ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅಭಿಮಾನದಿಂದ ಕುಂದಾಪುರ ಮೂಲದ ಜನರು ವಿಶ್ವದೆಲ್ಲೆಡೆ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಕಳೆದ ಮೂರು ವರ್ಷದಿಂದ ಆಚರಿಸುತ್ತಿದ್ದಾರೆ. ನಾಳೆ ಆಸಾಡಿ ಅಮಾವಾಸ್ಯೆ (ಜುಲೈ 28) ಪ್ರಯುಕ್ತ ಬೆಂಗಳೂರಿನ ವಿಜಯನಗರದ ಬಂಟರ ಸಂಘದ ಹಾಲಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಸಂಜೆ ನಾಲ್ಕು ಗಂಟೆಯಿಂದ ಕುಂದಾಪ್ರ ಭಾಷಿ, ಬದ್ಕಿನ ಕುರಿತಾದ ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿದೆ. ವಿಶೇಷವಾಗಿ ಕುಂದಾಪುರ ಆಚಾರ-ಸಂಸ್ಕ್ರತಿ-ಆಚರಣೆ ಕುರಿತಾದ ಕುಂದಾಪುರ ಕಟ್ಕಟ್ಲೆ, ಕುಂದಾಪ್ರ ಗೀತಗಾಯನ, ಮನು ಹಂದಾಡಿ ಮಾತು, ಚೇತನ್ ನೈಲಾಡಿ ತಂಡದ ಹೆಂಗಸರ ಪಂಚಾಯ್ತಿ, ಕುಶಲವ ಯಕ್ಷಗಾನ, ಕಿರುಚಿತ್ರ ಬಿಡುಗಡೆ ಸೇರಿ ಹಲವು ಸಾಂಸ್ಕ್ರತಿಕ ಕಾರ್ಯಕ್ರಮಗಳ ರಸದೌತಣ ಇರಲಿದೆ. ಕಾರ್ಯಕ್ರಮದಲ್ಲಿ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು, ಮಂದಾರ್ತಿ ಮೂಲದ ನಿರ್ದೇಶಕ ಯೋಗರಾಜ್ ಭಟ್, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಜಯಪ್ರಕಾಶ್ ಹೆಗ್ಡೆ, ನಟ ಪ್ರಮೋದ್ ಶೆಟ್ಟಿ ಸೇರಿ ಹಲವರು ಉಪಸ್ಥಿತರಿರಲಿದ್ದಾರೆ. ಕುಂದಾಪ್ರ ಕನ್ನಡ ಭಾಷಾಭಿಮಾನಿಗಳ ಹೆಚ್ಚಿನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಶ್ವ ಕುಂದಾಪುರ ಕನ್ನಡ ದಿನದ ಅಂಗವಾಗಿ ಮನಸು ಮೀಡಿಯಾ ಹಾಗೂ ರಾಮ ಶೆಟ್ಟಿ ಅತ್ತಿಕಾರ್ ಅವರ ಸಂಯೋಜನೆಯಲ್ಲಿ ಹಕ್ಲಾಡಿಯ ಕೆ.ಎಸ್.ಎಸ್ ಪ್ರೌಡಶಾಲೆಯಲ್ಲಿ ವಿದ್ಯಾರ್ಥಿಗಳಿಗೆ “ಕುಂದನುಡಿ” ಸ್ಪರ್ಧೆ ಆಯೋಜಿಸಲಾಗಿತ್ತು. ಎಸ್.ಡಿಎಂಸಿ ಅದ್ಯಕ್ಷರದ ರಾಜು ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕರಾದ ಕಿಶೋರ್ ಕುಮಾರ್ ಶೆಟ್ಟಿ, ಭಾರತಿ ಹಾಗೂ ದೀಪ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಚಿತ್ರೀಕರಣ ಮನಸು ಮೀಡಿಯಾ ತಂಡದ ಸುನಿಲ್ ಗೊಳಿಹೊಳೆ ನಿರ್ವಹಿಸಿದರು ಸ್ಪರ್ಧೆಯನ್ನು ರಾಮ್ ಶೆಟ್ಟಿ ಅತ್ತೀಕರ್ ನಡೆಸಿಕೊಟ್ಟರು ಮನಸು ಮೀಡಿಯಾ ತಂಡದ ಸಚಿನ್ ತಗ್ಗರ್ಸೆ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ, ಜು.26: ಕುಂದಾಪ್ರ ಕನ್ನಡ ಭಾಷಿಕರ ಸಂಭ್ರಮ 4ನೇ ವರ್ಷದ ವಿಶ್ವ ಕುಂದಾಪ್ರ ಕನ್ನಡ ದಿನ ವಿಶ್ವದ ವಿವಿಧೆಡೆ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಶಿರೂರಿನಿಂದ ಹೆಬ್ರಿ ಬ್ರಹ್ಮಾವರದ ತನಕ ವಿಸ್ತರಿಸಿರುವ ಕುಂದಾಪ್ರ ಕನ್ನಡ ಭಾಷಾ ಸೊಬಗಿನ ವಿಶಿಷ್ಟತೆಯನ್ನು ಹಂಚಿಕೊಳ್ಳುತ್ತಾ ಸಂಭ್ರಮಿಸುವ ಸಲುವಾಗಿ 2019ರಿಂದ ಆಸಾಡಿ ಅಮವಾಸ್ಯೆ ದಿನ ವಿಶ್ವ ಕುಂದಾಪ್ರ ಕನ್ನಡ ದಿನ ಆಚರಣೆಗೆ ಚಾಲನೆ ನೀಡಲಾಗಿದ್ದು, ಈ ಭಾರಿ ಜೂನ್ 28ರಂದು ಆಚರಿಸಲಾಗುತ್ತಿದೆ. ಕುಂದಾಪುರ ತಾಲೂಕಿನ ವಿವಿಧೆಡೆ ಸಂಭ್ರಮ:ಜು.28ರಂದು ಕುಂದಾಪುರದಲ್ಲಿ ವಿಠಲವಾಡಿ ಫ್ರೆಂಡ್ಸ್ ವತಿಯಿಂದ ಹಾಡುಗಳ ಸ್ವರ್ಧೆ ಆಯೋಜಿಸಲಾಗಿದೆ. ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಕ್ಷದೀಪ ಕಲಾ ಟ್ರಸ್ಟ್ ವತಿಯಿಂದ ಕುಂದಾಪ್ರ ಕನ್ನಡತಿ ನಾಟ್ಯವಲ್ಲಿ ಎಂಬ ಯಕ್ಷಗಾನ ಪ್ರದರ್ಶನ ಜರುಗಲಿದೆ. ಡಾ. ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಮಿತ್ರ ಸಂಗಮ ಬೀಜಾಡಿ ವತಿಯಿಂದ ಮಿತ್ರ ಸೌಧದಲ್ಲಿ ಗಾಯಕಿ ಸುಷ್ಮಾ ಆಚಾರ್ಯ ಅವರಿಂದ ‘ಗೀತಾ ಗಾಯನ’, ವಿಶೇಷ ಲಘು ಉಪಹಾರ ಇರಲಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಬದಲಾದ ಜಗದಲ್ಲಿ ಜೀವಂತಿಕೆಯ ಬರಹ ಅಗತ್ಯವಿದ್ದು, ಓದು ಮತ್ತು ಬರಹ ವ್ಯಕ್ತಿಯನ್ನು ಉತ್ತಮದೆಡೆಗೆ ಕೊಂಡೊಯ್ಯುತ್ತದೆ ಎಂದು ನಿರಂತರ ಪ್ರಗತಿ ಮ್ಯಾಗಝಿನ್ ಸಂಪಾದಕ ಡಾ. ಚಂದ್ರಹಾಸ ಚಾರ್ಮಾಡಿ ಹೇಳಿದರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ಫೋರಂ ವತಿಯಿಂದ ಆಯೋಜಿಸಿದ್ದ ’ಬದಲಾದ ದುನಿಯಾದಲ್ಲಿ ಬರಹ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಬರವಣಿಗೆ ಬರೀ ಅಕ್ಷರ ಮಾತ್ರವಲ್ಲದೆ ಬರಹಗಾರನ ಒಳ-ಹೊರ ಪ್ರಚೋಧಿಸುವ ಅಭಿವ್ಯಕ್ತಿ. ವಸ್ತು ಸ್ಥಿತಿ ನಕಾರಾತ್ಮಕವಾಗಿದ್ದರೂ ಬರಹಗಾರನ ಯೋಚನೆ ಸಕಾರಾತ್ಮಕವಾಗಿರಬೇಕು, ನಮ್ಮ ಬರಹ ಸಮಸ್ಯೆಗೆ ಒಳಗಾದ ವ್ಯಕ್ತಿಯ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿರಬೇಕು. ಬದಲಾದ ಜಗತ್ತಿನಲ್ಲಿ ಸಂದರ್ಭಕ್ಕೆ ಅನುಸಾರವಾದ ವಿಷಯಗಳನ್ನು ಬರಹಗಾರರು ಆಯ್ದುಕೊಳ್ಳಬೇಕು ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಬರಹ ಮತ್ತು ಬದುಕಿನ ವೈರುಧ್ಯಗಳು ಸಮ್ಮಿಳಿತಗೊಂಡಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಒಂದು ಕಾಲಘಟ್ಟದ ಬರಹಗಳು ಇನ್ನೊಂದು ಕಾಲಕ್ಕೆ ಅನ್ವಯಿತವಾಗದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2022ನೇ ಸಾಲಿನ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ಲೇಖಕಿ ಕಾವ್ಯ ಕಡಮೆ ಅವರ “ಮಾಕೋನ ಏಕಾಂತ” ಸಂಕಲನಕ್ಕೆ ದೊರೆತಿದೆ. ಕನ್ನಡದ ಪ್ರಮುಖ ಲೇಖಕರುಗಳಾದ ಡಾ. ಕೆ.ವೈ.ನಾರಾಯಣ ಸ್ವಾಮಿ, ರೇಣುಕಾ ನಿಡಗುಂದಿ, ಕಮಲಾಕರ ಭಟ್ ಕಡವೆ ಇವರುಗಳು ಪ್ರಶಸ್ತಿ ಆಯ್ಕೆಯ ನಿರ್ಣಾಯಕರಾಗಿ ಸಹಕರಿಸಿದ್ದಾರೆ. ಪ್ರಶಸ್ತಿ ಹದಿನೈದು ಸಾವಿರ ನಗದಿನೊಂದಿಗೆ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಆಗಸ್ಟ್ 13ರಂದು ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕಾಲೇಜಿನ ಪ್ರಕಟಣೆ ತಿಳಿಸಿದೆ. ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. ಬಿಎಸ್ಸಿ ನಂತರ ಕರ್ನಾಟಕ ವಿವಿಯಿಂದ ಆರು ಚಿನ್ನದ ಪದಕಗಳೊಂದಿಗೆ ಪತ್ರಿಕೋದ್ಯಮ ಎಂ.ಎ ಪದವಿ. 2013 ರಿಂದ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ‘ಧ್ಯಾನಕೆ ತಾರೀಖಿನ ಹಂಗಿಲ್ಲ’, ‘ಜೀನ್ಸ್ ತೊಟ್ಟ ದೇವರು’ ಪ್ರಕಟಿತ ಕವನ ಸಂಕಲನಗಳು. ‘ಪುನರಪಿ’ ಕಾದಂಬರಿ. ‘ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು’ ನಾಟಕಗಳ ಸಂಕಲನ. ‘ದೂರ ದೇಶವೆಂಬ ಪಕ್ಕದ ಮನೆ’ ಪ್ರಬಂಧ ಸಂಕಲನ. ಇವರ ಕೃತಿಗಳಿಗೆ ಕೇಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಾವು ದೇಶದ ಆಸ್ತಿಯಾಗಬೇಕು. “ಆಜಾದಿ ಕಾ ಅಮೃತ ಮಹೋತ್ಸವ” ಈ ಸಂದರ್ಭದಲ್ಲಿ ಯುವಜನತೆ ದೇಶದ ಅಖಂಡತೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ದರಾಗಬೇಕು ಎಂದು ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್ ಅವರು ಕರೆ ನೀಡಿದರು. ಅವರು ಜುಲೈ 26ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮತ್ತು ಭಂಡಾರ್ಕಾರ್ಸ್ ಕಾಲೇಜಿನ ಸಹಯೋಗದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ವಿಶ್ವವಿದ್ಯಾಲಯ ಮಟ್ಟದ ದೇಶಭಕ್ತಿ ಗೀತೆ ಗಾಯನ ಮತ್ತು ಸ್ವಾತಂತ್ರ್ಯ ಓಟದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಯುವಜನತೆ 75 ವರ್ಷಗಳಲ್ಲಿ ಸಾಧನೆಯನ್ನು ಸಿಂಹಾವಲೋಕನ ಮಾಡಿ, ಮುಂದಿನ 25 ವರ್ಷಗಳಲ್ಲಿ ಸಾಧಿಸುವ ಕಾರ್ಯಗಳ ಬಗ್ಗೆ ಅವಲೋಕನ ಮಾಡಬೇಕು. ಭಾರತದ ಜನಸಂಖ್ಯೆಯ 40% ಭಾಗ ಯುವಕರು. ಅವರಿಂದಲೇ ದೇಶದ ಭವಿಷ್ಯ ನಿರ್ಧರಿತವಾಗಿದೆ. ನಾವುಗಳು ಉದ್ಯೋಗ ತೆಗೆದುಕೊಳ್ಳುವುದಲ್ಲದೇ ಉದ್ಯೋಗ ನೀಡುವಂತವರಾಗಿ ಉದ್ಯಮಶೀಲರಾಗಬೇಕು. ಅದಕ್ಕೆ ತಕ್ಕಂತೆ ತಯಾರಿಯನ್ನು ಮಾಡಿಕೊಳ್ಳಬೇಕು. ಜೊತೆಗೆ ಪೂರಕ ಮಾಹಿತಿ ಮತ್ತು ಕಾರ್ಯಕ್ರಮಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ ನಡೆಯಿತು. ನಿವೃತ್ತ ಭಾರತೀಯ ಸೇನೆಯ ಜೂನಿಯರ್ ಕಮಿಷನ್ಡ್ ಅಧಿಕಾರಿ ಜೋಷಿ ಪಿ. ಪಿ. ಅವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ನೆನಪುಗಳೊಂದಿಗೆ ಯುದ್ಧದ ಕುರಿತಾದ ಸಂಪೂರ್ಣ ಮಾಹಿತಿ ನೀಡಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಗಣೇಶ ಮೊಗವೀರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷರು ಹಾಗೂ ರಸಾಯನಶಾಸ್ತ್ರ ಉಪನ್ಯಾಸಕರಾಗಿರುವ ಡಾ. ಮಂಜುನಾಥ ಗಾಣಿಗ, ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಜೀವಶಾಸ್ತ್ರ ಉಪನ್ಯಾಸಕರಾಗಿರುವ ಸುನಿಲ್ ಚಿತ್ತಾಲ್, ಆಡಳಿತ ಮಂಡಳಿಯ ಕೋಶಾಧಿಕಾರಿ ಹಾಗೂ ಭೌತಶಾಸ್ತ್ರ ಉಪನ್ಯಾಸಕರಾಗಿರುವ ಕಾರ್ತೀಕೇಯ ಎಮ್. ಎಸ್., ಆಡಳಿತಾಧಿಕಾರಿಗಳು ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಪ್ರದೀಪ್ ಕುಮಾರ್ ಶೆಟ್ಟಿ, ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮಂಜು ಕಾಳವಾರ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರು ಸ್ವಾಗತಿಸಿ, ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿರುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವೃತ್ತಿಗೆ ಅನುಗುಣವಾಗಿ ಸಂಘಟನೆಗಳ ಸದಸ್ಯರ ವೃತ್ತಿ ಕೌಶಲ್ಯ ಹೆಚ್ಚಿಸಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ಅತ್ಯಗತ್ಯ. ಧ್ವನಿ – ಬೆಳಕು ವೃತ್ತಿ ನಿರತರು ಅಪಾಯದ ನಡುವೆ ಕೆಲಸ ಮಾಡಬೇಕು. ಅವರಲ್ಲಿ ವೃತ್ತಿ ಕೌಶಲ್ಯಗಳಿದ್ದರೆ ಅದರ ಬಗೆಗೆ ಮುನ್ನೆಚ್ಚರಿಕೆ ವಹಿಸಬಹುದು ಮತ್ತು ಗ್ರಾಹಕರ ನಿರೀಕ್ಷೆಯ ಮಟ್ಟದ ಸೇವೆ ನೀಡಬಹುದು ಎಂದು ರಾಜ್ಯ ವೈದ್ಯ ಸಂಘ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಸುಬ್ರಹಣ್ಯ ಭಟ್ ಹೇಳಿದರು. ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಭಾನುವಾರ ಬೈಂದೂರು ವಲಯದ ಧ್ವನಿ ಮತ್ತು ಬೆಳಕು ಸಂಯೋಜಕರ ಸಂಘಟನೆಯ ದಶಮಾನೋತ್ಸವ ಸಮಾರಂಭ ಹಾಗೂ 11ನೇ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಯಾವುದೇ ಕಾರ್ಯಕ್ರಮದ ಯಶಸ್ಸಿನ ಹಿಂದೆ ಈ ಸಂಘಟನೆ ಕೆಲಸ ಮಾಡುತ್ತದೆ. ಧ್ವನಿ ಇಲ್ಲದವರ ಧ್ವನಿಯಾಗುವ ಹಾಗೂ ವೇದಿಕೆಯಲ್ಲಿರುವವರ ಧ್ವನಿಯನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡುತ್ತಿದೆ. ಹಾಗಂತ ಮೆಹಂದಿ, ಧಾರ್ಮಿಕ ಹಾಗೂ ಇತರೇ ಉತ್ಸವಗಳಲ್ಲಿ ಹೆಚ್ಚು ಧ್ವನಿ (ಡಿಜೆ ಮೂಲಕ) ಏರಿಸಿದರೂ ಕೂಡ ಇದರಿಂದ ಸಮಾಜಕ್ಕೆ ಸಮಸ್ಯೆಯಾಗುತ್ತದೆ. ಇದರಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಬೈಂದೂರು ಸೈಂಟ್ ಥಾಮಸ್ ಶಾಲೆಯ ವಿದ್ಯಾರ್ಥಿ ಸೃಜನ್ ಕುಮಾರ್ ಶೇ.93.20 ಫಲಿತಾಂಶ ಪಡೆದಿದ್ದು, ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾನೆ. ಸೃಜನ್ ಕುಮಾರ್ ಬೈಂದೂರು ಅಂಚೆ ಕಛೇರಿಯಲ್ಲಿ ಉದ್ಯೋಗಿಯಾಗಿರುವ ಸುರೇಶ್ ಕುಮಾರ್ ಹಾಗೂ ಗೀತಾ ಎಸ್. ಅವರ ಪುತ್ರನಾಗಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯನಾಗಿರುವ ಸೃಜನ್ ಅನೇಕ ಯಕ್ಷಗಾನ ಪ್ರದರ್ಶನ ನೀಡಿದ್ದಾನೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಮಕ್ಷತ್ರಿಯ ಸಮಾಜ ಸಣ್ಣ ಸಮುದಾಯವಾಗಿದ್ದು, ಸಮಾಜದಲ್ಲಿ ಗುರುತಿಸುವಂತೆ ಬೆಳೆದು ನಿಲ್ಲುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ. ನಾವು ಬೆಳೆಯುತ್ತಾ ನಮ್ಮಿಂದಾದ ಸಹಕಾರವನ್ನು ಸಮಾಜಕ್ಕೆ ನೀಡುತ್ತಾ ಬದುಕುವ ಗುಣ ಮುಖ್ಯ ಎಂದು ಮಂಗಳೂರು ರಾಮಕ್ಷತ್ರಿಯ ಸೇವಾ ಸಂಘದ ಗೌರವಾಧ್ಯಕ್ಷರಾದ ಜೆ.ಕೆ. ರಾವ್ ಹೇಳಿದರು. ಇಲ್ಲಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ ಶ್ರೀರಾಮ ವಿವಿಧೋದ್ದೇಶ ಟ್ರಸ್ಟ್ ಬೈಂದೂರು ಇದರ 10ನೇ ವರ್ಷದ ಟ್ರಸ್ಟ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭೂಮಿಯ ಮೇಲೆ ಬಾಡಿಗೆಗೆ ಬಂದವರು ಎಂಬ ಅರಿವಿದ್ದರೇ ಪರಸ್ಪರ ಸಹಾಯದ ಮನೋಭಾವ ನಮ್ಮದಾಗುತ್ತದೆ ಎಂದ ಅವರು ಆಧುನಿಕ ಸಮಾಜದ ಜಂಜಾಟದ ನಡುವೆ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಖೇದಕರ. ವಿದ್ಯಾವಂತರಾಗುವಂತೆ ಸಂಬಂಧಗಳನ್ನು ಗಟ್ಟಿಗೊಳಿಸುವ ಗುಣವೂ ವಿದ್ಯಾರ್ಥಿಗಳಲ್ಲಿ ಬೆಳೆಯಲಿ ಎಂದರು. ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಬಿ. ರಾಮಕೃಷ್ಣ ಶೇರೆಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಮಕ್ಷತ್ರಿಯ ಸಮುದಾಯದ ಅಭ್ಯುದಯಕ್ಕಾಗಿ ಒಂದು ದಶಕದ ಹಿಂದೆ…
