Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಡೇರಹೋಬಳಿ ಗ್ರಾಮದ ನೆಹರೂ ಮೈದಾನದ ಎದುರು ರಾ.ಹೆ- 66 ದಾಟುತ್ತಿದ್ದ ವ್ಯಕ್ತಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಕುಮಾರ್ ಎಂದು ಗುರುತಿಸಲಾಗಿದೆ. ಕೋಟೇಶ್ವರ ಕಡೆಯಿಂದ ತಲ್ಲೂರು ಕಡೆಗೆ ಹೋಗುತ್ತಿದ್ದ ಟಿಪ್ಪರ್, ರಸ್ತೆ ದಾಟುತ್ತಿದ್ದ ಕುಮಾರ್ ಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಕುಮಾರ್ ರನ್ನು ತಕ್ಷಣ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಸಾವನ್ನಪ್ಪಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ನಿಂದ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು, 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಪೈಕಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಕೆ. ಗೋಪಾಲ ಪೂಜಾರಿ, ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಗೂ ಕಾಪು ವಿಧಾನಸಭಾ ಕ್ಷೇತ್ರದಿಂದ ವಿನಯ ಕುಮಾರ್ ಸೊರಕೆ ಅವರನ್ನು ಅಂತಿಮಗೊಳಿಸಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕೆ. ಗೋಪಾಲ ಪೂಜಾರಿ ಅವರ ಮಾತ್ರವೇ ಅರ್ಜಿ ಸಲ್ಲಿಸಿದ್ದರೇ, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ದಿನೇಶ್ ಹೆಗ್ಡೆ, ಶ್ಯಾಮಲಾ ಭಂಡಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಶೋಕ್ ಪೂಜಾರಿ ಬಿಜಾಡಿ ಟಿಕೇಟ್ ರೇಸಿನಲ್ಲಿದ್ದರು.

Read More

ಕುಂದಾಪುರದಲ್ಲಿ ಡಾ. ಎಸ್. ಜಾನಕಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಕಾರ್ಯಕ್ರಮ 2023ಮನಸ್ಮಿತ ಫೌಂಡೇಶನ್‌ನ ನೇತೃತ್ವದಲ್ಲಿ ಯುವ ಮೆರಿಡಿಯನ್‌ನಲ್ಲಿ ಆಯೋಜಿಸಿದ ’ಚಿತ್ರಗೀತೆ’ ಕಾರ್ಯಕ್ರಮಖ್ಯಾತ ಹಿನ್ನೆಲೆ ಗಾಯಕಿ ಕೆ.ಎಸ್. ಚಿತ್ರಾ ಅವರಿಗೆ ಡಾ. ಎಸ್. ಜಾನಕಿ ರಾಷ್ಟ್ರೀಯ ಪುರಸ್ಕಾರ ಪ್ರದಾನಖ್ಯಾತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಅವರಿಗೆ ಮನಸ್ಮಿತ ರಾಷ್ಟ್ರೀಯ ಪುರಸ್ಕಾರ ಪ್ರದಾನಮನಸ್ಮಿತ ಫೌಂಡೇಶನ್‌ನ ಡಾ. ಪ್ರಕಾಶ್ ಸಿ. ತೋಳಾರ್, ಡಾ. ಸತೀಶ್ ಪೂಜಾರಿ ನೇತೃತ್ವದ ಕಾರ್ಯಕ್ರಮಡಾ. ಜಿ. ಶಂಕರ್, ಆನಂದ ಸಿ. ಕುಂದರ್ ಹಾಗೂ ಯುವ ಮೆರಿಡಿಯನ್ ವಿನಯ ಕುಮಾರ್ ಶೆಟ್ಟಿ ಉಪಸ್ಥಿತಿಕೆ.ಎಸ್. ಚಿತ್ರಾ ಅವರ ಉಪಸ್ಥಿತಿಯಲ್ಲಿ ನಡೆದ ಸಂಗೀತ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಸಾವಿರಾರು ಪ್ರೇಕ್ಷಕರುಕುಂದಾಪುರದಲ್ಲಿ ಡಾ. ಎಸ್. ಜಾನಕಿ ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿ ಹಾಡಿದ ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಿಮ್ಮ ಆಧಾರ್ ನಂಬರ್ ಜೊತೆ ಪ್ಯಾನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಲಾಗಿದೆ. 2017ರಿಂದಲೇ ಆಧಾರ್ – ಪ್ಯಾನ್ ಲಿಂಕ್ ಕಡ್ಡಾಯವೆಂಬ ನಿಯಮ ಜಾರಿಗೆ ಬಂದಿದ್ದು, ಹಲವು ಭಾರಿ ದಿನಾಂಕ ವಿಸ್ತರಣೆಗೊಳಿಸಲಾಗಿತ್ತು. ಇದೀಗ ಮಾರ್ಚ್ 31ರ ತನಕ ರೂ.1000 ದಂಡದೊಂದಿಗೆ ವಿಸ್ತರಣೆ ಮಾಡಲಾಗಿದೆ. ಇದರ ಬಳಿಕ ಮತ್ತೆ ಡೆಡ್‌ಲೈನ್‌ ವಿಸ್ತರಣೆ ಆಗುವ ಸಾಧ್ಯತೆ ಇಲ್ಲ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೇಳಿದೆ. ಇದನ್ನೂ ಓದಿ: ► ಪ್ಯಾನ್ – ಆಧಾರ್ ಲಿಂಕಿಂಗ್ ಗಡುವು ಜೂನ್ 30ಕ್ಕೆ ವಿಸ್ತರಣೆ – https://kundapraa.com/?p=65602 . 1,000 ರೂ. ದಂಡದೊಂದಿಗೆ ಮಾರ್ಚ್‌ 31ರ ತನಕ ಪ್ಯಾನ್‌ – ಆಧಾರ್‌ ಲಿಂಕ್‌ ಮಾಡಲು ಅವಕಾಶವಿದೆ. ಏಪ್ರಿಲ್‌ 1ರ ಬಳಿಕ ಪ್ಯಾನ್‌ ನಿಷ್ಕ್ರಿಯವಾಗಲಿದೆ. ಲಿಂಕ್‌ ಮಾಡಿಸದೇ ಅನೂರ್ಜಿತವಾಗುವ ಪ್ಯಾನ್ ಕಾರ್ಡ್‌ ಬಳಸಿ, ಆಫ್‌ಲೈನ್‌ನಲ್ಲಿ ನೀವು ವಹಿವಾಟು ಮಾಡಿದಾಗ, ಅದು ಆದಾಯ ತೆರಿಗೆ ಇಲಾಖೆಯ ಅಸೆಸಿಂಗ್‌ ಆಫೀಸರ್‌ ಕೈಗೆ ಸಿಕ್ಕರೆ ಆಗ 10,000 ರೂ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗುಜ್ಜಾಡಿ ಗ್ರಾಮದ ಬೆಣ್ಗೆರೆಯ ಶ್ರೀ ನಾಗ ದೇವಸ್ಥಾನದಲ್ಲಿ ೪೭ನೇ ನಾಗಮಂಡಲೋತ್ಸವ ಹಾಗೂ ಅಷ್ಟಬಂಧ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಗುರುವಾರ ನಡೆಯಿತು. ಮಾ.೨೧ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿತು. ಸಾರ್ವತ್ರಿಕ ಪವಮಾನ ಅಭಿಷೇಕ, ಮಹಾಮಂಗಳಾರತಿ, ರಾತ್ರಿ ನವೋತ್ತರ ಶತದ್ರವ್ಯಪೂರಿತ ಬ್ರಹ್ಮಕಲಶ ಸ್ಥಾಪನೆ ನಡೆಯಿತು. ಮಾ.23 ಬೆಳಿಗ್ಗೆ ಸಂಹಿತಾ ಕಲಶ ಸ್ಥಾಪನೆ, ಪಾರಾಯಣ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಮಂಗಳಾರತಿ, ನಾಗದರ್ಶನ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ರಂಗಪೂಜೆ, ದರ್ಶನ, ವೈ. ವಾಸುದೇವ ವೈದ್ಯ ಮತ್ತು ಬಳಗದವರಿಂದ ನಾಗ ಮಂಡಲ ಸೇವೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರಗಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ ಡಾ. ಶಿವರಾಮ ಕಾರಂತ ಮಹಿಳಾ ಸಾಧಕ ಪುರಸ್ಕಾರಕ್ಕೆ ರೇವತಿ ಶೆಟ್ಟಿ ಮಣೂರು ಪಡುಕೆರೆ, ಸುಧಾ ಕದ್ರಿಕಟ್ಟು, ತನುಜಾ ಕೋಟೇಶ್ವರ, ಸುಶ್ಮಿತಾ ಸಾಲಿಗ್ರಾಮ, ನಿಶಾ ಸಾಲಿಗ್ರಾಮ, ವೀಣಾ ನಾಯಕ್, ಮಾಲಿನಿ ರಮೇಶ್, ಸುಮನ ಹೇರ್ಳೆ, ಸುಶ್ಮಿತಾ ಪಾರಂಪಳ್ಳಿ, ಸ್ಪೂರ್ತಿ, ಲಲಿತಾ ನಾರಿ, ಶೋಭಾ ಗಾಣಿಗ, ಸುಪ್ರೀತಾ ಪುರಾಣಿಕ್, ಪ್ರತಿಮಾ ಯಡ್ತಾಡಿ, ಚೈತ್ರಾ ಆಚಾರ್ಯ ಕೋಟ, ಅವರನ್ನು ಆಯ್ಕೆ ಮಾಡಲಾಗಿದೆ. ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಮಾರ್ಚ್ 29 ರಂದು ಸಂಜೆ 6 ಗಂಟೆಗೆ ನಡೆಯುವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದೆಂದು ಎಂದು ಡಾ. ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ಆಡಳಿತ ವ್ಯವಸ್ಥೆಯು ಜನಸಾಮಾನ್ಯರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಅತ್ಯಂತ ಪ್ರಮುಖ ಭಾಗವಾಗಿ ಕಾರ್ಯನಿರ್ವಹಿಸುವ ಮೂಲಕ ಜನಸ್ನೇಹಿಯಾಗಿರಬೇಕು ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಬ್ರಹ್ಮಾವರದಲ್ಲಿ ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಹ್ಮಾವರ ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಾರ್ವಜನಿಕರ ಬಹುತೇಕ ಸಮಸ್ಯೆಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದು. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಿ, ಸಮಸ್ಯೆಗಳನ್ನು ಶೀಘ್ರದಲ್ಲಿ ಇತ್ಯರ್ಥಪಡಿಸುವ ಮೂಲಕ ಜನಪರ ಕೆಲಸಗಳನ್ನು ಮಾಡುವ ಮನೋಭಾವವನ್ನು ಸಿಬ್ಬಂದಿಗಳು ಬೆಳೆಸಿಕೊಳ್ಳುವಂತೆ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಡೀಮ್ಡ್ ಅರಣ್ಯ ವಿನಾಯತಿಯ ನಂತರ ಕಂದಾಯ ಇಲಾಖೆಗೆ ನೀಡಿರುವ ಜಾಗವನ್ನು ಅರ್ಹರಿಗೆ 94 ಸಿ ಮತ್ತು 94 ಸಿಸಿ ಯಡಿಯಲ್ಲಿ ಆದ್ಯತೆಯ ಮೇಲೆ ಹಕ್ಕುಪತ್ರಗಳನ್ನು ನೀಡುವ ಕಾರ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಪೇಟೆ ವೆಂಕಟರಮಣ ದೇವರಿಗೆ ಸ್ವರ್ಣ ಪಲ್ಲಕ್ಕಿ ಕಾಶಿ ಮಠ ಶ್ರೀ ಸಂಯಮೀಂದ್ರರ್ತೀ ಸ್ವಾಮೀಜಿ ಅರ್ಪಿಸಿ ಆರ್ಸೀವಚನ ನೀಡಿದರು. ಪಲ್ಲಕ್ಕಿ ಸವರ್ಮಣೆ ಮುನ್ನಾ ಸಮಾಜ ಬಾಂಧವರು ಮೆರವಣಿಗೆ ನಡೆಸಿದರು. ಪಲ್ಲಕ್ಕಿ ಸಮರ್ಪಣೆ ನಂತರ, ದೇವರ ಪೂಜೆ ಸ್ವಾಮೀಜಿ ನಡೆಸಿದ ನಂತರ ಉತ್ಸವಮೂರ್ತಿ ಶಿಬಿಕೆಯಲ್ಲಿಟ್ಟು ಪ್ರಕಾರೋತ್ಸವ ನೆಡೆಸಲಾಯಿತು. ಕಾಶಿ ಮಠ ಶ್ರೀ ಸುಮೀಂದ್ರತೀರ್ಥ ಸ್ವಾಮೀಜಿ ಸ್ವರ್ಣ ಪಲ್ಲಕ್ಕಿ ಅರ್ಪಿಸಿ ಆರ್ಶೀವಚನ ನೀಡಿ, ಭವಂತನಿಂದ ಪಡೆದಿದ್ದು, ಭಗವಂತನಿಗೆ ಅರ್ಪಿಸಿವ ಮೂಲಕ ನಮ್ಮಲ್ಲಿರುವ ಅನೇಕ ಲೋಪಗಳು ಮರೆಯಾಗುತ್ತವೆ. ಎಂದು ಹೇಳಿದರು. ತನು ಮನ ಧನದ ಮೂಲಕ ಭಗವಂತನ ಸೇವೆ ನಡೆದಿದ್ದು, ಭಕ್ತರ ಕನಸು ನನಸಾಗಿದೆ. ಉತ್ಸವದ ಮೂಲಕ ದೇವರನ್ನು ನೋಡುವಾಗ ಸಿಗುವ ಆನಂದದ ಭೂತಿಗೆ ಇದು ಪೂರಕವಾಗಲಿದೆ ಎಂದರು. ಶ್ರೀ ಸುಮೀಂದ್ರತೀರ್ಥ ಸ್ವಾಮೀಜಿ ಅವರಿಗೆ ಪಾದ ಪೂಜೆ ಸಲ್ಲಿಸಲಾಯಿತು. ದೇವಸ್ಥಾನ ಆಡಳಿತ ಮೊಕ್ತೇಸರ ಕೆ.ರಾಧಾಕೃಷ್ಣ ಶೆಣೈ, ಉದ್ಯಮಿಗಳಾದ ಪಿ.ದಯಾನಂದ ಪೈ., ಸುಭಾಶ್ ಕಾಮತ್, ಜತೆ ಮೊಕ್ತೇಸರ ಎಚ್.ಜನಾರ್ದನ ಮಲ್ಯ, ಪಿ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಚಾರೋಡಿ ಮೇಸ್ತ ಸಮಾಜದವರು ಬೆಣ್ಗೆರೆಯಲ್ಲಿ ಕಳೆದ ೪೮ ವರ್ಷಗಳಿಂದ ನಾಗಮಂಡಲೋತ್ಸವವನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ಮೇಸ್ತ ಸಮಾಜ ಬಾಂಧವರಲ್ಲಿನ ವಿಶೇಷ ಧಾರ್ಮಿಕ ಪ್ರಜ್ಞೆ, ಒಗ್ಗಟ್ಟು, ಪ್ರೀತಿ, ಸಂಸ್ಕಾರ ಇದರ ಪ್ರತಿಫಲವಾಗಿ ಸುಂದರ ಸಮುದಾಯ ಭವನ ನಿರ್ಮಾಣಗೊಂಡಿದೆ. ಸಂಸದ ಬಿ.ವೈ.ರಾಘವೇಂದ್ರ ಅವರ ವಿಶೇಷ ಕಾಳಜಿಯಿಂದ ಸರಕಾರದಿಂದ ಸುಮಾರು ೨೦ ಲಕ್ಷ ಅನುದಾನವನ್ನು ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಮುದಾಯ ಭವನದ ಅಭಿವೃದ್ಧಿಗೆ ೨೦ ಲಕ್ಷ ರೂ. ಅನುದಾನ ಒದಗಿಸಲು ನಿಮ್ಮೊಂದಿಗೆ ಕೈಜೋಡಿಸುವುದಾಗಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು. ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದ ವಠಾರದಲ್ಲಿ ಕರ್ನಾಟಕ ನೀರಾವರಿ ನಿಗಮದ ಸುಮಾರು ೨೦ ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡಿರುವ ಚಾರೋಡಿ ಮೇಸ್ತ ಸಮಾಜ ಸಮುದಾಯ ಭವನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ದೇವಸ್ಥಾನಗಳ ಅಭಿವೃದ್ಧಿ ಮತ್ತು ಜೀಣೋದ್ಧಾರ ಕಾರ್ಯಗಳಿಗೆ ಸುಮಾರು ೧೦ ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಸರಕಾರದಿಂದ ಮಂಜೂರಾತಿ ದೊರೆತ ಬಳಿಕ ಅನುದಾನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ವೈ. ವಿಠ್ಠಲ ಪ್ರಭು (85) ಅವರು ಮಾ.22ರಂದು ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ , ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಹಿರಿಯ ಪುತ್ರ ಕೃಷ್ಣಮೂರ್ತಿ ಪ್ರಭು ಆದಾಯ ತೆರಿಗೆ ಇಲಾಖೆಯ ನಿವ್ರತ್ತ ಅಧಿಕಾರಿ ಮತ್ತು 2 ನೇ ಪುತ್ರ ಬಿ. ಸದಾಶಿವ ಪ್ರಭು ಐಎಎಸ್ ವಿಜಯನಗರ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಅಂತ್ಯಕ್ರೀಯೆಯು ಎಳ್ಳಾರೆಯ ಬೆಂಬರಬೈಲಿನ ಅವರ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read More