ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟ ಗಿಳಿಯಾರು ಹಿರಿಯ ನಾಗರಿಕರ ಸಭೆ ಮೂಡುಗಿಳಿಯಾರಿನ ಅಲ್ಸೆಕೆರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚಿಗೆ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ವೇದಿಕೆ ಅಧ್ಯಕ್ಷ ಹಂದಕುಂದ ಸೋಮಶೇಖರ ಶೆಟ್ಟಿ ಗಿಳಿಯಾರು ವಹಿಸಿದ್ದರು.
ಮುಖ್ಯ ಸಂಪನ್ಮೂಲ ವ್ಯಕ್ತಿಗಳಾದ ರೋಟರಿ ಕೋಟ-ಸಾಲಿಗ್ರಾಮ ಮಾಜಿ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಸಮಾಜ ಸೇವಾ ಸಂಘಟನೆಗಳಿಂದ ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ ಸಿಗುವ ಸೇವೆ, ಸೌಲಭ್ಯ ಹಾಗೂ ಪ್ರಯೋಜನ ಮತ್ತು ವ್ಯಕ್ತಿತ್ವ ವಿಕಸನ ಆಗುವ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಪನ್ಮೂಲ ವ್ಯಕ್ತಿ ಜಿ. ತಿಮ್ಮ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಚರ್ಚಾಕೂಟದಲ್ಲಿ ವನಮಹೋತ್ಸವ, ಸ್ವಚ್ಛತಾ ಕಾರ್ಯ, ಸ್ವಾತಂತ್ರ್ಯೋತ್ಸವ, ಧ್ವಜಕಟ್ಟೆ ನಿರ್ಮಾಣ, ಶಿಕ್ಷಕರ ದಿನಾಚರಣೆ, ರಾಜ್ಯೋತ್ಸವ, ಸಂಪನ್ಮೂಲ ಕ್ರೋಢಿಕರಣ, ಆಟೋಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ 60-65 ವರ್ಷ ಮೇಲ್ಪಟ್ಟು ಹಿರಿಯ ನಾಗರಿಕರಿಗೆ ಸಾರ್ವಜನಿಕ ಹಾಗೂ ಸರಕಾರದಿಂದ ಸಿಗುವ ಸೌಲಭ್ಯ ಪ್ರಯೋಜನಗಳ ಬಗ್ಗೆ, ಹಿರಿಯ ನಾಗರಿಕರ ಗುರುತು ಚೀಟಿ ಮಾಡುವ ಬಗ್ಗೆ, ವಾರ್ಷಿಕ ಪ್ರವಾಸಗಳ ಬಗ್ಗೆ, ರಾಜಾರಾಮ ಶೆಟ್ಟಿ, ಗಂಗಾಧರ ಐತಾಳ, ಸುಬ್ರಹ್ಮಣ್ಯ ಹೇರ್ಳೆ, ಮಹಾಬಲ ಹೇರ್ಳೆ, ಕೃಷ್ಣಯ್ಯ ಆಚಾರ್, ಕೃಷ್ಣ ಆಹಿತಾನಲ, ಸುರೇಂದ್ರ ಶೆಟ್ಟಿ, ಶೀನ ಪೂಜಾರಿ, ಅನಿತಾ ಶೆಟ್ಟಿ, ಸವಿತಾ ಸೋಮಯಾಜಿ, ಗೋಪಾಲಕೃಷ್ಣ ಜೋಗಿ, ವಿಶ್ವನಾಥ ಜೋಗಿ, ಶರಣಯ್ಯ ಹಿರೇಮಠ, ಭಾಸ್ಕರ ಶೆಟ್ಟಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯದರ್ಶಿ ಶಂಕರ ಆಚಾರ್ ಹಿಂದಿನ ತಿಂಗಳ ಸಭಾನಡಾವಳಿ ಹಾಗೂ ಸದಸ್ಯರಾದ ಸುರೇಂದ್ರ ಶೆಟ್ಟಿ ಲೆಕ್ಕಪತ್ರ ವಾಚಿಸಿ ಸಭೆಯ ಅನುಮೋದನೆ ಪಡೆದರು. ವೇದಿಕೆ ಗೌರವ ಅಧ್ಯಕ್ಷರಾದ ಕೆ. ರಾಜಾರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸದಸ್ಯ ರಮೇಶ ಬಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
















