ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕಮಲಶಿಲೆಯ ಪುಟಾಣಿ ರಿತನ್ಯ ಎಸ್. ಆಚಾರ್ಯಗೆ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯಿಂದ “ಸೂಪರ್ ಟ್ಯಾಲೆಂಟೆಡ್ ಕಿಡ್” ಬಿರುದನ್ನು ನೀಡಿ, “ಒನ್ ಇನ್ ಎ ಮಿಲಿಯನ್” ಎಂದು ಗೌರವಿಸಿದೆ. ಕಮಲಶಿಲೆಯ ನಿವಾಸಿ ಸುಧಾಕರ ಆಚಾರ್ಯ ಹಾಗೂ ಸುಚೇತಾ ದಂಪತಿಯ ಮಗಳು ರಿತನ್ಯ ಎಸ್. ಆಚಾರ್ಯ (1 ವರ್ಷ 4 ತಿಂಗಳು) ತನ್ನ ಅಪರೂಪದ ಪ್ರತಿಭೆಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾಳೆ. ತುಂಬಾ ಚಿಕ್ಕ ವಯಸ್ಸಿನಿಂದಲೇ ರಿತನ್ಯ ವಿಶೇಷ ಕುತೂಹಲ ಮತ್ತು ಕಲಿಕೆಯ ತವಕ ತೋರಿಸುತ್ತಿದ್ದಳು. ಅವಳಲ್ಲಿದ್ದ ಪ್ರತಿಭೆಯನ್ನು ಪೋಷಕರು ತಕ್ಷಣ ಗಮನಿಸಿ, ಅವಳಿಗೆ ಬೇಕಾದ ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ನಿರಂತರವಾಗಿ ನೀಡುತ್ತ ಬಂದಿದ್ದಾರೆ. ರಿತನ್ಯ ಈಗಾಗಲೇ ಫ್ಲಾಶ್ಕಾರ್ಡ್ಗಳ ಮೂಲಕ 21 ವಿಧದ ಪಕ್ಷಿಗಳು, 28 ಪ್ರಾಣಿಗಳು, 15 ದೇಹಭಾಗಗಳು, 6 ಕೀಟಗಳು, 20 ಹಣ್ಣುಗಳು, 23 ತರಕಾರಿಗಳು, 10 ಜಲಜ ಪ್ರಾಣಿಗಳು, 10 ವಾಹನಗಳು ಹಾಗೂ 65 ಕ್ಕೂ ಹೆಚ್ಚು ಗೃಹೋಪಯೋಗಿ ವಸ್ತುಗಳನ್ನು ಸರಿಯಾಗಿ ಗುರುತಿಸಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗ) ಉಡುಪಿ ಜಿಲ್ಲೆ ಮತ್ತು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ ಪದವಿ ಪೂರ್ವ ವಿಭಾಗದ ಬಾಲಕ – ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ನಮನ್, ಆಧೀಶ್, ದೀಪಕ್, ಫಹಾದ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಎಂಜಿನಿಯರ್ಸ್ ದಿನಾಚರಣೆ ನಡೆಸಲಾಯಿತು. ಕಾಲೇಜಿನ ಅಧ್ಯಕ್ಷರಾದ ಸಿದ್ದಾರ್ಥ ಜೆ. ಶೆಟ್ಟಿ ಅವರು ವಿಶ್ವೇಶ್ವರಯ್ಯ ಅವರ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಎಲ್ಲರಿಗೂ ಶುಭ ಹಾರೈಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಮೆಲ್ವಿನ್ ಡಿ. ಸೋಜಾ ಅವರು ವಿಶ್ವೇಶ್ವರಯ್ಯ ಅವರ ಜೀವನ ಶೈಲಿಯನ್ನು ನಾವೆಲ್ಲರು ಅಳವಡಿಸಿಕೊಂಡು ತಾಂತ್ರಿಕ ಜ್ಞಾನದ ಜೊತೆಗೆ ಉತ್ತಮ ಮಾನವರಾಗಬೇಕು ಎಂದು ಹೇಳಿದರು. ಕಾಲೇಜಿನ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಹಾಗೂ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಅವರು ವಿಶ್ವೇಶ್ವರಯ್ಯ ಅವರು ನಡೆದು ಬಂದ ಹಾದಿ ನಮಗೆಲ್ಲ ಮಾದರಿ, ಅವರಂತೆ ಕ್ರಿಯಾತ್ಮಕವಾಗಿ ಯೋಚಿಸಿ ಸಾಧನೆಗೈಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇಂಜಿನಿಯರ್ಸ್ ದಿನಾಚರಣೆ ಪ್ರಯುಕ್ತ ನಡೆಸಿದ ಭಾರತದ ಎಂಜಿನಿಯರಿಂಗ್ ಅದ್ಭುತಗಳು ವಿಷಯದ ಮೇಲೆ ನಡೆದ ಸ್ಪರ್ದಾ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾದ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಆಯೋಜಕರಾದ ಡಾಟಾಸೈನ್ಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಟೀಮ್ ಭವಾಬ್ಧಿ ಪಡುಕರೆ ಕೋಟತಟ್ಟು ಸಂಸ್ಥೆಯ ವತಿಯಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪಾರಂಪಳ್ಳಿ ಪಡುಕರೆ ನಗರ ಆರೋಗ್ಯ ಕ್ಷೇಮ ನಮ್ಮ ಕ್ಲಿನಿಕ್ಗೆ ಉಪಯೋಗವಾಗುವ ವಿವಿಧ ಸಲಕರಣೆಗಳಾದ ಸ್ಟೇಟೋಸ್ಕೊಪ್ , ಪಲ್ಸ್ ಆಕ್ಸಿ ಮೀಟರ್, ಬಿಪಿ ಆಪರೇಟರ್,ಆಪ್ರಾನ್ ಸೆಟ್, ಬೆಡ್ ಶೀಟ್, ಥರ್ಮಾ ಮೀಟರ್,ಪ್ರಥಮ ಚಿಕಿತ್ಸೆ ಕಿಟ್, ಸ್ಯಾನಿಟೈಸರ್, ಮಾಸ್ಕ್ ಸೆಟ್ ಹಾಗು ಗ್ಲೌಸ್ ಸೆಟ್ ಗಳನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ ಪಾರಂಪಳ್ಳಿ ಪಡುಕರೆ ವಾರ್ಡ್ ಸದಸ್ಯರಾದ ರೇಖಾ ಕೇಶವ ಕರ್ಕೇರ ಅವರ ಮೂಲಕ ಹಸ್ತಾಂತರಿಸಲಾಯಿತು. ಟೀಮ್ ಭವಾಬ್ಧಿಯ ಈ ಕಾರ್ಯದಿಂದ ಸಾರ್ವಜನಿಕರಿಗೆ ಅನುಕೂಲವಾಗುವುದು ಎಂದು ಟೀಮ್ ಭವಾಬ್ಧಿಯನ್ನು ಶ್ಲಾಘಿಸಿದರು ಮತ್ತು ಸಾರ್ವಜನಿಕರು ಈ ಸರಕಾರಿ ಆಸ್ಪತ್ರೆಯ ಉಚಿತ ವಿವಿಧ ಸೌಲಭ್ಯ ಪ್ರಯೋಜನ ಪಡೆಯಬೇಕು ಆಗ ಮಾತ್ರ ಯಶಸ್ವಿಯಾಗುವುದು ಎಂದು ಪಟ್ಟಣ ಪಂಚಾಯತ್ ಸದಸ್ಯರಾದ ರೇಖಾ ಕೇಶವ ಕರ್ಕೇರ ಹೇಳಿದರು. ಈ ಸಂದರ್ಭದಲ್ಲಿ ಟೀಮ್ ಭವಾಬ್ಧಿ ಪಡುಕರೆ ಅಧ್ಯಕ್ಷರಾದ ಸಂತೋಷ್ ತಿಂಗಳಾಯ, ಸಂಚಾಲಕ ರವೀಂದ್ರ ತಿಂಗಳಾಯ,ಸಮುದಾಯ ಆರೋಗ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜನರಲ್ಲಿ ಸಂವಿಧಾನ ಬದ್ಧ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಲು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಜನಸಾಮಾನ್ಯರಿಗೆ ಪ್ರಜಾಪ್ರಭುತ್ವದ ಶಕ್ತಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಬೈಕ್ ಜಾಥಾ, ಛಾಯಾಚಿತ್ರ, ಚಿತ್ರಕಲೆ, ಭಾಷಣ ಸ್ಪರ್ಧೆ ಮತ್ತು ಸೈಕಲ್ ಜಾಥಾಗಳನ್ನು ಹಮ್ಮಿಕೊಳ್ಳಲಾಗಿದೆ. ಸಂವಿಧಾನದ ಬಗ್ಗೆ ಅರಿವು ಇದ್ದಾಗ ಶಿಸ್ತು ಬದ್ಧ ಜೀವನ ನಡೆಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಹೇಳಿದರು. ಅವರು ಅಂದು ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಉದ್ಘಾಟಿಸಿ, ಸೈಕಲ್ ಜಾಥಾಗೆ ಚಾಲನೆ ನೀಡಿ, ಸಂವಿಧಾನ ಪೀಠಿಕೆ ಪ್ರತಿಜ್ಞೆ ಬೋಧಿಸಿ ಮಾತನಾಡಿದರು. ನನ್ನ ಮತ ನನ್ನ ಹಕ್ಕು, ಗಾಂಧೀ ಭಾರತ, ಸಂವಿಧಾನ ಪೀಠಿಕೆ ಬಗ್ಗೆ ವಿವಿಧ ಶಾಲೆ ಮತ್ತು ಕಾಲೇಜುಗಳಲ್ಲಿ ಸ್ಪರ್ಧೆಗಳನ್ನು ಹಮ್ಮಿಕೊಂಡು ಬೈಕ್ ರ್ಯಾಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಇದರ ರೋವರ್ಸ್ & ರೇಂಜರ್ಸ್ ಘಟಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಸ್ವಾಸ್ತ್ಯ ಸಂಕಲ್ಪ ಆರೋಗ್ಯ ಅರಿವು ಕಾರ್ಯಕ್ರಮವನ್ನು ಕಾಲೇಜಿನ ಎ.ವಿ. ಹಾಲ್ನಲ್ಲಿ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಜನ ಜಾಗೃತಿ ವೇದಿಕೆ, ಉಡುಪಿ ಇದರ ಸದಸ್ಯರಾದ ಸುಬ್ರಹ್ಮಣ್ಯ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ದುಶ್ಚಟಗಳಿಂದಾಗುವ ಪರಿಣಾಮಗಳು ಮತ್ತು ಅದರಿಂದ ಪಾರಾಗುವ ಮಾರ್ಗಗಳು ಕುರಿತು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ತಾಲೂಕು ಬಿ.ಸಿ. ಟ್ರಸ್ಟ್ ಇದರ ಕಾರ್ಯಕ್ರಮ ಅಧಿಕಾರಿಗಳಾದ ಉಮೇಶ್ ಶೆಟ್ಟಿ, ತಲ್ಲೂರು ವಲಯ ಇದರ ಮೇಲ್ವಿಚಾರಕಿ ನಾಗರತ್ನ ಜಯರಾಂ, ಸೇವಾ ಪ್ರತಿನಿಧಿ ಶಾಂತ ವಿ., ಮಾಲತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸರ್ಎಂ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಪ್ರಯುಕ್ತ ದೇಶದಾದ್ಯಂತ ಆಚರಿಸುತ್ತಿರುವ ಇಂಜಿನಿಯರ್ಸ್ ಡೇ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನವರು ಸೋಮವಾರದಂದು ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆಸಿದರು. ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ ಅವರನ್ನು ಲಯನ್ಸ್ ಕ್ಲಬ್ನ ಹಿರಿಯ ಸದಸ್ಯರು, ನಿವೃತ್ತ ಬ್ಯಾಂಕ್ ಉದ್ಯೋಗಿ ಹಳ್ನಾಡು ಬಿ. ಜಯರಾಮ ಶೆಟ್ಟಿ ಅವರು ಫಲ ಪುಷ್ಪ ನೀಡಿ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಕೋಸ್ಟಲ್ನ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಲಯಾಧ್ಯಕ್ಷರಾದ ವಸಂತರಾಜ ಶೆಟ್ಟಿ, ಸ್ಥಾಪಕ ಅಧ್ಯಕ್ಷ ಅಶೋಕ ಶೆಟ್ಟಿ ಸಂಸಾಡಿ, ಹೈದರಾಬಾದ್ ಹೋಟೆಲ್ ಉದ್ಯಮಿ ನೆಲಗೊಂಡ ಸುಧಾಕರ ಶೆಟ್ಟಿ ಜನ್ಸಾಲೆ, ಬೈಂದೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಶಶಿಧರ ಶೆಟ್ಟಿ ಸಾಲ್ಗದ್ದೆ, ಪಶು ವೈದ್ಯ ಡಾ. ಪ್ರಶಾಂತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ನಿಕಟ ಪೂರ್ವ ಅಧ್ಯಕ್ಷ ಉದಯ್ ಶೆಟ್ಟಿ ಮಚ್ಚಟ್ಟು, ಪ್ರಕಾಶ ಶೆಟ್ಟಿ ಚೋರ್ಮಕ್ಕಿ, ಗಣೇಶ್ ಬೈಂದೂರು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಂಡ್ಸೆ ಹೋಬಳಿ ಹಾಗೂ ಬೈಂದೂರು ಹೋಬಳಿಯ ಅರ್ಹ ಎಲ್ಲಾ 94ಸಿ ಅರ್ಜಿಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ವಿಲೇವಾರಿ ಮಾಡಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ವಂಡ್ಸೆ ಹೋಬಳಿಯ 94ಸಿ ಕಡತಗಳ ಬಗ್ಗೆ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಮಾತನಾಡಿ, ಕಳೆದ ಎರಡು ವರ್ಷ ಗಳಲ್ಲಿ ಸುಮಾರು 800 ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಎಂದರು. ಭಾಗಶಃ ಡೀಮ್ಡ್ ವ್ಯಾಪ್ತಿಯಲ್ಲಿ ವಂಡ್ಸೆ ಹೋಬಳಿಯ 460 & ಬೈಂದೂರು ಹೋಬಳಿಯ 117 ಅರ್ಜಿಗಳು ಹಾಗೂ ಕುಮ್ಕಿ ವ್ಯಾಪ್ತಿಯಲ್ಲಿ ವಂಡ್ಸೆ ಹೋಬಳಿಯಲ್ಲಿ 936 ಅರ್ಜಿಗಳು ಹಾಗೂ ಬೈಂದೂರು ಹೋಬಳಿಯಲ್ಲಿ 248 ಅರ್ಜಿಗಳು ಇರುವುದಾಗಿದೆ. ಭಾಗಶಃ ಡೀಮ್ಡ್ ಫಾರೆಸ್ಟ್ ಅರ್ಜಿಗಳನ್ನು ಅರಣ್ಯ ಇಲಾಖೆಯ ಜಂಟಿ ಸರ್ವೇ ಮೂಲಕ ವಿಲೇವಾರಿ ಮಾಡುವ ಪ್ರಕ್ರಿಯೆ ಯನ್ನು ತ್ವರಿತ ಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉಳಿದಂತೆ ಕುಮ್ಕಿ ವ್ಯಾಪ್ತಿಯಲ್ಲಿನ 94 ಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಶಾಲಾ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ನಡೆದ ಬ್ಲಾಕ್ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿ ಸಂಜಿತ್ ಎಂ. ದೇವಾಡಿಗ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಈತ ಗಂಗೊಳ್ಳಿಯ ಚಿತ್ರಕಲಾ ಶಿಕ್ಷಕ ಮಾಧವ ದೇವಾಡಿಗ ಮತ್ತು ಉಪನ್ಯಾಸಕಿ ಸಾವಿತ್ರಿ ಎಸ್. ದಂಪತಿ ಪುತ್ರ. ವಿದ್ಯಾರ್ಥಿಯ ಈ ಸಾಧನೆಗೆ ಶಾಲಾ ಎಸ್ಡಿಎಂಸಿ ಬಳಗ, ಮುಖ್ಯೋಪಾಧ್ಯಾಯರು, ಬೋಧಕ ಮತ್ತು ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಚರ್ಮ ಕುಶಲಕರ್ಮಿಗಳ ಸರ್ವತೋಮುಖ ಅಭಿವೃದ್ಧಿüಗಾಗಿ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಯಡಿಯಲ್ಲಿ ಅನುಷ್ಠಾನಗೊಳಿಸಲಾದ ವಿವಿಧ ಆರ್ಥಿಕ ಅಭಿವೃದ್ಧಿ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಂದ ಸೇವಾಸಿಂಧು ಪೋರ್ಟಲ್ https://sevasindhu.karnataka.gov.in/, https://sevasindhuservices.karnataka.gov.in ಮೂಲಕ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 8 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಸಂಯೋಜಕರು, ಉಡುಪಿ ಮೊಬೈಲ್ ಸಂ: 9880486220, 6362891017 ಅನ್ನು ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ಸಂಯೋಜಕರ ಕಚೇರಿ ಪ್ರಕಟಣೆ ತಿಳಿಸಿದೆ.
