Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಕೋಟೇಶ್ವರ ಇಲ್ಲಿನ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವು ಇತ್ತೀಚೆಗೆ ಜರಗಿತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಕೃಷ್ಣ ಕಾಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ವಿದ್ಯಾರ್ಥಿಗಳು ಹಾಗೂ ಅವರ ಮುಂದಿನ ವೃತ್ತಿ ಬದುಕಿನಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ ಎಂಬುದನ್ನು ಅರಿತುಕೊಂಡು ಆ ಸವಾಲುಗಳನ್ನು ಎದುರಿಸಲು ಬೇಕಾದ ಮಾನಸಿಕ ಧೈರ್ಯ ಹಾಗೂ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸ್ನಾತಕೋತರ ಪದವಿಯ ಹಂತದಲ್ಲಿ ಜ್ಞಾನ ಸಂಪಾದನೆಯ ಎಲ್ಲಾ ಮಾರ್ಗಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ವಿದ್ಯಾಭ್ಯಾಸ ಮುಗಿಸಿಕೊಂಡು ಹೊರ ಬಂದಾಗ ಜೀವನ ಯಶಸ್ವಿಯಾಗುತ್ತದೆ” ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಅಜ್ಜರಕಾಡು ಡಾ. ಜಿ. ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಧ್ಯಾಪಕ ರವಿಪ್ರಸಾದ್ ಅವರು ಮಾತನಾಡಿ, ಉನ್ನತ ಶಿಕ್ಷಣದ ಅವಕಾಶ ಕೆಲವರಿಗೆ ಮಾತ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಯಾವುದೇ ವಿಪತ್ತು ಎದುರಾದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರು ಸ್ವಯಂ ಸ್ಪೂರ್ತಿಯಿಂದ ನಿಷ್ಪಕ್ಷಪಾತದಿಂದ ತಾರತಮ್ಯವಿಲ್ಲದೇ ಪ್ರಪಂಚದಾದ್ಯಂತ ಅಗತ್ಯವಿರುವ ಸೇವೆ ನೀಡುತ್ತಾರೆ ಎಂದು ಇಂಡಿಯನ್ ರೆಡ್ ಕ್ರಾಸ್ ಘಟಕದ ಸಭಾಪತಿಗಳಾದ ಜಯಕರ ಶೆಟ್ಟಿ ಹೇಳಿದರು. ಅವರು ಇಲ್ಲಿನ ಆರ್.ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜ್ಯೂನಿಯರ್ ರೆಡ್ ಕ್ರಾಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೇ ಸಹವರ್ತಿಗಳ ಆರೋಗ್ಯ ಕಾಪಾಡುವ ಜವಾಬ್ದಾರಿಯನ್ನು ಕಲಿಯಬೇಕು ಎಂದರು. ಕುಂದಾಪುರ ತಾಲೂಕು ವಲಯದ ಜ್ಯೂನಿಯರ್ ರೆಡ್ ಕ್ರಾಸ್ ಘಟಕದ ಸಯೋಜಕರಾದ ದಿನಕರ್ ಆರ್. ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಪ್ರತಿಜ್ಞಾ ವಿಧಿ ಬೋಧಿಸಿ, ವಿದ್ಯಾರ್ಥಿಗಳು ಸಮಾಜದ ಋಣವನ್ನು ತೀರಿಸುವಲ್ಲಿ ತಮ್ಮಿಂದಾದ ಪ್ರಯತ್ನವನ್ನು ಮಾಡಬೇಕೆಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ವಿದ್ಯಾರ್ಥಿಗಳು ಇತರರಿಗೆ ಸಕಾಲದಲ್ಲಿ ನೆರವು ನೀಡುವ ನಿಸ್ವಾರ್ಥ ಗುಣವನ್ನು ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು. ಇಂಡಿಯನ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಬ್ರಹ್ಮಾವರ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪಾಂಡೇಶ್ವರ ವಲಯದ ಪಡುಬೈಲು ಕಾರ್ಕಡ ಕಾರ್ಯಕ್ಷೇತ್ರದ ಶ್ರೀ ಗುರು ನರಸಿಂಹ ಜ್ಞಾನ ವಿಕಾಸ ಕೇಂದ್ರದಲ್ಲಿ ಸ್ವಉದ್ಯೋಗ ಪ್ರೇರಣ ಶಿಬಿರ ಕಾರ್ಯಕ್ರಮವನ್ನು ಇತ್ತೀಚಿಗೆ ಹಮ್ಮಿಕೊಂಡಿತು. ಕಾರ್ಯಕ್ರಮವನ್ನು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಡ ಇಲ್ಲಿಯ ನಿವೃತ್ತ ಮುಖ್ಯ ಶಿಕ್ಷಕ ಪ್ರಭಾಕರ್ ಕಾಮತ್ ಉದ್ಘಾಟಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬ್ರಹ್ಮಾವರ ರುಡಸೆಟ್ ಸಂಸ್ಥೆಯ ಉಪನ್ಯಾಸಕಿ ಚೈತ್ರ ಸಂಸ್ಥೆಯಲ್ಲಿ ಯಾವ ಯಾವ ತರಬೇತಿಗಳಿವೆ ಹಾಗೂ ತರಬೇತಿಗಳು ಎಷ್ಟು ದಿನ ನಡೆಯುತ್ತವೆ, ಇದರ ಪ್ರಯೋಜನ, ಸ್ವ ಉದ್ಯೋಗ ಆಸಕ್ತರಿಗೆ ಸಾಲ ಸೌಲಭ್ಯಗಳ ,ತರಬೇತಿಗೆ ಬರುವಾಗ ಏನು ದಾಖಲತೆಗಳನ್ನು ತರಬೇಕು ಎನುವ ಕುರಿತುಮಾಹಿತಿ ತಿಳಿಸಿದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಗಿರಿಜಾ ಶೇಖರ್ ಪೂಜಾರಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ಸಂಜೀವ ದೇವಾಡಿಗ, ಪಾಂಡೇಶ್ವರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬರವಣಿಗೆ ಉತ್ತಮವಾಗಿರಬೇಕಾದರೆ ಒಳ್ಳೆಯ ಓದುಗರಾಗಿರಬೇಕು ಎಂದು ಉದಯವಾಣಿ ಪತ್ರಿಕೆಯ ಕುಂದಾಪುರದ ಉಪ ಮುಖ್ಯ ವರದಿಗಾರರಾದ ಲಕ್ಮೀ ಮಚ್ಚಿನ ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗವು ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪ್ರ 89.6 ಎಫ್. ಎಮ್ ಇವರ ಸಹಯೋಗದಲ್ಲಿ ನಡೆಸಿದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪತ್ರಿಕಾ ಬರವಣಿಗೆಯ ತಂತ್ರಗಳು ಕುರಿತು ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದರು. ಬರವಣಿಗೆ ಎನ್ನುವುದು ಎಲ್ಲರಿಗೂ ಅವಶ್ಯಕ. ಮುಖ್ಯವಾಗಿ ಪತ್ರಿಕೆಯ ಬರವಣಿಗೆಯಲ್ಲಿ ಶೀರ್ಷಿಕೆ, ಪ್ರಸ್ತಾವನೆ ಮತ್ತು ವಿಸ್ತ್ರತ ಮಾಹಿತಿಗಳು ಮುಖ್ಯವಾಗಿರುತ್ತದೆ. ಬರಹಗಳನ್ನು ಬರೆಯುವುದಕ್ಕೆ ಆಸಕ್ತಿಯ ಜೊತೆಗೆ ಉತ್ತಮ ಓದು ವಿಷಯದ ಕುರಿತ ತಿಳುವಳಿಕೆ ಬೇಕಾಗುತ್ತದೆ. ಕೆಲವು ನುಡಿಚಿತ್ರ ಮತ್ತು ಲೇಖನಗಳ ಉದಾಹರಣೆ ತೋರಿಸಿ ಅದರ ಸ್ವಾರಸ್ಯಕರ ಶಿರ್ಷಿಕೆಗಳು, ವಿಷಯವನ್ನು ಹೇಳಿರುವ ಬಗೆಯನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಮಾತನಾಡಿ, ಪತ್ರಿಕಾ ರಂಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿರುವ ಪ್ರತಿಷ್ಠಿತ ‘ಯುವ ದಸರಾʼ ವೇದಿಕೆಯಲ್ಲಿ ಕುಂದಾಪುರದ ಸುಜ್ಞಾನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು’ ಪರಿಸರ ಸಂರಕ್ಷಣೆ’ ವಿಷಯ ಆಧರಿಸಿ ನೃತ್ಯ ಪ್ರದರ್ಶನ ನೀಡಿ, ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಈ ಸ್ಪರ್ಧೆಗೆ ರಾಜ್ಯದ ವಿವಿಧೆಡೆಯ ಒಟ್ಟು 700 ಕಾಲೇಜುಗಳು ಭಾಗವಹಿಸಿದ್ದವು. ಅತ್ಯುತ್ತಮ ಪ್ರದರ್ಶನಕ್ಕಾಗಿ ಕೇವಲ 8 ಕಾಲೇಜುಗಳು ಆಯ್ಕೆಯಾಗಿದ್ದವು. ಅದರಲ್ಲಿ ಸುಜ್ಞಾನ ಪಿಯು ಕಾಲೇಜು ಕೂಡ ಒಂದಾಗಿರುವುದು ಕಾಲೇಜಿಗೆ ಮತ್ತು ಕುಂದಾಪುರಕ್ಕೆ ಹೆಮ್ಮೆಯ ವಿಷಯವಾಗಿದೆ. ಸುಜ್ಞಾನ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೆ.14ರಂದು ಯುವ ಸಂಭ್ರಮದಲ್ಲಿ ಮೊದಲು ನೃತ್ಯ ಪ್ರದರ್ಶನ ನೀಡಿದ್ದರು. ಈ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿ, ಆಯ್ಕೆಯಾದ ನಂತರ ಸೆ. 24ರಂದು ಯುವ ದಸರದ ಮುಖ್ಯ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದರು. ಈ ನೃತ್ಯ ಪ್ರದರ್ಶನಕ್ಕೆ Zee ಕನ್ನಡ ವಾಹಿನಿಯ ʼಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼನ ರವಿ ಮಾಸ್ಟರ್ ಪರಿಕಲ್ಪನೆ ನೀಡಿದ್ದು, ʼಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಗುರುತಿಸಲು ಕಟ್ಟುನಿಟ್ಟಿನ ಕ್ರಮವಹಿಸುವುದರೊಂದಿಗೆ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದ ಆರ್ಥಿಕ ಸ್ಥಿತಿಯು ರಾಷ್ಟ್ರದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ಸಮೀಕ್ಷೆ ಅನ್ವಯ ಸುಮಾರು 7 ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರವು ಇಂತಹ ಅನುಮಾಸ್ಪದ ಪಡಿತರ ಚೀಟಿಗಳನ್ನು ಪರಿಷ್ಕರಣಾ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಇಂತಹ ಪಡಿತರ ಚೀಟಿಗಳನ್ನು ಶೀಘ್ರದಲ್ಲಿ ಎಪಿಎಲ್ ಕಾರ್ಡ್‌ಗೆ ಪರಿವರ್ತಿಸುವಂತೆ ತಿಳಿಸಿದ ಅವರು, ಒಂದು ವೇಳೆ ಅರ್ಹ ಬಿಪಿಎಲ್ ಕಾರ್ಡ್‌ಗಳು ಎಪಿಎಲ್ ಎಂದು ಪರಿವರ್ತನೆ ಹೊಂದಿದ್ದಲ್ಲಿ ಅಂಥವರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಅಭಿವೃದ್ಧಿಯ ಕೊನೆಯ ಹಂತದಲ್ಲಿರುವ ಕೋಟದ ಅಮೃತೇಶ್ವರೀ ದೇಗುಲದ ಸನಿಹದಲ್ಲಿರುವ ವರುಣತೀರ್ಥಕೆರೆಗೆ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಾರ್ಕಳದ ಮೀನುಗಾರಿಗಾ ಉಪನಿರ್ದೇಶಕ ಕಛೇರಿ ನೀಡಿದ ಒಟ್ಟು ನಾಲ್ಕು ಸಾವಿರ ಅಧಿಕ ಮೀನುಗಳನ್ನು ಕೆರೆಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಕೆರೆಯ ಅಭಿವೃದ್ಧಿ ವೀಕ್ಷಿಸಿದ ಅವರು ಕೆರೆ ಕಾಮಗಾರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಈ ಕೆರೆ ಪ್ರಮುಖ ಪಾತ್ರ ವಹಿಸಲಿದ್ದು ಇಲ್ಲಿನ ಜನಸಾಮಾನ್ಯರ ಕೃಷಿಕ ಬಹು ವರ್ಷಗಳ ಕನಸು ಸಾಕಾರಗೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೋಟ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್, ಸದಸ್ಯರಾದ ರತನ್ ಐತಾಳ್, ಚಂದ್ರ ಆಚಾರ್, ಸುಬ್ರಾಯ ಜೋಗಿ, ಕೋಟ ಪಂಚಾಯತ್ ಸದಸ್ಯರಾದ ಚಂದ್ರ ಪೂಜಾರಿ, ಸಂಸದರ ಆಪ್ತ ಸಹಾಯಕ ಹರೀಷ್ ಕುಮಾರ್ ಶೆಟ್ಟಿ ಸ್ಥಳೀಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ. ಹೆಚ್. ಮುನಿಯಪ್ಪ ಅವರು ಕುಟುಂಬ ಸಮೇತರಾಗಿ ಭೇಟಿ ‌ನೀಡಿದರು. ಅವರು ದೇವಿಯ ದರ್ಶನ ಪಡೆದು ಚಂಡಿಕಾ ಹೋಮದಲ್ಲಿ ಭಾಗಿಯಾದರು. ಸಚಿವರನ್ನು ದೇವಳದ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ. ಬಾಬು ಶೆಟ್ಟಿ ಮತ್ತು ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಪ್ರಸಾದ ಗೌರವಿಸಿದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ರಮೇಶ್ ಗಾಣಿಗ, ಕೊಲ್ಲೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಾಯಕ ಆಚಾರ್ಯ ಸೇರಿದಂತೆ ಪಕ್ಷದ ಪ್ರಮುಖರು ಜೊತೆಗಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರಿನ ಹೆಸರಾಂತ ಮೊಬೈಲ್ ಮಾರಾಟ ಮಳಿಗೆ ‘ಪ್ರೀತಿ ಮೊಬೈಲ್ಸ್’ನಲ್ಲಿ ದಸರಾ ಹಬ್ಬದ ಅಂಗವಾಗಿ ಗ್ರಾಹಕರಿಗೆ “ಪ್ರೀತಿ ದಸರಾ ಧಮಾಕಾ ಆಫರ್”‌ ನೀಡಲಾಗುತ್ತಿದೆ. ಪ್ರತಿ ಸ್ಮಾರ್ಟ್ ಪೋನ್ ಖರೀದಿಯ ಜೊತೆಗೆ ಗ್ರಾಹಕರಿಗೆ ಉಚಿತ ಲಕ್ಕಿ ಕೂಪನ್‌ ನೀಡಲಾಗುತ್ತಿದ್ದು ವಿಜೇತರಿಗೆ ಬೈಕ್‌, ಸ್ಮಾರ್ಟ್‌ ಟಿವಿ, ವಾಷಿಂಗ್‌ ಮಿಷಿನ್‌ ಸಹಿತ ಹಲವು ಕೊಡುಗೆಗಳನ್ನು ಪಡೆಯುವ ಅವಕಾಶವಿದೆ. ಅಲ್ಲದೇ ಪ್ರತಿ ಸ್ಮಾರ್ಟ್‌ ಪೋನ್‌ ಖರೀದಿಗೆ ಬ್ಯಾಗ್‌, ಇಯರ್‌ ಬಡ್ಸ್‌, ಮೊಬೈಲ್‌ ಸ್ಟಾಂಡ್‌, ಫ್ಯಾಷ್‌, ಬ್ಲೂಟೂತ್‌ ಸ್ಪೀಕರ್‌ ಉಚಿತವಾಗಿ ನೀಡಲಾಗುತ್ತಿದೆ. ಗ್ರಾಹಕರಿಗೆ ಈಜಿ ಇಎಂಐ ಸೌಲಭ್ಯ, ಮೊಬೈಲ್‌ ಸರ್ವಿಸ್‌ ಮೊದಲಾದ ಸೇವೆ ನೀಡಲಾಗುತ್ತಿದೆ. ಒಪ್ಪೊ ಸ್ಮಾರ್ಟ್‌ ಫೋನ್‌ ಖರೀದಿಸಿದ ಗ್ರಾಹಕರು 10 ಲಕ್ಷ ನಗದು ಗೆಲ್ಲುವ ಅವಕಾಶವಿದೆ. ದಸರಾ ಧಮಾಕಾ ಆಫರ್‌ ಅಕ್ಟೋಬರ್.30ರ ತನಕ ಇರಲಿದೆ. ಹೆಚ್ಚಿನ ಮಾಹಿತಿ ಹಾಗೂ ಖರೀದಿಗೆ ಬೈಂದೂರು ಪೊಲೀಸ್ ಸ್ಟೇಷನ್ ಎದುರಿನ ಪಂಚಾಯತ್ ಕಟ್ಟಡದಲ್ಲಿರುವ ‘ಪ್ರೀತಿ ಮೊಬೈಲ್ಸ್’ ಮಳಿಗೆ, ಬೈಂದೂರು ಬಂಕೇಶ್ವರ ರಸ್ತೆಯ ಪಂಚಾಯತ್ ಕಟ್ಟಡದಲ್ಲಿನ ಮಳಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕಾರಂತ ಪ್ರತಿಷ್ಠಾನ ಕೋಟ, ಗ್ರಾಮ ಪಂಚಾಯತ್ ಕೋಟತಟ್ಟು, ಹಾಜಿ ಅಬ್ದುಲ್ಲ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಉಡುಪಿ, ಕೋಟ ರೋಟರಿ ಕ್ಲಬ್, ಉಸಿರು ಕೋಟ ಸಾರಥ್ಯದಲ್ಲಿ ಕೊಡಮಾಡುವ ಡಾ. ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಆಯ್ಕೆಯಾಗಿದ್ದಾರೆ. ಪ್ರಾಥಮಿಕ ವಿಭಾಗ:ಸಾರಿಕಾ ಶ್ರೀಧರ ಎಸ್. ಐತಾಳ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರ), ರಾಜೀವ ಶೆಟ್ಟಿ ಎಂ. ( ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆಟ್ಟಿನಹೊಳೆ ಬೈಂದೂರು), ರೇಖಾ ಪ್ರಭಾಕರ್ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಲಿಗ್ಗೇರಿ), ಸಾರಿಕಾ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ ಬೈಂದೂರು), ಮಂಜುಳಾ ಜಯಕರ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೇರೂರು), ಶೈಲಾ ಜಾಯ್ಸ್ ಲೂಯಿಸ್ (ಎಸ್‌ಎಂಎಸ್ ಆಂಗ್ಲಮಾಧ್ಯಮ ಶಾಲೆ ಬ್ರಹ್ಮಾವರ), ಶಾರದಾ (ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗಂಟುಬೀಳು ಬೆಳೆ), ಕೃಷ್ಣ ನಾಯ್ಕ್‌ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರ್ವಾಶೆ ಮೈನ್), ಶಂಕರ ಪೂಜಾರಿ (ಸರಕಾರಿ…

Read More