ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಯಡ್ತರೆ ಫ್ರೆಂಡ್ಸ್ ಆಶ್ರಯದಲ್ಲಿ ಬೈಂದೂರು ತಾಲೂಕು ಮಟ್ಟದ ಕು ಮಟ್ಟದ 30 ಗಜಗಳ ಕ್ರಿಕೆಟ್ ಪಂದ್ಯಾಟ ‘ಯಡ್ತರೆ ಟ್ರೋಫಿ – 2023’ ಫೆ.25 ಹಾಗೂ 26ರಂದು ಎರಡು ದಿನಗಳ ಕಾಲ ಯಡ್ತರೆ ಕ್ರೀಡಾಂಗಣದಲ್ಲಿ ಜರುಗಲಿದೆ. ಫೆ.25ರ ಬೆಳಿಗ್ಗೆ ಪಂದ್ಯಾಟ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ. ಫೆ.26ರ ಸಂಜೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಜರುಗಲಿದ್ದು, ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಲಿದೆ. ಈ ವೇಳೆ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯ ವೈವಿಧ್ಯ, ಹಾಸ್ಯಮಯ ನಗೆ ನಾಟಕ ಪ್ರದರ್ಶನಗೊಳ್ಳಲಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರವು ಶುದ್ಧ ಕನ್ನಡದ ನೆಲ. ಕುಂದಾಪ್ರ ಕನ್ನಡ ಭಾಷೆಯ ಮೇಲೆ ಬೇರೆ ಭಾಷೆಯ ಪ್ರಭಾವವಿಲ್ಲ. ಕರ್ನಾಟಕ ರಾಜ್ಯದಲ್ಲಿ ವಿಭಿನ್ನ ರೀತಿಯಲ್ಲಿ ಕನ್ನಡದ ಉಚ್ಛಾರವಿದೆಯಾದರೂ ಕುಂದಾಪ್ರ ಕನ್ನಡದ ಪರಿಶುದ್ಧತೆ, ಜನಪದ ಸಾಹಿತ್ಯದಲ್ಲಿನ ವೈಶಿಷ್ಟ್ಯ, ಸಂಸ್ಕೃತಿ ಬೇರೆಲ್ಲೂ ಇಲ್ಲ. ಸಾವಿರಾರು ವರ್ಷಗಳಿಂದ ತನ್ನತನ ಉಳಿಸಿಕೊಂಡಿರುವ ಈ ಭಾಷೆಯ ವೈಶಿಷ್ಟ್ಯ ಮತ್ತು ಚೆಲುವಿಗೆ ಇನ್ನೊಂದರ ಹೋಲಿಕೆ ಸಾಧ್ಯವಿಲ್ಲ. ಇಂತಹ ಭಾಷೆಗೆ ಪ್ರತ್ಯೇಕ ಅಕಾಡೆಮಿಯ ಅಗತ್ಯವಿದ್ದು, ಸರಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಈ ಬಗ್ಗೆ ನೀರಾಸಕ್ತಿ ತೋರಿರುವುದು ಖಂಡನೀಯ ಎಂದು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಕುಂದಾಪುರದ ಖಾಸಗಿ ಹೋಟೆಲಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಐದು ಸಾವಿರಕ್ಕೂ ಹೆಚ್ಚು ಶಬ್ದಗಳನ್ನು ಹೊಂದಿರುವ ಕುಂದಾಪ್ರ ಕನ್ನಡ ಭಾಷೆಯಲ್ಲಿ ನಿಘಂಟು ಪ್ರಕಟವಾಗಿದೆ. ಸಾಹಿತ್ಯ, ಸಂಗೀತ, ಚಲನಚಿತ್ರ ರಂಗಭೂಮಿ ಹಾಗೂ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕುಂದ ಕನ್ನಡ ನಿರಂತರವಾಗಿ ಬಳಕೆಯಾಗುತ್ತಿದೆ. ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪಿಸುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಟರಿ ಕ್ಲಬ್, ಕುಂದಾಪುರ ಮತ್ತು ಹಿಂದೂ ಅಭ್ಯುದಯ ಸಂಘ(ರಿ.), ನಾವುಂದ ಇವರ ಜಂಟಿ ಆಶ್ರಯದಲ್ಲಿ, ನಾವುಂದದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ, ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ, ಮುದ್ದುಮನೆ-ಶಿರೂರು (ಮಂದಾರ್ತಿ) ಇವರ ಸಹಯೋಗದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರವನ್ನು, ಕುಂದಾಪುರ ರೋಟರಿಯ ಕ್ಲಬ್ ನ ಮಾಜಿ ಅಧ್ಯಕ್ಷರೂ, ಖ್ಯಾತ ವಕೀಲರೂ ಆದ ಶಶಿಧರ ಹೆಗ್ಡೆ ಇವರು ಉದ್ಘಾಟಿಸಿ, ಕಣ್ಣಿನ ರಕ್ಷಣೆ ಮತ್ತು ಮಹತ್ವದ ಬಗ್ಗೆ ತಿಳಿಸಿದರು. ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷರಾದ ವೆಂಕಟೇಶ ನಾವುಂದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿರೂರು ಮುದ್ದುಮನೆ ಕಣ್ಣಿನ ಆಸ್ಪತ್ರೆಯ ಪ್ರತಿನಿಧಿ ಶಂಕರ ಶೆಟ್ಟಿ ಕುಂದಾಪುರ ಇವರು ಶಿಬಿರದ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಿದರು. ರಾಘವೆಂದ್ರ ಗೋಪಾಡಿ, ಆಸ್ಪತ್ರೆಯ ವೈದ್ಯರಾದ ಮನೂಜ್ ಭಟ್, ಹಿಂದೂ ಅಭ್ಯುದಯ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ನಾವುಂದ, ಕೋಶಾಧಿಕಾರಿಗಳಾದ ರತ್ನಾಕರ ಕೆ., ಜೊತೆ ಕಾರ್ಯದರ್ಶಿ ವಿಘ್ನೇಶ್ವರ ಕೆ. ಮತ್ತು ಸದಸ್ಯರಾದ ಸಂಜೀವ ಗಾಣಿಗ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಾಟಕಗಳು ಮನೋರಂಜನೆಯ ಮಾಧ್ಯಮವಾಗಿರುವುದರ ಜತೆಗೆ ಸಮಾಜಕ್ಕೆ ಉಪಯುಕ್ತ ಸಂದೇಶ ನೀಡುವುದೂ ಸಾಧ್ಯ. ತಂಡಗಳು ತಾವು ಪ್ರದರ್ಶಿಸುವ ನಾಟಕಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಅದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಕೊಡುಗೆ ನೀಡಿದಂತಾಗುತ್ತದೆ ಎಂದು ಯುಬಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಸಂಯೋಜಕ ಸುಬ್ರಹ್ಮಣ್ಯ ಜೋಶಿ ಹೇಳಿದರು. ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಸ್ಥಳೀಯ ಕಲಾಸಂಸ್ಥೆ ಲಾವಣ್ಯದ 46ನೇ ವಾರ್ಷಿಕೋತ್ಸವ ಹಾಗೂ ರಂಗಪಂಚಮಿ-23 ಐದು ದಿನಗಳ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು. ಕಲಾವಿದರು ತಮ್ಮ ಪಾತ್ರಗಳಿಗಾಗಿ ಬೇಡಿಕೆ ಹಾಗೂ ಆರ್ಥಿಕ ಸಂಕಷ್ಟಗಳಿಂದ ಇಂದು ಹಲವು ನಾಟಕ ಕಲಾ ಸಂಸ್ಥೆಗಳು ಮುಚ್ಚಲ್ಪಟ್ಟಿದೆ, ಆದರೆ ಬೈಂದೂರಿನ ಲಾವಣ್ಯ ಸಂಸ್ಥೆ ಇದಕ್ಕೆ ಅಪವಾದವಾಗಿದ್ದು, ಕಳೆದ 45ವರ್ಷಗಳಿಂದ ಹಲವು ತ್ರಾಸದಾಯಕ ಪರಿಸ್ಥಿತಿಯನ್ನು ಎದುರಿಸಿಯೂ, ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೇ, ಪರಸ್ಪರ ವಿಶ್ವಾಸದಿಂದ ಮುನ್ನೆಡೆದುಕೊಂಡು ಹೋಗುತ್ತಿರುವುದಲ್ಲದೇ, ಈ ಭಾಗದ ಜನರಿಗೆ ಮನೋರಂಜನೆಯೊಂದಿಗೆ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಿದೆ ಎಂದರು. ಅರೆಹೊಳೆ ಪ್ರತಿಷ್ಠಾನದ ಮುಖ್ಯಸ್ಥ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಇದರ “ಆ್ಯನ್ಸ್ ಡೇ ” ಕಾರ್ಯಕ್ರಮವು ಗಿಳಿಯಾರು ಕುಶಲ್ ಹೆಗ್ಡೆ ರೋಟರಿ ಭವನದಲ್ಲಿ ಆನ್ಸ್ ಮತ್ತು ಅನೆಟ್ಸ್ ಸಾಂಸ್ಕೃತಿಕ ಸಂಜೆ ಕಲರವ ಸಂಭ್ರಮದಿಂದ ನಡೆಯಿತು. ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿದ್ದ ಕುಂದಾಪುರದ ಖ್ಯಾತ ನ್ಯಾಯವಾದಿ, ರೋಟರಿ ಕುಂದಾಪುರದ ಹಿರಿಯ ಸದಸ್ಯ ಟಿ.ಬಿ.ಶೆಟ್ಟಿ ಅತ್ಯಂತ ಪ್ರತಿಭಾವಂತರಿಂದ ಕೂಡಿದ ಆ್ಯನ್ಸ್ ಕ್ಲಬ್, ರೋಟರಿ ಸದಸ್ಯರನ್ನು ಒಳಗೊಂಡು ಪ್ರಸಕ್ತ ನಗುಮೊಗದ ಅಧ್ಯಕ್ಷ ವೆಂಕಟೇಶ ನಾವುಂದ ಕ್ಲಬ್ ನಡೆಸಿದ ರೀತಿ ಶ್ಲಾಘನೀಯವಾದದ್ದು ಎಂದರು. ಇನ್ನೊರ್ವ ಮುಖ್ಯ ಅತಿಥಿ ಖ್ಯಾತ ಉದ್ಯಮಿ ಪ್ರಶಾಂತ್ ತೋಳಾರ್ ಆನ್ಸ್ ಕ್ಲಬ್ ಚಟುವಟಿಕೆಗಳನ್ನು ಕೊಂಡಾಡಿದರು. ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ವೆಂಕಟೇಶ್ ನಾವುಂದ ಆನ್ಸ್ ಕ್ಲಬ್ ನೀಡಿದ ಸಹಕಾರವನ್ನು ಸ್ಮರಿಸಿದರು. ವೇದಿಕೆಯಲ್ಲಿ ಆನ್ಸ್ ಸಭಾಪತಿ ಪಾರ್ವತಿ ಕೊತ್ವಾಲ್ ಪ್ರಾಸ್ತಾವಿಕ ನುಡಿಯನ್ನಾಡಿದರು, ಆನ್ಸ್ ಅಧ್ಯಕ್ಷೆ ಸ್ಮಿತಾ ವೆಂಕಟೇಶ್ ಸ್ವಾಗತಿಸಿದರು, ರೋಟರಿ ಕುಂದಾಪುರದ ಕಾರ್ಯದರ್ಶಿ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಆನ್ಸ್ ಕ್ಲಬ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಶ್ರೀರಾಮ ಭಜನಾ ಮಂದಿರದ ಸುವರ್ಣ ಮಹೋತ್ಸವದ ಅಂಗವಾಗಿ ಫೆ.20ರಿಂದ ಮಾ.01ರ ವರೆಗೆ ಪಂಚಮ ದಿನ ಪರ್ಯಂತ ಅಖಂಡ ಭಜನಾ ಮಹೋತ್ಸವ, ಕೋಟಿ ರಾಮನಾಮ ತಾರಕ ಜಪಯಜ್ಞ, ಸಂಪೂರ್ಣ ಐತಿಹಾಸಿಕ ಶ್ರೀ ಸೀತಾರಾಮ ಕಲ್ಯಾಣೋತ್ಸವ, ಸಾಂಸ್ಕೃತಿಕ ವೈಭವದ ವಿರಾಟ್ ಮಹಾಯಜ್ಞ ಜರುಗಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಪುರ ಮಠದ ಪೀಠಾಧಿಪತಿ ಶ್ರೀ ರಾಘವೇಂದ್ರ ಭಾರತಿ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಎ. ಚೆನ್ನಕೇಶವ ಗಾಯತ್ರಿ ಭಟ್ ಗಜಪುರ ಆನಗಳ್ಳಿ ಇವರ ನೇತ್ರತ್ವದಲ್ಲಿ ಕ್ಷೇತ್ರ ಪುರೋಹಿತರಾದ ನಾಗರಾಜ ಐತಾಳ್ ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಗಳು ಅತ್ಯಂತ ವೈಭವದಿಂದ ನಡೆಯಲಿದೆ ಎಂದು ಅವರು ಭಾನುವಾರ ದೇವಳದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡು ನಂತರ ಅವರು ಮಾಹಿತಿ ನೀಡಿದರು. ಹಿಂದೆ ಋಷಿ, ಮುನಿಗಳು ಹಾಗೂ ನಮ್ಮ ಪೂರ್ವಜರು ಮಾಡುತ್ತಿರುವಂತಹ ರೀತಿಯಲ್ಲಿ ಸುಸಜ್ಜಿತ…
18ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಕೋ. ಶಿವಾನಂದ ಕಾರಂತ ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ನಾವು ಕನ್ನಡಿಗರಾಗಿ ಎಂದಿಗೂ ಕನ್ನಡ ದುರ್ಬಲವಾಗಲು ಬಿಡಬಾರದು. ಯಾವ ಮಾಧ್ಯಮದಲ್ಲಿ ಮಕ್ಕಳು ಕಲಿತರೂ ಯಾವ ರಾಜ್ಯ, ದೇಶದಲ್ಲಿ ವಾಸಿಸುತ್ತಿದ್ದರೂ ಮಾತೃಭಾಷೆ ಮರೆಯಬಾರದು. ಅದರಲ್ಲೂ ನಮ್ಮ ಕುಂದ ಕನ್ನಡ ಭಾಷೆ ಅಪೂರ್ವವಾದುದು. ಕುಂದಾಪುರ ಕನ್ನಡ ಬೆಳವಣಿಗೆಯಲ್ಲಿ ಯುವ ಜನರು ಆಸಕ್ತಿ ವಹಿಸುತ್ತಿರುವುದು ಸಂತಸದ ವಿಷಯ ಎಂದು ಸಾಹಿತಿ, ಅಂಕಣಕಾರ ಕೋ.ಶಿವಾನಂದ ಕಾರಂತ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕ ಇದರ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಎಚ್.ವಿಠಲ ಶೆಣೈ ಸಭಾಂಗಣದ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ವೇದಿಕೆಯಲ್ಲಿ ಭಾನುವಾರ ಜರಗಿದ ಕುಂದಾಪುರ ತಾಲೂಕು ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನ-೨೦೨೩ ‘ಗಂಗಾವಳಿ’ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಪಾರ ಸಾಹಿತ್ಯಿಕ, ಸಾಂಸ್ಕೃತಿಕ ಸಂಪತ್ತು ಹೊಂದಿರುವ ೩೦೦ಕ್ಕೂ ಹೆಚ್ಚು ಗ್ರಾಮ, ೨೫ ಲಕ್ಷಕ್ಕೂ ಹೆಚ್ಚು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಸಂಭ್ರಮದಿಂದ ನಡೆಯಿತು. ಮಹಾಶಿವರಾತ್ರಿ ಉತ್ಸವದ ಪ್ರಯುಕ್ತ ದೇವಸ್ಥಾನದ ಅರ್ಚಕ ರಾಮಕೃಷ್ಣ ಭಟ್ ಇವರ ನೇತೃತ್ವದಲ್ಲಿ ದೇವರಿಗೆ ಬಿಲ್ವಾರ್ಚನೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ರಾತ್ರಿ ವಿಶೇಷವಾಗಿ ಲಕ್ಷ ಬಿಲ್ವಾರ್ಚನೆ ಸೇವೆ ನಡೆಯಿತು . ಉತ್ಸವದ ಪ್ರಯುಕ್ತ ವಿವಿಧ ಬಗೆಯ ಅಂಗಡಿ ಮುಂಗಟ್ಟುಗಳು ಆಗಮಿಸಿದ್ದು, ರಥಬೀದಿಯ ಉದ್ದಗಲಕ್ಕೂ ಹಬ್ಬದ ವಾತಾವರಣ ನಿರ್ಮಾಣವಾಯಿತು. ದೇವಸ್ಥಾನ ಹಾಗೂ ರಥಬೀದಿಯಲ್ಲಿ ವಿಶೇಷವಾದ ವಿದ್ಯುತ್ ಅಲಂಕಾರ, ಹೂವಿನ ಅಲಂಕಾರ, ಮಧ್ಯಾಹ್ನ ಮತ್ತು ಸಂಜೆ ಎರಡು ಹೊತ್ತು ಫಲಹಾರದ ವ್ಯವಸ್ಥೆ ಮಾಡಲಾಗಿತ್ತು. ಸಾಗರೋಪಾದಿಯಾಗಿ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವರ ಪ್ರಸಾದವನ್ನು ಸ್ವೀಕರಿಸಿದರು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಕಾಶ ಐತಾಳ್ ಮಹಾಶಿವರಾತ್ರೋತ್ಸವು ಅದ್ದೂರಿಯಾಗಿ ನಡೆಯಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಯನ್ನು ತಿಳಿಸಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಜಯ್ ಪೂಜಾರಿ ಕೊಡೇರಿ, ಮಂಜುನಾಥ ಪಿ. ಗಂಗೇಬೈಲು, ಲಕ್ಷ್ಮಣ್ ದೇವಾಡಿಗ ಆಕಳಬೈಲು, ಮಂಜುನಾಥ ಬೈಪಾಸ್, ಗ್ರಾಪಂ ಸದಸ್ಯರಾದ ರಮೇಶ್ ಖಾರ್ವಿ, ಮಹೇಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕೋವಿಡ್ ಸಂಕಷ್ಟದ ಕಾಲದಲ್ಲಿ, ಪ್ರಾಕೃತಿಕ ಅವಘಡ ನಡೆದಾಗ ಕರ್ನಾಟಕ ಜನತೆಯ ನೆರವಿಗೆ ಬಾರದ ಬಿಜೆಪಿ ಕೇಂದ್ರ ನಾಯಕರು ಚುನಾವಣೆ ಬಂದಾಗ ದಂಡಿಯಾಗಿ ಬರುತ್ತಿದ್ದಾರೆ. ಬಡವರ ಮನೆಯ ಮಕ್ಕಳನ್ನು ಧರ್ಮ ಸಂಘರ್ಷಕ್ಕೆ ನೂಕಿ ಆಟವಾಡುತ್ತಿದ್ದಾರೆ. ಕಮಿಷನ್ ವ್ಯವಹಾರದಲ್ಲಿ ಮುಳುಗಿರುವುದೇ ಕಳೆದ ನಾಲ್ಕು ವರ್ಷದ ಬಿಜೆಪಿ ಸರಕಾರದ ಸಾಧನೆಯೇ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಕುಟುಕಿದರು. ಅವರು ಬೈಂದೂರು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಭಾನುವಾರ ಯಡ್ತರೆಯಲ್ಲಿ ಆಯೋಜಿಸಲಾದ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆಯ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸೂತ್ರದ ಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಕರ ನೇಮಕಾತಿ, ಅಭಿವೃದ್ಧಿ ಕಾಮಗಾರಿಯಲ್ಲಿ ಬಿಜೆಪಿ ಸರಕಾರದ ಭ್ರಷ್ಟಾಚಾರ ಯಥೇಚ್ಛವಾಗಿ ನಡೆದಿದೆ. ವಿಜಯಸಂಕಲ್ಪ ಯಾತ್ರೆ ಮಾಡಿರುವುದು ಭ್ರಷ್ಟಾಚಾರದಲ್ಲಿ ಸಾಧನೆ ಮಾಡಿದ್ದಕ್ಕಾಗಿಯೇ? ಎಂದು ಪ್ರಶ್ನಿಸಿದರು. ಜನರ ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲಿಗೆ ಲವ್ ಜಿಹಾದ್, ಧರ್ಮ ಸಂಘರ್ಷದ ಬಗ್ಗೆ ಮಾತನಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಇನ್ನರ್ ವೀಲ್ ಕ್ಲಬ್ ನ 25ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜಿಲ್ಲಾಧ್ಯಕ್ಷರ ಭೇಟಿ ಕಾರ್ಯಕ್ರಮ ಇತ್ತೀಚಿಗೆ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಜರುಗಿತು. ಬೈಂದೂರು ಇನ್ನರ್ ವೀಲ್ ಕ್ಲಬ್ ಗೆ ಭೇಟಿ ನೀಡಿದ ಇನ್ನರ್ ವೀಲ್ ಕ್ಲಬ್ 318 ಇದರ ಜಿಲ್ಲಾ ಚೇರ್ಮನ್ ಕವಿತಾ ನಿಯಾತ್ ಕ್ಲಬ್ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೈಂದೂರು ಇನ್ನರ್ವೀಲ್ ಕ್ಲಬ್ ಚಾರ್ಟರ್ ಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ ಹಾಗೂ ಕ್ಲಬ್ಬಿನ ಅಧ್ಯಕ್ಷೆ ಭಾನುಮತಿ ಜಯಾನಂದ್ ಬಿ. ಕೆ. ಕಾರ್ಯದರ್ಶಿ ಪಿಂಕಿ ಮೋಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೈಂದೂರು ಇನ್ನರ್ ವೀಲ್ ಕ್ಲಬ್ ನ ಮಾತೃ ಸಂಸ್ಥೆ ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಎಚ್. ಉದಯ ಆಚಾರ್ ಶುಭಹಾರೈಸಿದರು. ಡಿಸ್ಟಿಕ್ ಚೇರ್ಮೆನ್ ಕವಿತಾನಿಯತ್ ಬೈಂದೂರಿನ ಜನತಾ ಹೈಸ್ಕೂಲ್ನಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ನೀಡಿದ ಸ್ಯಾನಿಟರಿ ತ್ಯಾಜ್ಯ ನಿರ್ವಹಣಾ ಘಟಕದ ಉದ್ಘಾಟನೆ ಮಾಡಲಾಯಿತು. ಬೈಂದೂರಿನ ಜೂನಿಯರ್ ಕಾಲೇಜಿಗೆ ವೀಲ್ ಚೇರ್…
