Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ,ಕೊಲ್ಲೂರು: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚಿಗೆ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಎಸ್.ಡಿ.ಎಂ.ಸಿ ಹಾಗೂ ಶಾಲಾ ಶಿಕ್ಷಕರ ವತಿಯಿಂದ ನಡೆಯಿತು. ವರ್ಗಾವಣೆಗೊಂಡ ಶಿಕ್ಷಕರಾದ ರಾಘವೇಂದ್ರ, ಯಶೋದಾ, ಉಷಾ, ಮತ್ತು ವಿನೋದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ್ ಅಡಿಗ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಭಟ್ ಮತ್ತು ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶೈಲೇಶ್ ರಾವ್ ಹಾಗೂ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಗ್ರೀಷ್ಮಾ ಗಿರಿಧರ್ ಭಿಡೆ ಮತ್ತು ಎಸ್.ಡಿ.ಎಂ.ಸಿ ಸದಸ್ಯರಾದ ಯೋಗೇಶ್ ಭಟ್, ರಾಮಚಂದ್ರ ಭಟ್, ನವೀನ್ ಕುಮಾರ್, ಜನಾರ್ಧನ್, ಗೋವಿಂದ, ನೇತ್ರಾವತಿ, ಶಾರದಾ, ಶೋಭಾ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ಶಾರದಾ ಸ್ವಾಗತಿಸಿದರು. ಸಹಶಿಕ್ಷಕಿ ಶೈಲಜಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಹಶಿಕ್ಷಕಿ ನಿರ್ಮಲಾ ಕಾರ್ಯಕ್ರಮ ವಂದಿಸಿದರು. ಸನ್ಮಾನ ಪತ್ರವನ್ನು ಸಹಶಿಕ್ಷಕಿರಾದ ರಾಜೇಶ್ವರಿ ಮತ್ತು ಸುಮಿತ್ರಾ ವಾಚಿಸಿದರು. ದಾನಿಗಳಾದ ಯೋಗೇಂದ್ರನಾಥ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸಂಜೀವಿನಿ ಸಂಘದ ಉತ್ಪನ್ನಗಳನ್ನು ಬ್ರಾಂಡಿಂಗ್ ಮಾಡಲಾಗುತ್ತಿದ್ದು, ಅಮೆಜಾನ್‌ನಲ್ಲಿ ಸಂಜೀವಿನ ಸಂಘದ ಉತ್ಪನ್ನಗಳನ್ನು ಪರಿಚಯಿಸಿ ಮಾರಾಟ ಮಾಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ. ಜಿಲ್ಲೆಯಲ್ಲಿ 21 ಕಡೆಗಳಲ್ಲಿ ಸಂಜೀವಿನಿ ಸಂತೆಗಳು ನಡೆಯುತ್ತಿದ್ದು, ಸಂಘದ ಸದಸ್ಯರು ಉತ್ತಮ ಲಾಭ ಗಳಿಸುತ್ತಿದ್ದಾರೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆ ಅಗ್ರ ಸ್ಥಾನದಲ್ಲಿದ್ದು ಸಂಘದ ಸದಸ್ಯರು ಉತ್ತಮವಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಜೀವಿನಿ ಸ್ವಸಹಾಯ ಸಂಘಗಳ ಜಿಲ್ಲಾ ಯೋಜನಾ ನಿರ್ದೇಶಕ ಬಾಬು ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಉಡುಪಿ ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ, ಗ್ರಾಮ ಪಂಚಾಯತ್ ಗುಜ್ಜಾಡಿ ಇವರ ಜಂಟಿ ಆಶ್ರಯದಲ್ಲಿ ಗುಜ್ಜಾಡಿ ಗ್ರಾಮ ಪಂಚಾಯತ್ ಸಮೀಪ ಆಯೋಜಿಸಲಾಗಿದ್ದ ಸಮೃದ್ಧಿ ಸಂಜೀವಿನಿ ಒಕ್ಕೂಟದ ‘ಸಂಜೀವಿನಿ ಸಂತೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಎನ್., ಸಂಜೀವಿನಿ ಸಂತೆ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ಸ್ಥಳೀಯವಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಾಹಿತಿ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರ ಸ್ಮರಣಾರ್ಥವಾಗಿ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಗಾಂಧಿ ಮೈದಾನದ ಸಮೀಪ ₹4.95 ಕೋಟಿ ವೆಚ್ಚದಲ್ಲಿ ಪುರಭವನ ನಿರ್ಮಾಣಕ್ಕೆ ಸಂಸದ ಬಿ. ವೈ. ರಾಘವೇಂದ್ರ ಅವರು ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಸಂದರ್ಭ ಅವರು ಮಾತನಾಡಿ, ನವ್ಯ ಕಾವ್ಯದ ಮೂಲಕ ಮನೆಮಾತಾದ ಸಾಹಿತಿ ಕವಿ ಗೋಪಾಲಕೃಷ್ಣ ಅಡಿಗ ಅವರ ಹೆಸರನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಪುರಭವನ ನಿರ್ಮಿಸಲಾಗುತ್ತಿದೆ. ಬೈಂದೂರು ಕ್ಷೇತ್ರದ ಜನರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಎಲ್ಲಾ ಸರಕಾರಿ ಕಛೇರಿಗಳನ್ನು ಈ ಭಾಗಕ್ಕೆ ತರಲು ಶ್ರಮಿಸಲಾಗುತ್ತಿದೆ ಎಂದರು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ಮಾತನಾಡಿ ಬೈಂದೂರು ಕ್ಷೇತ್ರದ ಅಭಿವೃದ್ಧಿಗಾಗಿ ನೀಡಲಾದ ಭರವಸೆಗಳನ್ನು ಬಹುಪಾಲು ಈಡೇರಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್., ಯೋಜನಾ ಆಯೋಜದ ಅಧಿಕಾರೇತರ ಸದಸ್ಯೆ ಪ್ರಿಯದರ್ಶಿನಿ ಕಮಲೇಶ್, ಜಿಪಂ ಮಾಜಿ ಸದಸ್ಯರುಗಳಾದ ಬಾಬು ಶೆಟ್ಟಿ ತಗ್ಗರ್ಸೆ, ಶಂಕರ ಪೂಜಾರಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗಿರಿಜಾ ಹೆಲ್ತ್‌ಕೇರ್ & ಸರ್ಜಿಕಲ್ಸ್ ವತಿಯಿಂದ ತಾಲೂಕಿನ ಬಸ್ರೂರು ಗ್ರಾಮದಲ್ಲಿ ಬಸ್ರೂರು ಆಟೋ ಚಾಲಕ ಮತ್ತು ಮಾಲಕರ ಸಂಘದ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇತ್ತಿಚಿಗೆ ಹಮ್ಮಿಕೊಳ್ಳಲಾಗಿತ್ತು. ಶಿಬಿರ ಉದ್ಘಾಟನೆ ವೇಳೆಯಲ್ಲಿ ಬಸ್ರೂರು ಆಟೋ ಚಾಲಕ ಮಾಲಕರ ಸಂಘದ ಅಧ್ಯ್ಕಷ ಅಶೋಕ್, ಗಿರಿಜಾ ಹೆಲ್ತ್‌ಕೇರ್ & ಸರ್ಜಿಕಲ್ಸ್ ಮಾರ್ಕೆಟಿಂಗ್ ಮ್ಯಾನೇಜರ್ ಯತೀಶ್ ಕುಮಾರ್, ಕೃಷ್ಣ, ಹೇಮಾ ಯತೀಶ್ ಈ ಸಂದರ್ಭ ಉಪಸ್ಥಿತರಿದ್ದರು. 150ಕ್ಕೂ ಹೆಚ್ಚಿನ ಸಾರ್ವಜನಿಕರು ಉಚಿತ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು. ಇದನ್ನೂ ಓದಿ:► ಕುಂದಾಪುರದಲ್ಲೀಗ ‘ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್. ಒಂದೇ ಸೂರಿನಲ್ಲಿ ಎಲ್ಲಾ ಬಗೆಯ ಸರ್ಜಿಕಲ್ ಉತ್ಪನ್ನಗಳು – https://kundapraa.com/?p=56260 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವಾರ್ಷಿಕ ವರ್ಧಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಅಖಂಡ ಭಜನೋತ್ಸವ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು. ಭಾನುವಾರ ವರ್ಧಂತಿಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನೋತ್ಸವಕ್ಕೆ ಚಾಲನೆ ಮೊದಲಾದ ಕಾರ್ಯಕ್ರಮಗಳು ನಡೆದರೆ ಸಂಜೆ 6 ಗಂಟೆಯಿಂದ ಶ್ರೀ ಮಹಾಸತಿ ಅಮ್ಮನವರ ದೇವಿಯ ನಗರೋತ್ಸವ, ಮಹಾಪೂಜೆ, ರಂಗಪೂಜೆ ಹಾಗೂ ವಿವಿಧ ಆಯ್ದ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಶನಿವಾರ ಬೆಳಿಗ್ಗೆ ಕಲಶಾಭಿಷೇಕ, ದೀಪ ವಿಸರ್ಜನೆ, ಮದ್ಯಾಹ್ನ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಭಜನಾ ಮಂಗಳೋತ್ಸವದ ಸಂದರ್ಭ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನಾವಡ, ದೇವಸ್ಥಾನದ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಶ್ರೀನಿವಾಸ ಕುಮಾರ್, ಶಂಕರ ಮೊಗವೀರ, ಮಂಜುನಾಥ ಆಚಾರ್ಯ, ಸತ್ಯಪ್ರಸನ್ನ,ಅಣ್ಣಪ್ಪ ಪೂಜಾರಿ (ಪಾತ್ರಿ), ಭಜನಾ ಉಸ್ತುವಾರಿಗಳಾದ ರಘುರಾಮ ಕೆ.ಪೂಜಾರಿ, ಕಿಶೋರ ಪೂಜಾರಿ ಸಸಿಹಿತ್ಲು, ಪ್ರಭಾಕರ ಟೀಚರ್, ಬಾಬು ಪೂಜಾರಿ, ಶಿಕ್ಷಕ ಮಂಜುನಾಥ ಬಿಲ್ಲವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಯಡ್ತರೆ ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಅವರು ಮಾತನಾಡಿ, ವೀರ ಪುರುಷರಾದ ಕೋಟಿ ಚೆನ್ನಯರ ದೈವಸ್ಥಾನವನ್ನು ಅದ್ಭುತವಾಗಿ ನಿರ್ಮಿಸಲಾಗಿದೆ. ಇಲ್ಲಿನ ಪರಿಸರವೂ ಸಂದರವಾಗಿದೆ ದೇವಳದ ವಠಾರ ಪ್ರವೇಶಿಸುತ್ತಿದ್ದಂತೆ ಇಲ್ಲಿನ ದೈವಿಶಕ್ತಿಯ ಅರಿವಾಗುತ್ತದೆ. ಬಿಲ್ಲವ ಸಮುದಾಯ ಬಂಧುಗಳು ಊರವರೊಂದಿಗೆ ಸೇರಿ ಈ ಭವ್ಯ ದೇಗುಲ ನಿರ್ಮಾಣ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸಂಸದ ಬಿ. ವೈ. ರಾಘವೇಂದ್ರ ಅವರ ತಾಯಿ ಮೈತ್ರಾದೇವಿ ಅವರ ಸ್ಮರಣಾರ್ಥ ವೈಯಕ್ತಿವಾಗಿ 2 ಲಕ್ಷ ರೂ. ಹಾಗೂ ಸರಕಾರದ ಅನುದಾನ ರೂ. 10 ಲಕ್ಷವನ್ನು ಗರಡಿಯ ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳಿಗೆ ತಕ್ಷಣ ಒದಗಿಸುವುದಾಗಿ ಅವರು ತಿಳಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಗರಡಿಯ ಪರವಾಗಿ ಸಂಸದರನ್ನು ಸನ್ಮಾನಿಸಿದರು. ಈ ಸಂದರ್ಭ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ ನಾವುಂದ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಡುಪಿ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ, ಬೈಂದೂರು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಮಯ್ಯಾಡಿಯಲ್ಲಿ ನೂತನವಾಗಿ ಆರಂಭಗೊಂಡ ಬೈಂದೂರು ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಉದ್ಘಾಟನೆ ಶನಿವಾರ ನಡೆಯಿತು. ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರು ಬೈಂದೂರು ನ್ಯಾಯಾಲಯದ ಕಛೇರಿ ಉದ್ಘಾಟಿಸಿ ಮಾತನಾಡಿ, ಬೈಂದೂರು ಭಾಗದಲ್ಲಿ 2800 ವಿವಿಧ ಪ್ರಕರಣಗಳಿದ್ದು ಇದ್ದು, ಒಂದು ಕೋರ್ಟ್‌ನಲ್ಲಿ 1000 ಸಾವಿರ ಪ್ರಕರಣಗಳಿಗೆ ಮಾತ್ರ ಅವಕಾಶ ನೀಡಬಹುದು ಆದರೆ ಈ ಕೇಸ್‌ಗಳಿಗೆ ಎರಡು ಶಾಶ್ವತ ಕೋರ್ಟ್‌ನ ಅವಶ್ಯಕತೆ ಇದೆ. ಈ ಭಾಗದಲ್ಲಿ ಕೋರ್ಟ್ ಆಗಿದ್ದು, ಹಲವಾರು ಜನರಿಗೆ ಸಹಾಯ ಸಹಕಾರವಾಗಿದೆ ಎಂದರು. ಕರ್ನಾಟಕ ಉಚ್ಛ ನ್ಯಾಯಾಲಯದ ಬೆಂಗಳೂರು ಇದರ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿ, ಈ ಇಪ್ಪತ್ತೊಂದನೇ ಶತಮಾನವನ್ನು ಭಾರತೀಯ ಶತಮಾನ ಎಂಬ ಮಾತಿದೆ ಅದರಂತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ನ್ಯಾಯಾಲಯ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಮತ್ತು ವಕೀಲರ ಸಂಘದ ಕಟ್ಟಡದ ಉದ್ಘಾಟನೆಯನ್ನು ಶನಿವಾರ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ನೆರವೇರಿಸಿದರು. ಬಳಿಕ ಅವರು ಮಾತನಾಡಿ ಸಮಸ್ಯೆ ಕಾಣಿಸಿಕೊಂಡಾಗ ಪರಿಹಾರವನ್ನು ಹುಡುಕಿಕೊಂಡು ನ್ಯಾಯಾಲಯಕ್ಕೆ ಬರುವವರಿಗೆ ಕಡಿಮೆ ಖರ್ಚಿನಲ್ಲಿ ನ್ಯಾಯವನ್ನು ಒದಗಿಸುವ ಹೊಣೆಗಾರಿಕೆಯನ್ನು ಸಂತೋಷದಿಂದ ನಿಭಾಯಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅಭಿಪ್ರಾಯ ವ್ಯಕ್ತಪಡಿಸಿದರು. ಕುಂದಾಪುರ ನಗರದ ಸಣ್ಣ ಜಾಗದಲ್ಲಿ ಸುಂದರವಾದ ನ್ಯಾಯಾಲಯ ಕಟ್ಟಡ ಎದ್ದು ನಿಂತಿದೆ. ಈ ಸೌಲಭ್ಯಗಳ ಸದುದ್ದೇಶವಾಗಬೇಕಾದರೆ ವಕೀಲರ ಹಾಗೂ ಕಕ್ಷಕಿದಾರರ ಪಾತ್ರವೂ ಅತಿ ಮುಖ್ಯವಾಗಿದೆ. ಕುಂದಾಪುರ ಪರಿಸರದಲ್ಲಿ ಹೇಳಿಕೊಳ್ಳುವಂತಾ ಐಟಿ/ಬಿಟಿ ಅಥವಾ ಕಾರ್ಪೋರೇಟ್ ಪ್ರಕರಣಗಳು ದಾಖಲಾಗುವುದಿಲ್ಲ. ಬಹುತೇಕ ಕೃಷಿ, ಜಮೀನು, ಮೋಟಾರ್ ಕಾಯಿದೆ ಹಾಗೂ ಗ್ರಹಚಾರ ಕೆಟ್ಟಾಗ ಬರುವ ಅಪರಾಧ ಪ್ರಕರಣಗಳು ದಾಖಲಾಗುತ್ತದೆ. ಅಪಘಾತ ಪ್ರಕರಣಗಳನ್ನು ಪರ್ಸೆಂಟೇಜ್ ಆಧಾರದಲ್ಲಿ ನಡೆಸಬೇಡಿ ಎಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಉಚ್ಛ ನ್ಯಾಯಾಲಯದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ‌ಉಡುಪಿ,ಫೆ.18: ರಾಜ್ಯದಲ್ಲಿ ಒಂದು ವರ್ಷಕ್ಕಿಂತ ಅಧಿಕ ದಿನಗಳಿಂದ ತೆರಿಗೆ ಪಾವತಿಸದೇ ಹೊರರಾಜ್ಯದ ವಾಹನಗಳು ಓಡಾಡುತ್ತಿರುವುದು ಕಂಡುಬಂದಿದ್ದು, ಹೊರ ರಾಜ್ಯದ ಮೋಟಾರು ವಾಹನ ಮಾಲೀಕರು ಈ ಪ್ರಕಟಣೆಯ ಒಂದು ವಾರದ ಒಳಗೆ ತಮ್ಮ ವಾಹನಗಳಿಗೆ ರಾಜ್ಯದ ತೆರಿಗೆ ಪಾವತಿಸಲು ಕ್ರಮ ಕೈಗೊಳ್ಳುವಂತೆ ಪಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹೊರರಾಜ್ಯದ ವಾಹನಗಳು ತೆರಿಗೆ ಪಾವತಿಸದೇ ಜಿಲ್ಲೆಯಲ್ಲಿ ಸಂಚರಿಸುತ್ತಿರುವುದು ಕಂಡುಬಂದಲ್ಲಿ ತಪಾಸಣೆ ವೇಳೆ ವಾಹನವನ್ನು ಮುಟ್ಟುಗೋಲು ಹಾಕಲಾಗುವುದು. ಹೊರರಾಜ್ಯದ ವಾಹನಗಳಿಗೆ ಬಿ.ಹೆಚ್ ಸೀರಿಸ್ ಸಂಖ್ಯೆಯನ್ನು ಪಡೆಯಲು ಇಚ್ಛಿಸುವ ಕೇಂದ್ರ ಸರ್ಕಾರಿ ನೌಕರರು, ತಮ್ಮ ಹೊಸ ವಾಹನದ ನೋಂದಣಿಯ ಸಮಯದಲ್ಲಿ ವಿಳಾಸ ಪುರಾವೆ, ತತ್ ಸಂಬಂಧ ಉದ್ಯೋಗ ಖಾತರಿ ಪತ್ರದ ಪ್ರತಿ, ಸಂಬಂಧಪಟ್ಟ ಇಲಾಖೆಯ ಸೇವಾ ಗುರುತಿನ ಚೀಟಿ, ಮೇಲಾಧಿಕಾರಿಗಳ ಪ್ರಮಾಣ ಪತ್ರ ಹಾಗೂ ರಹವಾಸಿ ಪ್ರಮಾಣ ಪತ್ರ ಹಾಜರುಪಡಿಸಿ, ಏಕರೂಪದ ತೆರಿಗೆಯನ್ನು ಪಾವತಿಸಲು ಅವಕಾಶವಿರುತ್ತದೆ. ಹೊರರಾಜ್ಯದ ವಾಹನಗಳು ರಾಜ್ಯಕ್ಕೆ ವಲಸೆ ಬಂದಾಗ ಇನ್‌ವಾಯ್ಸ್ ಅಥವಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನೂತನ ನ್ಯಾಯಾಲಯ ಕಟ್ಟಡ ಮತ್ತು ವಕೀಲರ ಸಂಘದ ಕಟ್ಟಡ ಶನಿವಾರ ಮಧ್ಯಾನ್ನ 2ಕ್ಕೆ ಸರ್ವೋಚ್ಚ ನ್ಯಾಯಾಲಯ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಉದ್ಘಾಟಿಸಲಿದ್ದಾರೆ ಎಂದು ಬಾರ್ ಅಸೋಸಿಯೇಷನ್ ಅಧ್ಯಕ್ಷ ನಿರಂಜನ್ ಹೆಗ್ಡೆ ಸಳ್ವಾಡಿ ಹೇಳಿದರು. ವಕೀಲರ ಸಂಘದ ಕಾರ್ಯದರ್ಶಿ ಎಚ್. ಪ್ರಮೋದ್ ಹಂದೆ ಮಾತನಾಡಿ, ನೂತನ ನ್ಯಾಯಾಲಯ ಕಟ್ಟಡ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ವಹಿಸಲಿದ್ದಾರೆ. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾದುಸ್ವಾಮಿ, ಲೋಕೋಪಯೋಗಿ ಇಲಾಖಾ ಸಚಿವ ಸಿ ಸಿ ಪಾಟೀಲ್, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜ್ಯ ಉಚ್ಚ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿ ಟಿ ಜಿ ಶಿವಶಂಕರೇ ಗೌಡ ಮತ್ತು ಕಾನೂನು ಇಲಾಖಾ ಪ್ರಧಾನ ಕಾರ್ಯದರ್ಶಿ ಟಿ…

Read More