ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶಂಕರನಾರಾಯಣದ ಮದರ್ ತೆರೆಸಾಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 48 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 26 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ, ವಾಣಿಜ್ಯ ವಿಭಾಗದ ತೇಜಸ್ವಿ 585 ಅಂಕ, ವೈಷ್ಣವಿ 585 ಅಂಕ, ವೈಷ್ಣವಿ 585 ಅಂಕ, ಶಿವರಾಜ್ 579 ಅಂಕ, ಅಮೂಲ್ಯ 578 ಅಂಕ, ಅನುಶ್ರೀ 575 ಅಂಕ, ಸ್ವಾತಿ 571 ಅಂಕ, ಸಹನಾ ಶೆಟ್ಟಿ 563 ಅಂಕ, ಶ್ರೀನಿಧಿ 561 ಅಂಕ, ಸ್ಪೂರ್ತಿ 560 ಅಂಕ, ಧನಷಾ 558 ಅಂಕ, ಪ್ರಿತೇಶ್ 558 ಅಂಕ, ಪಲ್ಲವಿ 555 ಅಂಕ, ಸೌಜನ್ಯ 553 ಅಂಕ, ರೋಹಿತ್ 545 ಅಂಕ, ಸಂಶೋಧ್ 541 ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ 67 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 27 ವಿದ್ಯಾರ್ಥಿಗಳು ವಿಶಿಷ್ಟ…
Author: ನ್ಯೂಸ್ ಬ್ಯೂರೋ
ಕೈತೋಟವನ್ನು ನಿರ್ಮಿಸುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮನೆ ಮುಂದೆ ಹಸಿರಾಗಿದ್ದರೆ ಎಷ್ಟು ಚೆಂದ. ಮನಸ್ಸಿಗೂ ಒಂದು ರೀತಿ ಹಿತವೆನಿಸುತ್ತದೆ. ಅಷ್ಟೇ ಅಲ್ಲ ವಾತಾವರಣ ಕೂಡ ತಂಪಾಗಿರುತ್ತದೆ. ಇವತ್ತಿನ ಜಂಜಾಟದ ಜೀವನದಲ್ಲಿ ನೀವು ಬೆಳೆಸಿದ ಕೈತೋಟಕ್ಕೆ ಒಮ್ಮೆ ಭೇಟಿ ನೀಡಿದರೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ನಿಮಗೂ ಹೀಗೆ ಕೈತೋಟ ಮಾಡುವುದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅನ್ನಿಸುತ್ತಿದೆಯೇ? ಹಾಗಾದರೆ ನಾವಿಲ್ಲಿ ಕೆಲವೊಂದು ಗಾರ್ಡನಿಂಗ್ ಸಲಹೆಗಳನ್ನು ನೀಡಿದ್ದೇವೆ. ಖಂಡಿತವಾಗಿಯೂ ನಿಮಗೆ ಉಪಯೋಗವಾಗಬಲ್ಲದು! ನಿಮ್ಮ ಯುಎಸ್ಡಿಎ ಗಡಸುತನ ವಲಯವನ್ನು ತಿಳಿಯಿರಿ. (ನೆಲದ ಗಡಸುತನವನ್ನು ಅಳೆಯುವ ನಕ್ಷೆ) ಇದನ್ನು ಮಾರ್ಗದರ್ಶಿಯಾಗಿ ಬಳಸಿ, ಈ ಮೂಲಕ ನಿಮ್ಮ ನೆಲದ ಗಡಸುತನವನ್ನು ಅರಿತು, ನೀವು ಮರಗಳು, ಪೊದೆಗಳು ಸ್ಥಳದಲ್ಲಿ ಬೆಳೆಯುವ ಸಾಧ್ಯತೆ ಇಲ್ಲದಿದ್ದಲ್ಲಿ ಅವುಗಳನ್ನು ನೆಡಬೇಡಿ. ಆದರೆ ನಿಮ್ಮ ಪ್ರದೇಶದಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಯಾವಾಗ ನೆಡಬೇಕು ಎಂಬುದರ ಕುರಿತು ಕೂಡ ಈ ನಕ್ಷೆಯ ಮೂಲಕ ನಿಮಗೆ ತಿಳಿಯುತ್ತದೆ. ಗಿಡಗಳನ್ನು ಕತ್ತರಿಸುವುದು ಯಾವಾಗ?ಹೂವುಗಳು ಮಸುಕಾದ ತಕ್ಷಣ ಅಂದರೆ, ವಸಂತ-ಹೂಬಿಡುವ ಪೊದೆಸಸ್ಯಗಳಾದ ನೀಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಯುವ ಸಾಹಿತ್ಯಿಕ – ಸಾಂಸ್ಕೃತಿಕ ಕಾರ್ಯಕ್ರಮಗಳು ಮಾದರಿಯಾಗಿದ್ದು, ಕಾರಂತರ ಚಿಂತನೆಗಳನ್ನು ಅವರ ಬದುಕಿನ ಚಿತ್ರಣವನ್ನು ಮುಂದಿನ ಪೀಳಿಗೆಗೆ ರವಾನಿಸುವ ಕಾರ್ಯ ಶ್ಲಾಘನೀಯ, ಕೋವಿಡ್ ಸಂದರ್ಭದಲ್ಲಿಯೂ ಆನ್ ಲೈನ್ ಮೂಲಕ ಕಾರ್ಯಕ್ರಮ ನಡೆಸಿ ಸಂಸ್ಥೆಗಳ ಕ್ರಿಯಾಶೀಲತೆಗೆ ಹೊಸ ಭಾಷ್ಯ ಬರೆದಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಹೇಳಿದರು. ಅವರು ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ನಡೆದ ತಿಂಗಳ ಕಾರ್ಯಕ್ರಮ ಯಕ್ಷಗಾನ ತಾಳಮದ್ದಳೆ ವಾಲಿ ಮೋಕ್ಷ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್ಯ, ಭಾಗವತರಾದ ಉದಯ ಹೊಸಾಳ, ಯಕ್ಷಗಾನ ಸಂಘಟಕ ಪ್ರಸಾದ್ ಬಿಲ್ಲವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ ಪ್ರಸ್ತಾಪಿಸಿ, ಟ್ರಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೊಬೈಲ್ ವಾಟ್ಸಪ್ ಸ್ಟೇಟಸ್‌ಗೆ ಕಾಮೆಂಟ್ ಹಾಕಿದ್ದಕ್ಕೆ ಆರೋಪಿಗಳು ವ್ಯಕ್ತಿಯನ್ನು ಸಿದ್ದಾಪುರಕ್ಕೆ ಕರೆಯಿಸಿ, ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಆಜ್ರಿ ಗ್ರಾಮದ ತೆಂಕಬೈಲು ರಾಘವೇಂದ್ರ ಕುಲಾಲ (27) ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಆರೋಪಿ ಮೃತ್ಯುಂಜಯ ಮೂರು ದಿನದ ಹಿಂದೆ ತನ್ನ ಮೊಬೈಲ್‌ನಲ್ಲಿ ವಾಟ್ಸ್ ಆ್ಯಪ್ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದರು. ಸ್ಟೇಟಸ್‌ಗೆ ರಾಘವೇಂದ್ರ ಕುಲಾಲ ಕಾಮೆಂಟ್ ಹಾಕಿದ್ದರು. ಈ ವಿಷಯಕ್ಕೆ ಆರೋಪಿಗಳಾದ ಕಮಲಾಕರ ಹಾಗೂ ವಿಕಾಸ್ ಜೂ. 19ರಂದು ಮೊಬೈಲ್ ಮೂಲಕ ಬೆದರಿಕೆ ಹಾಕಿದ್ದರು. ಅನಂತರ ಪ್ರದೀಪ ಮತ್ತು ಅರುಣ್ ಶೆಟ್ಟಿ, ರಾಘವೆಂದ್ರ ಅವರಿಗೆ ಮೊಬೈಲ್ ಕರೆ ಮಾಡಿ ಸಿದ್ದಾಪುರಕ್ಕೆ ಬರುವಂತೆ ಹೇಳಿದ್ದರು. ಆರೋಪಿಗಳು ರಾಘವೇಂದ್ರ ಕುಲಾಲ ಅವರನ್ನು ಪೇಟೆಯಿಂದ ಸರಕಾರಿ ಪ್ರೌಢಶಾಲೆಯ ಮೈದಾನಕ್ಕೆ ಕರೆಯಿಸಿಕೊಂಡು, ಮತ್ತೊಂದಷ್ಟು ಜನರನ್ನು ಸೇರಿಸಿ ಗಂಭೀರವಾಗಿ ಹಲ್ಲೆ ಮಾಡಿದ್ದರು. ಮರದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕಮಲಶಿಲೆಯ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಉಪ್ಪುಂದದ ಶ್ರೀಧರ ಮಡಿವಾಳ (38) ಬಂಧಿತ ಆರೋಪಿಯಾಗಿದ್ದಾನೆ. ಜೂನ್ 18 ರಂದು ರಾತ್ರಿ ಕೆಳಮದುರೆ ಮನೆ ರಾಘವೇಂದ್ರ ಯಡಿಯಾಳ ಎಂಬವರ ಮನೆಯ ಕೋಣೆಯ ಕಪಾಟಿನಲ್ಲಿ ಇರಿಸಿದ್ದ ಸುಮಾರು 1,30,000 ಲಕ್ಷ ಬೆಲೆ ಬಾಳುವ 28 ಗ್ರಾಂ ತೂಕದ 2 ಚಿನ್ನದ ಬಳೆ ಸುಮಾರು 1,50,000 ಲಕ್ಷ ಬೆಲೆ ಬಾಳುವ ಮಲ್ಲಿಗೆ ಮಿಟ್ಟಿಯ 30 ಗ್ರಾಂನ ಒಂದು ಚಿನ್ನದ ಸರ, ಸುಮಾರು 20,000 ಬೆಲೆ ಬಾಳುವ ಮೂರು ಹರಳಿನ 4 ಗ್ರಾಂ ಚಿನ್ನದ ಉಂಗುರ, 5 ಸಾವಿರ ನಗದು ಹಣ ಕಳವು ಮಾಡಿದ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ. ಕಳವು ಮಾಡಿದ 2 ಚಿನ್ನದ ಬಳೆಗಳು, 1 ಮಲ್ಲಿಗೆ ಮಿಟ್ಟಿಯ ಚಿನ್ನದ ಸರ, ಹಾಗೂ ಒಂದು ಚಿನ್ನದ ಉಂಗುರ…
ಚಿತ್ರಕೂಟ ಆಯುರ್ವೇದ ಧ್ಯಾನ ಕುಟೀರ ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಾನಸಿಕ ಒತ್ತಡವೇ ಆನಾರೋಗ್ಯದ ಮೊದಲ ಮೆಟ್ಟಿಲಾಗಿದ್ದು ನಿಯಮಿತವಾಗಿ ಯೋಗ, ಧ್ಯಾನವನ್ನು ಮಾಡುವ ಮೂಲಕ ಮನಸ್ಸಿನ ಮೇಲೆ ಹಿಡಿತ ಸಾಧಿಸಿ ಆರೋಗ್ಯ ಜೀವನ ನಡೆಸಲು ಸಾಧ್ಯ. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಂಡವರು ಸಾಕಷ್ಟು ಮಂದಿ ಇದ್ದಾರೆ ಎಂದು ಕುಂದಾಪುರದ ನ್ಯಾಯವಾದಿ ರವಿಕಿರಣ ಮುರುಡೇಶ್ವರ ಹೇಳಿದರು. ಅವರು ಮಂಗಳವಾರ ತಾಲೂಕಿನ ಆಲೂರು ಕಳಿಯಲ್ಲಿರುವ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಧ್ಯಾನ ಕುಟೀರ ಉದ್ಘಾಟಿಸಿ ಮಾತನಾಡಿ ಮನಸ್ಸಿಗೂ ಆರೋಗ್ಯಕ್ಕೂ ಹತ್ತಿರದ ಸಂಬಂಧವಿದ್ದು, ಮನಸ್ಸಿನ ಆರೋಗ್ಯಕ್ಕೆ ಧ್ಯಾನ ಉತ್ತಮ ಚಿಕಿತ್ಸೆಯಾಗಿದೆ. ಆಯುರ್ವೇದ ಎಂದರೆ ಆನಾರೋಗ್ಯ ಬಾರದಂತೆ ನೋಡಿಕೊಳ್ಳುವುದೇ ಆಗಿದೆ ಎಂದು ಹೇಳಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ. ಅತುಲ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಧ್ಯಾನ ಮನಸ್ಸಿನ ಆರೋಗ್ಯ ಕಾಪಾಡಿದರೆ, ಆಯುರ್ವೇದ ದೈಹಿಕ ಆರೋಗ್ಯ ಕಾಪಾಡುತ್ತದೆ. ಯೋಗ ಮತ್ತು ಧ್ಯಾನ ದೇಹದ ಪ್ರತಿಯೊಂದು ಅಂಗವನ್ನೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ವಿದ್ಯಾಸಂಸ್ಥೆಗಳ 2,650 ವಿದ್ಯಾರ್ಥಿಗಳು ದಕ್ಷಿಣಕನ್ನಡದ ಆಯುಷ್ ಇಲಾಖೆಯ ಸಹಯೋಗದೊಂದಿಗೆ ಬೆಳಿಗ್ಗೆ 6:30 ರಿಂದ 7:30 ರವರೆಗೆ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಯೋಗ ಪ್ರಾತ್ಯಕ್ಷಿಕೆಯನ್ನು ನೀಡಿದರು. ಕಳೆದ ಒಂದು ವಾರದಿಂದ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ವಿದ್ಯಾ ಸಂಸ್ಥೆಗಳ ಜೊತೆಗೆ ಮೂಡುಬಿದಿರೆ ಮತ್ತು ಮಂಗಳೂರು ವಲಯದ ಅನೇಕ ಶಾಲಾ ಕಾಲೇಜು ಮತ್ತು ಸುತ್ತಲಿನ ಸಾರ್ವಜನಿಕರಿಗೆ ೩೫ಕ್ಕೂ ಹೆಚ್ಚು ಕೇಂದ್ರಗಳಲ್ಲಿ ೧೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಯೋಗ ತರಬೇತಿಯನ್ನು ನೀಡಿದ್ದರು, ತರಬೇತಿ ಪಡೆದವರು ಏಕಕಾಲಕ್ಕೆ ತಾವಿದ್ದ ಸ್ಥಳಗಳಲ್ಲೇ ಯೋಗ ಪ್ರಾತ್ಯಕ್ಷಿಕೆ ಮಾಡಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಗ್ರೀಷ್ಮಾ ವಿವೇಕ್ ಆಳ್ವ, ಆಯುಷ್ ಅಧಿಕಾರಿ ಡಾ. ಶೋಭಾರಾಣಿ, ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಟಾಟಾ ಏಸ್ ವಾಹನದಲ್ಲಿ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್ ಹಾಗೂ ಆಹಾರ ನಿರೀಕ್ಷಕ ವಿನಯ ಕುಮಾರ್ ಅವರ ತಂಡ ದಾಳಿ ನಡೆಸಿದೆ. ಬೈಂದೂರಿನಿಂದ ಕುಂದಾಪುರ ಕಡೆಗೆ ಸಾಗಿಸುತ್ತಿದ್ದ ಅಂದಾಜು ನಾಲ್ಕು ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ವಾಹನವನ್ನು ಕಿರಿಮಂಜೇಶ್ವರ ಶಾಲೆಬಾಗಿಲು ಬಳಿ ಅಡ್ಡಗಟ್ಟಿ ವಶಪಡಿಸಿಕೊಂಡಿದ್ದಾರೆ. ವಾಹನ ಚಾಲಕ ಪರಾರಿಯಾಗಿದ್ದಾನೆ. ಈ ಸಂದರ್ಭ ಗ್ರಾಮ ಲೆಕ್ಕಿಗ ಗಣೇಶ್ ಮೇಸ್ತ, ಪಿಡಿಓ ರಾಜೇಶ್, ಕಿರಿಮಂಜೇಶ್ವರ ಪಂಚಾಯತ್ ಉಪಾಧ್ಯಕ್ಷರಾದ ಶೇಖರ್ ಖಾರ್ವಿ ಹಾಜರಿದ್ದರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇತಿಹಾಸ ಪ್ರಸಿದ್ಧ ವನಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಗಳು ಆರಂಭಗೊಂಡಿದ್ದು ಭಕ್ತವರ್ಗದ ಸಹಕಾರದಿಂದ ಸುಂದರ ದೇವಾಲಯ ಮರುನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ದೇವಳದ ಅನುವಂಶಿಯ ಆಡಳಿತ ಮೊಕ್ತೇಸರ ಡಾ. ಯಡ್ತರೆ ರಾಜಮೋಹನ ಶೆಟ್ಟಿ ಅವರು ಹೇಳಿದರು. ಬೈಂದೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ವನಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಒಂದು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿದೆ. ರಾಷ್ಟ್ರಕೂಟರು, ವಿಜಯನಗರದ ಅರಸರು ಹಾಗೂ ಕೆಳದಿ ಸಂಸ್ಥಾನದ ಅರಸರು ಈ ದೇವಸ್ಥಾನಕ್ಕೆ ರಾಜಾಶ್ರಯ ನೀಡಿದ್ದರು. ಕೆಳದಿ ಸಂಸ್ಥಾನ ಅರಸರ ಶಿಲ್ಪಕಲೆಯನ್ನು ಈ ದೇವಸ್ಥಾನ ಹೊಂದಿದ್ದು, ಇಲ್ಲಿನ ದೇವರ ಮೂರ್ತಿಗಳು, ನಂದಿ ಮೊದಲಾದವುಗಳಿಗೆ ಹಾಗೂ ಕೆಳದಿ ರಾಜರು ಕಟ್ಟಿಸಿದ ಬೇರೆ ದೇವಾಲಯದಕ್ಕೂ ಸಾಮ್ಯತೆ ಕಂಡುಬಂದಿದೆ ಎಂದರು. ರಾಜಾಶ್ರಯ ತಪ್ಪಿದ ಬಳಿಕ ಜೀರ್ಣಾವಸ್ಥೆಯಲ್ಲಿದ್ದ ಹಾಗೂ ಪರಕೀಯರ ದಾಳಿಯಿಂದ ಹಾನಿಗೊಳಗಾಗಿದ್ದ ದೇವಸ್ಥಾನವನ್ನು ಬಹಳ ವರ್ಷದ ಹಿಂದೆ ದುಗ್ಗಪ್ಪ ಶೆಟ್ಟಿ ಎನ್ನುವವರು ಪುನರ್ ನಿರ್ಮಾಣ ಮಾಡಿದ್ದರು ಎನ್ನಲಾಗುತ್ತದೆ. ಈಗ ದೇವಾಲಯ ಶಿಥೀಲಾವಸ್ಥೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಸ್ರೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ದೇವಸ್ಥಾನದ “ಶೈವ ಪಂಥದ ಕಂಚಿನ ಕಂಬದಲ್ಲಿ ಶಾಸನ ಪತ್ತೆಯಾಗಿದೆ. ದೇವಸ್ಥಾನದ ಹೊರ ಸುತ್ತಿನ ಎದುರು ಭಾಗದಲ್ಲಿ ಕ್ರಿ.ಶ 15-16ನೇ ಶತಮಾನದ ಅಂದರೆ ಸರಿಸುಮಾರು 500 ವಷ೯ಗಳ ಹಳೆಯದಾದ ಕಂಚಿನ ಕಂಬದಲ್ಲಿ ಶಾಸನ ಪತ್ತೆಯಾಗಿದೆ. ಬಸ್ರೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ಶಾಸನದ ಪಠ್ಯದಲ್ಲಿ ಈ ಕೆಳಗಿನಂತೆ ನಮೂದಿಸಲಾಗಿದೆ. ೧ ವಿನಾಯಕ ದೆವರ!೨.ಕಂಚಿನ ಕಂಬ ೧ಕ್ಕೆ!೩.ನಗ ೪೪ ಕೇ ಅಶಲು!೪.೯೨ರಕ್ಕೂ ೪ ಒಂದು ಕಂಚಿನ ಕಂಬ ನಗ (ಹಣ)44 ಅಸಲು ನೊಂದಿಗೆ 92 ಸೇರು ಅಂದರೆ 85.84 ಕೆ.ಜಿ ಕಂಚುಗಳನ್ನು ಬಳಕೆ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಕಂಬದ ಮೊದಲ ಪಟ್ಟಿಕೆ ಅಂದರೆ ಕೆಳಭಾಗದಲ್ಲಿ ಕೂಮ೯ ಅವತಾರದಲ್ಲಿ(ಆಮೆಯ ಅವತಾರದಲ್ಲಿ)ತನ್ನೆಲ್ಲಾ ಭಾರವನ್ನು ಹೊತ್ತುಕೊಂಡ ಕಲಾಕೃತಿ ಇದೆ. ಕೂಮ೯ ಅವತಾರದ ಮೇಲು ಭಾಗದ ಶಾಸನ ನಾಲ್ಕು ಸಾಲಿನಲ್ಲಿ(ಬರವಣಿಗೆ) ಪತ್ತೆಯಾಗಿದ್ದು, ಆಮೆಯ ಮೇಲ್ಭಾಗದಲ್ಲಿ ಗಜ (ಆನೆ) ಕಂಬವನ್ನು ಹೊತ್ತುಕೊಂಡಕ್ಕೆ ಕಲಾಕೃತಿ ಮೂಡಿಸಲಾಗಿದ್ದು ವಿಶೇಷತೆಯಿಂದ ಕೂಡಿದೆ.…
