ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ತೆಕ್ಕಟ್ಟೆ ರಾ.ಹೆ-66ರ ಕನ್ನುಕರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಆಶ್ಲೇಷ ಆನ್‌ಲೈನ್ ಸೇವಾ ಕೇಂದ್ರ’ದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಂಗಡಿಯಲ್ಲಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ತೆಕ್ಕಟ್ಟೆ ಶ್ರೀ ನವಶಕ್ತಿ ಕಲ್ಯಾಣ ಮಂಟಪದ ಬಳಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರದಲ್ಲಿ ಸೋಮವಾರ ರಾತ್ರಿ ಸುಮಾರು 9:15ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಾಲೀಕರಾದ ಫಣಿರಾಜ್ ಹತ್ವಾರ್ ಕೊರವಡಿ ಅವರು ಕೆಲಸ ಮುಗಿಸಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಆ ಬಳಿಕ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಅಂಗಡಿಯಲ್ಲಿದ್ದ ಕಂಪ್ಯೂಟರ್, ಪ್ರಿಂಟರ್, ಸ್ಟೇಷನರಿ ವಸ್ತುಗಳು, ಇನ್ವರ್ಟರ್ ಬ್ಯಾಟರಿ, ಕುರ್ಚಿ, ಮೇಜು ಹಾಗೂ ಇತರ ಉಪಕರಣಗಳು ಬೆಂಕಿಗಾಹುತಿಯಾಗಿವೆ. ಈ ಅಗ್ನಿ ಅವಘಡದಿಂದ ಅಂದಾಜು 6 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಕಣ್ಣುಕರೆಯ ವಾದಿರಾಜ್ ಗಾಣಿಗ, ಕಾರ್ತಿಕ್, ಶೇಖರ್ ದೇವಡಿಗ, ಭರತ್ ಮತ್ತು ವಿಘ್ನೇಶ್ ಸೇರಿದಂತೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪವರ್‌ಲಿಫ್ಟಿಂಗ್ ಇಂಡಿಯ, ಕೂಳೂರು ಸ್ಪೋರ್ಟ್ಸ್ ಪ್ರಮೋಟರ್ಸ್ ಅವರ ಸಂಯೋಜನೆಯಲ್ಲಿ, ಕರ್ನಾಟಕ ಪವರ್‌ಲಿಫ್ಟಿಂಗ್ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಪವರ್‌ಲಿಫ್ಟಿಂಗ್ ಸಂಸ್ಥೆ ಅವರ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯ ಮಾಸ್ಟರ್ಸ್ ಮತ್ತು ದಕ್ಷಿಣ ಕನ್ನಡ – ಉಡುಪಿ ಜಿಲ್ಲಾ ಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧಾಕೂಟ -2026 ನಡೆಯಿತು. ಕುಂದಾಪುರ ನ್ಯೂ ಹರ್ಕ್ಯುಲೆಸ್ ಜಿಮ್ ಸಂಸ್ಥೆಯ ಮುಖ್ಯಸ್ಥರು, ಅಂತರಾಷ್ಟ್ರೀಯ ಪವರ್ ಲಿಫ್ಟರ್ ಸತೀಶ್ ಖಾರ್ವಿ ಅವರು 66 ಕೆಜಿ ಎಂ-2 ವಿಭಾಗದಲ್ಲಿ Classic ಹಾಗೂ Equipped-ಎರಡು ವಿಭಾಗಗಳಲ್ಲಿ ಸ್ಪರ್ಧಿಸಿ ಎರಡು ಚಿನ್ನದ ಪದಕಗಳು ಹಾಗೂ ಕರ್ನಾಟಕದ ಬಲಿಷ್ಠ ಪುರುಷ-2026 ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕುಂದಾಪುರ ನ್ಯೂ ಹರ್ಕ್ಯುಲೆಸ್ ಜಿಮ್ ಸಂಸ್ಥೆಯ ಸದಸ್ಯರಾದ ಕಾರ್ತಿಕ್ ಪೂಜಾರಿ ಅವರು 93 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಮಟ್ಟದ ಬಲಿಷ್ಠ ಪುರುಷ-2026 ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟದ ಪಂಚವರ್ಣ ಸಂಘಟನೆಯ ಪ್ರತಿ ಭಾನುವಾರದ ಪರಿಸರ ಸ್ನೇಹಿ ಅಭಿಯಾನದ ಭಾಗವಾಗಿ ಬೀಚ್ ಕ್ಲಿನಿಂಗ್ ಭಾಗವಹಿಸಿ ಬಹುಮಾನ ಗೆಲ್ಲಿ ಕಾರ್ಯಕ್ರಮಕ್ಕೆ ಕೋಟ ಸಹಕಾರಿ ವ್ಯವಸಾಯ ಸಂಘದ ಅಧ್ಯಕ್ಷ ಡಾ. ಕೆ. ಕೃಷ್ಣ ಕಾಂಚನ್ ಸಲಹೆಯ ಮೇರೆಗೆ ಬೆಂಗಳೂರು ಪ್ರಸಿದ್ಧ ಕ್ಯಾಪ್ಸ್ ಫೌಂಡೇಶನ್ ವತಿಯಿಂದ ಸಂಸ್ಥೆಯ ಮುಖ್ಯಸ್ಥ ಸಿಎ ಚಂದ್ರಶೇಖರ ಶೆಟ್ಟಿ ಉಚಿತವಾಗಿ ಸ್ಟೀಲ್ ನೀರಿನ ಬಾಟಲ್ ಅನ್ನು ಪಂಚವರ್ಣ ಅಧ್ಯಕ್ಷರಾದ ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಕುಂಭಾಶಿ ವಿಶ್ವಕರ್ಮ ಕರಕುಶಲ ಕೇಂದ್ರಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಇತ್ತೀಚಿಗೆ ಭೇಟಿ ನೀಡಿದರು. ಶ್ರೀಪಾದರನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ಪುತ್ರ ಖ್ಯಾತರಥ ಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ ಇವರು ಸ್ವಾಗತಿಸಿಕೊಂಡು ಕೇಂದ್ರದ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರು ಕೇಂದ್ರದ ರಥ ತಯಾರಿಕೆಯ ಚಟುವಟಿಕೆಯನ್ನು ಗಮನಿಸಿ ರಥ ತಯಾರಿಸುವ ವಿಧಾನ ಮತ್ತು ರಥಗಳ ಮಾಹಿತಿಯನ್ನು ಪಡೆದುಕೊಂಡರು. ರಥಶಿಲ್ಪಿ ಗಣಪತಿ ಆಚಾರ್ಯ, ಸತೀಶ ಆಚಾರ್, ಕರಕುಶಲ ಕೇಂದ್ರದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ಕುಂಭಾಶಿ ವಿಶ್ವಕರ್ಮ ಕರಕುಶಲ ಕೇಂದ್ರದ ವತಿಯಿಂದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಸಂಚಾರ 61 ಸರಣಿ ಕಾರ್ಯಕ್ರಮವು ಸೋಮವಾರದಂದು ಇಲ್ಲಿನ ಕೂರಾಡಿಯ ಬಿಎಂಎಂ ಪ್ರೌಢಶಾಲೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಇಲ್ಲಿನ ನಿವೃತ್ತ ಶಿಕ್ಷಕ ವಿಶ್ವನಾಥ್ ಎಂ. ಉದ್ಘಾಟಿಸಿ, ಮಾತನಾಡಿ, ದೀಪವು ಸದಾ ಕಾಲ ಪೂಜನೀಯ. ಅದು ಇತರರಿಗಾಗಿ ಉರಿಯುವುದೇ ವಿನಹ ಇತರರ ಯಶಸ್ಸನ್ನು ಕಂಡು ಉರಿದುಕೊಳ್ಳುವುದಿಲ್ಲ ಎಂದು ಶುಭ ಹಾರೈಸಿದರು. ಮುಖ್ಯ ಅಧ್ಯಾಪಕರಾದ ಮಂಜುನಾಥ್ ಎಂ. ಅವರು ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ವಿದ್ಯೆ ಜೊತೆಯಲ್ಲಿ ಸಂಸ್ಕಾರ ಮುಖ್ಯ ಎಂದು ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ನೀಲಾಂಬರ ಸುರೇಂದ್ರ ಅಡಿಗ ಅವರು ಪ್ರಾಸ ಪದಗಳನ್ನು ಕೊಟ್ಟು ಕವನಗಳನ್ನು ರಚಿಸಿದರು. ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಗುಂಡ್ಮಿ ರಾಮಚಂದ್ರ ಐತಾಳ್ ಅವರು ಸ್ವರ ಏರಿಳಿತವು ಪ್ರಾಮುಖ್ಯ ಎಂದು ಅಭಿನಯಿಸಿ ತೋರಿಸಿದರು. ನಾಗೇಶ ಮಯ್ಯ ಅವರು ಕಥೆಗಳನ್ನ ರಚಿಸುವ ಬಗ್ಗೆ ವಿವರಿಸಿದರು. ನರಸಿಂಹ ತುಂಗ ಅವರು ನವರಸಗಳ ಬಗ್ಗೆ ವಿವರಿಸುತ್ತಾ ಯಕ್ಷಗಾನದ ಅಭಿನಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲ ಪುರಾತನವಾದ ಕಾರಣಿಕ ಕ್ಷೇತ್ರಗಳಲ್ಲೊಂದಾಗಿದೆ. ಈ ನಿಟ್ಟಿನಲ್ಲಿ ಭಕ್ತ ಸಮುದಾಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಸಾಕ್ಷೀಯಾಗಿದೆ ಎಂದು ಸಮಾಜ ಸೇವಕ ಪಾರಂಪಳ್ಳಿ ರವೀಂದ್ರ ಐತಾಳ್ ಹೇಳಿದರು. ಅವರು ಭಾನುವಾರ ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಶಿವರಾತ್ರಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಪ್ರತಿಯೊರ್ವರ ಸಹಕಾರ ಅತ್ಯವಶ್ಯಕ. ಈ ನಿಟ್ಟಿನಲ್ಲಿ ಕರಾವಳಿಯ ಧರ್ಮರತ್ನಾಕರ ಆನಂದ್ ಸಿ. ಕುಂದರ್ ದೇಗುಲಗಳ ಅಭಿವೃದ್ಧಿಗೆ ಸಾಕಷ್ಟು ದೇಣಿಗಳನ್ನು ನೀಡುತ್ತಿದ್ದಾರೆ. ಅಂತೆಯೇ ಈ ದೇಗುಲಕ್ಕೆ ತನ್ನ ವತಿಯಿಂದ 25ಸಾವಿರ ರೂಗಳನ್ನು ಅಭಿವೃದ್ಧಿಗೆ ನೀಡುವುದಾಗಿ ಘೋಷಿಸಿದರು. ದೇಗುಲದ ಅಧ್ಯಕ್ಷ ಸುರೇಶ್ ಗಾಣಿಗ ಶೇವಧಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮವನ್ನು ದೇಗುಲದ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ದೇಗುಲದ ಸೇವೆಯಲ್ಲಿ ನಿರತರಾದ ಸುಜಾತ ಶ್ರೀಧರ ದೇವಾಡಿಗ, ಜೀವನ್ ಸಮೃದ್ಧ್, ದೇವಿ ಮಂಜುನಾಥ ದೇವಾಡಿಗ ಅವರುಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಕೋಟ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಶಿರೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ದಿನೇಶ್ ಕುಮಾರ್ ಶಿರೂರು (46) ಅವರು ಸೋಮವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರು ಶಿರೂರು ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಅವರು ಆಕ್ರಮ -ಸಕ್ರಮ ಸಮಿತಿ ಮಾಜಿ ಸದಸ್ಯರಾಗಿ, ಸ.ಪ.ಪೂ ಕಾಲೇಜಿನ ಶಾಲಾಭಿವೃದ್ಧಿ ಸಮಿತಿ ಸದಸ್ಯರಾಗಿ, ಮೇಲ್ಪಂಕ್ತಿ ಎರಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಕ್ರೀಯ ಸ್ವಯಂಸೇವಕರಾಗಿದ್ದ ಅವರು ಬಿಜೆಪಿ ಪಕ್ಷದಲ್ಲಿಯೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಅವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು ಸೋಮವಾರ ನಿಧನರಾಗಿದ್ದಾರೆ. ಅವಿವಾಹಿತರಾಗಿರುವ ಅವರು ತಾಯಿ ಹಾಗೂ ಇಬ್ಬರು ಸಹೋದರಿಯರು ಹಾಗೂ ಅಪಾರ ಸ್ನೇಹಿತ ವರ್ಗವನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟಿಂಗ್ ಆಫ್ ಇಂಡಿಯಾ ನಡೆಸುವ ಸಿಎಂಎ ಇಂಟರ್‌ಮೀಡಿಯಟ್ ಗ್ರೂಪ್II, ಡಿಸೆಂಬರ್ 2025ರಲ್ಲಿ ನಡೆದ ಪರೀಕ್ಷೆಯಲ್ಲಿ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಕ್ತನ ವಿದ್ಯಾರ್ಥಿಗಳಾದ ಅನುಶ್ರೀ ಹಾಗೂ ಯಶವಂತ ಎನ್. ಉತ್ತೀರ್ಣವಾಗುವ ಮೂಲಕ ಉತ್ಕೃಷ್ಟ ಸಾಧನೆಗೈದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೆ.ಡಿ.ಎಫ್ ಕಪ್ 2026, ರಾಜ್ಯ ಮಟ್ಟದ ಇಂಟರ್ ಡುಜೊ ಕರಾಟೆ ಚಾಂಪಿಯನ್‌ಶಿಪ್‌ನ ಕುಮಿಟಿ ವಿಭಾಗದಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ತನ್ವಿ (5B) ಹಾಗೂ ವಂಶಿಕಾ ಭಂಡಾರ್ಕರ್ (5B) ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶ್ರೀ ಜಟ್ಟಿಗೆಶ್ವರ ಭಕ್ತ ವೃಂದ ಕುಂಜಿಗುಡಿ ಸಾಲಿಗ್ರಾಮ ಇದರ ನೇತೃತ್ವದಲ್ಲಿ 30ನೇ ವರ್ಷದ ಯಕ್ಷಗಾನ ಬಯಲಾಟವಾಗಿ ಅಮೃತೇಶ್ವರಿ ಮೇಳದ ವೇದಿಕೆಯಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೋಟ ಸುರೇಶ್ ಬಂಗೇರ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸಾರ್ವಜನಿಕ ಅನ್ನ ಸಂತರ್ಪಣೆ ಸೇವಕರ್ತರಾದ ಮಂಜುನಾಥ ಹೊಳ್ಳ ದಂಪತಿಗಳಿಗೆ ಮತ್ತು ಗೆಳೆಯರ ಬಳಗದ ತಾರಾನಾಥ ಹೊಳ್ಳರಿಗೆ ವಿಶೇಷ ಗೌರವಾರ್ಪಣೆ ಸಲ್ಲಿಸಲಾಯಿತು. ಯಕ್ಷಗಾನಕ್ಕೆ ವಾರ್ಷಿಕ ನಿತ್ಯನಿಧಿ ಠೇವಣಿದಾರರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆರೋಗ್ಯ ಸೇವೆ, ಸಮಾಜ ಸೇವೆ, ವಿದ್ಯಾ ಸೇವೆ, ಧಾರ್ಮಿಕ ಸೇವೆಗೆ ಸಹಾಯ ನಿಧಿ ವಿತರಿಸಲಾಯಿತು. ವೇದಿಕೆಯಲ್ಲಿ ಅತಿಥಿಗಳಾಗಿ ಉದ್ಯಮಿ ಕೃಷ್ಣಯ್ಯ ಪೂಜಾರಿ ಗದ್ದೆಮನೆ, ಶ್ರೀ ಜಟ್ಟಿಗೆಶ್ವರ ಭಕ್ತ ವೃಂದ ಅಧ್ಯಕ್ಷ ಗಣೇಶ್ ನಾಯರಿ, ಜಟ್ಟಿಗೆಶ್ವರ ಸಮಿತಿಯ ಕುಂಜುಗುಡಿ ಮಂಜುನಾಥ ನಾಯರಿ, ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಗಣೇಶ್ ನೆಲ್ಲಿಬೆಟ್ಟು, ಶಿವಪೂಜಾರಿ ಉಪಸ್ಥಿತರಿದ್ದರು. ಸಮಿತಿಯ ಕೆ. ಮಂಜುನಾಥ ನಾಯರಿ ಕಾರ್ಯಕ್ರಮ ನಿರೂಪಿಸಿ, ಸನ್ಮಾನ ಪತ್ರ ವಾಚಿಸಿ ಧನ್ಯವಾದ…
