Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀಮದ್ಭಗವದ್ಗೀತಾ ಜಯಂತಿ ಆಚರಣೆ ಸಮಿತಿ ಆಯೋಜಿಸಿದ ಸಪ್ತಾಹ ಗೀತಾ ಜಯಂತಿ ಉತ್ಸವ 2021 ಇದರ ವಲಯ ಮಟ್ಟದ ಸ್ಪರ್ಧಾ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಇತ್ತಿಚಿಗೆ ಜರುಗಿತು. ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿಯವರು ಬಹುಮಾನ ವಿತರಿಸಿ ಮಾತನಾಡಿ ಭಗವದ್ಗೀತಾ ಅಭಿಯಾನದಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಬಹುಮುಖ್ಯ. ಭಗವದ್ಗೀತೆ ಪಠಣದಿಂದಾಗಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹಾಗೂ ಮನೋಬಲ ಹೆಚ್ಚುವುದಲ್ಲದೇ ಶೈಕ್ಷಣಿಕ ಸಾಧನೆ, ಜ್ಞಾನಸಿದ್ಧಿ ಗಳಿಸಲು ಸಾಧ್ಯವಿದೆ. ಹೆಚ್ಚೆಚ್ಚು ಮಂದಿಗೆ ಇದರ ಪ್ರಯೋಜನ ದೊರೆಯುವಂತಾಬೇಕು ಎಂದರು. ಶ್ರೀಮದ್ಭಗವದ್ಗೀತಾ ಜಯಂತಿ ಆಚರಣೆ ಸಮಿತಿ ಅಧ್ಯಕ್ಷರಾದ ಬಿಜೂರು ರಾಮಕೃಷ್ಣ ಶೇರುಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರಿನ ರಾಮಕ್ಷತ್ರಿಯ ಮಾತೃ ಮಂಡಳಿ ಅಧ್ಯಕ್ಷರಾದ ಮಂಜುಳಾ ಶಿವಯ್ಯ, ರಾಮಕ್ಷತ್ರಿಯ ಯುವಕ ಸಮಾಜದ ಅಧ್ಯಕ್ಷರಾದ ದಿನಕರ ಪಟ್ವಾಲ್, ಉಪ್ಪುಂದ ರಾಘವೇಂದ್ರ ಮಠ ನವಗ್ರಹ ಮಂಟಪ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷರಾದ ರಮೇಶ್ ವೈದ್ಯ, ಶ್ರೀಮದ್ಭಗವದ್ಗೀತಾ ಜಯಂತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಗಂಡು ಕಡವೆಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಂಡು ಕಡವೆ ಕಳೆಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಬೈಂದೂರು ವಲಯ ಅರಣ್ಯಾಧಿಕಾರಿ ಕಿರಣ್ ಬಾಬು ಅವರ ಸಮಕ್ಷಮದಲ್ಲಿ ಮಹಜರು ಕಾರ್ಯ ನಡೆದಿದ್ದು ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷಾ ವರದಿ ಬಳಿಕ ಕಡವೆ ಸಾವಿಗೆ ತಿಳಿದುಬರಲಿದೆ. ಬೈಂದೂರು ವಲಯ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಬ್ರಹ್ಮ ರಥೋತ್ಸವ ಮಂಗಳವಾರ ವಿಜ್ರಂಭಣೆಯಿಂದ ನಡೆಯಿತು. ರಥೋತ್ಸವದ ಪ್ರಯುಕ್ತ ಡಿ.4 ರಿಂದ ದೇವಸ್ಥಾನದಲ್ಲಿ ಉತ್ಸವಾದಿಗಳು ಆರಂಭಗೊಂಡಿದ್ದವು. ಇಂದು ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಸಂಪನ್ನಗೊಂಡವು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಥೋತ್ಸವದ ಅಂಗವಾಗಿ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಪತಿಯಾಗ ನಡೆಯಿತು. ಊರ ಹಾಗೂ ಪರಊರಿನಿಂದ ಬಂದಿದ್ದ ಸಾವಿರಾರು ಭಕ್ತಾದಿಗಳು, ವಿನಾಯಕ ದೇವರು ರಥರೂಢನಾಗಿ ವಿರಾಜಮಾನವಾಗುವ ದೃಶ್ಯವನ್ನು ಕಣ್ತುಂಬಿಕೊಂಡರು. ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಅನುವಂಶಿಕ ಪರ್ಯಾಯ ಅರ್ಚಕರಾದ ಕೆ.ವೆಂಕಟರಮಣ ಉಪಾಧ್ಯಾಯ, ಅನುವಂಶಿಕ ಧರ್ಮದರ್ಶಿಗಳಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಕೆ.ವಿಠಲ ಉಪಾಧ್ಯಾಯ, ವ್ಯವಸ್ಥಾಪಕ ನಟೇಶ್ ಕಾರಂತ್ ಇದ್ದರು. ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಶ್ರೀಕಾಂತ್ ಕೆ, ಸರ್ಕಲ್ ಇನ್ಸ್ಪೆಕ್ಟರ್ ಗೋಪಿಕೃಷ್ಣ, ಎಸ್. ಐ ಸದಾಶಿವ ಗವರೋಜಿ ನೇತ್ರತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಡಿಸೆಂಬರ್ 10 ರಂದು ನಡೆಯಲಿರುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಗಳ ವಿಧಾನಪರಿಷತ್ನ ದ್ವೈವಾರ್ಷಿಕ ಚುನಾವಣೆ ಹಿನ್ನೆಲೆ, ಚುನಾವಣಾ ಕಾರ್ಯಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಶಾಂತಿಯುತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ, ರಾಜ್ಯ ಅಬಕಾರಿ ಕಾಯ್ದೆ 1967 ಕಲಂ 10(ಬಿ) ಹಾಗೂ ಪ್ರಜಾಪ್ರಾತಿನಿಧ್ಯ ಕಾಯ್ದೆ 1951 ರ ಕಲಂ 135(ಸಿ) ಅನ್ವಯ ಜಿಲ್ಲೆಯಾದ್ಯಂತ ಡಿ. 8 ರ ಸಂಜೆ 6 ಗಂಟೆಯಿAದ ಡಿ. 10 ರ ಸಂಜೆ 6 ರ ವರೆಗೆ ಎಲ್ಲಾ ರೀತಿಯ ಮದ್ಯದಂಗಡಿ, ಮದ್ಯ ಮಾರಾಟ ಡಿಪೋ, ಮದ್ಯ ತಯಾರಿಕಾ ಡಿಸ್ಟಿಲರಿ, ಸ್ಟಾರ್ ಹೋಟೆಲ್, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಹೋಟೆಲ್, ಕ್ಲಬ್ಗಳಲ್ಲಿ ಮದ್ಯ ಮಾರಾಟ, ಸರಬರಾಜು ಮಾಡುವುದನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ. ಆದೇಶಿಸಿರುತ್ತಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದಲ್ಲಿ ನಡೆದ ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಕಾರ್ಟೂನ್ ಹಬ್ಬದ ”ಕಾರ್ಟೂನ್ ಚಿತ್ರ” ಸ್ಪರ್ಧೆ ಪಿಯು ನಂತರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಬಿವಿಎ ವಿದ್ಯಾರ್ಥಿ ಪ್ರದೀಶ್ ಕೆ. ಪ್ರಥಮ ಸ್ಥಾನ ಪಡೆದಿದ್ದಾರೆ. ಸ್ಪರ್ಧೆಯ ನಿಯಮದಂತೆ ಹೆತ್ತವರ ಪರಿಕಲ್ಪನೆ ಹಾಗೂ ವಿದ್ಯಾರ್ಥಿಗಳು ಕಾರ್ಟೂನ್‌ಗಳನ್ನು ಚಿತ್ರಿಸುವ ಹಿನ್ನಲೆಯಲ್ಲಿ, ಪ್ರದೀಶ್ ಸಂಗೀತ ಪರಿಕರಗಳ ಮೂಲಕ ಕೋಮು ಸೌಹಾರ್ದತೆ ಬಿಂಬಿಸುವ ಚಿತ್ರವನ್ನು ಬಿಡಿಸಿದರು. ಆ ಮೂಲಕ ಪ್ರಥಮ ಬಹುಮಾನವಾಗಿ ರೂ 10,000 ನಗದು ಹಾಗೂ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಪ್ರದೀಶ್‌ ಪೇತ್ರಿಯ ಕೆ. ಶ್ಯಾಮ್‌ಪ್ರಸಾದ್ ಹಾಗೂ ಪ್ರಸನ್ನ ಪಿ. ಭಟ್ ಅವರ ಪುತ್ರ. ವಿದ್ಯಾರ್ಥಿಯ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ, ಪ್ರಾಚಾರ‍್ಯ ಕುರಿಯನ್ ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೇಶಕ್ಕೆ ಅತಿ ಹೆಚ್ಚು ಬ್ಯಾಂಕುಗಳನ್ನು ಕೊಡುಗೆಯಾಗಿ ನೀಡಿದ ಅವಳಿ ಜಿಲ್ಲೆ ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ಬ್ಯಾಂಕಿಂಗ್ ಉದ್ಯೋಗಕ್ಕೆ ಮತ್ತು ಬ್ಯಾಂಕ್ ಪರೀಕ್ಷೆ ಎದುರಿಸಲು ಅತಿ ಹೆಚ್ಚು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಕೆನರಾ ಬ್ಯಾಂಕ್ ರಿಕವರಿ ಮ್ಯಾನೇಜರ್ ಪ್ರಭಾಕರ ಶೆಟ್ಟಿ ಹೇಳಿದರು. ಇಲ್ಲಿನ ಶಿಕ್ಷಪ್ರಭಾ ಅಕಾಡೆಮಿಯಲ್ಲಿ ಬ್ಯಾಂಕಿಂಗ್ ಎಂ.ಬಿ.ಎ ಪರೀಕ್ಷೆ ತರಬೇತಿಯ ನೂತನ ಬ್ಯಾಚ್‌ನ್ನು ಉದ್ಘಾಟನೆಗೊಳಿಸಿ ಮಾತನಾಡಿ ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು ಅದರಲ್ಲಿ ಸಿಂಹಪಾಲು ಅನ್ಯರಾಜ್ಯದ ವಿದ್ಯಾರ್ಥಿಗಳ ಪಾಲಾಗುತ್ತಿರುವುದು ಕಳವಳಕಾರಿ ಸಂಗತಿ. ವಿದ್ಯಾರ್ಥಿಗಳು ಪದವಿ ಹಂತದಲ್ಲೇ ಧೃಢ ನಿರ್ಧಾರ ಮಾಡಿ ಪ್ರಯತ್ನ ನಡೆಸಿದರೆ ನಿರಾಯಸವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಪ್ರಭಾ ಅಕಾಡೆಮಿ ಮುಂದಾಳತ್ವ ವಹಿಸಿರುವುದು ಸಂತಸದ ಸಂಗತಿ ಎಂದರು. ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್‌ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಮಾತನಾಡಿ ನಮ್ಮ ಸಂಸ್ಥೆಯ ಗುಣಮಟ್ಟ ಶಿಕ್ಷಕರು ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ ನೀಡಲು ಸಿದ್ದರಿದ್ದು ವಿದ್ಯಾರ್ಥಿಗಳು ಬದ್ದತೆಯೊಂದಿಗೆ ತರಗತಿಗೆ ಹಾಜರಾಗಬೇಕು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕೊಲ್ಲೂರು ಹಾಗೂ ಆರಕ್ಷಕ ಠಾಣೆ ಜಂಟಿ ಆಶ್ರಯದಲ್ಲಿ ಅಪರಾಧ ತಡೆ ಮಾಸಚರಣೆ ೨೦೨೧ರ ಪ್ರಯುಕ್ತ ವಿದ್ಯಾರ್ಥಿಗಳಿಗೆ ಅಪರಾಧ ತಡೆಯ ಬಗ್ಗೆ ಕೊಲ್ಲೂರಿನ ಠಾಣಾಧಿಕಾರಿ ನಾಸಿರ್ ಹುಸೇನ್‌ರವರು ಮಾಹಿತಿ ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಎಸ್ ಅರುಣ್‌ಪ್ರಕಾಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಗೋಪಾಲಕೃಷ್ಣ ಜಿ.ಬಿ, ಪೂರ್ಣಿಮಾ ಎನ್ ಜೋಯಿಸ್, ಸುಕೇಶ್ ಶೆಟ್ಟಿ ಹೊಸಮಠ, ರಾಮನಾಯ್ಕ ಕೆ.ಬಿ, ಪ್ರ.ದ.ಸಹಾಯಕರಾದ ದಿನಕರ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ನಾಗರಾಜ ಅಡಿಗ ಕೆ. ಕಾರ್ಯಕ್ರಮ ನಿರ್ವಹಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಪರಾಧಗಳು ಸಂಭವಿಸಿದಾಗ ಪೋಲಿಸರಿದ್ದಾರೆ ಎಂದುಕೊಳ್ಳುವ ಮೊದಲು ಅಪರಾಧ ಸಂಭವಿಸದಂತೆ ಎಚ್ಚರವಹಿಸಬೇಕಿದೆ. ಅದು ಕೂಡ ನಮ್ಮದೇ ಕರ್ತವ್ಯವೂ ಆಗಿದೆ. ಬದುಕಿನ ಭದ್ರತೆಗೆ ನೀವೆಲ್ಲರೂ ಪೋಲಿಸ್‌ನಂತೆಯೇ ಎಚ್ಚರದಲ್ಲಿ ಇರಬೇಕು ಎಂದು ಕುಂದಾಪುರ ಪೋಲಿಸ್ ಉಪಾಧೀಕ್ಷಕರಾದ ಶ್ರೀಕಾಂತ್ ಕೆ. ಹೇಳಿದರು. ಅವರು ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜನೆಯ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಬದಲಾಗಿ ಅದನ್ನು ದುರುಪಯೋಗ ಮಾಡಿಕೊಳ್ಳಬಾರದು. ಅಪರಾಧಗಳು ನಮ್ಮ ಬದುಕಿನ ಕನಸನ್ನು ಕಸಿದುಕೊಳ್ಳುತ್ತವೆ. ಹಾಗಾಗಿ ಕೆಟ್ಟದನ್ನು ನಾವು ಯೋಚಿಸಬಾರದು ಕುಂದಾಪುರ ಪೊಲೀಸ್ ಉಪನಿರೀಕ್ಷಕ ಸದಾಶಿವ ಆರ್ ಗವರೋಜಿ ಮಾತನಾಡಿ ಪ್ರಸ್ತುತ ಅನೇಕ ಹೊಸ ಹೊಸ ರೀತಿಯ ವಂಚನೆಯ ಜಾಲಗಳಿವೆ. ಅವುಗಳ ಪ್ರಚೋದನೆಗೆ ನಾವು ಒಳಗಾಗಬಾರದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ವಹಿಸಿದ್ದರು. ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುಧಾ ಪ್ರಭು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಗೀತೆಯ ಸಾರ ಸಕಲರಿಗೂ ಉತ್ತಮ ಜೀವನಕ್ಕೆ ಬೆಳಕು ನೀಡಿದಂತೆ ಶ್ರದ್ಧೆಯಿಂದ ಮಾಡುತ್ತಿರುವ ಗೀತ ಪ್ರಸಾರ ಕಾರ್ಯಕ್ರಮ ಬೈಂದೂರಿನಲ್ಲಿ ಅತಿ ಯಶಸ್ವಿಯಾಗಲು ಇಲ್ಲಿಯ ಕಾರ್ಯಕರ್ತರ ಶ್ರಮ ಅಪಾರ ಎಂದು ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು. ಅವರು ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀಮದ್ಭಗವದ್ಗೀತಾ ಜಯಂತಿ ಆಚರಣೆ ಸಮಿತಿ ಬೈಂದೂರು ಗೀತಾ ಜಯಂತಿ ಉತ್ಸವ 2021 ಇದರ ವಲಯ ಮಟ್ಟದ ಸ್ಪರ್ಧಾ ಕೂಟದ ಉದ್ಘಾಟಿಸಿ ಮಾತನಾಡಿದರು. ಶ್ರೀಮದ್ಭಗವದ್ಗೀತಾ ಜಯಂತಿ ಆಚರಣೆ ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ಶೇರುಗಾರ್ ಬಿಜೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧಾ ಸಮಿತಿಯ ಮುಖ್ಯಸ್ಥರಾದ ವಿಶ್ವೇಶ್ವರ ಅಡಿಗ ಸ್ಪರ್ಧಾ ನಿಯಮಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಬೈಂದೂರು ರಾಮಕ್ಷತ್ರಿಯ ಸಮಾಜ ಅಧ್ಯಕ್ಷರಾದ ಪರಮೇಶ್ವರ ಹೋಬಳಿದಾರ್, ಬೈಂದೂರು ರತ್ತೂಬಾಯಿ ಜನತಾ ಮುಖ್ಯೋಪಾಧ್ಯಾಯರಾದ ಆನಂದ ಮದ್ದೋಡಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ವಲಯ ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ್, ರಾಮಕ್ಷತ್ರಿಯ ಮಾತೃ ಮಂಡಳಿ ಅಧ್ಯಕ್ಷರಾದ ಮಂಜುಳಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಲೇಖಕನಾದವನು ಸದಾ ಸೃಜನಶೀಲತೆಯೊಂದಿಗೆ ಓದುಗರಿಗೆ ನವನವೀನ ವಿಚಾರಗಳು ತಿಳಿಸುತ್ತಿರಬೇಕು. ಸಾಮಾನ್ಯವಾಗಿ ಸುದೀರ್ಘವಾಗಿರುವ ಪುಸ್ತಕದ ಓದು ಜ್ಞಾನಶೀಲ ಮಾತ್ರವಲ್ಲ ಪರಿವರ್ತನಾಶೀಲವೂ ಆಗಿರಬೇಕು. ಹೀಗಿನ ಆಶಯಕ್ಕೆ ಪೂರಕವಾಗಿ ಮನಲೋಕದಲ್ಲಿ ಪ್ರಕಟವಾಗಿರುವ ಎಲ್ಲ ಲೇಖನಗಳು ಇತಿಹಾಸದ ರೋಚಕ ಮಾಹಿತಿಗಳು ಮತ್ತು ವರ್ತಮಾನದ ವಾಸ್ತವಗಳಿಂದ ಕೂಡಿದೆ ಎಂದು ಮಂಗಳೂರಿನ ಹಿರಿಯ ಲೇಖಕಿ-ಸಂಶೋಧಕಿ ರೋಹಿಣಿ ಬಿ ಎಮ್ ಹೇಳಿದರು ಅವರು ಗಾಂಧಿ ವಿಚಾರ ವೇದಿಕೆ ಬ್ರಹ್ಮಾವರ ಘಟಕ ಹಾಗೂ ಮಿತ್ರ ಮಂಡಳಿ ಕೋಟ ಸಹಯೋಗದೊಂದಿಗೆ ಕೋಟ ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿಯಲ್ಲಿ ಭಾನುವಾರ ಆಯೋಜಿಸಲಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಷ್ತಾಕ್ ಹೆನ್ನಾಬೈಲ್ ರವರ “ಮನಲೋಕ” ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ ಸಾಹಿತ್ಯಲೋಕದಲ್ಲಿ ದಿನದಿಂದ ದಿನಕ್ಕೆ ಓದುಗರ ಪ್ರೀತಿಗೆ ಪಾತ್ರರಾಗುತ್ತಿರುವ ವಿಶಿಷ್ಟ ಶೈಲಿಯ ಲೇಖಕ ಮುಷ್ತಾಕ್ ಹೆನ್ನಾಬೈಲರ ಭಾಷೆ, ವಿಚಾರ, ವಿವೇಕವು ಮುಂಬರುವ ದಿನಗಳಲ್ಲಿ ಕನ್ನಡದ ಸಮಸ್ತ ಓದುಗರಿಗೆ ಸದಾಕಾಲ ರೋಮಾಂಚಕ ಮೂಡಿಸುವುದು ನಿಶ್ಚಿತ. ಅವರೊಬ್ಬ ನಾನು ಕಂಡ ಅದ್ಭುತ ಅಧ್ಯಯನಶೀಲ ಪರಿಪೂರ್ಣ ಲೇಖಕ…

Read More