ಪಕ್ಷವೇ ಸಾಮಾನ್ಯ ಕಾರ್ಯಕರ್ತನ್ನು ಗುರುತಿಸಿದೆ. ಗೆಲ್ಲಿಸಲು ಪಣತೊಡಿ – ಕೆ. ಅಣ್ಣಾಮಲೈ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪ್ರಧಾನಿ ನರೇಂದ್ರ ಮೋದಿಯವರೇ ಹಿಂದೆ ನಿಂತು ಆಯ್ಕೆ ಮಾಡಿದ ಅಭ್ಯರ್ಥಿ ಗುರುರಾಜ ಗಂಟಿಹೊಳೆ. ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. 25 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗುರುರಾಜ ಗಂಟಿಹೊಳೆಯವರು ಜಯ ಸಾಧಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಚುನಾವಣೆ ಸಹ ಉಸ್ತುವಾರಿ ಕೆ.ಅಣ್ಣಾಮಲೈ ಹೇಳಿದರು.

Call us

Click Here

ಸೋಮವಾರ ಬೆಳಗ್ಗೆ ತ್ರಾಸಿಯಿಂದ ಬೈಂದೂರಿನ ವರೆಗೂ ಬೃಹತ್ ರೋಡ್ ಶೋ, ಬೈಕ್ ರ್ಯಾಲಿ ನಡೆಸಿ, ಅನಂತರ ಮಾತನಾಡಿದ ಅವರು, ಗುರುರಾಜ ಗಂಟಿಹೊಳೆಯವರ ಆಯ್ಕೆ ಕೇವಲ ಯಾರೋ ಒಂದಿಬ್ಬರು ಮಾಡಿದ್ದಲ್ಲ. ಪಕ್ಷವೇ ಸಾಮಾನ್ಯ ಕಾರ್ಯಕರ್ತನ್ನು ಗುರುತಿಸಿ ಅವಕಾಶ ನೀಡಿದೆ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರಿದ್ದಾರೆ ಮತ್ತು ಅವರ ಅಭಿವೃದ್ಧಿಯ ಕನಸುಗಳು ಇವೆ. ನಾವೆಲ್ಲರೂ ಒಟ್ಟಾಗಿ ಗುರುರಾಜ ಗಂಟಿಹೊಳೆ ಅವರನ್ನು ಗೆಲ್ಲಿಸೊಣ ಎಂದು ಕರೆ ನೀಡಿದರು.

ಕ್ಷೇತ್ರದಲ್ಲಿ ಬಡವ, ಶ್ರೀಮಂತ, ಶ್ರಮೀಕರು, ರೈತರು, ಕಾರ್ಮಿಕರು ಹೀಗೆ ಸಾಮಾನ್ಯರಿಂದ ಹಿಡಿದು ಎಲ್ಲರ ಬೆಂಬಲ ಗುರುರಾಜ ಗಂಟಿಹೊಳೆಯವರ ಮೇಲಿದೆ.

ಬಿಜೆಪಿ ಪಕ್ಷ ಸಾಮಾನ್ಯರಿಗೂ ಸ್ಥಾನಮಾನ ನೀಡುತ್ತದೆ ಎಂಬುದಕ್ಕೆ ಗುರುರಾಜ ಗಂಟಿಹೊಳೆ ನಿದರ್ಶನವಾಗಿದೆ. ಬದಲಾವಣೆಗಾಗಿ ಈ ಅಭ್ಯರ್ಥಿಯ ಆಯ್ಕೆ ಮಾಡಲಾಗಿದೆ. ದೇಶ ಮೊದಲು ಎಂಬ ತತ್ವದಡಿ ಸಂಘಟನೆಯ ಕೆಲಸ ಮಾಡಿದವರು, ಕಳೆದ 15 ವರ್ಷದಿಂದ ಪಕ್ಷದ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಾ ಬಂದಿದ್ದಾರೆ.

ಮನುಷ್ಯ ಅಹಂ ಇಲ್ಲದೇ ಸಮಾಜಕ್ಕಾಗಿ ಕೆಲಸ ಮಾಡಿದಾಗ ದೇವರಾಗುತ್ತಾನೆ ಎಂದು ಉಪನಿಷತ್ ಹೇಳುತ್ತದೆ. ಆ ರೀತಿಯ ನಾಯಕರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಅದೇ ಮಾದರಿಯಲ್ಲಿ ಗುರುರಾಜ ಗಂಟಿಹೊಳೆಯವರು ಬೆಳೆಯಲಿದ್ದಾರೆ. ಇದರಿಂದ ಕ್ಷೇತದರದ ಸಮಗ್ರ ಅಭಿವೃದ್ಧಿಯೂ ಆಗಲಿದೆ. ಕಾರಣ ಗುರುರಾಜ ಗಂಟಿಹೊಳೆ ಅವರ ಹಿಂದೆ ಪ್ರಧಾನಿ ಮೋದಿಯವರಿದ್ದಾರೆ ಎಂದರು.

Click here

Click here

Click here

Click Here

Call us

Call us

ಇಡೀ ಪ್ರಪಂಚದಲ್ಲಿ ಯಾವ ರಾಜಕಾರಣಿಗೂ ಮೋದಿಗೆ ನೀಡುವಷ್ಟು ಮರ್ಯಾದೆ ಇಲ್ಲ. ಎಂಬುದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರ್ಯಾಲಿಯಿಂದ ಕಂಡು ಬಂದಿದೆ. ರಾಜ್ಯದಲ್ಲಿ ಬಿಜೆಪಿ

130 ಹೆಚ್ಚು ಸೀಟುಗಳೊಂದಿಗೆ ಸ್ಪಷ್ಟ ಬಹುಮತ ಪಡೆದು ಸರಕಾರ ರಚನೆ ಮಾಡಲಿದೆ ಎಂದರು.

ಗುರುರಾಜ ಗಂಟಿಹೊಳೆಯವರು ಬೈಂದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸಲಿದ್ದಾರೆ. ಪಕ್ಷದಲ್ಲೂ ಅವರು ಉನ್ನತ ಹುದ್ದೆಗೆ ಹೋಗಲಿದ್ದಾರೆ. ಕ್ಷೇತ್ರದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದ್ದು, ಗುರುರಾಜ ಗಂಟಿಹೊಳೆ ಅವರು ಅದರ ಸದುಪಯೋಗ ಮಾಡಿಕೊಡಲಿದ್ದಾರೆ ಎಂದರು.

ಕ್ಷೇತ್ರದಲ್ಲಿ ಸುಕುಮಾರ ಶೆಟ್ಟಿಯವರು ಶಾಸಕರಾಗಿ ಕಳೆದ 5 ವರ್ಷದಲ್ಲಿ 3 ಸಾವಿರ ಕೋಟಿಗೂ ಅಧಿಕ ಅನುದಾನ ತಂದಿದ್ದಾರೆ. ನಮ್ಮ ಪಕ್ಷದಲ್ಲಿ ಹೊಸಬರಿಗೆ ಅವಕಾಶ ನೀಡುತ್ತಿರುತ್ತಾರೆ. ಆದರೆ, ಕಾಂಗ್ರೆಸ್ ನಿಂದ 7 ಬಾರಿ ಸ್ಪರ್ಧಿಸಿ, ನಾಲ್ಕು ಬಾರಿ ಶಾಸಕರಾಗಿ 8 ನೇ ಬಾರಿ ಸ್ಪರ್ಧೆಗೆ ಇಳಿದು ಕೊನೆಯ ಅವಕಾಶ ನೀಡಿ ಎನ್ನುತ್ತಿದ್ದಾರೆ. ಇದು ಕೊನೆ ಚುನಾವಣೆ ಗೆಲ್ಲಿಸಿ ಎಂಬುದು ಕಾಂಗ್ರೆಸ್ ವ್ಯಾದಿಯದು ಎಂದು ವಾಗ್ದಾಳಿ ನಡೆಸಿದರು.

ನಾನು ರ್ಯಾಲಿಯಲ್ಲಿ ಗುರುರಾಜ ಗಂಟಿಹೊಳೆ ಅವರೊಂದಿಗೆ ಭಾಗವಹಿಸಲು ಚಪ್ಪಲಿ ಹಾಕಿರಲಿಲ್ಲ. ನಾವೆಲ್ಲ ಕಾರ್ಯಕರ್ತರು ಮೇ 10 ರಂದು ಚಪ್ಪಲಿ ಧರಿಸದೇ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಬರಿಗಾಲಿನಲ್ಲಿ ಸಂಪರ್ಕ ಮಾಡಿ, ಹೆಚ್ಚಿನ ಮತದಾನ ಮಾಡಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ಗೆಲುವಿಗೆ ಸಂಕಲ್ಪ ಮಾಡೋಣ ಎಂದು ಕಾರ್ಯಕರ್ತರು, ಬೆಂಬಲಿಗರಿಗೆ ಅಣ್ಣಾಮಲೈ ಕರೆ ನೀಡಿದರು.

ಈ ಸಂದರ್ಭದಲ್ಲಿ ಗುರುರಾಜ್ ಗಂಟಿಹೊಳೆ, ಮಂಡಳ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೋವಿಂದ ಬಾಬು ಪೂಜಾರಿ, ಚುನಾವಣಾ ಪ್ರಭಾರಿ ಬ್ರಿಜೇಶ್ ಚೌಟರ್, ಜಿಲ್ಲಾ ಕಾರ್ಯದರ್ಶಿ ಸದಾನಂದ್ ಉಪ್ಪಿನಕುದ್ರ, ನಟ ಶೈನ್ ಶೆಟ್ಟಿ, ಉದ್ಯಮಿ ಪ್ರವೀಣಕುಮಾರ್ ಶೆಟ್ಟಿ ಸಹಿತವಾಗಿ ಬಿಜೆಪಿಯ ಪ್ರಮುಖರು ಉಪಸ್ಥಿತರಿದ್ದರು.

ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದು, ಬೈಕ್ ರ್ಯಾಲಿ ಮೂಲಕ ಆಗಮಿಸಿ, ಬಿಜೆಪಿ, ಮೋದಿಯವರ ಪರವಾಗಿ ಘೋಷಣೆ ಕೂಗಿ, ಬಿಜೆಪಿ, ಕೇಸರಿ ಬಾವುಟ ಹಾರಿಸಿ ಸಂಭ್ರಮಿಸಿದರು.

Leave a Reply