ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಟೀಮ್ ಭವಾಬ್ಧಿ ಪಡುಕರೆ ಕೋಟತಟ್ಟು ಸಂಸ್ಥೆಯ ವತಿಯಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪಾರಂಪಳ್ಳಿ ಪಡುಕರೆ ನಗರ ಆರೋಗ್ಯ ಕ್ಷೇಮ ನಮ್ಮ ಕ್ಲಿನಿಕ್‌ಗೆ ಉಪಯೋಗವಾಗುವ ವಿವಿಧ ಸಲಕರಣೆಗಳಾದ ಸ್ಟೇಟೋಸ್ಕೊಪ್ , ಪಲ್ಸ್ ಆಕ್ಸಿ ಮೀಟರ್, ಬಿಪಿ ಆಪರೇಟರ್,ಆಪ್ರಾನ್ ಸೆಟ್, ಬೆಡ್ ಶೀಟ್, ಥರ್ಮಾ ಮೀಟರ್,ಪ್ರಥಮ ಚಿಕಿತ್ಸೆ ಕಿಟ್, ಸ್ಯಾನಿಟೈಸರ್, ಮಾಸ್ಕ್ ಸೆಟ್ ಹಾಗು ಗ್ಲೌಸ್ ಸೆಟ್ ಗಳನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ ಪಾರಂಪಳ್ಳಿ ಪಡುಕರೆ ವಾರ್ಡ್ ಸದಸ್ಯರಾದ ರೇಖಾ ಕೇಶವ ಕರ್ಕೇರ ಅವರ ಮೂಲಕ ಹಸ್ತಾಂತರಿಸಲಾಯಿತು.
ಟೀಮ್ ಭವಾಬ್ಧಿಯ ಈ ಕಾರ್ಯದಿಂದ ಸಾರ್ವಜನಿಕರಿಗೆ ಅನುಕೂಲವಾಗುವುದು ಎಂದು ಟೀಮ್ ಭವಾಬ್ಧಿಯನ್ನು ಶ್ಲಾಘಿಸಿದರು ಮತ್ತು ಸಾರ್ವಜನಿಕರು ಈ ಸರಕಾರಿ ಆಸ್ಪತ್ರೆಯ ಉಚಿತ ವಿವಿಧ ಸೌಲಭ್ಯ ಪ್ರಯೋಜನ ಪಡೆಯಬೇಕು ಆಗ ಮಾತ್ರ ಯಶಸ್ವಿಯಾಗುವುದು ಎಂದು ಪಟ್ಟಣ ಪಂಚಾಯತ್ ಸದಸ್ಯರಾದ ರೇಖಾ ಕೇಶವ ಕರ್ಕೇರ ಹೇಳಿದರು.
ಈ ಸಂದರ್ಭದಲ್ಲಿ ಟೀಮ್ ಭವಾಬ್ಧಿ ಪಡುಕರೆ ಅಧ್ಯಕ್ಷರಾದ ಸಂತೋಷ್ ತಿಂಗಳಾಯ, ಸಂಚಾಲಕ ರವೀಂದ್ರ ತಿಂಗಳಾಯ,ಸಮುದಾಯ ಆರೋಗ್ಯ ಅಧಿಕಾರಿ ಡಾ. ಸುಶ್ಮಿತಾ, ಸ್ಟಾಫ್ ನರ್ಸ್ ಶ್ರೀಲಕ್ಷ್ಮೀ, ರಚನಾ, ಸಂಸ್ಥೆಯ ಪ್ರ.ಕಾರ್ಯದರ್ಶಿ ಭರತ್ ಪೂಜಾರಿ, ಖಜಾಂಚಿ ಶಿವಾನಂದ ಕುಂದರ್, ಉಪಾಧ್ಯಕ್ಷ ಉದಯ್ ಬಂಗೇರ, ಕೇಶವ ಕರ್ಕೇರ, ದರ್ಶನ್ ಪೂಜಾರಿ, ಆಕಾಶ್, ಶ್ರೀನಿವಾಸ, ಅಮೋಘ ತಿಂಗಳಾಯ, ಸುಶಾಂತ್ ಹಾಗು ಸ್ಥಳೀಯರು ಉಪಸ್ಥಿತರಿದ್ದರು.
ಸಂಸ್ಥೆಯ ಸದಸ್ಯ ದೇವೇಂದ್ರ ಶ್ರೀಯನ್ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.










