ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ಕುಂದಾಪುರ ಉಡುಪಿ ಜಿಲ್ಲೆ, ಯುವ ಮನಸ್ಸುಗಳಿಗೆ ಸ್ಫೂರ್ತಿ, ನೊಂದವರಿಗೆ ನೆರವಿನ ದಾರಿ ದೀಪ ಧ್ಯೇಯೋದ್ದೇಶದಿಂದ ಕಳೆದ ಹತ್ತು ವರ್ಷಗಳಿಂದ 200ಕ್ಕೂ ಹೆಚ್ಚು ಸೇವಾ ಯೋಜನೆ, ಅನಾರೋಗ್ಯ ಪೀಡಿತರಿಗೆ ಸಹಾಯ ಧನ, ಲಾಕ್ ಡೌನ್ ಸಮಯದಲ್ಲಿ ಒಂದು ಹೊತ್ತಿನ ಅನ್ನದಾನ ಸೇವೆ, ಅಂಗನವಾಡಿ, ಶಾಲೆಗಳಿಗೆ ನೆರವು, ದೇವರ ಮಕ್ಕಳ ಆಶ್ರಮಗಳಿಗೆ ಮತ್ತು ನೆರೆಪೀಡಿತ ಪ್ರದೇಶಗಳಿಗೆ ಸಾಮಾಗ್ರಿ ವಿತರಣೆ, ರಕ್ತ ದಾನ ಮತ್ತು ರಕ್ತದಾನ ಶಿಬಿರ ಆಯೋಜನೆ ಹೀಗೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಹಾಯ ಹಸ್ತ ಚಾಚುತ್ತಿರುವ ಸಾಮಾಜ ಸೇವಾ ಸಂಸ್ಥೆ ಹತ್ತು ವರ್ಷಗಳ ಸಾಮಾಜಿಕ ಪಯಣದಲ್ಲಿ ಜೈ ಕುಂದಾಪ್ರ ಸಮ್ಮಿಲನ 2026 ಹಾಗೂ ಅಭಿನಂದನಾ ಕಾರ್ಯಕ್ರಮ ಭಾನುವಾರ ಶ್ರೀ ಶಾಂತಮೂರ್ತಿ ಶನೀಶ್ವರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನಿರಂತರವಾಗಿ ಸಮಾಜಮುಖಿ ಸೇವೆ ತೊಡಗಿಕೊಂಡಿರುವ ಸಂಸ್ಥೆ ಸಂಚಲನ ರಿ. ಬ್ರಹ್ಮಾವರ ಇದರ ಅಧ್ಯಕ್ಷರಾದ ನಂದಕಿಶೋರ್ ಹಾಗೂ ಜಾತ್ರೆಗಳಲ್ಲಿ ವಿಶೇಷ ವೇಷ ಧರಿಸಿ ದೇಣಿಗೆ ಸಂಗ್ರಹಿಸಿ ಅಶಕ್ತರಿಗೆ ನೆರವಾಗುವ ಬೆಂಕಿ ಮಣಿ ಸಂತೋಷ್ ಮತ್ತು ಹಲವಾರು ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡಿರುವ ಯಶಸ್ವಿನಿ ಫ್ರೆಂಡ್ಸ್ ಉದ್ಯಾವರ ಸಂಸ್ಥೆಯ ಪ್ರವೀಣ್ ಅಮೀನ್ ಹಾಗೂ ಸದಸ್ಯರನ್ನ ಗುರುತಿಸಿ ಸನ್ಮಾನಿಸಲಾಯಿತು.
ಸಂಸ್ಥೆಯ ಸಂಸ್ಥಾಪಕರು ಅಧ್ಯಕ್ಷರಾದ ಪುಂಡಲೀಕ ಮೊಗವೀರ, ಮುಖ್ಯ ಅತಿಥಿಗಳಾಗಿ, ಶಾಂತಮೂರ್ತಿ ಶನೀಶ್ವರ ದೇವಸ್ಥಾನ ಕೋಟ ಹಾಡಿಕೆರೆ ಭಾಸ್ಕರ ಸ್ವಾಮಿ, ಸಾಮಾಜ ಸೇವಕರು ದಾನಿಗಳಾದ ಕೆ. ಶ್ರೀಕಾಂತ್ ಶೆಣೈ ಕೋಟ, ರಾಷ್ಟ್ರೀಯ ಮಾನವ ಹಕ್ಕುಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಕೋಟ, ಯುವ ಉದ್ಯಮಿ ಆದಿತ್ಯ ಕೋಟ, ರಕ್ತ ದಾನಿ, ಸಾಮಾಜ ಸೇವಕರಾದ ರವಿಕುಮಾರ್ ಶೆಟ್ಟಿ ನಡೂರು, ನವಮಿ ವೆಲ್ಡಿಂಗ್ ವರ್ಕ್ ಮಾಲಿಕರಾದ ಹರೀಶ್ ದೇವಾಡಿಗ ಕೋಟ, ಪತ್ರಕರ್ತರಾದ ರವೀಂದ್ರ ಕೋಟ ಉಪಸ್ಥಿತರಿದ್ದರು,
ಗಾಯಕರಾದ ರವಿ ಬನ್ನಾಡಿ ಪ್ರಾರ್ಥನೆ ಮಾಡಿದರು. ಜೈ ಕುಂದಾಪ್ರ ತಂಡದ ಪ್ರಧಾನ ಕಾರ್ಯದರ್ಶಿ ದಿವ್ಯ ಕುಂದಾಪುರ ಸ್ವಾಗತಿಸಿ, ಯಶಸ್ವಿನಿ ಬೀಜಾಡಿ ಕಾರ್ಯಕ್ರಮವನ್ನು ನಿರೂಪಿಸಿ, ಸಂಸ್ಥೆಯ ನಿರ್ವಾಹಕರಾದ ಜಯರಾಜ್ ಸಾಲಿಯಾನ್ ಪಡುಕರೆ ಅವರು ಧನ್ಯವಾದ ಗೈದರು.
ಕೋಟ ಹಾಡಿಕೆರೆ ಕ್ಷೇತ್ರದ ಪಾತ್ರಿಗಳಾದ ಭಾಸ್ಕರ ಸ್ವಾಮಿ ಅವರು ಫಲಾಹಾರ ವ್ಯವಸ್ಥೆ ಮಾಡಿದರು. ಕಾರ್ಯಕ್ರಮದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಹೊಸ ಸದಸ್ಯರು ಸೇರ್ಪಡೆ ಗೊಂಡರು.
















