ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಗುರು ಜ್ಯೋತಿ ಸೆಂಟರ್ 35ನೇ ವರ್ಷದ ಸವಿನೆನಪಿನ ಕಾರ್ಯಕ್ರಮದ ಅಂಗವಾಗಿ 16 ಅಂಬ್ಯುಲೆನ್ಸ್ ಡ್ರೈವರ್ಗೆ ಸನ್ಮಾನ ಮತ್ತು ಸಹಾಯಹಸ್ತ, ಪುರಸಭೆಯ ಸ್ವಚ್ಚತಾ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಹಸ್ತ ಹಾಗೂ ಅಶಕ್ತರಿಗೆ ಸಹಾಯಹಸ್ತ ವಿತರಣೆ ಇತ್ತೀಚಿಗೆ ಪುರಸಭೆ ಎದುರು ನಡೆಯಿತು. ಕುಂಬಾಶಿ ಶ್ರೀ ಆನೆಗುಡ್ಡೆ ದೇವಸ್ಥಾನದ ಧರ್ಮದರ್ಶಿ ರಮಣ ಉಪಾಧ್ಯಾಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪುರಸಭೆ ಕುಂದಾಪುರ ಮುಖ್ಯಾಧಿಕಾರಿ ಆನಂದ ಜೆ., ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ನಂಜ ನಾಯ್ಕ, ಕುಂದಾಪುರ ವಕೀಲರಾದ ಶಶಿದರ ಹೆಗ್ಡೆ, ಡಾ. ಬಿ.ಬಿ ಹೆಗ್ಡೆ ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಉಪಸ್ಥಿತರಿದ್ದರು. ಗುರು ಜ್ಯೋತಿ ಜ್ಯೂಸ್ ಸೆಂಟರ್ನ ಸತೀಶ್ ಪೂಜಾರಿ ಹಾಗೂ ನರಸಿಂಹ ಪೂಜಾರಿ ಇದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಮೆಟ್ಟಿನಹೊಳೆ ಶ್ರೀ ಜೈನಜಟ್ಟಿಗೆಶ್ವರ ಸಪರಿವಾರ ದೈವಗಳ ವಾರ್ಷಿಕ ಜಾತ್ರಾ ಮಹೋತ್ಸವವು ಇತ್ತೀಚಿಗೆ ಅದ್ದೂರಿಯಾಗಿ ಜರುಗಿತು. ದೈವಸ್ಥಾನದ ಆವರಣದಲ್ಲಿ ನಿರ್ಮಿಸಿದ ನೂತನ ಎಎಸ್ ಶೆಟ್ಟಿ ವೇದಿಕೆಯನ್ನು ಬೈಂದೂರಿನ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿದರು. ಮಾಜಿ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಅವರು ಕೆರೆಯ ಆವರಣ ರಚನೆಯನ್ನು ಉದ್ಘಾಟಿಸಿದರು. ಪ್ರಥಮ ದರ್ಜೆ ಗುತ್ತಿಗೆದಾರರಾದ ಅಶೋಕ್ ಶೆಟ್ಟಿ ಹುಬ್ಬಳ್ಳಿ ಅವರು ಆವರಣ ಗೋಡೆಯನ್ನು ಉದ್ಘಾಟಿಸಿದರು. ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಕರುಣಾಕರ ಶೆಟ್ಟಿ ನೆಲ್ಯಾಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರದ ಪ್ರಧಾನ ಪೋಷಕರುಗಳಾದ ಶ್ವೇತಾ ಅಶೋಕ್ ಶೆಟ್ಟಿ, ಸುಶೀಲ ಸುನಿಲ್ ಶೆಟ್ಟಿ ನೆಲ್ಯಾಡಿ, ಗೀತಾ ವಿ. ಶೆಟ್ಟಿ ಕರ್ಕಿ, ಪೂರ್ಣಿಮಾ ಪಿ. ಶೆಟ್ಟಿ ನೆಲ್ಯಾಡಿ, ನಾಗರಾಜ ದೇವಾಡಿಗ ಮಿಯ್ಯಾಣಿ ಮೊದಲಾದ ದಾನಿಗಳನ್ನು ಸನ್ಮಾನಿಸಲಾಯಿತು. ವಿಜಯ ಬ್ಯಾಂಕ್ ನಿವೃತ್ತ ಡಿಜಿಎಂ ಆನಂದ ಶೆಟ್ಟಿ ಅಲ್ಸಾಡಿ, ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಪಶು ಸಂಗೋಪನ ಇಲಾಖೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರವೀಣ್ ಕುಮಾರ್ ಆರ್. ಅವರು ಶನಿವಾರ ಬೆಳಗಿನ ಜಾವ 2:30ರ ಸುಮಾರಿಗೆ ಠಾಣಾ ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ಸಾಲಿಗ್ರಾಮ ಕಡೆಯಿಂದ ಠಾಣೆಯ ಕಡೆಗೆ ಬರುತ್ತಿರುವಾಗ ಚಿತ್ರಪಾಡಿ ಗ್ರಾಮದ ಪರಿವರ್ತನ ಕಟ್ಟಡ ಬಳಿ ಕಪ್ಪು ಬಣ್ಣದ ರಿಡ್ಜ್ ಕಾರು ನಿಂತಿದ್ದು, ಕಾರಿನ ಹೊರಗೆ 3 ಜನ ಅನುಮಾನಿತ ವ್ಯಕ್ತಿಗಳು ನಿಂತುಕೊಂಡಿರುವುದು ಕಂಡುಬಂದಿದೆ. ಕಾರಿನ ಬಳಿ ಹೋಗಿ ಕಾರಿನ ಹೊರಗೆ ನಿಂತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಸರಿಯಾದ ಉತ್ತರ ನೀಡಿಲ್ಲ. ಕಾರಿನ ಒಳಗೆ ನೋಡಿದಾಗ ಇಬ್ಬರು ವ್ಯಕ್ತಿಗಳು ಕುಳಿತುಕೊಂಡಿರುವುದು ಕಂಡುಬಂದಿದೆ. ಅವರು ಸರಿಯಾದ ಮಾಹಿತಿ ನೀಡದೆ ಇರದ ಕಾರಣ ತಕ್ಷಣ ಕಾರನ್ನು ಪರಿಶೀಲಿಸಿದಾಗ ಕಾರಿನ ಎದುರು ಎಡ ಬದಿಯ ಡ್ಯಾಶ್ ಬೋರ್ಡ್ ನಲ್ಲಿ ಎರಡು ಚೂರಿ ಇರುವುದು ಕಂಡುಬಂದಿದೆ. ಅಲ್ಲದೆ ಕಾರಿನ ಹಿಂದಿನ ಡಿಕ್ಕಿ ಪರಿಶೀಲಿಸಿದಾಗ ನೀರಿನಿಂದ ತೊಳೆದಿರುವುದು ಕಂಡುಬಂದಿದೆ. ಕಾರಿನ ಡಿಕ್ಕಿಯ ಡೋರಿನಲ್ಲಿ ರಕ್ತ ಅಂಟಿದ ಕಲೆಗಳ ಜೊತೆಗೆ ಯಾವುದೋ ಪ್ರಾಣಿಯ ಕೂದಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಕ್ರೀಡೆಯಿಂದ ಸಂಘಟನೆ ಇನ್ನಷ್ಟು ಬಲಗೊಳ್ಳುತ್ತದೆ. ಸದಸ್ಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಬಾಂಧವ್ಯ ಹೆಚ್ಚಾಗುತ್ತದೆ. ಕಳೆದ 49 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅತ್ಯುತ್ತಮ ಚಟುವಟಿಕೆ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಯೂತ್ ಕ್ಲಬ್ ರಾಜ್ಯಮಟ್ಟದ ಕ್ರೀಡೆಯನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಬೆಣ್ಗೇರೆ ಶ್ರೀ ನಾಗ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಅಡಿಗ ಹೇಳಿದರು. ಅವರು ಶ್ರೀ ಸುಬ್ರಹ್ಮಣ್ಯೇಶ್ವರ ಯೂತ್ ಕ್ಲಬ್ ಬೆಣ್ಗೇರೆ ಗುಜ್ಜಾಡಿ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ಗಂಗೊಳ್ಳಿಯ ಎಸ್.ವಿ. ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಚಾರೋಡಿ ಮೇಸ್ತ ಸಮಾಜ ಬಾಂಧವರ ರಾಜ್ಯ ಮಟ್ಟದ ಲೈಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ’ಚಾರೋಡಿ ಮೇಸ್ತ ಟ್ರೋಫಿ-2026’ ನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಶ್ರೀ ಸುಬ್ರಹ್ಮಣ್ಯೇಶ್ವರ ಯೂತ್ ಕ್ಲಬ್ ಅಧ್ಯಕ್ಷ ರಾಮದಾಸ ಕೆ. ಮೇಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಬಿ. ರಾಘವೇಂದ್ರ ಪೈ ಮತ್ತು ಗಂಗೊಳ್ಳಿ ಪರ್ಸಿನ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸ್ವ-ಉದ್ಯೋಗವು ಪ್ರತಿಯೊಬ್ಬರಿಗೂ ಆಧಾರವಾಗುತ್ತದೆ. ಮಹಿಳೆಯರು ಸಣ್ಣ ಸಣ್ಣ ಉದ್ಯೋಗ ಮಾಡಿ ಆರ್ಥಿಕತೆಯನ್ನು ಹೆಚ್ಚಿಸಕೊಳ್ಳಬಹುದು. ಹೊಲಿಗೆ ವೃತ್ತಿ ನಿರಂತರ ಬೇಡಿಕೆ ಇದೆ. ಮನೆಯಲ್ಲಿ ಕುಳಿತು ಕೆಲಸ ಮಾಡಬಹುದು. ಸಮಾಜದ ಪ್ರತಿಯೊಬ್ಬರು ಗಾಣಿಗ ಟ್ರಸ್ಟ್ ಮಾಡುವ ತರಬೇತಿ ಪಡೆದುಕೊಳ್ಳಬೇಕು ಎಂದು ಬೈಂದೂರು ಗಾಣಿಗ ಪ್ರತಿಷ್ಠಾನದ ಅಧ್ಯಕ್ಷರಾದ ಕೊಲ್ಲೂರು ರಮೇಶ್ ಗಾಣಿಗ ಹೇಳಿದರು. ಅವರು ಬೈಂದೂರಿನಲ್ಲಿ ಗಾಣಿಗ ಪ್ರತಿಷ್ಠಾನ ನಡೆಸುವ ಹೊಲಿಗೆ ತರಬೇತಿಯ 4ನೇ ತಂಡದ ಮಹಿಳೆಯರಿಗೆ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ನ ಆನಂದ ಗಾಣಿಗ, ನಾಗರಾಜ ಗಾಣಿಗ, ಪ್ರೇಮಾ ಶೆಟ್ಟಿ, ಬಾಬು ಗಾಣಿಗ, ರಾಜು ಹಳವಾಡಿ, ಶಿವಾನಂದ ಗಾಣಿಗ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತರಬೇತುದಾರ ಸುಬ್ಬಣ್ಣ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ನ ಕಾರ್ಯದರ್ಶಿ ನಾಗರಾಜ ಗಾಣಿಗ ಸ್ವಾಗತಿಸಿ, ಸಂಚಾಲಕ ಶಿವಾನಂದ ಗಾಣಿಗ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಅಲ್ಲಲ್ಲಿ ಕಾಣಿಸಿಕೊಂಡು ಸ್ಥಳೀಯ ಜನರಿಗೆ ಆತಂಕ ಮೂಡಿಸಿದ್ದ ಚಿರತೆಯೊಂದು ಶುಕ್ರವಾರ ಅರಣ್ಯ ಇಲಾಖೆಯಿಟ್ಟ ಬೋನಿಗೆ ಬಿದ್ದಿದೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಚಿರತೆ ಸೆರೆಗಾಗಿ ಹೇರೂರು ಗ್ರಾಮದ ಚಿಕ್ಕಾಡಿ ಎಂಬಲ್ಲಿರುವ ಖಾಸಗಿಯವರ ತೋಟದಲ್ಲಿ ಅರಣ್ಯ ಅಧಿಕಾರಿಗಳು ಗುರುವಾರ ಬೋನು ಇರಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಶುಕ್ರವಾರ ಬೆಳಗ್ಗೆ ಸುಮಾರು ಸುಮಾರು 3 ವರ್ಷ ಪ್ರಾಯದ ಹೆಣ್ಣು ಚಿರತೆ ಬೋನಿಗೆ ಬಿದ್ದಿರುವುದು ಕಂಡುಬಂದಿದೆ. ಸ್ಥಳಕ್ಕೆ ಬೈಂದೂರು ವಲಯ ಅರಣ್ಯಾಧಿಕಾರಿ ಜ್ಯೋತಿ ಸಂದೇಶ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ಕೆ. ಸದಾಶಿವ, ಗಸ್ತು ಅರಣ್ಯ ಪಾಲಕಿ ಶೃತಿ ಗೌಡ, ಅರಣ್ಯ ವೀಕ್ಷಕ ಸುರೇಶ್ ಗೌಡ ಭೇಟಿ ನೀಡಿದ್ದಾರೆ. ಸೆರೆ ಹಿಡಿದ ಚಿರತೆಯನ್ನು ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಪಡುಕೆರೆ ಇವರಿಂದ ಪಾರಂಪಳ್ಳಿ ಪಡುಕೆರೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಬೀಚ್ನ ತಟದಲ್ಲಿ ಎರಡು ಸಿಮೆಂಟ್ ಆಸನಗಳನ್ನು ಕೊಡುಗೆಯಾಗಿ ನೀಡಿ ಅದನ್ನು ಗುರುವಾರ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕೃಷ್ಣ ದೇವಾಡಿಗ, ಗೌರವಾಧ್ಯಕ್ಷ ರಾಜೇಶ್ ಉಪಾಧ್ಯಾ, ಕಾರ್ಯದರ್ಶಿ ಸುಧಾಕರ್ ಪೂಜಾರಿ, ಸಂಸ್ಥೆಯ ಪ್ರಮುಖರಾದ ರವಿ ಪೂಜಾರಿ ಕೃಷ್ಣ ಪಿ., ರಮೇಶ್ ಪೂಜಾರಿ, ಉಲ್ಲಾಸ್ ಪೂಜಾರಿ, ರತ್ನಾಕರ ಪೂಜಾರಿ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಜನರಿಗೆ ಸರಕಾರದ ಸೌಲಭ್ಯ ದೊರಕಿಸಿಕೊಡುವ ಉದ್ದೇಶದಿಂದ ಸರಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಗ್ರಾಮೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜನರು ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಗ್ರಾಮದ ಜನರಿಗೆ ಸೇವೆ ನೀಡುವ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಹೇಳಿದರು. ಅವರು ಗ್ರಾಮ ಪಂಚಾಯತ್ ಗಂಗೊಳ್ಳಿ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಗಂಗೋತ್ರಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಗಂಗೊಳ್ಳಿ ಸಹಭಾಗಿತ್ವದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಪರಿಕಲ್ಪನೆಯ ಬೈಂದೂರು ಉತ್ಸವ-20256ರ ಅಂಗವಾಗಿ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ನಡೆದ ಗಂಗೊಳ್ಳಿ ಗ್ರಾಮೋತ್ಸವ-2026 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಂಗೊಳ್ಳಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಇಂಗ್ಲೀಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಸಾಹಿತ್ಯಿಕ ಸಂಘ ‘ಮೆಟಾಫೋರಿಯಾ’ ದ ಉದ್ಘಾಟನೆ ಹಾಗೂ ವಿಭಾಗದ ಹೊಸ ಪಠ್ಯಪುಸ್ತಕಗಳಾದ ಇಕ್ವಿಟಿ, ಪೆನಾಂಬ್ರ, ರೆಸೊನೆನ್ಸ್ಸ್ ಬಿಡುಗಡೆ ಸಮಾರಂಭ ಕಾಲೇಜಿನ ಆಡಿಯೋ–ವಿಜುವಲ್ ಹಾಲ್ನಲ್ಲಿ ಶುಕ್ರವಾರ ನಡೆಯಿತು. ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಆಳ್ವ ಫಾರ್ಮಸಿಯ ಆಡಳಿತಾಧಿಕಾರಿ ಡಾ. ಗ್ರೀಷ್ಮಾ ಆಳ್ವ, ಇಂತಹ ವೇದಿಕೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವನ್ನು ಉದ್ದೀಪನಗೊಳಿಸಬಲ್ಲದು. ಸಾರ್ವಜನಿಕ ಭಾಷಣ ಕೌಶಲ್ಯದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಆತ್ಮವಿಶ್ವಾಸವು ಹುಟ್ಟಿನಿಂದ ಬರಲು ಸಾಧ್ಯವಿಲ್ಲ. ಅದು ಅಭ್ಯಾಸದಿಂದ ಬೆಳೆಸಿಕೊಳ್ಳಬಹುದಾದ ಗುಣ. ಭಾಷಣದ ವೇಳೆ ಭಯಕ್ಕೆ ಒಳಗಾಗದೆ, ಸರಳ ಹಾಗೂ ಸ್ಪಷ್ಟ ಸಂವಹನಕ್ಕೆ ಒತ್ತು ನೀಡಬೇಕು ಎಂದು ಹೇಳಿದರು. ಭಾಷಣದ ಸಂಧರ್ಭದಲ್ಲಿ ಬಾಡಿ ಲಾಂಗ್ವೇಜ್, ಪೋಶ್ಚರ್, ಉಚ್ಚಾರಣೆ, ಶಬ್ದ ಸ್ಪಷ್ಟತೆ, ಧ್ವನಿಯ ಮೇಲೆ ಹಿಡಿತ ಮತ್ತು ಶ್ರೋತೃಗಳೊಂದಿಗೆ ನೇರ ಸಂವಾದದ ಮಹತ್ವವನ್ನು ವಿವರಿಸಿದರು. ನೀವು ಮಾತನಾಡುವ ವೇಳೆಯಲ್ಲಿ ಜನರು ನಿಮ್ಮ ಮಾತಿಗೆ ಹೇಗೆ ಸ್ಫಂದಿಸುತ್ತಾರೆ ಎಂಬುದು ಮುಖ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಜೂನ್-1 ನೇ ತಾರೀಕಿನಿಂದ 8ನೇ ತರಗತಿ ಪ್ರವೇಶಕ್ಕೆ ಅರ್ಹತೆ ಹೊಂದುವ 14 ವರ್ಷದೊಳಗಿನ ಬಾಲಕ/ಬಾಲಕಿಯರನ್ನು ಕ್ರೀಡಾ ವಸತಿ ಶಾಲೆ/ನಿಲಯ ಪ್ರವೇಶಕ್ಕೆ ಆಯ್ಕೆ ಮಾಡಲಾಗುತ್ತಿದ್ದು, ಜನವರಿ 21ರಂದು ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕ್ರೀಡಾಪಟುಗಳಿಗೆ ಬೆಳಿಗ್ಗೆ 10.00 ಗಂಟೆಗೆ ಕುಂದಾಪುರ ಗಾಂಧಿ ಮೈದಾನ, ಜನವರಿ 22ರಂದು ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಕ್ರೀಡಾಪಟುಗಳಿಗೆ ಬೆಳಿಗ್ಗೆ 10.00 ಗಂಟೆಗೆ ಮುನಿಯಾಲು ಕೆಪಿಎಸ್ ಹಾಗೂ ಜನವರಿ 23ರಂದು ಕಾಪು, ಉಡುಪಿ ಹಾಗೂ ಬ್ರಹ್ಮಾವರ ತಾಲೂಕಿನ ಕ್ರೀಡಾಪಟುಗಳಿಗೆ ಬೆಳಿಗ್ಗೆ 10.00 ಗಂಟೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ವಿಬಾಗದ ಕ್ರೀಡಾ ವಸತಿ ನಿಲಯ ಪ್ರವೇಶಕ್ಕೆ 18 ವರ್ಷ ವಯೋಮಿತಿಯೊಳಗಿನ ಪ್ರಥಮ ಪಿಯುಸಿ ಸೇರಲು ಅರ್ಹರಾಗಿರುವ ಆಸಕ್ತ ಕ್ರೀಡಾಪಟುಗಳು ನೇರ ಆಯ್ಕೆಗಾಗಿ ನಿಗದಿತ ನಮೂನೆಯಲ್ಲಿ ವೈದ್ಯಕೀಯ ಪ್ರಮಾಣಪತ್ರ ಹಾಗೂ ದೃಧೀಕರಿಸಿದ ಜನನ ಪ್ರಮಾಣಪತ್ರದೊಂದಿಗೆ ಅರ್ಜಿಯನ್ನು ಆಯ್ಕೆ ಪ್ರಕ್ರಿಯೆ…
