Author: ನ್ಯೂಸ್ ಬ್ಯೂರೋ

ಬೈಂದೂರು: ಬೈಂದೂರಿನ ಹೆಸರಾಂತ ಮೊಬೈಲ್ ಮಾರಾಟ ಮಳಿಗೆ ‘ಪ್ರೀತಿ ಮೊಬೈಲ್ಸ್‌ನಲ್ಲಿ ‘ಸ್ಮಾರ್ಟ್ ದೀಪಾವಳಿ’ ಆಚರಿಸಲಾಗುತ್ತಿದ್ದು, ಹಬ್ಬದ ಸಂಭ್ರಮದೊಂದಿಗೆ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದೆ. ಪ್ರತಿ ಸ್ಮಾರ್ಟ್ ಪೋನ್ ಖರೀದಿಯ ಮೇಲೆಯೂ ಖಚಿತ ಕೊಡುಗೆಗಳು, ಇಎಂಐ ಸೌಲಭ್ಯ, ಐಪೋನ್ ಖರೀದಿಗೆ 0 ಡೌನ್ ಪೇಮೆಂಟ್, ಪ್ರತಿ ಮೊಬೈಲ್ ಖರೀದಿಗೆ ಜೊತೆಗೆ ಲಕ್ಕಿ ಕೂಪನ್, ಮೆಗಾ ಎಕ್ಸ್’ಚೆಂಚ್ ಆಫರ್, ಉಚಿತ ಸ್ಕ್ರೀನ್ ಬದಲಾವಣೆ ಸೇರಿದಂತೆ ಹಲವು ಕೊಡುಗೆಗಳನ್ನು ಒಳಗೊಂಡಿದೆ. ದೀಪಾವಳಿಯ ಅಂಗವಾಗಿ ನ.08ರಿಂದ ಆರಂಭಗೊಂಡ ಈ ಆಫರ್ ನ.15ರ ತನಕ ಇರಲಿದೆ. ಹೆಚ್ಚಿನ ಮಾಹಿತಿ ಹಾಗೂ ಖರೀದಿಗೆ ಬೈಂದೂರು ಪೊಲೀಸ್ ಸ್ಟೇಷನ್ ಎದುರಿನ ಪಂಚಾಯತ್ ಕಟ್ಟಡದಲ್ಲಿರುವ ‘ಪ್ರೀತಿ ಮೊಬೈಲ್ಸ್’ ಮಳಿಗೆ, ಬೈಂದೂರು ಬಂಕೇಶ್ವರ ರಸ್ತೆಯ ಪಂಚಾಯತ್ ಕಟ್ಟಡದಲ್ಲಿನ ಮಳಿಗೆ ಅಥವಾ ಆಂಜನೇಯ ದೇವಸ್ಥಾನದ ಬಳಿಕ ಶೇಷಾದ್ರಿ ಕಾಂಪ್ಲೆಕ್ಸ್ ಮಳಿಗೆಗೆ ಭೇಟಿ ನೀಡಬಹುದಾಗಿದೆ.ಕರೆ ಮಾಡಿ: +919961087889, 7829378889

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಶಿಕಾರಿಪುರ ಶಾಸಕ, ಬಿಜೆಪಿಯ ಹಾಲಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ನೇಮಕಗೊಳಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ವಿಜಯೇಂದ್ರ ಅವರನ್ನು ನೇಮಕಗೊಳಿಸಿದ ಆದೇಶ ಪ್ರಕಟಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಸಿಟಿ ರವಿ ಹೆಸರು ಬಂದಿತ್ತು. ಆದರೆ ಬಿಜೆಪಿ ಹೈಕಮಾಂಡ್ ಲೋಕಸಭಾ ಚುನಾವಣೆ ದೃಷ್ಟಿಯಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಆಗಿರುವ ಬಿ.ವೈ ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದೆ. ವಿಜಯೇಂದ್ರ ಯುವ ನಾಯಕರಾಗಿರುವ ಕಾರಣ ಕಾರ್ಯಕರ್ತರ ಪಡೆ ಇನ್ನಷ್ಟು ಬಲವಾಗುವ ಜತೆಗೆ ಪಕ್ಷ ಸಂಘಟನಾ ಸಾಮರ್ಥ್ಯವು ಹೆಚ್ಚಾಗುವ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿದೆ. ಇದರ ಜೊತೆ ಪ್ರಬಲ ಸಮುದಾಯವಾದ ಲಿಂಗಾಯತ ಮತಬ್ಯಾಂಕ್ ರಕ್ಷಣೆ, ಸಮುದಾಯದ ನಾಯಕರ ವಲಸೆ ತಡೆಗೂ ಬ್ರೇಕ್ ಬೀಳುವ ಸಾಧ್ಯತೆಯಿದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ನಂತರ ಮಾಜಿ ಸಚಿವರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಗೆ ಟಿಕೆಟ್ ನೀಡದೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಸವ ವಸತಿ ಯೋಜನೆಯ ಬಾಕಿ ಉಳಿದ ಕೆಲಸಕ್ಕೆ ಕಂತು ಬಿಡುಗಡೆ ಮಾಡಲು ಹಣದ ಬೇಡಿಕೆ ಇರಿಸಿದ ಆರೋಪದಡಿ ತಾಲೂಕಿನ ಕಾವ್ರಾಡಿ ಪಂಚಾಯತಿಯ ಕಾರ್ಯದರ್ಶಿ ಗೋಪಾಲ ದೇವಾಡಿಗ ಎಂಬುವವರನ್ನು ಉಡುಪಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸವ ವಸತಿ ಯೋಜನೆಯ ಕಂತು ಬಿಡುಗಡೆಗೊಳಿಸಲು ಜಾವೇದ್ ಕಾರ್ವಾಡಿ ಎಂಬುವವರಿಂದ, ಪಂಚಾಯತ್ ಕಾರ್ಯದರ್ಶಿ ಗೋಪಾಲ ದೇವಾಡಿಗ 15,000 ರೂ ಬೇಡಿಕೆ ಇರಿಸಿದ್ದರು. ಈ ಬಗ್ಗೆ ಫಲಾನುಭವಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಅದರಂತೆ ಆರೋಪಿಯನ್ನು ಟ್ರಾಪ್ ಮಾಡಿ ಹಣ ಪಡೆಯುವ ವೇಳೆ ಬಂಧಿಸಿದ್ದಾರೆ. ಲೋಕಾಯುಕ್ತ ಎಸ್.ಪಿ ಸೈಮನ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಸಿ. ಪ್ರಕಾಶ್ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ರಫೀಕ್ ಮತ್ತು ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ರಾಘವೇಂದ್ರ, ಮಲ್ಲಿಕಾ, ರೋಹಿತ್, ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ರಮೇಶ್, ಸೂರಜ್, ಸುಧೀರ್, ಸತೀಶ್ ಆಚಾರ್ಯ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ ಹಾಗೂ ಸೈಂಟ್ ಪಿಯುಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಂಗಳೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಕುಂದಾಪುರ ವಲಯ ಮಟ್ಟದ* ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕುಂದಾಪುರದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮದರ್ ತೆರೆಸದ ವಿದ್ಯಾರ್ಥಿಗಳಾದ ಶುಭನ್ ಕಿರಿಯ ಪ್ರಾಥಮಿಕ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮೆಹರಾನ್ ಕಿರಿಯ ಪ್ರಾಥಮಿಕ ವಿಭಾಗದ ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಪ್ರೌಢ ವಿಭಾಗದ ಜಾನಪದ ನೃತ್ಯದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಹಾಗೂ ಕವ್ವಾಲಿಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಜನಪದ ನೃತ್ಯ ಮತ್ತು ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗುವ ಮೂಲಕ ಸಂಸ್ಥೆಗೆ ಹೆಮ್ಮೆ…

Read More

ಕುಂದಾಪ್ರ ಡಾಟ್ ಕಾಂಬ್ರಹ್ಮಾವರ: ಕರಾವಳಿ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಮದುವೆ ಜವಳಿಗೆಂದೇ ಪ್ರಸಿದ್ಧವಾದ ಸತ್ಯನಾಥ ಸ್ಟೋರ್ ನ ಬ್ರಹ್ಮಾವರ, ತೀರ್ಥಹಳ್ಳಿ ಮತ್ತು ಕೊಪ್ಪದ ಮಳಿಗೆಯಲ್ಲಿ ದೀಪಾವಳಿ ಧಮಾಕ ವಿಶೇಷ ಆಫರ್ ಆರಂಭಗೊಂಡಿದೆ. ನ. 5 ರಿಂದ ಸತ್ಯನಾಥ ಸ್ಟೋರ್ ನ ಎಲ್ಲಾ ಮಳಿಗೆಯಲ್ಲಿ ಮಹಿಳೆಯರ, ಪುರುಷರ ಹಾಗೂ ಮಕ್ಕಳ ವಿವಿಧ ಬಗೆಯ ಮನ ಒಪ್ಪುವ ವಸ್ತ್ರಗಳಿಗೆ ವಿಶೇಷ ಕೊಡುಗೆಯಾಗಿ ಡಿಸ್ಕೌಂಟ್ ಘೋಷಿಸಿದೆ. ಎಲ್ಲಾ ವರ್ಗದ ಜನರ ವಸ್ತ್ರಗಳ ವಿಫುಲ ಸಂಗ್ರಹ ಒಂದೇ ಸೂರಿನಡಿ ಲಭ್ಯವಿದ್ದು ಗ್ರಾಹಕರು ಈ ವಿಶೇಷ ರಿಯಾಯತಿಯ ದರ ಕಡಿತದ ಪ್ರಯೋಜನವನ್ನು ಪಡೆಯಬಹುದು. ಬಗೆ ಬಗೆಯ ಸೀರೆ, ಜೈಪುರ್ ಕಾಟನ್ ಕುರ್ತಿಸ್, ಕಾಟನ್ ಲೆಗ್ಗಿನ್ಸ್, ಚೂಡಿದಾರ್, ಗೌನ್, ಡ್ರೆಸ್ ಮೆಟೀರಿಯಲ್ಸ್, ಸಾರಿ ಸ್ಕರ್ಟ್ ಅಲ್ಲದೆ ಮಕ್ಕಳ ಮತ್ತು ಪುರುಷರ ಉಡುಪುಗಳ ವಿಫುಲ ಸಂಗ್ರಹ ಇಲ್ಲಿ ಕಾಣಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಅರೆಶಿರೂರು ಇಲ್ಲಿಯ ವಿದ್ಯಾರ್ಥಿನಿ ಶಕೀಲಾ 1500 ಮೀ. ಮತ್ತು 3000 ಮೀ. ಓಟದ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಲ್ತೋಡು ಗ್ರಾಮದ ಕೈರಾಣ ಶಾಂತಾ ಹಾಗೂ ಬಾಬುಗೌಡ ದಂಪತಿಯ ಪುತ್ರಿ

Read More

ಕುಂದಾಪ್ರ ಡಾಟ್ ಕಾಂಬೆಂಗಳೂರು: ಮಡಮಕ್ಕಿ, ನಂಜುಂಡಿ ಕಲ್ಯಾಣ, ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದ ನಟ ತನುಷ್ ಶಿವಣ್ಣ ಅಭಿನಯದ ಹೊಸ ಸಿನಿಮಾ ತೆರಿಗೆ ಬರಲು ಸಿದ್ಧವಾಗಿದೆ. ‘ಮಿ. ನಟ್ವರ್ ಲಾಲ್’ ಸಿನಿಮಾ ಮೂಲಕ ತನುಷ್ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದು ಚಿತ್ರದಲ್ಲಿ ಸೋನಲ್ ಮೆಂಟೇರೋ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದಿಂದ ಎರಡನೇ ಹಾಡು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ‘ಅಚ್ಚಚ್ಚೋ ಅಚ್ಚು ಮೆಚ್ಚಿವಳು..’ ಎನ್ನುವ ಸಾಲಿನಿಂದ ಆರಂಭವಾಗುವ ಈ ಹಾಡನ್ನು ‘ಕಾಂತಾರ’ ಸಿನಿಮಾದ ಸೂಪರ್ ಹಿಟ್ ‘ವರಾಹ ರೂಪಂ’ ಹಾಡನ್ನು ಹಾಡಿದಂತಹ ಸಾಯಿ ವಿಘ್ನೇಶ್ ಹಾಡಿದ್ದಾರೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ರೋಮ್ಯಾಂಟಿಕ್ ಹಾಡಿಗೆ ಸಾಯಿ ವಿಘ್ನೇಶ್ ಧ್ವನಿಯಾಗಿದ್ದಾರೆ…ಈ ರೋಮ್ಯಾಂಟಿಕ್ ಹಾಡನ್ನು ನಿರ್ದೇಶಕ ಭರ್ಜರಿ ಚೇತನ್ ಬರೆದಿದ್ದು ಧರ್ಮ ವಿಷ್ ಸಂಗೀತ ಸಂಯೋಜನೆ ಮಾಡಿದ್ದಾರೆ. “ಮಿಸ್ಟರ್ ನಟ್ವರ್ ಲಾಲ್” ಸಿನಿಮಾವನ್ನ ಲವ ನಿರ್ದೇಶನ ಮಾಡಿದ್ದಾರೆ. ಅಂದಹಾಗೆ ಸಿನಿಮಾದಿಂದ ಈಗಾಗಲೇ ಟೀಸರ್ ಮತ್ತು ಮೊದಲ ಹಾಡು ಬಿಡುಗಡೆಯಾಗಿದ್ದು ಕುತೂಹಲ ಮೂಡಿಸಿತ್ತು. ಇದೀಗ ರಿಲೀಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಗೀತ ಭಾರತಿ ಟ್ರಸ್ಟ್ ಆಶ್ರಯದಲ್ಲಿ ದಿ. ವೈಕುಂಠ ಹೆಬ್ಬಾರ್-ದಿ. ಅವಿನಾಶ ಹೆಬ್ಬಾರ್ ಸ್ಮರಣಾರ್ಥ ಹಿಂದುಸ್ಥಾನಿ ಸಿತಾರ್ ವಾದನ ಕಾರ್ಯಕ್ರಮ ಪಾರಿಜಾತ ಹೋಟೆಲ್ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಜರುಗಿತು. ಖ್ಯಾತ ಯುವ ಪ್ರತಿಭೆಗಳಾದ ವಿಜಯ ಬಿ. ಗೊಣಹಲು ಸಿತಾರ್ನಲ್ಲಿ ಹಾಗೂ ಅವರ ಸಹೋದರ ಪುಟ್ಟರಾಜ ಬಿ. ಗೊಣಹಲು ತಬಲಾದಲ್ಲಿ ತಮ್ಮ ಅಪೂರ್ವ ಪಾಂಡಿತ್ಯದ ಮೂಲಕ ಉತ್ತಮ ಕಾರ್ಯಕ್ರಮ ನೀಡಿದರು. ವಿಜಯ ಬಿ. ಗೊಣಹಲು ನಂದಾದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಗೀತ ಭಾರತಿ ಟ್ರಸ್ಟ್ನ ವಿಶ್ವಸ್ಥರಾದ ಎ.ಎಸ್.ಎನ್. ಹೆಬ್ಬಾರ್ ಅತಿಥಿಗಳನ್ನು ಗೌರವಿಸಿದರು. ಡಾ| ಎಚ್.ಆರ್. ಹೆಬ್ಬಾರ್ ದಿ. ವೈಕುಂಠ ಹೆಬ್ಬಾರ್-ದಿ. ಅವಿನಾಶ ಹೆಬ್ಬಾರ್ ಅವರು ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ವಿಶ್ವಸ್ಥರಾದ ಡಾ| ಆದರ್ಶ ಹೆಬ್ಬಾರ್, ಸೀತಾರಾಮ ನಕ್ಕತ್ತಾಯ, ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥರಾದ ಕೆ. ಶಾಂತಾರಾಮ ಪ್ರಭು ಉಪಸ್ಥಿತರಿದ್ದರು. ವಿಶ್ವಸ್ಥರಾದ ಯು.ಎಸ್.ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ಕೆ. ನಾರಾಯಣ ಅತಿಥಿಗಳನ್ನು ಪರಿಚಯಿಸಿದರು. ವಿಶ್ವಸ್ಥರಾದ ಸುಪ್ರಸನ್ನ ನಕ್ಕತ್ತಾಯ ಕಲಾವಿದರಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹೇರಿಕುದ್ರುವಿನ ಮಹಾಗಣಪತಿ ಮಾನಸ ಮಂದಿರದಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನೀಡಲಾದ ಸಮಯ ಮೀರಿ ಮೈಕ್ ಬಳಕೆ ಮಾಡಲಾಗುತ್ತಿದೆ ಎಂಬ ದೂರು ಸ್ವೀಕಾರವಾದ ಹಿನ್ನೆಲೆಯಲ್ಲಿ ಪೊಲೀಸರು ತಡೆಯೊಡ್ಡಿದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಇದಕ್ಕೆ ಯಕ್ಷಗಾನ ಪ್ರೇಮಿಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನ.3ರಿಂದ ಆರಂಭವಾಗಿದ್ದು ನ.11ರ ತನಕ ಯಕ್ಷ ಹಬ್ಬ ಆಯೋಜಿಸಲಾಗಿತ್ತು. ನ.4ರಂದು ಗೆಜ್ಜೆನಾದ ಯಕ್ಷಗಾನ ಕಲಾ ಮಂಡಳಿ ಕುಂದಾಪುರ ಇವರಿಂದ ವಿಘ್ನೇಶಪ್ರಸಾದ ಗಂಗೊಳ್ಳಿ ನಿರ್ದೇಶನದಲ್ಲಿ ಶ್ರೀ ಕೃಷ್ಣ ಲೀಲಾಮೃತ ಪ್ರಸಂಗದ ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ ಪೊಲೀಸರು ಆಗಮಿಸಿ ದೂರು ಬಂದ ಹಿನ್ನೆಲೆಯಲ್ಲಿ ಪ್ರದರ್ಶನ ಸ್ಥಗಿತಗೊಳಿಸಲು ಸೂಚಿಸಿದ್ದಾಗಿ ಮೈಕ್ ಮೂಲಕ ಘೋಷಣೆ ಮಾಡಿ ಪ್ರದರ್ಶನ ರದ್ದು ಮಾಡಲಾಯಿತು. ರಾತ್ರಿ 10.30ವರೆಗೆ ಅನುಮತಿ ಪಡೆದಿದ್ದೆವು. ಇದು ರಾಜಕೀಯ ಷಡ್ಯಂತ್ರ. 8-10 ವರ್ಷದ ಮಕ್ಕಳಿಗೆ ತರಬೇತಿ ನೀಡಿ ಪ್ರದರ್ಶನ ನಡೆಯುತ್ತಿತ್ತು. ಭಾಗವತಿಕೆ ಮಾಡಲು ಬಾಲಕನೇ ಇದ್ದು ಬೆಳಕಿನ ಪ್ರಖರತೆಗೆ ಭಾಗವತಿಕೆ ಅಸಾಧ್ಯವಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ನ.06: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ನವೆಂಬರ್ 7 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 110/11 ಕೆ.ವಿ ನಾವುಂದ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿAದ ಸದರಿ ದಿನದಂದು 110/11 ಕೆ.ವಿ ನಾವುಂದ ವಿದ್ಯುತ್ ಉಪಕೇಂದ್ರ ಹಾಗೂ 33/11 ಕೆ.ವಿ ಬೈಂದೂರು ಮತ್ತು ಕೊಲ್ಲೂರು ಉಪಕೇಂದ್ರದಿAದ ಹೊರಡುವ ಎಲ್ಲಾ 11ಕೆ.ವಿ ಫೀಡರುಗಳಾದ ಹೇರೂರು, ಮರವಂತೆ, ಕಂಬದಕೋಣೆ, ಕಿರಿಮಂಜೇಶ್ವರ, ಆಲೂರು, ಬಡಾಕೆರೆ ಶಿರೂರು, ಉಪ್ಪುಂದ, ಗಂಗನಾಡು, ಬೈಂದೂರು, ತೂದಳ್ಳಿ, ತಗ್ಗರ್ಸೆ, ಯಳಜಿತ್, ಮುದೂರು ಹಾಗೂ ಕೊಲ್ಲೂರು ಫೀಡರುಗಳಲ್ಲಿ ಹೇರಂಜಾಲು, ಕಂಬದಕೋಣೆ, ಹೇರೂರು, ಕಾಲ್ತೋಡು, ಉಳ್ಳೂರು- 11, ಆಲೂರು, ಹಕ್ಲಾಡಿ, ನಾಡ, ಹರ್ಕೂರು, ನೂಜಾಡಿ, ನಾವುಂದ, ಸೇನಾಪುರ, ಬಡಾಕೆರೆ, ಕುಂದಬಾರAದಾಡಿ, ಹಡವು, ತ್ರಾಸಿ, ಹೊಸಾಡು, ಕೊಯಾನಗರ, ಮರವಂತೆ, ಕಿರಿಮಂಜೇಶ್ವರ, ಅರೆಶಿರೂರು, ಎಲ್ಲೂರು, ಬಾಳ್ಕೊಡ್ಲು, ಹಾಲ್ಕಲ್, ದೋಣಿಗದ್ದೆ, ದಳಿ, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಿಬೇರು, ಜನ್ನಾಲ್ ಬೀಸಿನಪಾರೆ, ಸೆಳ್ಕೊಡು,…

Read More