಧಿಕ 11 ವಿದ್ಯಾರ್ಥಿಗಳು, 650 ಕ್ಕೂ ಅಧಿಕ 51 ವಿದ್ಯಾರ್ಥಿಗಳು, 600 ಕ್ಕೂ ಅಧಿಕ 181 ವಿದ್ಯಾರ್ಥಿಗಳು, 550 ಕ್ಕೂ ಅಧಿಕ 371 ವಿದ್ಯಾರ್ಥಿಗಳು ಹಾಗೂ 500 ಕ್ಕೂ ಅಧಿಕ 686 ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವ ಮೂಲಕ ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್‌ನಿಂದ ಅಗ್ರಪಂಕ್ತಿಯ ಸಾಧನೆ ನಿರ್ಮಾಣವಾಗಿದೆ. ಆಕಾಶ್ ಬಸವರಾಜ್ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 55 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಪ್ರೀತಮ್ ಎಂ- 691, ಸದಾನಂದ ಗೌಡ ಕುಲಕರ್ಣಿ-…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ದೇಶದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮೇ 05 ರಂದು ನಡೆಸಿದ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ಕಾರ್ತಿಕ್ ಕೆ.ಎಸ್ 99.8976127 ಪರ್ಸಂಟೈಲ್ ನೊಂದಿಗೆ 698 ಅಂಕಗಳನ್ನು ಗಳಿಸಿರುತ್ತಾರೆ. ನೇಹಾ ಕೆ ಉದಪುಡಿ 99.8815839 ಪರ್ಸಂಟೈಲ್ ನೊಂದಿಗೆ 696 ಅಂಕಗಳನ್ನು ಗಳಿಸಿ ಅಭೂತಪೂರ್ವ ಸಾಧನೆಗೈದಿದ್ದಾರೆ. ಇತರ ವಿದ್ಯಾರ್ಥಿಗಳಾದ ಆದಿತ್ಯ ಶೇಟ್ 687, ಆನ್ಯಾ ಡಿ.ಜೆ ಗೌಡ 683, ಪ್ರೇಮ್ ಸಾಗರ್ ಪಾಟೀಲ್ 675, ಸತೀಶ್ ಗೌಡ ಪಿ. ಎಂ 678, ಫರ್ಹಾನ್ ಟಿ.ಪಿ 675, ಸ್ನೇಹಾ ವಸ್ತ್ರದ್ 673, ಆರ್ಯ ರಾವ್ ಟಿ.ಪಿ 666, ಸಿಂಚನ ಆರ್. ಹೆಚ್ 664, ಪ್ರಿಯಾಂಕ ಕೆ.ಬಿ 660, ಸಿ ಜನಶ್ರೀ ಕುಮಾರ್ 663, ಪಂಕಜ್ ಭಟ್ 662, ಹೇಮಶ್ರೀ ಬಿ. ಕೆ 647, ವಿಶ್ರುತ ಎಂ. ಎಸ್ 645, ಅಭಿನವ್ ಹೆಚ್.ಬಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಕ್ಕಾಗಿ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ ಕೆಸಿಇಟಿ-2024ರಲ್ಲಿ ಹೆಮ್ಮಾಡಿಯ ಜನತಾ ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿರುತ್ತಾರೆ. ಹಲವು ವಿದ್ಯಾರ್ಥಿಗಳು ಸಾವಿರದ ಒಳಗೆ ರ್ಯಾಂಕ್ ಗಳನ್ನು ಪಡೆದಿರುತ್ತಾರೆ. ಪವಿತ್ರ-ಬಿ.ಎಸ್‍ಸಿ Agri,934, ಪ್ರಣವ್ ಅಡಿಗ-1523 ಇಂಜಿನಿಯರಿಂಗ್, ಕ್ಷಮಾ ಪಡಿಯಾರ್-2077 ಬಿ.ಎಸ್‍ಸಿ Agri, ಲಲನ್-2287 ಇಂಜಿನಿಯರಿಂಗ್, ರಿಷಿಕಾ ಮಾಂಟೆರಿಯೊ-2880- ಬಿ.ಎಸ್‍ಸಿ Agri,ಆದಿತ್ಯ ಚಂದನ್-4030 ಇಂಜಿನಿಯರಿಂಗ್, ಪ್ರಜ್ವಲ್ ಜಿ-4886 ಇಂಜಿನಿಯರಿಂಗ್, ಸುಬ್ರಹ್ಮಣ್ಯ-6551 ಬಿ.ಎಸ್‍ಸಿ Agri, ಐಶ್ವರ್ಯ ವೈದ್ಯ-6536 ಇಂಜಿನಿಯರಿಂಗ್, ಸನದ್ ಕುಮಾರ್ 8648 ಬಿ.ಎಸ್‍ಸಿ Agri, ರಜತ್ ಪೂಜಾರಿ-8952 ಇಂಜಿನಿಯರಿಂಗ್, ಪ್ರಜ್ವಲ್ ಎಸ್ ಪೂಜಾರಿ 9444 ಇಂಜಿನಿಯರಿಂಗ್ ರ್ಯಾಂಕ್‍ಗಳನ್ನು ಪಡೆಯುವುದರ ಮೂಲಕ ಅದ್ವಿತೀಯ ಸಾಧನೆ ಮಾಡಿ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಾತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜನತಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಕಾಲೇಜು ಪ್ರಾರಂಭದ ದ್ವಿತೀಯ ವರ್ಷವೂ ರಾಜ್ಯಮಟ್ಟದಲ್ಲಿ ಉತ್ತಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಆಡಳಿತ ಶಸ್ತ್ರ ಚಿಕಿತ್ಸಕ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ| ರಾಬರ್ಟ್ ರೆಬೆಲ್ಲೊ ಅವರನ್ನು ಲೈಂಗಿಕ ಕಿರುಕುಳ ಸಹಿತ ವಿವಿಧ ಕಿರುಕುಳದ ಆರೋಪದ ಮೇರೆಗೆ ಜೂನ್ 4ರಂದು ಕರ್ತವ್ಯದಿಂದ ಅಮಾನತು ಮಾಡಿ ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ವೈದ್ಯಾಧಿಕಾರಿ ವಿರುದ್ಧ ಆರೋಗ್ಯ ಸಚಿವರಿಗೆ ರೋಗಿಗಳ ಜತೆಗಿನ ದುರ್ನಡತೆಯ ಕುರಿತ ದೂರು ಅರ್ಜಿ, ಇದರೊಂದಿಗೆ ಸಹ ವೈದ್ಯೆಯಿಂದ ಲೈಂಗಿಕ ಕಿರುಕುಳ ಕುರಿತು ದಾಖಲಾದ ಪ್ರಕರಣ, ಕೇಸ್ ಸಂಬಂಧ ಪೊಲೀಸ್ ನಿರೀಕ್ಷಕರಿಂದ ಬಂದ ಪತ್ರ, ಆಸ್ಪತ್ರೆ ಆವರಣದಲ್ಲಿ ಕೊಳಚೆ ನೀರು, ತ್ಯಾಜ್ಯ ಹರಿದು ರೋಗ ಬರಲು ಆಸ್ಪದವಿದ್ದರೂ ನಿರ್ಲಕ್ಷ್ಯ ತೋರಿರುವುದು, ಈ ಎಲ್ಲಾ ಆರೋಪಗಳಿಗಾಗಿ ಇಲಾಖಾ ವಿಚಾರಣೆ ಬಾಕಿ ಇರಿಸಿ ವೈದ್ಯಾಧಿಕಾರಿಯನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ವೈದ್ಯಾಧಿಕಾರಿಯ ಜೀವನ ನಿರ್ವಹಣೆ ಭತ್ತೆಗಾಗಿ ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಯ ಇಎನ್ಟಿ ವೈದ್ಯರ ಹುದ್ದೆಯ ಸ್ಥಳ ನಿಗದಿ ಪಡಿಸಲಾಗಿದೆ. ಆರೋಗ್ಯ ಇಲಾಖೆಯ ಆಯುಕ್ತರ ಅನುಮತಿಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವೃತ್ತಿಪರ ಕೋರ್ಸಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಮೊದಲ 10 ರ‍್ಯಾಂಕ್‌ನಲ್ಲಿ ಇಬ್ಬರು, ಮೊದಲ 50ರಲ್ಲಿ ಒಂಬತ್ತು, ಮೊದಲ 100ರಲ್ಲಿ 21, ಮೊದಲ 200ರಲ್ಲಿ 48, 200ರಲ್ಲಿ 85, 400ರಲ್ಲಿ 117, 500ರಲ್ಲಿ 157, 1000ದ ಒಳಗೆ 516, 2000ದ ಒಳಗೆ 1048, 2000ದ ಒಳಗೆ 1772, 4000ದ ಒಳಗೆ 2107, 5000ದ ಒಳಗೆ 2656 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದುಕೊಂಡಿದ್ದಾರೆ. ಪ್ರಮುಖವಾಗಿ ಇಂಜಿನಿಯರಿಂಗ್ ವಿಭಾಗದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ 1000 ರ‍್ಯಾಂಕ್‌ಗಳಲ್ಲಿ 24 ವಿದ್ಯಾರ್ಥಿಗಳು, ಮೊದಲ 5000 ರ‍್ಯಾಂಕ್‌ನ ಒಳಗೆ 273 ವಿದ್ಯಾರ್ಥಿಗಳು, ಮೊದಲ 10,000 ರ‍್ಯಾಂಕ್‌ಗಳಲ್ಲಿ ಒಟ್ಟು 738 ವಿದ್ಯಾರ್ಥಿಗಳು ರ‍್ಯಾಂಕ್‌ನ್ನು ಪಡೆದಿದ್ದು, ಇವೆರೆಲ್ಲರೂ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಪಡೆಯಲು ಅರ್ಹತೆ ಪಡೆದಿದ್ದಾರೆ. ವರುಣ್ ವಿ- ಪಶು ವೈದ್ಯಕೀಯದಲ್ಲಿ 3ನೇ ರ‍್ಯಾಂಕ್, ಕೃಷಿಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲೆಯ ಉನ್ನತಿಗೆ ಪೂರ್ವ ವಿದ್ಯಾರ್ಥಿಗಳ ಬೆಂಬಲ ಬೇಕು. ಶಾಲೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕುತ್ತದೆ. ವಿದ್ಯಾರ್ಥಿಗಳು ತಾವು ಪಡೆದ ಶಿಕ್ಷಣವನ್ನು ಆಧರಿಸಿ ಬದುಕು ರೂಪಿಸಿಕೊಳ್ಳುತ್ತಾರೆ. ಅವರು ಗಳಿಸುವ ಸಾಮರ್ಥ್ಯ ಪಡೆದಾಗ ತಮ್ಮನ್ನು ಬೆಳೆಸಿದ ಶಾಲೆಯ ಉನ್ನತೀಕರಣಕ್ಕೆ ಸಾಧ್ಯವಾದ ಬೆಂಬಲ ನೀಡಬೇಕು ಎಂದು ಮರವಂತೆಯ ನಿವೃತ್ತ ಉಪನ್ಯಾಸಕ ಎಸ್.ಜನಾರ್ದನ ಹೇಳಿದರು. ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಶಾಲೆಯ ಮೊದಲ ವಿದ್ಯಾರ್ಥಿ ತಂಡ ರೂ 1.5 ಲಕ್ಷ ವೆಚ್ಚದಲ್ಲಿ ಶಾಲೆಗೆ ನೀಡಿದ ಪ್ರಯೋಗಾಲಯ ಪರಿಕರಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಪ್ಪತ್ತೈದು ವರ್ಷಗಳ ಹಿಂದೆ ಇಲ್ಲಿ ಕಲಿತ ಈ ವಿದ್ಯಾರ್ಥಿ ತಂಡದ ಉಪಕ್ರಮ ಅನ್ಯ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಅವರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ದಯಾನಂದ ಬಳೆಗಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಪಟಗಾರ್, ಉದ್ಯಮಿ ಸತೀಶ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಅವರಿಗೆ ನಾಲ್ಕನೇ ಭಾರಿಗೆ ಭರ್ಜರಿ ಗೆಲುವು ದೊರೆತಿದೆ. ಮಧ್ಯಾಹ್ನ 2.45 ಗಂಟೆಯ ವೇಳೆಗೆ ಬಿ.ವೈ. ರಾಘವೇಂದ್ರ ಅವರು 7,78,721 ಮತಗಳನ್ನು ಪಡೆದಿದ್ದರೇ, ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಗೀತಾ ಶಿವರಾಜಕುಮಾರ್ ಅವರು 5,35,006 ಮತಗಳನ್ನು ಪಡೆದುಕೊಂಡಿದ್ದರು. ರಾಘವೇಂದ್ರ ಅವರು 2,43,715 ಮತಗಳ ಮುನ್ನಡೆ ಕಾಯ್ದುಕೊಂಡು ಗೆಲುವಿನ ಮಾಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು 30,050 ಮತಗಳನ್ನಷ್ಟೇ ಪಡೆದು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್ ಕಛೇರಿಯಲ್ಲಿ ಗೆಲುವನ್ನು ಸಿಹಿ ಹಂಚಿ ಸಂಭ್ರಮಿಸಿದರು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಸೇರಿದಂತೆ ಬಿಜೆಪಿ ಜೆಡಿಎಸ್ ಶಾಸಕರು, ಪಕ್ಷದ ನಾಯಕರು ಜೊತೆಗಿದ್ದರು. ಒಟ್ಟಾರೆ ಇಲ್ಲಿ23 ಅಭ್ಯರ್ಥಿಗಳಿದ್ದಾರೆ. ಕೆಎಸ್ ಈಶ್ವರಪ್ಪ ಜೊತೆಗೆ ಡಿಎಸ್ ಈಶ್ವರಪ್ಪ ಎಂಬ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿಯಿರುವುದು ವಿಶೇಷ. ಶಿವಮೊಗ್ಗವೂ ಸೇರಿದಂತೆ ಕರ್ನಾಟಕದ 14…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 2,19,695 ಮತಗಳ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಅವರು, 7,32,234 ಮತಗಳನ್ನು ಪಡೆದಿದ್ದು, ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಅವರು 4,70,215 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಕೋಟ ಶ್ರೀನಿವಾಸ್ ಪೂಜಾರಿ ಅವರು 2,59,175 ಮತಗಳ ಮುನ್ನಡೆ ಸಾಧಿದ್ದಾರೆ. ಜೊತೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 11,269 ರಷ್ಟು ಮತಗಳು ನೋಟಾ ಬಂದಿವೆ. ಕೋಟ ಶ್ರೀನಿವಾಸ ಪೂಜಾರಿ ಅವರು ಈ ವೇಳೆ ಪ್ರತಿಕ್ರಿಯಿಸಿ ನಾಯಕರು, ಕಾರ್ಯಕರ್ತರು ಹಾಗೂ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಕೋಟ ಶ್ರೀನಿವಾಸ್ ಪೂಜಾರಿ ಅವರು ಗೆಲುವಿನ ನಗೆ ಬೀರಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಅವರನ್ನು ಮೇಲಕ್ಕೆತ್ತಿ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಮತ್ತೆ ಬಿಜೆಪಿ ತೆಕ್ಕೆಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರ:ಕಳೆದ ಬಾರಿ ಮೈತ್ರಿಯಡಿ ಜೆಡಿಎಸ್‌ಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಕಾಂಗ್ರೆಸ್ ಈ ಬಾರಿ ತನ್ನ ಗತವೈಭವಕ್ಕೆ ಮರಳಲು ಕೆ ಜಯಪ್ರಕಾಶ್ ಹೆಗ್ಡೆ ಮೇಲೆ…
