ಕುಂದಾಪ್ರ ಡಾಟ್ ಕಾಂ ವರದಿ.ಬೈಂದೂರು: ಶತಮಾನದ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ತಗ್ಗರ್ಸೆ ಕಂಬಳೋತ್ಸವವು ಶುಕ್ರವಾರ ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ವಿಜೃಂಭಣೆಯಿಂದ ನಡೆಯಿತು. 60ಕ್ಕೂ ಅಧಿಕ ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸಿ ಕಂಬಳದ ಮೆರಗು ಹೆಚ್ಚಿಸಿದವು. ಕಂಬಳದ ದಿನ ಬೆಳಿಗ್ಗೆ ಗದ್ದೆಯ ಅಲಂಕಾರ, ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಯಿತು. ಕಂಬಳ ಗದ್ದೆಯನ್ನು ಖುರ್ಜು ನಿಲ್ಲಿಸಿ, ತೋರಣಗಳಿಂದ ಅಲಂಕರಿಸಲಾಗಿತ್ತು. ಊರಿನ ಒಂದು ನಿರ್ದಿಷ್ಟ ಕುಟುಂಬದ ಕೋಣಗಳನ್ನು ಗದ್ದೆಗೆ ಇಳಿಸಿದ ಬಳಿಕ ಕಂಬಳಕ್ಕೆ ಅಧಿಕೃತ ಚಾಲನೆ ದೊರೆಯಿತು. ವಿಶೇಷ ವೇಷಭೂಷಣ, ವಾದ್ಯ ಮುಂತಾದವುಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದ ಕೋಣಗಳ ಪೈಕಿ ಕೆಲವನ್ನು ಕಂಬಳ ಗದ್ದೆಯಲ್ಲಿ ಹರಕೆಯ ಸಲುವಾಗಿ ಓಡಿಸಿದರೇ, ಉಳಿದ ಕೋಣಗಳು ಹಗ್ಗ ಹಾಗೂ ಹಲಗೆ ವಿಭಾಗದ ಸ್ವರ್ಧೆಯಲ್ಲಿ ಪಾಲ್ಗೊಂಡವು. ಈ ಭಾರಿ ಕೋಣಗಳ ವೇಗವನ್ನು ಅಳೆಯಲು ಸೆನ್ಸಾರ್ ಅಳವಡಿಸಲಾಗಿತ್ತು. ಕಂಠದಮನೆ ಕುಟುಂಬದ ಟಿ. ನಾರಾಯಣ ಹೆಗ್ಡೆಯವರ ನೇತೃತ್ವದಲ್ಲಿ ಸಾಂಪ್ರದಾಯಿಕ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಗ್ರಾಹಕರ ಮತ್ತು ಸದಸ್ಯರ ಸಹಕಾರದಿಂದ ಸಹಕಾರಿ ಸಂಘಗಳು ಅತ್ಯಂತ ಯಶಸ್ವಿಯಾಗಿ ಮುನ್ನೆಡೆಯುತ್ತಿವೆ. ಕೇವಲ ಆಡಳಿತ ಮಂಡಳಿಯಿಂದ ಮಾತ್ರ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದುವುದಲ್ಲ. ಸದಸ್ಯರು ಮತ್ತು ಗ್ರಾಹಕರ ಉತ್ತಮ ಸ್ಪಂದನೆ ಬಹಳ ಮುಖ್ಯವಾಗಿದೆ. ಜನರಿಗೆ ಉತ್ತಮ ಸೇವೆ ಸಿಗಲು ಸಿಬ್ಬಂದಿಗಳ ಪ್ರಾಮಾಣಿಕ ದುಡಿಮೆ ಕಾರಣವಾಗುತ್ತದೆ ಎಂದು ಶ್ರೀರಾಮ ಸೌಹಾರ್ದ ಕೋ ಅಪರೇಟೆವ್ ಸೊಸೈಟಿ ಬೈಂದೂರು ಇದರ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಹೇಳಿದರು. ಅವರು ಗುರುವಾರ ನಾಗೂರಿನಲ್ಲಿ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಇದರ ನಾಗೂರು ಶಾಖೆಯ ಗ್ರಾಹಕರ ಸಮಾವೇಶ ಮತ್ತು ಪೊಲೀಸ್ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶ್ರೀರಾಮ ಸೌಹಾರ್ದ ಸಹಕಾರಿ ಸಂಘವು ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ ಪಡೆದ ಬಗ್ಗೆ ಎಲ್ಲ ಗ್ರಾಹಕರನ್ನು ಅಭಿನಂದಿಸಿದರು. ಎಲ್ಲರ ಸಹಕಾರದಿಂದ ಈ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಬೈಂದೂರು ಆರಕ್ಷಕ ಠಾಣೆಯ ತನಿಖಾ ವಿಭಾಗದ ಉಪ ನಿರೀಕ್ಷಕರಾದ ಮಹೇಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕೋಡಿ ಬ್ಯಾರಿಸ್ ಪದವಿ ಪೂರ್ವ ಕಾಲೇಜಿನ 2022-23 ನೇ ಸಾಲಿನ ರಕ್ಷಕ- ಶಿಕ್ಷಕರ ಸಭೆಯು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ಠಾಣೆ ಪಿಎಸ್ಐ ಸದಾಶಿವ ರಾಮಪ್ಪ ಗವರೋಜಿ ಮಾತನಾಡಿ ವಿದ್ಯಾರ್ಥಿಗಳು ಕಾನೂನುಬಾಹಿರ ಚಟುವಟಿಕೆಯಲ್ಲಿ ಮತ್ತು ಸೈಬರ್ ಅಪರಾಧಗಳಲ್ಲಿ ತೊಡಗುವುದರಿಂದ ಮುಂದೆ ಜೀವನದಲ್ಲಿ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ ಜಾಗ್ರತಿ ಮೂಡಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಜ್ಯ ಮಟ್ಟದ ತರಬೇತುದಾರರಾದ ಆಝಾದ್ ಮೊಹಮ್ಮದ್ ಮಾತನಾಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಪ್ರತಿ ಹಂತದಲ್ಲಾಗುವ ಬದಲಾವಣೆ ಮತ್ತು ಅದರ ಬಗ್ಗೆ ಪೋಷಕರು ವಹಿಸಬೇಕಾದ ಕಾಳಜಿ ಬಗ್ಗೆ ಮತ್ತು ಪೋಷಕರ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಹಾಗೂ ಶಿಕ್ಷಕ ರಕ್ಷಕ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. 2022-24 ನೇ ಸಾಲಿಗೆ ಸಂಘದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಭೌತಶಾಸ್ತ್ರ ಉಪನ್ಯಾಸಕರಾದ ಸಿದ್ದೀಕ್ ಅಕ್ಬರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಡಿ.1: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ, ಕುಂದಾಪುರ ಇದರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 08, 09 ಮತ್ತು 10ರಂದು ನಡೆಯಲಿರುವ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದ ಕ್ರೀಡಾಂಗಣ ಭೂಮಿ ಪೂಜೆ ಕಾಲೇಜಿನ ಕ್ರೀಡಾಂಗಣದಲ್ಲಿ ನೆರವೆರಿತು. ಎಂ. ಎಂ. ಹೆಗ್ಡೆ ಎಜುಕೇಶನಲ್ ಆಂಡ್ ಚಾರಿಟೆಬಲ್ ಟ್ರಸ್ಟ್ನ ಅದ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಅವರು ಈ ವೇಳೆ ಮಾತನಾಡಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡಿದ ಜವಾಬ್ದಾರಿಯನ್ನು ಸ್ವೀಕರಿಸಿದ ಸಂಸ್ಥೆಯು ಕಳೆದ ಕೆಲವು ದಿನಗಳಿಂದ ಸಿದ್ದತೆ ಆರಂಭಿಸಿದೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲಿ ಎಂದರು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ಅದ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಅವರು ಮಾತಾನಾಡಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದ ಆಯೋಜನೆ ನಮ್ಮ ಕಾಲೇಜಿಗೆ ಒದಗಿ ಬಂದಿರುವುದು ಒಂದು ಸುವರ್ಣ ಅವಕಾಶವಾಗಿದೆ. ಅದನ್ನು ಬಹಳ ಅಚ್ಚುಕಟ್ಟಾಗಿ ನಿಬಾಯಿಸಲು ಪಣ ತೋಟ್ಟಿದ್ದೆವೆ ಎಂದರು. ಪುರೋಹಿತರಾದ ಶಂಕರನಾರಾಯಣ ಉಡುಪ ಅವರ ನೇತೃತ್ವದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ಜನತಾ ಗೀತೋತ್ಸವ 2022 ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗರವರು ಕನ್ನಡ ನಾಡು- ನುಡಿ-ಸಂಸ್ಕ್ರತಿಗೆ ಸಂಬಂಧಿಸಿದ ಗೀತ ಗಾಯನದಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾದದ್ದು ಎನ್ನುತ್ತಾ ಕಾಲೇಜಿನ ವಿದ್ಯಾರ್ಥಿ ಪ್ರತಿಭೆಗಳನ್ನು ಅಭಿನಂದಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಗಣೇಶ ಮೊಗವೀರರವರು ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಾಗರಾಜ ಪಾಣರರವರು ಜಾನಪದ ಸಂಸ್ಕೃತಿಯ ಕುರಿತು ಮಾತನಾಡುತ್ತಾ ಕಾಂತಾರ ಸಿನಿಮಾದಲ್ಲಿ ತಾವು ಹಾಡಿರುವ ಜಾನಪದ ಹಾಡುಗಳನ್ನು ಹಾಡಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಜನತಾ ಪ್ರೌಢಶಾಲೆ ಹೆಮ್ಮಾಡಿಯ ಮುಖ್ಯ ಶಿಕ್ಷಕರಾದ ಮಂಜು ಕಾಳಾವಾರ ಅವರು ಅರ್ಥಪೂರ್ಣ ಕಾರ್ಯಕ್ರಮಗಳ ಕುರಿತು ಶ್ಲಾಘನೇ ವ್ಯಕ್ತಪಡಿಸಿದರು. ಜನತಾ ಪ್ರೌಢಶಾಲೆಯ ವೃತ್ತಿ ಶಿಕ್ಷಣ ಶಿಕ್ಷಕಿ ಹಾಗೂ ವಿದೂಷಿ ಪ್ರವಿತಾ ಅಶೋಕ್ ಅವರು ಸಂಗೀತದ ಅಭ್ಯಾಸವನ್ನು ರೂಢಿಸಿಕೊಳ್ಳುವಂತ ವಿದ್ಯಾರ್ಥಿಗಳಿಗೆ ಕರೆ ನೀಡಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಕಿರಿಮಂಜೇಶ್ವರದ ಶುಭದಾ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿದ ಗಂಗೊಳ್ಳಿ ಪೋಲಿಸ್ ಠಾಣೆಯ ಉಪನಿರೀಕ್ಷಕಿ ಜಯಶ್ರೀ ಹೆಚ್. ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸಿ ಗೆಲ್ಲುವುದು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಸೋಲು ಮತ್ತು ಗೆಲುವನ್ನು ಸಮಾನಾಗಿ ಸ್ವೀಕರಿಸಿದಾಗ ಮಾತ್ರ ವ್ಯಕ್ತಿತ್ವ ವಿಕಸನಗೊಳ್ಳುವುದು ಎಂದು ಮಕ್ಕಳ ಉತ್ಸಾಹ ಮತ್ತು ಸ್ವರ್ಧಾ ಮನೋಭಾವವನ್ನು ಪ್ರಶಂಸಿದರು. ಧ್ವಜಾರೋಹಣಗೈದು ವಂದನೆ ಸ್ವೀಕರಿಸಿದ ಬೈಂದೂರು ಪೋಲಿಸ್ ಠಾಣೆಯ ಉಪನಿರೀಕ್ಷಕ ನಿರಂಜನ್ ಗೌಡ ಕ್ರೀಡೆ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕರಿಯಾಗುತ್ತದೆ ಸದೃಢ ದೇಹದಲ್ಲಿ ಸಬಲ iನಸ್ಸು ಇರುತ್ತದೆ ಕ್ರೀಡೆ ವ್ಯಾಯಾಮದೊಂದಿಗೆ ಜೀವನೋತ್ಸಾಹ ನೀಡುತ್ತದೆ ಎಂದು ಸಂಸ್ಥೆಯ ಕ್ರೀಡಾಕೂಟದ ಅಚ್ಚುಕಟ್ಟನ ಆಯೋಜನೆಯನ್ನು ಶ್ಲಾಘಿಸಿದರು. ಸಂಸ್ಥೆಯ ಹಿತೈಷಿ ಪುಂಡಲಿಕ ನಾಯಕ ಕ್ರೀಡಾ ಕೂಟಕ್ಕೆ ಸಾಂಕೇತಿವಾಗಿ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶುಭದಾ ಶಾಲೆಯ ಪ್ರಾಂಶುಪಾಲರಾದ ರವಿದಾಸ್ ಶಟ್ಟಿ ಮಾತನಾಡಿ ಶಿಕ್ಷಣದ ಜೊತೆಜೊತೆಗೆ ಕ್ರೀಡೆಯಲ್ಲೂ ನಮ್ಮನ್ನು ನಾವು ತೊಡಗಿಸಿಕೊಂಡರೆ…
ದಕ್ಷಿಣಾಯನದಲ್ಲಿ ಬರುವ ಎರಡನೇ ಋತುವೇ ಶರತ್ ಋತು. ಶರತ್ ಋತುವು ಪ್ರಾರಂಭವಾಗುತಿದ್ದಂತೆ ಬಿಸಿಲು ಪ್ರಕರವಾಗುತ್ತದೆ. ಹಾಗಾಗಿ ಪಿತ್ತ ದೋಷ ಹೆಚ್ಚಾಗುತ್ತದೆ. ಋತುವಿಗೆ ಅನುಸಾರ ನಮ್ಮ ಆಹಾರ ವಿಹಾರಗಳಲ್ಲಿ ಬದಲಾವಣೆ ಯಾವಾಗ ಮಾಡಿಕೊಳ್ಳುವೆವೋ ಆಗ ಮಾತ್ರ ಕಾಲ ವೈಪರಿತ್ಯತೆಯಿಂದಾಗುವ ರೋಗಗಳಿಂದ ವಿಮುಕ್ತರಾಗಿ ಆರೋಗ್ಯವಂತರಾಗಿರಲು ಸಾಧ್ಯ. ಚಳಿಗಾಲ ಅಂದರೆ ಶುಷ್ಕ ಹವೆ ಎಲ್ಲೆಡೆ ಓಡಾಡುತ್ತವೆ. ಅದು ಮಾನವನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಚಳಿಗಾಲಕ್ಕೆ ಬದಲಾದ ಜೀವನಶೈಲಿ ಹಾಗೂ ವಾತಾವರಣ ನಿಮ್ಮ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಕಾಲಕ್ಕೆ ಅನುಗುಣವಾಗಿ ಪರಿಸರ ಬದಲಾದಂತೆ ಶರೀರದಲ್ಲೂ ಬದಲಾವಣೆಯಾಗುತ್ತದೆ.ಈ ಸಮಯದಲ್ಲಿ ಸಾಂಕ್ರಾಮಿಕ ಜ್ವರ ಕಾಡುವುದು ಹೆಚ್ಚು. ನೆಗಡಿ, ಕೆಮ್ಮು, ತಲೆನೋವಂತೂ ಸಹಜ. ಉಸಿರಾಟದ ಸಮಸ್ಯೆ ಹೆಚ್ಚಾ ಗಿ ಕಾಡುವುದು ಇದೇ ಸಮಯದಲ್ಲೇ. ಅಸ್ತಮಾ ಇರುವವರು ಈ ಸಮಯದಲ್ಲಿ ಮತ್ತಷ್ಟು ನರಳುತ್ತಾರೆ. ಚಳಿಗಾಲದಲ್ಲಿ ಆಗಾಗ ಮಳೆಯಾದರಂತೂ ಅಲ್ಲಲ್ಲಿ ನಿಂತ ನೀರಲ್ಲಿ ಸೊಳ್ಳೆಗಳ ಉತ್ಪತ್ತಿ ಆಗುತ್ತವೆ. ಅವು ಮಲೇರಿಯಾ, ಡೆಂಘೆಗಳಂಥ ಮಾರಕ ರೋಗಗಳನ್ನು ಹರಡುತ್ತವೆ. ವಾಂತಿ, ಭೇದಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಾಹಿತಿ ಮೊಗೇರಿ ಗೋಪಾಲಕೃಷ್ಣ ಅಡಿಗರ ಹೆಸರಿನಲ್ಲಿ ಬೈಂದೂರಿನಲ್ಲಿ ನಿರ್ಮಿಸಲು ಹೊರಟಿರುವ ಪುರಭವನವನ್ನು ಗಾಂಧಿ ಮೈದಾನ ಹೊರತುಪಡಿಸಿ, ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೇರೆ ಭಾಗದಲ್ಲಿ ನಿರ್ಮಿಸಲಿ ಎಂದು ಬೈಂದೂರು ಗಾಂಧಿ ಮೈದಾನ / ಕ್ಯಾಂಪಸ್ ಗ್ರೌಂಡ್ / ಬಂಗಲಿ ಝೆಡ್ ಮೈದಾನ ಸಂರಕ್ಷಣಾ ಸಮಿತಿಯ ಸುಬ್ರಹ್ಮಣ್ಯ ಬಿಜೂರು ಹೇಳಿದರು. ಅವರು ಬೈಂದೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಗಾಂಧಿ ಮೈದಾನದ ಜಾಗ ರಕ್ಷಣಾ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಪದವಿಪೂರ್ವ ಕಾಲೇಜಿನ ಆಟದ ಮೈದಾನವಾಗಿ ಮಾತ್ರ ಬಳಸಿಕೊಳ್ಳುವಂತೆ ಹಿಂದಿನ ದ.ಕ ಜಿಲ್ಲಾಧಿಕಾರಿ ಷರತ್ತುಬದ್ಧ ಅನುಮತಿ ನೀಡಿದ್ದರು. ಈ ಜಾಗದಲ್ಲಿ ಪುರಭವನ ನಿರ್ಮಿಸಿ ಬೈಂದೂರು ಹೃದಯ ಭಾಗದಲ್ಲಿರುವ ಏಕೈಕ ಮೈದಾನವನ್ನು ಹಾಳು ಮಾಡುವುದರ ಬದಲಿಗೆ, ಬೇರೆಡೆ ಪುರಭವನ ನಿರ್ಮಿಸುವುದು ಒಳಿತು ಎಂದರು. ಸಮಿತಿಯ ಗಿರೀಶ್ ಬೈಂದೂರು ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಮೈದಾನದ ಜಾಗವನ್ನು ಕಬಳಿಸಿದರೆ ಮತ್ತೊಂದು ಮೈದಾನ ನಿರ್ಮಿಸಲು ಸಾಧ್ಯವಿಲ್ಲ. ಮಕ್ಕಳಿಂದ ವಯೋವೃದ್ಧರ ತನಕ ಪ್ರತಿಯೊಬ್ಬರಿಗೂ ಮೈದಾನದ ಅಗತ್ಯವಿದೆ. ಮೈದಾನ ಕಿರಿದಾಗುತ್ತಾ ಹೋದರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಡಿ.1: ಕುಂದಾಪುರದ ಸಾಹಿತಿ, ಶಿಕ್ಷಕಿ ಸುಮಿತ್ರಾ ಐತಾಳ್ (58) ಅವರು ಇಂದು ಸಂಜೆ ಅಸೌಖ್ಯದಿಂದ ನಿಧನರಾದರು. ಕೆಲ ಸಮಯದಿಂದ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿದ್ದ ಸೇವೆ ಸಲ್ಲಿಸುತ್ತಿದ್ದ ಸುಮಿತ್ರಾ ಐತಾಳ್ ಅವರು ಕುಂದಾಪ್ರ ಕನ್ನಡದಲ್ಲಿ ರೂಪಕ, ನಾಟಕ, ಸಾಹಿತ್ಯ ರಚನೆ ಮಾಡಿ ಕುಂದಗನ್ನಡಕ್ಕೆ ಅಪಾರ ಸೇವೆ ಸಲ್ಲಿಸಿದ್ದರು. ಬಿ.ಇಡ್, ಎಂ.ಎ ವ್ಯಾಸಂಗ ಪೂರೈಸಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸುಮಿತ್ರಾ ಅವರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಭಾವಗಾನ, ಅಂತರಗಂಗೆ, ಗಡಿಯಾರ, ಹಣತೆ, ಮೌನರತಿ ಕವನ ಸಂಕಲನ, ಫಲಿತಾಂಶ ಕಥಾಸಂಕಲನವನ್ನು ಪ್ರಕಟಿಸಿದ್ದರು. ಅಲ್ಲದೇ ವಿಜಯ ಕರ್ನಾಟಕ, ಕುಂದಪ್ರಭ, ಕುಂದಾಪುರ ಮಿತ್ರ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟಗೊಂಡಿದ್ದವು. ’ಬಾ ಗೆಳತಿ’ ಮಹಿಳಾ ಸ್ಪಂದನ ಕಾರ್ಯಕ್ರಮ, ದೂರದರ್ಶನದಲ್ಲಿ ಸಾಹಿತ್ಯದ ನುಡಿ ಕಾರ್ಯಕ್ರಮದಲ್ಲಿ ಕೂಡಾ ಅವರು ಭಾಗವಹಿಸಿದ್ದರು. ಕೆಲವು ದಿನಗಳ ಹಿಂದೆ ಅವರ ಪುಸ್ತಕ ಬಿಡುಗಡೆ, ನಾಟಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಾನ್ ಹಾಫ್ಕಿನ್ಸ್, ಯುನಿಸೆಫ್, ಬೈರೂಟ್ನ ಅಮೇರಿಕನ್ ವಿಶ್ವವಿದ್ಯಾಲಯ, ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಡಿ. 5ರಿಂದ 9ರ ವರೆಗೆ ಉತ್ತರ ಆಫ್ರಿಕದ ಮೊರೊಕ್ಕೊದಲ್ಲಿ ನಡೆಯುವ ‘ಎಸ್ಬಿಸಿಸಿ’ ಶೃಂಗಸಭೆಯಲ್ಲಿ ಭಾಗವಹಿಸಲು ಕುಂದಾಪುರ ತಾಲೂಕು ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ಆಯ್ಕೆಯಾಗಿದ್ದಾರೆ. ರಾಜ್ಯ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ನೇತೃತ್ವದ ರಾಜ್ಯದ ನಾಲ್ಕು ಜನರ ತಂಡದಲ್ಲಿ ಉದಯಕುಮಾರ ಶೆಟ್ಟಿ, ಕರ್ನಾಟಕ ಆರೋಗ್ಯ ಸಂವರ್ಧನ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಎಲ್. ಮೋಹನ್ ಮತ್ತು ಅಧಿಕಾರಿ ಮಲ್ಲಿಕಾ ಇದ್ದಾರೆ. ಸಾಮಾಜಿಕ ಮತ್ತು ವರ್ತನೆ ಬದಲಾವಣೆ ಸಂವಹನ (Social and Behavior Change Communication) ಕುರಿತಾದ ಈ ಸಭೆಯಲ್ಲಿ ಕರ್ನಾಟಕದ ತಂಡ ಇಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತು ವಿಷಯ ಮಂಡಿಸಲಿದೆ. ಮೂರನೆ ಬಾರಿ ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಉದಯಕುಮಾರ ಶೆಟ್ಟಿ ಪಂಚಾಯಿತಿ ಕೇಂದ್ರಿತವಾಗಿ ಮಾದರಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಜತೆಗೆ…
