ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದ ಎರಡನೇ ದಿನವಾದ ಗುರುವಾರ ‘ಡಾ.ವಿ.ಎಸ್.ಆಚಾರ್ಯ ಸಭಾಂಗಣ’ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಮಹಿಮೆಯನ್ನು ಚಿತ್ರಿಸುವ ‘ಮಂಜುನಾದ’ ಗೀತಗಾಯನದಿಂದ ಕೇಳುಗರನ್ನು ತನ್ಮಯಗೊಳಿಸಿದವರು ಸುರತ್ಕಲ್‌ನ ‘ಮಣಿಕೃಷ್ಣ ಸ್ವಾಮಿ ಅಕಾಡೆಮಿ’ ಗಾಯಕಿಯರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆಗೊಂಡ ‘ಮಂಜುನಾದ’ ಗೀತಕೃತಿಯನ್ನು ಆಧರಿಸಿ ಗಾಯಕಿಯರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಟ್ಟರು. ಒಟ್ಟು ಏಳು ಕಲಾವಿದರ ತಂಡ ಏಳು ಹಾಡುಗಳನ್ನು ಪ್ರಸ್ತುತಪಡಿಸಿತು. ಮೊದಲಿಗೆ ‘ಪ್ರಥಮದಲಿ ವಂದಿಸುವೆನು’ ಎಂದು ವಿಘ್ನವಿನಾಶಕ ಪ್ರಥಮ ಪೂಜಿತ ಗಣೇಶನನ್ನು ಪ್ರಾರ್ಥಿಸುವ ಮೂಲಕ ಗಾಯನವನ್ನು ಆರಂಭಿಸಲಾಯಿತು. ತದನಂತರದಲ್ಲಿ ರೇವತಿ ರಾಗದ ‘ಶ್ರೀ ಧರ್ಮಸ್ಥಳ ಕ್ಷೇತ್ರಾಧಿಪತಿ’, ತೋಡಿ ರಾಗದ ‘ಶ್ರೀ ಮಂಜುನಾಥ ಸ್ವಾಮಿನಮಃ’, ಪಟದೀಪ ರಾಗದ ‘ಎನಿತು ಜನುಮದ ಪುಣ್ಯ ಫಲವೋ’ ಎಂಬ ಗಾಯನವನ್ನು ಸಾದರ ಪಡಿಸಿದರು. ಯಕ್ಷಗಾನದ ಪ್ರಸಂಗದಲ್ಲಿ ಹಾಡಲ್ಪಡುವ ದ್ವಿಜಾವಂತಿ ರಾಗ ಸಂಯೋಜನೆಯ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಕಲಾಕಾರನಿಗೆ ಇಂತಹದ್ದೇ ಕ್ಯಾನ್ವಾಸ್ ಬೇಕೆಂದಿಲ್ಲ. ಕಲೆಯಲ್ಲಿ ಒಲವಿದ್ದರಾಯ್ತಷ್ಟೇ. ಅಂತಹದ್ದೊಂದು ಒಲವಿಗೆ ಹಣ್ಣುಗಳ ಮೂಲಕವೇ ಮೂರ್ತರೂಪ ದೊರೆತದ್ದು ಕೃಷಿಸಿರಿಯಲ್ಲಿ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022ರ ಕರಕುಶಲ ವಸ್ತುಪ್ರದರ್ಶನದಲ್ಲಿ ಖ್ಯಾತನಾಮರ ಚಿತ್ರಗಳು ಹಣ್ಣು-ಹಂಪಲುಗಳಲ್ಲಿ ಒಡಮೂಡಿದ್ದವು. ಸುಭಾಷ್‌ಚಂದ್ರ ಭೋಸ್, ಸರ್.ಎಂ. ವಿಶ್ವೇಶ್ವರಯ, ಕುವೆಂಪು, ದ.ರಾ. ಬೇಂದ್ರೆ, ಸಂಗೊಳ್ಳಿ ರಾಯಣ್ಣ, ಪೇಜಾವರ ಶ್ರೀಗಳು, ಪುನೀತ್ ರಾಜ್‌ಕುಮಾರ್ ಚಿತ್ರಗಳು ವಿಶೇಷ ಎನ್ನಿಸಿದವು. ಅಲ್ಲದೇ ನವಿಲು, ಮೀನು, ಬಾತುಕೋಳಿ, ಮಂಗ, ಪಕ್ಷಿಗಳ ವಿನ್ಯಾಸಗಳೂ ಹಣ್ಣು-ಹಂಪಲುಗಳ ರೂಪದಲ್ಲಿ ಕಾಣಿಸಿಕೊಂಡವು. ಹಣ್ಣುಗಳ ವಿನೂತನ ವಿನ್ಯಾಸಗಳಲ್ಲಿ ಶಿವ, ಪಾರ್ವತಿ, ಗಣೇಶ ದೇವರು ಹಾಗೂ ಕಾಂತಾರದ ಪಂಜುರ್ಲಿ ದೈವ, ಕಂಬಳ ದೃಶ್ಯಗಳು ಗಮನಸೆಳೆದವು. ಜೊತೆಗೆ ಒಂದೇ ಜಾತಿಯ ವಿವಿಧ ರೀತಿಯ ತೆಂಗಿನಕಾಯಿಗಳು ಮತ್ತು ಹಣ್ಣುಗಳೂ ಅಲ್ಲಿದ್ದವು. ಅಲ್ಲದೇ ಒಂದೇ ಜಾತಿಯ ಹಲವು ವಿವಿಧ ಹಣ್ಣುಗಳಾದ ಸೀತಾ ಫಲ, ರಾಮ ಸೀತಾ ಫಲ, ಲಕ್ಷ್ಮಣ ಫಲ, ತೆಂಗಿನ ಕಾಯಿಯ ವಿವಿಧ ಜಾತಿಯನ್ನು ಅಲ್ಲಿ ಪ್ರದರ್ಶಿಸಿರುವುದು ನೋಡುಗರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಬಾಳೆ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವೇ ಒಂದಿಲ್ರ್ಲೆಂದು ಪ್ರಭೇದ ಒಬ್ಬೊಬ್ಬರಿಗೆ ರುಚಿಸುತ್ತದೆ. ಇಂಥ ನೂರಾರು ಪ್ರಬೇಧದ ಬಾಳೆಹಣ್ಣುಗಳು ಒಂದೇ ಕಡೆಗೆ ನೋಡಲು ಸಿಕ್ಕರೆ ಹೇಗಿರುತ್ತೆ… ಮೂಡಬಿದಿರೆ ಆಳ್ವಾಸ್ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022ರ ಕೃಷಿಸಿರಿಯಲ್ಲಿ ಹತ್ತು-ಹಲವು ತಳಿಗಳ ಬಾಳೆಹಣ್ಣುಗಳು ಹಣ್ಣುಪ್ರಿಯರನ್ನು ಸೆಳೆಯುತ್ತಿದೆ. ಕೇರಳ ಮೂಲದ ವಿನೋದ್ ಅವರು ಕೃಷಿಮೇಳದ ಸ್ಟಾಲ್‌ನಲ್ಲಿ ನೂರಕ್ಕೂ ಹೆಚ್ಚು ಪ್ರಬೇಧದ ಬಾಳೆ ಹಣ್ಣುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಪಿಡಿ ಮೂಂಥಂ, ಬಾರ್ಗಿ, ಕೋಟಿಯ, ಮೈಸೂರ್ ಬಾಳೆ, ಲೇಡಿಸ್ ಫಿಂಗರ್ ಬಾಳೆ, ಸಾವಿರ ಫಿಂಗರ್ ಬಾಳೆ, ಬಸರೈ, ಸಿವಿ ರೋಜ್, ಚೋರಾ ಪೋವನ್, ಮತ್ತಿ, ಎನ್ ಸಿ ಆರ್ ೧೭, ಕಾವೇರಿ ಕಲ್ಕಿ, ಯಂಗಂಬಿ, ಹೋಂಡ, ಹೀಗೆ ಸಂಪ್ರದಾಯಿಕ ದೇಶಿ ವೀದೇಶಿ ಬಾಳೆ ಹಣ್ಣುಗಳು ಎಲ್ಲರನ್ನು ಆಕರ್ಷಿಸಿತು. ಒಂದೇ ಗೋನೆಯಲ್ಲಿ ಸಾವಿರ ಹಣ್ಣುಗಳು ಬಿಡುವ ಸಾವಿರ ಫಿಂಗರ್ ಬಾಳೆಗೊನೆ ಪ್ರದರ್ಶನದಲ್ಲಿ ಗಮನ ಸೆಳೆಯಿತು. ವರದಿ: ಐಶ್ವರ್ಯ ಕೋಣನ, ದ್ವಿತೀಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ದ್ವಂದ್ವಾರ್ಥಗಳಿಲ್ಲದೆಯೂ ಹಾಸ್ಯವನ್ನು ಧ್ವನಿಸಬಹುದು. ಸದಭಿರುಚಿಯ ಹಾಸ್ಯವು ಸಾಮಾಜಿಕ ನ್ಯೂನತೆಗಳನ್ನು ಮೀರಿ ಬದಲಾಗುವ ಸಾಮೂಹಿಕ ಮನಸ್ಥಿತಿಯನ್ನು ಸೃಷ್ಟಿಸುತ್ತದೆ ಎಂಬುದನ್ನು ಖ್ಯಾತ ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್ ಅವರ ’ನಗೆಹಬ್ಬ’ ತಂಡವು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿಯ ’ನುಡಿಸಿರಿ’ ವೇದಿಕೆಯಲ್ಲಿ ಶುಕ್ರವಾರ ನಡೆಸಿಕೊಟ್ಟ ಮೂಲಕ ನಿರೂಪಿಸಿತು. ನಗೆಹಬ್ಬ ತಂಡದ ರಿಚರ್ಡ್ ಲೂಯಿಸ್, ಮಿಮಿಕ್ರಿ ದಯಾನಂದ್ ಮತ್ತು ಕಿರ್ಲೋಸ್ಕರ್ ಸತ್ಯ ಅವರು ನಗೆಯ ಅಲೆಯನ್ನು ಸೃಷ್ಟಿಸಿದ್ದಲ್ಲದೇ ಬದುಕಿನ ಅನೇಕ ಮೌಲಿಕ ಅಂಶಗಳನ್ನು ಮನದಟ್ಟು ಮಾಡಿಕೊಟ್ಟರು. ಭಾಷೆಯೇ ಸಕಲ ಕಾರ್ಯಕ್ಕೂ ಮೂಲ ಸಾಧನ. ಭಾಷಾಶುದ್ಧಿ ಕುರಿತಾದ ಪರಿಕಲ್ಪನೆ ಇಲ್ಲವಾದಲ್ಲಿ ಜನರನ್ನು ತಲುಪುವುದು ಕಷ್ಟ. ಜೊತೆಗೆ ಭಾಷಾಭಿಮಾನ ಮತ್ತು ಭಾಷೆಯನ್ನು ಬಳಸಿ, ಬೆಳೆಸುವದೇ ನಿಜವಾದ ಶ್ರೀಮಂತಿಕೆ ಎನ್ನುವ ಅಮೂಲ್ಯ ಸಂದೇಶವನ್ನು ನಗೆಚಟಾಕಿಯ ಮುಖಾಂತರ ರಿಚರ್ಡ್ ಲೂಯಿಸ್ ಸಾರಿದರು. ಮಿಮಿಕ್ರಿ ದಯಾನಂದ್ ಅವರು ವಿವಿಧ ವ್ಯಕ್ತಿತ್ವಗಳ ಮಿಮಿಕ್ರಿಯ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಹಾಗೂ ಕೆ.ಎಲ್.ಇ ಪದವಿ ಪೂರ್ವ ಕಾಲೇಜು ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ಇಂಗ್ಲೀಷ್ ಚರ್ಚಾ ಸ್ಪರ್ಧೆಯಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪ್ರಣಮ್ಯ ಹಾಗೂ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಧಾರಿಣಿ ಕೆ. ಎಸ್ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಿರಿಮಂಜೇಶ್ವರ ಗ್ರಾಮದ ಕೊಡೇರಿಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಮತ್ತು ಹಳೆ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಾರಂಭವು ಡಿ.೧೭ರ ಶನಿವಾರದಂದು ಕೊಡೇರಿ ಶಾಲಾ ಆವರಣದಲ್ಲಿ ಬಹು ವಿಜೃಂಭಣೆಯಿಂದ ಜರಗಿತು. ಪೂರ್ವಾಹ್ನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಧ್ವಜಾರೋಹಣಗೈದು ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ಉದ್ಘಾಟಿಸಿ ವಾರ್ಷಿಕೋತ್ಸವಕ್ಕೆ ಶುಭ ಕೋರಿದರು. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಸುರೇಶ ಎಚ್. ಖಾರ್ವಿ ಅಧ್ಯಕ್ಷತೆ ವಹಿಸಿದ್ದರೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶೇಖರ ಖಾರ್ವಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಆನಂದ ಪೂಜಾರಿ ಕೊಡೇರಿ, ಕೃಷ್ಣ ಖಾರ್ವಿ, ರಮೇಶ ಖಾರ್ವಿ, ನೇತ್ರಾವತಿ, ಶಶಿಕಲಾ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ವಾಸುದೇವ ಕಾರಂತ, ಉದ್ಯಮಿ ಕೆ. ವಿ. ಕಾರಂತ, ವಿಶ್ವನಾಥ ಪೂಜಾರಿ, ಹರಿದಾಸ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶರಣ್ ಶಂಕರ್ ಇವರು ಎಲ್ಲಾ ವಿದ್ಯಾರ್ಥಿಗಳಿಗೂ ವಾಟರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬೈಂದೂರು ತಾಲೂಕು ಇದರ ವತಿಯಿಂದ ಹಕ್ಲಾಡಿ ಸರಕಾರಿ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯೂಷನ್ ತರಗತಿಯನ್ನು ಪ್ರಾರಂಭಿಸಲಾಯಿತು. ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಕ್ಲಾಡಿ ಒಕ್ಕೂಟದ ಅಧ್ಯಕ್ಷ ಚಂದ್ರ ಪೂಜಾರಿ ಟ್ಯೂಷನ್ ತರಗತಿಗೆ ಬುಧವಾರ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ತಾಲೂಕು ಯೋಜನಾಧಿಕಾರಿ ವಿನಾಯಕ ಪೈ, ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಸಂಗೀತಾ, ಜನಜಾಗೃತಿ ವೇದಿಕೆ ಸದಸ್ಯ ಗಣಪಯ್ಯ ಶೆಟ್ಟಿ, ಪದಾಧಿಕಾರಿಗಳಾದ ರಾಜು ಗಾಣಿಗ, ಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾ, ವಲಯ ಮೇಲ್ವಿಚಾರಕಿ ಪಾರ್ವತಿ, ಸೇವಾ ಪ್ರತಿನಿಧಿ ಜ್ಯೋತಿ, ಚಂದ್ರಹಾಸ, ಶಿಕ್ಷಕಿ ದೀಪಾ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ.ಡಿ.21: ಶಾರೀರಿಕ, ಆಧ್ಯಾತ್ಮಿಕ, ಭೌದ್ಧಿಕ ಬೆಳವಣಿಗೆ ವಿದ್ಯಾರ್ಥಿಗಳಿಗೆ ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಪ್ರೇರೇಪಿಸುತ್ತದೆ ಎಂದು ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಹೇಳಿದರು. ಅವರು ಇಲ್ಲಿನ ವಿದ್ಯಾಗಿರಿಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ-2022’ ಉದ್ಘಾಟಿಸಿ ಮಾತನಾಡಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸ್ಕೌಟ್ಸ್ ಗೈಡ್ಸ್‌ನ ಸೇವೆ ಅಪಾರ. ದೇಶದ ಅಭಿವೃದ್ದಿಯಲ್ಲಿ ಯುವಕರ ಪಾತ್ರ ದೊಡ್ಡದಿದೆ. ನಾವೆಲ್ಲರೂ ಕೂಡ ವಿಶ್ವ ಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ಶ್ರಮಿಸಬೇಕಿದೆ. ಜೊತೆಗೆ ದೇಶದ ಹಿತರಕ್ಷಣೆ ಮತ್ತು ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂದು ಆಲೋಚಿಸಿ ಮುಂದಡಿಯಿಟ್ಟರೆ ಮುಂದಿನ 25 ವರ್ಷಗಳ ಅವಧಿಯಲ್ಲಿ ಭಾರತವನ್ನು ಮತ್ತಷ್ಟು ಪ್ರಭಾವೀ ರಾಷ್ಟ್ರವನ್ನಾಗಿ ರೂಪಿಸಬಹುದು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಸಂದಿಗ್ಧ ಸಂದರ್ಭಗಳನ್ನು ಎದುರಿಸುವ ಧೈರ್ಯ ಮತ್ತು ಸ್ಥೈರ್ಯದ ಮನೋಧರ್ಮವನ್ನು ರೂಪಿಸಿಕೊಳ್ಳುವುದರ ಕಡೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಭಾರತ್ ಸ್ಕೌಟ್ಸ್ – ಗೈಡ್ಸ್ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಆರಂಭಗೊಂಡ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಆಯೋಜನೆಗೊಂಡಿರುವ ವಿವಿಧ ಮೇಳಗಳನ್ನು ಸಾಂಕೇತಿಕವಾಗಿ ನೀಟ್ ಲಾಂಗ್ ಟರ್ಮ್ ಕಟ್ಟಡದಲ್ಲಿ ಉದ್ಘಾಟಿಸಲಾಯಿತು. ಕಲಾಮೇಳವನ್ನು ಚಿತ್ರ ಕಲಾವಿದ ಕೆ ಕೆ ಕೃಷ್ಣ ಶೆಟ್ಟಿ, ವಿಜ್ಞಾನ ಮೇಳವನ್ನು ಇಸ್ರೋದ ಮಾಜಿ ವೈಜ್ಞಾನಿಕ ಕಾರ್ಯದರ್ಶಿ ಡಾ. ದಿವಾಕರ್, ಕೃಷಿ ಮೇಳವನ್ನು ಉದ್ಯಮಿ ಶ್ರೀಪತಿ ಭಟ್, ಪುಸ್ತಕ ಮೇಳವನ್ನು ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಹಾಗೂ ಆಹಾರ ಮೇಳವನ್ನು ಕೆ. ಪಿ ಮಿಶ್ರಾ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ತದ ನಂತರ ಅರಣ್ಯ ಚಾರಣಕ್ಕೆ ಚಾಲನೆ ನೀಡಲಾಯಿತು. ಸೌಟ್ಸ್-ಗೈಡ್ಸ್ ರಾಜ್ಯ ಆಯುಕ್ತ ಪಿ. ಜಿ. ಆರ್ ಸಿಂದಿಯಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಉಪಸ್ಥಿತರಿದ್ದರು. ಪೂರ್ವಾಹ್ನ ೯.೩೦ರಿಂದ ರಾತ್ರಿ ೯.೦೦ರವರೆಗೆ ಜನಮನ ತಣ ಸುವ ಅಪೂರ್ವ ಕಾರ್ಯಕ್ರಮಗಳೊಂದಿಗೆ ೫ ಬೃಹತ್ ಮೇಳಗಳು ನಡೆಯಲಿವೆ. ಕೃಷಿಮೇಳ :ಎ.ಜಿ.ಕೊಡ್ಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಗಂಗನಾಡು ವನಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೇವಸ್ಥಾನದ ಸಮಿತಿಯವರು ಪೂಜ್ಯ ವೀರೇಂದ್ರ ಹೆಗ್ಗಡೆಯವರಲ್ಲಿ ವಿನಂತಿಸಿಕೊಂಡಂತೆ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಪೂಜ್ಯರು 10 ಲಕ್ಷ ಮೊತ್ತದ ಡಿಡಿಯನ್ನು ದೇಣಿಗೆಯಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಕ್ತೇಶ್ವರರಾದ ಡಾ. ವೈ. .ರಾಜ್ ಮೋಹನ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
