ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಕಂಚಿಕಾನ್ ಶಾಲೆಯ ಮತಗಟ್ಟೆ ಸಂಖ್ಯೆ 68ರಲ್ಲಿ ಮತ ಚಲಾಯಿಸಿದರು.
ಕಂಚಿಕಾನ್ ಮತಗಟ್ಟೆಗೆ ತೆರಳಿದ ಅವರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಇದಕ್ಕೂ ಮೊದಲು ನವದುರ್ಗೆಯರಿಂದ ಬಿಜೆಪಿಗೆ ಮೊದಲು ಮತದಾನ ಅಭಿಯಾನದ ಭಾಗವಾಗಿ ಮಹಿಳೆಯರಿಂದ ಮೊದಲು ಮತದಾನ ಮಾಡಿಸಲಾಯಿತು.