ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ. ನಮ್ಮ ಬದುಕನ್ನು ರೂಪಿಸಿದ ಶಿಕ್ಷಕರನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತಿರುತ್ತೇವೆ. 32ವರೆ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಇಂದು ಸೇವಾ ನಿವೃತ್ತಿ ಹೊಂದುತ್ತಿರುವ ವಿದ್ಯಾರ್ಥಿಸ್ನೇಹಿ ದಿನಕರ್ ಸರ್ ಅವರ ನಡೆ-ನುಡಿ ನಮಗೆಲ್ಲರಿಗೂ ಪ್ರೇರಣೆ. ಶಿಕ್ಷಕ ನಿವೃತ್ತಿಯಾಗುವುದು ವೃತ್ತಿಯಿಂದ ಮಾತ್ರ. ಆದರೆ ವಿದ್ಯಾರ್ಥಿಗಳ ಮನಸ್ಸಿಂದಲ್ಲ ಎಂದು ಪತ್ರಕರ್ತ ಶಶಿಧರ ಹೆಮ್ಮಾಡಿ ಹೇಳಿದರು. ಅವರು ಹೆಮ್ಮಾಡಿ ಜನತಾ ಪ್ರೌಢ ಶಾಲೆಯಲ್ಲಿ ಜರುಗಿದ ಹಿರಿಯ ಶಿಕ್ಷಕ ಎಸ್ ದಿನಕರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮತನಾಡಿದರು. ಬದುಕಿನಲ್ಲಿ ಸಮಾಜ ಪಾಠ ಬಹುಮುಖ್ಯವಾದುದು. ವೃತ್ತಿ ಜೀವನದೂದ್ದಕ್ಕೂ ಸಹಸ್ರಾರು ವಿದ್ಯಾರ್ಥಿಗಳಿಗೆ ಸಮಾಜ ಪಾಠ ಮಾಡಿದ ದಿನಾಕರ್ ಸರ್ ಎಂದಿಗೂ ವಿದ್ಯಾರ್ಥಿಗಳ ಮನಸ್ಸಲ್ಲಿ ಇರುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಜನತಾ ಪ್ರೌಢ ಶಾಲೆ ಇಡೀ ತಾಲೂಕಿನಲ್ಲೇ ಮಹತ್ವದ ಸ್ಥಾನ ಪಡೆದಿದೆ. ಈ ಶಾಲೆ ಸಹಸ್ರಾರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬದುಕಿಗೆ ಅಡಿಪಾಯ ಹಾಕಿಕೊಟ್ಟಿದೆ. ಎಸ್. ದಿನಾಕರ್ ಸರ್ ಅವರು ಈ ಶಾಲೆಯ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಮ್. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಬ್ಬರು ಉಪನ್ಯಾಸಕರುಗಳು ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಶೇಖರ್ ಬಿ ಅವರು ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಹೊಂದಿದ್ದಾರೆ. ಪಿಎಚ್ಡಿ ಪದವಿಯೊಂದಿಗೆ ಹೊಂದಿರುವ ಅವರ 20 ಸಂಶೋಧನಾ ಪ್ರಬಂಧಗಳು, ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿದೆ. ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಶ್ರೀಮತಿ ಅಡಿಗ ಅವರು ಪ್ರಾಧ್ಯಾಪಕ ಹುದ್ದೆಗೆ ಭಡ್ತಿ ಪಡೆದಿದ್ದಾರೆ. ಗಣಿತಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದಿರುವ ಅವರ 24 ಗಣಿತ ಸಂಶೋಧನಾ ಪ್ರಬಂಧಗಳು ಮತ್ತು 7 ಇತರ ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿದೆ. ಶ್ರೀಮತಿ ಅಡಿಗ ಅವರು ಮಂಗಳೂರು ವಿಶ್ವವಿದ್ಯಾನಿಲಯ ಸಂಯೋಜಿತ ಪದವಿ ಕಾಲೇಜುಗಳಲ್ಲಿ ಪ್ರಾಧ್ಯಪಕರಾಗಿ ಬಡ್ತಿ ಪಡೆದ ಗಣಿತಶಾಸ್ತ್ರದ ಮೊದಲ ಪ್ರಾಧ್ಯಾಪಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರಾಚೀನ ಕಲೆಗಳಲ್ಲಿ ಒಂದಾದ ಚಿತ್ರಕಲೆ ಮನಸ್ಸನ್ನು ಅರಳಿಸುವ ಕಲಾಪ್ರಕಾರವಾಗಿದೆ. ಬಣ್ಣಗಳ ಹಾಗೂ ರೇಖೆಗಳ ಮೂಲಕ ಸಮಾಜಕ್ಕೆ ಸಂದೇಶ ನೀಡುವ ಕಲೆ ಎಲ್ಲರಿಗೂ ಸಿದ್ಧಿಸಿದೆ ಎಂದು ಮೂಡುಬಿದಿರೆ ಜೈನಮಠದ ಡಾ| ಸಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯಮಹಾಸ್ವಾಮೀಜಿ ಹೇಳಿದರು ಅವರು ಇಲ್ಲಿನ ಸೂರ್ನಳ್ಳಿ ರಸ್ತೆಯ ಸುಪ್ರಭ ಕಾಂಪ್ಲೆಕ್ಸ್ನಲ್ಲಿ ಶುಕ್ರವಾರ ಮಣಿಪಾಲದ ತ್ರಿವರ್ಣ ಆರ್ಟ್ ಗ್ಯಾಲರಿ ಆ್ಯಂಡ್ ಕ್ಲಾಸಸ್ ಆಯೋಜಿಸಿದ ಸ್ಪಿರಿಚುವಾಲಿಟಿ ದ ಪವರ್ ಆಫ್ ಇನ್ನರ್ ವಿವ್ಯೂ ಎಂಬ ಚಿತ್ರಕಲಾ ಪ್ರದರ್ಶನ, ಆರ್ಟ್ ಗ್ಯಾಲರಿ ಉದ್ಘಾಟಿಸಿ ಆಶೀರ್ವಚನ ನೀಡಿ, ಬಂಧಗಳಿದ್ದರೆ ಸೃಜನಶೀಲತೆ ಸಾಧ್ಯವಿಲ್ಲ, ಬಂಧನ ಇರುವಲ್ಲಿ ಕಲೆ ಅರಳುವುದೂ ಇಲ್ಲ. ಅದು ಸುಪ್ತ ಮುಕ್ತವಾಗಿರಬೇಕು ಎಂದ ಅವರು, ಕಲಾವಿದನಿಗೆ ಪರಿಸರದ ಸಂವೇದನೆಯ ಮನ ಇರಬೇಕು. ಅನೇಕತೆಯಲ್ಲಿ ಏಕತೆ ತರುವ ಗುಣ ಇರಬೇಕು ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಕೋಟೇಶ್ವರ, ಡಿವೈಎಸ್ಪಿ ಕೆ. ಶ್ರೀಕಾಂತ್, ಉದ್ಯಮಿ ಕೆ. ರತ್ನಾಕರ ನಾಯ್ಡ್ ಉಪಸ್ಥಿತರಿದ್ದರು. ತ್ರಿವರ್ಣ ಆರ್ಟ್ ಗ್ಯಾಲರಿಯ ಸಂಸ್ಥಾಪಕ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜೂ.09: ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಚಪ್ಪಲಿ ಏಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ವಕ್ವಾಡಿ ಭಾಗದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿರುವ ಬಾರ್ಕೂರಿನ ನಜೀರ್ (35) ಆರೋಪಿ. ತಾಲೂಕಿನ ಬಿಜಾಡಿ – ವಕ್ವಾಡಿ ರಸ್ತೆಯಲ್ಲಿರುವ ಬಾಲಕಿಯರ ಹಾಸ್ಟೆಲ್ನಿಂದ ವಿದ್ಯಾರ್ಥಿನಿಯೊಬ್ಬಳ್ಳು ಕಾಲೇಜಿಗೆ ತೆರಳುತ್ತಿದ್ದ ಸಂದರ್ಭ ಹಿಂಬಾಲಿಸಿ ಬಂದ ಆರೋಪಿ ನಜೀರ್ ಆಕೆಗೆ ಕಿರುಕುಳ ನೀಡಿ, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಕೂಗಿದ್ದನ್ನು ಕೇಳಿ ಕೂಡಲೇ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿಬಂದು ಆರೋಪಿಯನ್ನು ಹಿಡಿದುಕೊಂಡಿದ್ದು ವಿಚಾರಿಸಿದಾಗ ವಿದ್ಯಾರ್ಥಿನಿ ನಡೆದ ಘಟನೆ ವಿವರಿಸಿದ್ದಾಳೆ. ನೊಂದ ವಿದ್ಯಾರ್ಥಿನಿ ಆರೋಪಿ ನಜೀರನಿಗೆ ಚಪ್ಪಲಿ ಏಟು ನೀಡಿದ್ದು ಸ್ಥಳೀಯರು ಆರೋಪಿಯನ್ನು ಪೊಲೀಸರಿಗೊಪ್ಪಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ, ಅಧಿಸೂಚನೆ ಹೊರಡಿಸಲಾಗಿದ್ದು, ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನೇಮಿಸಲಾಗಿದೆ. ಇನ್ನು ದಕ್ಷಿಣ ಕನ್ನಡದ ಉಸ್ತುವಾರಿಯಾಗಿ ದಿನೇಶ್ ಗುಂಡೂರಾವ್, ಉತ್ತರ ಕನ್ನಡದ ಜಿಲ್ಲೆಯ ಉಸ್ತುವಾರಿಯಾಗಿ ಮಾಂಕಾಳ ವೈದ್ಯ, ಶಿವಮೊಗ್ಗ ಜಿಲ್ಲೆಯ ಉಸ್ತುವಾರಿಯನ್ನಾಗಿ ಮಧು ಬಂಗಾರಪ್ಪ ಅವರನ್ನು ನೇಮಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ಕರಾವಳಿಯಲ್ಲಿ ಮದುವೆ ಜವಳಿಗೆ ಪ್ರಸಿದ್ಧವಾದ ಸತ್ಯನಾಥ ಸ್ಟೋರ್ಸ್ನಲ್ಲಿ ಗ್ರಾಹಕರ ಬಹು ನಿರೀಕ್ಷೆಯ ಮಾನ್ಸೂನ್ ಸೇಲ್ ಜೂನ್ 10ರಿಂದ ಆರಂಭಗೊಳ್ಳಲಿದೆ ಮಹಿಳೆಯರ ರೇಷ್ಮೆ ಸೀರೆ, ಫ್ಯಾನ್ಸಿ ಸೀರೆ, ಕುರ್ತಿಸ್ , ಚೂಡಿದಾರ್, ಗೌನ್, ಡ್ರೆಸ್ ಮೆಟೀರಿಯಲ್, ಪುರುಷರ ಬ್ರಾಂಡೆಡ್ ಶರ್ಟ್, ಪ್ಯಾಂಟ್, ಟಿ ಶರ್ಟ್ ಹಾಗೂ ಮಕ್ಕಳ ಎಲ್ಲಾ ಬಗೆಯ ಮನ ಸೂರೆಗೊಳ್ಳುವ ಬಟ್ಟೆಗೆ ವಿಶೇಷ ಕೊಡುಗೆಯಾಗಿ 50% ತನಕ ರಿಯಾಯತಿ ನೀಡಲಾಗುತ್ತದೆ. ಎಲ್ಲಾ ವರ್ಗದ ಗ್ರಾಹಕರಿಗಾಗಿ ಬಟ್ಟೆಗಳ ವಿಫುಲ ಸಂಗ್ರಹ ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು ಗ್ರಾಹಕರು ಈ ಮಾನ್ಸೂನ್ ಸೇಲ್ ನ ವಿಶೇಷ ದರ ಕಡಿತದ ಪ್ರಯೋಜನ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕು ಸರ್ಕಾರಿ ಆಸ್ಪತ್ರೆ ಕಟ್ಟಡ ಶಿಥಿಲ. ಹೊಸ ಕಟ್ಟಡದ ಅವಶ್ಯಕತೆ ಇದೆ. ವೈದ್ಯರ ಕೊರತೆ. ಸಿಬ್ಬಂದಿ ಕೊರತೆ ಇದೆ. ಹಳೆಯ ವಾಹನ ಮೂಲೆ ಸೇರಿದೆ. ಬೇರೆ ವಾಹನ ಕೊಟ್ಟರೆ ಮತ್ತಷ್ಟು ಸೇವೆಗೆ ಅನಕೂಲವಾಗುತ್ತದೆ. ಲ್ಯಾಬ್ ಟೆಕ್ನಿಶಿಯನ್ ನಿಂದ ಹಿಡಿದು ಆಶಾ ಕಾರ್ಯಕರ್ತೆಯರ ತನಕ ಕೊರತೆ. ಐಸಿಯು ವಾರ್ಡ್ ಸಮಸ್ಯೆ ಇದೆ ಎಂದು ಒಪ್ಪಿಕೊಂಡ ವೈದ್ಯಾಧಿಕಾರಿ. ಇದು ಕುಂದಾಪುರ ತಾಲೂಕು ಪಂಚಾಯಿತಿ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆ ಸ್ಥಿತಿಗತಿಗಳ ಬಗ್ಗೆ ನಡೆದ ಸಭೆಯಲ್ಲಿ ವೈದ್ಯರು ಕೊರತೆಗಳ ಪಟ್ಟಿ ಬಿಚ್ಚಿಟ್ಟಿದ್ದು ಹೀಗೆ. ಕೋಟ ಆಸ್ಪತ್ರೆ ನಾಲ್ಕು ಉಪಕೇಂದ್ರ ಹೊಂದಿದ್ದು, 2 ಪೋಸ್ಟ್ ಖಾಲಿ, ಬಸ್ರೂರು ಆರೋಗ್ಯ ಕೇಂದ್ರ ಪಂಚಾಯಿತಿ ಮೂಲಕ ನೀರಿನ ಸಮಸ್ಯೆ ನೀಗಿಕೊಂಡರೂ ಕಟ್ಟಡ ಹಳತು, ಕೆದೂರು ಪರ್ಮನೆಂಟ್ ಪೋಸ್ಟ್ ಖಾಲಿಯಿದ್ದು, ಮಂದಾರ್ತಿ ಆಸ್ಪತ್ರೆ ಜಾಗದ ದಾಖಲೆ ಜೊತೆ ನೀರಿನ ಸಮಸ್ಯೆ ಇದೆ. ಸೈಬ್ರಕಟ್ಟೆಯಲ್ಲಿ ನೀರಿನ ಸಮಸ್ಯೆ ಹುದ್ದೆಗಳು ಖಾಲಿ, ಗುಡ್ಡಗಾಡ ಪ್ರದೇಶದ ಆರೋಗ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಡಿನ ವಿಸ್ತರಣೆ ಜೊತೆಗೆ ಕಾಂಡ್ಲಾ ವನಗಳನ್ನು ಹೆಚ್ಚಿಸಬೇಕಿದೆ. ದೇಶದಲ್ಲಿ 20ಶೇಕಡಾ ಭಾಗ ನಮ್ಮಲ್ಲಿ ಅರಣ್ಯ ಪ್ರದೇಶವಿದ್ದು ಕಾಡ್ಗಿಚ್ಚು ಮೊದಲಾದ ಸಮಸ್ಯೆಗಳಿಂದ ನಾಶವಾಗುತ್ತಿದ್ದು ಇದನ್ನು ತಡೆಯಲು ಸರ್ಕಾರ, ಇಲಾಖೆ, ಸಂಘಸಂಸ್ಥೆಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ. ಜನರಿಗೆ ಅನುಕೂಲವಾಗುವಂತೆ ಸಿ.ಆರ್.ಝಡ್ ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರ ಮುಂದಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅರಣ್ಯ ಇಲಾಖೆ ಮಂಗಳೂರು ವೃತ್ತ, ಕುಂದಾಪುರ ವಿಭಾಗದಿಂದ ‘ವಿಶ್ವ ಪರಿಸರ ದಿನಾಚರಣೆ-2023’ದ ಅಂಗವಾಗಿ ಜೂ.5 ಸೋಮವಾರ ಕುಂದಾಪುರ-ಕೋಡಿ ಸೇತುವೆ ಬಳಿಯ ಶ್ರೀ ನಾಗ ಜಟ್ಟಿಗೇಶ್ವರ ದೇವಸ್ಥಾನದ ಎದುರು ಹಮ್ಮಿಕೊಂಡ ಕಾಂಡ್ಲಾ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾಂಡ್ಲಾ ಗಿಡಗಳು ಸುನಾಮಿಯಂತಹ ಪರಿಸರದ ವ್ಯತ್ಯಯಗಳನನ್ನು ತಡೆಯುತ್ತದೆ. ಕಾಂಡ್ಲಾ ವನದ ಹಸಿರು ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಪಕ್ಷಿ ಸಂಕುಲಕ್ಕೂ ಆಶ್ರಯ ನೀಡುವುದಲ್ಲದೆ ಜಲಚರಗಳಿಗೆ ಆವಾಸ ಸ್ಥಾನವಾಗಿದೆ. ವಿಶ್ವ ಪರಿಸರ ದಿನದ ಅಂಗವಾಗಿ ದೇಶದಲ್ಲಿ ಪರಿಸರ…
ಕುಂದಾಪುರ ವಲಯ ಅರಣ್ಯ ಇಲಾಖೆ ಆಯೋಜಿಸಿದ್ದ ಕಾಂಡ್ಲಾ ಸಸಿ ನೆಡುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜೂ. 5: ಕುಂದಾಪುರ ಕಡೆಗೆ ತೆರಳುತ್ತಿದ್ದ ಕಾರೊಂದು ಡಿವೈಡರ್ ಏರಿ ಪಲ್ಟಿಯಾಗಿ ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿಯಾದ ಘಟನೆ ಹೆಮ್ಮಾಡಿ ಸಮೀಪದ ಜಾಲಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಕರು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಸಿಗಂದೂರಿನಿಂದ ಬ್ರಹ್ಮಾವರಕ್ಕೆ ತೆರಳುತ್ತಿದ್ದ ಮಹೇಂದ್ರ ಕ್ವಾಂಟೋ ವಾಹನ ಜಾಲಾಡಿ ಎಂಬಲ್ಲಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಾಷ್ಷಟ್ರೀಯ ಹೆದ್ದಾರಿಯ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಪಕ್ಕದ ರಸ್ತೆಗೆ ಮಗುಚಿ ಬಿದ್ದಿದೆ. ಇದೇ ಸಂದರ್ಭ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ರೆಡಿಗೋ ಕಾರಿಗೆ ಡಿಕ್ಕಿಯಾಗಿದ್ದು, ಆ ಕಾರೂ ಭಾಗಶಃ ಹಾನಿಗೊಳಗಾಗಿದೆ. ಪಲ್ಟಿಯಾಗಿರುವ ಮಹೀಂದ್ರ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ರಸ್ತೆಯ ಇಕ್ಕೆಲ ತಗ್ಗು ಪ್ರದೇಶವಾದ್ದರಿಂದ ಕಾರು ಕೆಳಕ್ಕುರುಳಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಎರಡು ಕಾರುಗಳು ಮುಂಭಾಗ ಸಂಪೂರ್ಣ ಜಜ್ಜಿ ಹೋಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
