Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀರಾಮ ಫೈನಾನ್ಸ್ ಕೋ. ಲಿ. ಇದರ ಸ್ಥಳಾಂತರಿತ ಶಾಖಾ ಕಛೇರಿ ಇಲ್ಲಿನ ಸೈಂಟ್ ಮರಿಯಾ ಕಟ್ಟಡದಲ್ಲಿ ಸೋಮವಾರ ಶುಭಾರಂಭಗೊಂಡಿತು. ಶ್ರೀರಾಮ ಫೈನಾನ್ಸ್ ಉಪಾಧ್ಯಕ್ಷ ಹಾಗೂ ಝೋನಲ್ ಬಿಸಿನೆಸ್ ಹೆಡ್ ಶರಶ್ಚಂದ್ರ ಭಟ್ ಕಕ್ಕುಂಜೆ ನವೀಕೃತ ಶಾಖೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕುಂದಾಪುರ ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್, ಉದ್ಯಮಿಗಳಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ದೇವಾನಂದ್ ಶೆಟ್ಟಿ, ಮಂಗಳೂರು ಝೋನ್ ಕಲೆಕ್ಷನ್ ಹೆಡ್ ನಾಗರಾಜ ಬಿ., ಟೆರಿಟರಿ ಲೀಗಲ್ ಹೆಡ್ ಉಲ್ಲಾಸ್ ವಿ. ನಾಯಕ್ ಅತಿಥಿಗಳಾಗಿದ್ದರು. ರೀಜನಲ್ ಕ್ರೆಡಿಟ್ ಹೆಡ್ ಮಹೇಶ್ ಕುಮಾರ್ ಸಿ.ಹೆಚ್., ರೀಜನಲ್ ಬಿಸಿನೆಸ್ ಹೆಡ್ ಸದಾಶಿವ್, ರೀಜನಲ್ ಕಛೇರಿ ಸಿಬ್ಬಂದಿಗಳಾದ ಗಣಪತಿ ನಾಯ್ಕ್, ನವೀನ್ ಕುಮಾರ್, ಯೋಗೀಶ್, ಅಮಿತ್, ಕುಂದಾಪುರ ಬ್ರ್ಯಾಂಚ್ ಮ್ಯಾನೇಜರ್ ಸಂದೀಪ್ ಕುಮಾರ್, ಕಲೆಕ್ಷನ್ ಮ್ಯಾನೇಜರ್ ರಾಘವೇಂದ್ರ ಜಿ., ಉಪಸ್ಥಿತರಿದ್ದರು. ಈ ವೇಳೆ ಸಂಸ್ಥೆಯಿಂದ 14 ಮಂದಿ ಗ್ರಾಹಕರನ್ನು ಸನ್ಮಾನಿಸಲಾಯಿತು. ರೀಜನಲ್ ಬಿಜಿನೆಸ್ ಹೆಡ್ ಸದಾಶಿವ್ ಸ್ವಾಗತಿಸಿ, ರೀಜನಲ್ ಸೇಲ್ಸ್ ಹೆಡ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಗಂಗಾನಾಡು-ನೀರೋಡಿಯಲ್ಲಿ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ 9ನೇ ಗೃಹ ’ಶ್ರೀ ವರಲಕ್ಷ್ಮೀ ನಿಲಯ’ ಸೋಮವಾರ ಉದ್ಘಾಟನೆಗೊಂಡಿತು. ನಿಪ್ಪಾಣಿ ಸಧರ್ಮ ಓಂಶಕ್ತಿ ಮಠದ ಪೀಠಾಧಿಪತಿ ಶ್ರೀ ಅರುಣಾನಂದ ಸ್ವಾಮೀಜಿ ನೂತನ ಗೃಹವನ್ನು ಉದ್ಘಾಟಿಸಿ ಆಶೀರ್ವದಿಸಿ, ಜೀವನದಲ್ಲಿ ಪಂಚಯಜ್ಞಗಳನ್ನು ಮಾಡುವುದು ಅಗತ್ಯವಾಗಿದೆ. ನಮ್ಮನ್ನು ಸೃಷ್ಠಿಸಿದ ದೇವರಿಗೆ ಸಲ್ಲಿಸುವ ದೇವಯಜ್ಞ, ನಮ್ಮನ್ನು ಪ್ರಪಂಚಕ್ಕೆ ಪರಿಚಯಿಸಿದ ಹೆತ್ತವರಿಗೆ ಸಲ್ಲಿಸುವ ಪಿತೃಯಜ್ಞ, ನಮಗೆ ಸಂಸ್ಕಾರ, ಸಂಸ್ಕೃತಿ ತಿಳಿಸಿಕೊಡುವ ಮೂಲಕ ಬದುಕಿಗೆ ಉತ್ತಮ ಮಾರ್ಗ ತೋರಿದ ಗುರು, ಹಿರಿಯರಿಗಾಗಿ ಸಲ್ಲಿಸುವ ಋಷಿಯಜ್ಞ, ಯಾವುದೇ ಫಲಾಪೇಕ್ಷೆ ಇಲ್ಲದೇ ಉಪಕಾರ ಮಾಡುತ್ತಿರುವ ಪಕೃತಿ ಪೂಜೆಯ ಭೂತಯಜ್ಞ, ಸಮಾಜದಲ್ಲಿ ಬದುಕುತ್ತಿರುವ ನಾವು ಸಮಾಜಕ್ಕೇನು ನೀಡಿದ್ದೇವೆ ಎನ್ನುವ ಕಲ್ಪನೆಯೇ ಸ್ವಯಜ್ಷ ಎಂದರು. ತನ್ನ ಸಂಪಾದನೆಯ ಒಂದು ಭಾಗವನ್ನು ಈ ಭಾಗದ ಬಡವರ ಅಭ್ಯುದಯಕ್ಕಾಗಿ ವಿನಿಯೋಗಿಸುತ್ತಿರುವುದು ದೇವರಿಗೂ ಪ್ರೀಯವಾದ ಕಾರ್ಯವಾಗಿದೆ. ಸತ್ಪಾತ್ರರಿಗೆ ಮಾಡಿದ ದಾನ ಪರಿಪೂರ್ಣ ಎಂದೆನಿಕೊಳ್ಳುತ್ತದೆ. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು,ಸೆ.26: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾನವರಾತ್ರಿ ಮಹೋತ್ಸವಕ್ಕೆ ಸೋಮವಾರಚಾಲನೆ ನೀಡಲಾಯಿತು. ಬೆಳಗ್ಗೆ 8:30 ಗಂಟೆಗೆ ಗಣಪತಿ ಪೂಜೆಯೊಂದಿಗೆ ನವರಾತ್ರಿ ಪರ್ವಕ್ಕೆ ಚಾಲನೆ ನೀಡಿ ಶ್ರೀದೇವಿಗೆ ವಿಶೇಷ ಪೂಜೆ, ಮಂಗಳಾರತಿ ನಡೆಯಿತು. ಬಳಿಕ ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಮಾತನಾಡಿ 9 ದಿನಗಳ ಕಾಲ ನಡೆಯುವ ಉತ್ಸವಕ್ಕೆ ದೇವಳ ಸಕಲ ಸಿದ್ಧತೆ ಮಾಡಿಕೊಂಡಿದ್ದು ಊರ- ಪರವೂರಿನಿಂದ ಭಕ್ತರಿಗೋಸ್ಕರ ವಿಶೇಷ ಸೌಕರ್ಯ ಒದಗಿಸಲಾಗಿದೆ. ಪ್ರತಿದಿನ ಶತರುದ್ರದೊಂದಿಗೆ ತಾಯಿಯ ಸನ್ನಿಧಿಯಲ್ಲಿ ಪೂಜೆ, ಸುಹಾಸನಿಯರ ಪೂಜೆ, ಚಂಡಿಕಾ ಯಾಗ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನವರಾತ್ರಿ ಸಂದರ್ಭ ನಡೆಯುತ್ತವೆ. ಪ್ರತಿದಿನ ನಡೆಯುವ ಸಾಂಸ್ಕೃತಿಕ ಉತ್ಸವದಲ್ಲಿ ಚಂಡೆ, ಸಂಗೀತ, ನೃತ್ಯ, ಯಕ್ಷಗಾನ, ಭಜನೆ ಎಲ್ಲವೂ ನಡೆಯಲಿದೆ. ವಿಜಯ ದಶಮಿಯಂದು ವಿಶೇಷವಾಗಿ ದೇವಿಗೆ ಸೇವೆಯಾಗಿ ಹುಲಿವೇಷ ನೃತ್ಯ ಇರಲಿದೆ. ಈ ಭಾರಿ ರಥೋತ್ಸವ ಅ.04ರಂದು ರಥೋತ್ಸವ ಮಧ್ಯಾಹ್ನ 1-30 ಗಂಟೆಗೆ ನಡೆಯಲಿದೆ. ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಮ್ಮಲ್ಲಿನ ಕೌಶಲ್ಯದ ಮೂಲಕ ಸಮುದಾಯವನ್ನು ಅಭಿವೃದ್ಧಿಗೆ ಪ್ರತಿಯೊಬ್ಬರೂ ನೆರವಾಗಬಹುದಾಗಿದೆ. ಆಸಕ್ತಿ ಆಧಾರಿತ ಕಲಿಕೆಯಿಂದ ವಿವಿಧ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಲು ಸಾಧ್ಯವಿದೆ ಅಲ್ಲದೇ ಅದರಿಂದ ಸಮಾಜಕ್ಕೂ ಒಳಿತಾಗಲಿದೆ ಎಂದು ಜಿಲ್ಲಾ ಲಿಟರೆಸಿ ಛೇರ್ಮನ್ ಶ್ರೀಕಾಂತ್ ಪ್ರಭು ಹೇಳಿದರು. ರೋಟರಿ ಜಿಲ್ಲೆ 3182 ರೋಟರಿ ಕ್ಲಬ್ ಬೈಂದೂರು ಆಶ್ರಯದಲ್ಲಿ ಇಲ್ಲಿನ ರೋಟರಿ ಭವನದಲ್ಲಿ ಆಯೋಜಿಸಲಾದ ಝೋನಲ್ ಸೆಮಿನಾರ್ ಆನ್ ಲಿಟರಸಿ ‘ಜ್ಞಾನಾಂಬುಧಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಿಗ್ರಿ ಗಳಿಸುವುದಕ್ಕೂ, ಸಾಕ್ಷರರಾಗುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ರೋಟರಿ ಜಿಲ್ಲೆ 3182 ಝೋನ್ 1ರ ಅಸಿಸ್ಟೆಂಟ್ ಗವರ್ನರ್ ಉಮೇಶ್ ಪುತ್ರನ್, ಝೋನಲ್ ಟ್ರೇನರ್ ರವಿರಾಜ್ ಶೆಟ್ಟಿ, ಝೋನಲ್ ಲೆಫ್ಟಿನೆಂಟ್ಗಳಾದ ಪ್ರವೀಣ ಶೆಟ್ಟಿ, ಸಂದೀಪ್ ಕುಮಾರ್ ಶೆಟ್ಟಿ, ಪೂರ್ಣಿಮಾ ಭವಾನಿಶಂಕರ್, ಝೋನಲ್ ಲಿಟರಸಿ ಕೋ-ಆರ್ಟಿನೇಟರ್ ಮಂಜುನಾಥ ಶೆಟ್ಟಿ, ಡಿಸ್ಟಿಕ್ ಲಿಟರಸಿ ಸಬ್ ಕಮಿಟಿ ಉಪಾಧ್ಯಕ್ಷ ಐ. ನಾರಾಯಣ, ಬೈಂದೂರು ರೋಟರಿ ಲಿಟರೆಸಿ ಛೇರ್ಮನ್ ಸುಬ್ರಹ್ಮಣ್ಯ ಜಿ. ಬೈಂದೂರು ರೋಟರಿ ಅಧ್ಯಕ್ಷ ಎಚ್. ಉದಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಳಮದ್ದಳೆ ಜ್ಞಾನಯಜ್ಞ ಕಾರ್ಯಕ್ರಮಕ್ಕೆ ಹೆಚ್ಚು ಹೆಚ್ಚು ಯುವಪೀಳಿಗೆಯನ್ನು ಕರೆತರುವ ಪ್ರಯತ್ನ ಮಾಡಿದರೆ ಇದು ಇನ್ನಷ್ಟು ಜನಪ್ರೀಯತೆ ಪಡೆದುಕೊಳ್ಳಬಹುದು. ನಮ್ಮ ಬದುಕಿಗೆ ಬೇಕಾದ ಪ್ರತಿಯೊಂದು ಜೀವನ ಸಂದೇಶಗಳು ಈ ಯಕ್ಷಗಾನ ತಾಳಮದ್ದಳೆಯಲ್ಲಿ ದೊರೆಯುತ್ತದೆ. ಎಂದು ಮಾಜಿ ಸಚಿವ ಪ್ರಮೋದ ಮಧ್ವರಾಜ್ ಹೇಳಿದರು. ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟ್ ಪ್ರಸ್ತುತಿಯಲ್ಲಿ ನಾಗೂರು ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದ ಕೋಟ ವೈಕುಂಠ ನಾಯ್ಕರ ಸ್ಮರಣ ವೇದಿಕೆಯಲ್ಲಿ ನಡೆದ ೮ನೇ ವರ್ಷದ ಯಕ್ಷಗಾನ ತಾಳಮದ್ದಲೆ ಸಮಾರೋಪದಲ್ಲಿ ಅವರು ಮಾತನಾಡಿದರು. ಧಾರೇಶ್ವರರಂತಹ ಪ್ರತಿಭಾವಂತ ಮತ್ತು ಅನುಭವಿ ವೃತ್ತಿ ಕಲಾವಿದರು ಯಕ್ಷಗಾನ ಸಂಘಟನೆ, ಪ್ರಸಾರದಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು. ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರು ಮಾತನಾಡಿ, ನಮ್ಮ ಸಮಾಜವು ಉತ್ತಮ ಸಂಸ್ಕಾರಯುತವಾಗಿ ಮೂಡಿಬಂದು ನಮ್ಮ ಸಂಸ್ಕೃತಿ, ಪರಂಪರೆ, ಧರ್ಮ, ಆಧ್ಯಾತ್ಮಿಕತೆಗಳ ಏಳಿಗೆಗಳು ಯಕ್ಷಗಾನದಿಂದಲೇ ಉಳಿದು ಬೆಳೆಯಬಲ್ಲದು. ಇಂದು ಪರಿಶುದ್ಧ ಕನ್ನಡ ಭಾಷೆ ಉಳಿದು ಅಭಿವೃದ್ಧಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿಬೈಂದೂರು: ಕರ್ನಾಟಕ ಮುಸ್ಲಿಂ ಜಮಾಅತ್ ಬೈಂದೂರು ತಾಲೂಕು ಅಧ್ಯಕ್ಷರಾಗಿ ನ್ಯಾಯವಾದಿ ಇಲ್ಯಾಸ್ ಕೆ. ಎಂ., ಪ್ರಧಾನ ಕಾರ್ಯದರ್ಶಿಯಾಗಿ ಶಭ್ಬೀರ್ ಬೈಂದೂರು ಆಯ್ಕೆಯಾಗಿದ್ದಾರೆ. ನೂತನ ಸಮಿತಿ ಪದಾಧಿಕಾರಿಗಳಾಗಿ ಕೋಶಾಧಿಕಾರಿ ಸಯ್ಯಿದ್ ಅಜ್ಮಲ್ ಶಿರೂರು, ಸಂ.ಕಾರ್ಯದರ್ಶಿಯಾಗಿ ಮುಸ್ತಫ ಬಡಾಕೆರೆ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಖಾದರ್ ಬಡಾಕೆರೆ, ಅಂದು ಕಾಯಿ ಹಾಜಿ ಚಾತನಕೆರೆ, ಅಬ್ದುಲ್ ಗಫ್ಫಾರ್ ಶಿರೂರು, ಸುಲ್ತಾನ್ ಬೈಂದೂರು, ಕಾರ್ಯದರ್ಶಿಗಳಾಗಿ ಕೊಂಬಾಳಿ ಕೆ.ಎಂ.ಎಚ್ ಝುಹುರಿ, ಖಾಸಿಂ ನಾವುಂದ, ಜಾಫರ್ ಬೈಂದೂರು, ಅಬ್ಬಾಸ್ ಮರವಂತೆ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸುಂದರ ಸಮಾಜ ನಿರ್ಮಾಣದ ಮೂಲಕ ದೇಶವನ್ನು ಕಟ್ಟುವ ಕೆಲಸ ಮಡಬೇಕು. ಎಲ್ಲವನ್ನೂ ಕೊಟ್ಟ ಸಮಾಜದ ಋಣವನ್ನು ತೀರಿಸುವ ನೆಲೆಯಲ್ಲಿ ಜಿಸಿಐನಂತಹ ಸಂಘಟನೆಯ ಮೂಲಕ ಸಮಾಜಮುಖಿ ಕಾರ್ಯಗಳು ನಡೆಯುವಂತಾಗಬೇಕು. ಉತ್ತಮ ಜನರ ಸಹವಾಸ ಗೆಳೆತನ ಬೆಳೆಸಿಕೊಂಡರೆ ಮಾತ್ರ ಜೀವನ ಉತ್ತಮವಾಗಲು ಸಾಧ್ಯ ಎಂದು ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿದರು. ಉಪ್ಪುಂದ ಮಾತೃಸ್ರೀ ಸಭಾಭವನದಲ್ಲಿ ಒಂದು ವಾರಗಳ ಕಾಲ ನಡೆದ ಜೇಸಿಐ ಸಪ್ತಾಹ ಸಮ್ಮಿಲನದ ಸಮಾರೋಪದಲ್ಲಿ ಮಾತನಾಡಿದರು. ವಿದ್ಯಾರ್ಥಿವೇತನಕ್ಕಿಂತ ಮಾಹಿತಿ ತರಬೇತಿ ಶಿಬಿರಗಳಿಂದ ಹೆಚ್ಚಿನ ಲಾಭ ವಿದ್ಯಾರ್ಥಿಗಳಿಗೆ ದೊರೆಯುತ್ತದೆ. ಜ್ಞಾನವನ್ನು ವಿಸ್ತರಿಸಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಲು ಅವಶ್ಯವಿರುವ ಮಾಹಿತಿ ತರಬೇತಿ ಪಡೆದುಕೊಳ್ಳಲು ಜೆಸಿಐ ವತಿಯಿಂದ ಕಾರ್ಯಗಾರಗಳನ್ನು ಆಯೋಜಿಸಬೇಕು. ಹುಟ್ಟುವಾಗ ಏನನ್ನೂ ತರದ ನಾವುಗಳು ಸಾಯುವಾಗಲೂ ಬರಿಕೈಯಲ್ಲಿ ಹೋಗುತ್ತೇವೆ. ಹುಟ್ಟು ಸಾವಿನ ನಡುವಿನ ನಮ್ಮ ಬದುಕಿನಲ್ಲಿ ಸಮಾಜಕ್ಕೆ ಒಳ್ಳೆಯದ್ದನ್ನೇ ಮಾಡಬೇಕಿದೆ. ಇದು ಭಗವಂತನಿಗೆ ನಾವು ಸಲ್ಲಿಸುತ್ತಿರುವ ತೆರಿಗೆಯಾಗಿದೆ ಎಂದರು. ಉಪ್ಪುಂದ ಜೆಸಿಐ ಘಟಕದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಡುಪಿ ಜಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಅನುಪಮ ಸೇವೆ ನೀಡಿದ ರಾಜಕೀಯ ಪರಿಣಿತರ ಆಡಳಿತ ವ್ಯವಸ್ಥೆ, ನ್ಯಾಯಾಂಗ ತಜ್ಞರನ್ನು ಸ್ಮರಿಸುವುದು, ಅವರು ನೀಡಿದ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಆದರ್ಶವಗುವಂತೆ ನೆನಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಯಾವ ರೀತಿ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕೆಂದು ಸಂಕಲ್ಪ ಕೈಗೊಳ್ಳಲು ಇದು ಸಕಾಲ ಎಂದು ಇಂದನ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ನಾಗೂರು ಒಡೆಯರ ಮಠಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಬೈಂದೂರು ತಾಲೂಕು ಆಡಳಿತದ ವತಿಯಿಂದ ಭಾನುವಾರ ನಡೆದ ಉಡುಪಿ ಜಿಲ್ಲಾ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ರಜತ ಸಂಭ್ರಮದಲ್ಲಿ ನಾವು ಜಿಲ್ಲೆಯ ಹಳೆಯ ನೆನಪುಗಳನ್ನು ಮೆಲುಕು ಹಾಕುವುದರೊಂದಿಗೆ ಹೊಸ ದೃಷ್ಠಿಕೋನದಿಂದ ಹೊಸ ವಿಚಾರಗಳನ್ನು ಯೋಚಿಸಬೇಕಾಗಿದೆ. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆ ಆರೋಗ್ಯ, ಪ್ರವಾಸೋದ್ಯಮ, ಬೀಚ್ ಟೂರಿಸಂ, ಕೃಷಿ, ಸಹಕಾರ, ಬ್ಯಾಂಕಿಂಗ್, ಧಾರ್ಮಿಕ ಹಾಗೂ ಆಧ್ಯಾತ್ಮಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಕಾಂಗ್ರೆಸ್ ಮುಖಂಡ ಅಬ್ದುಲ್ ಮುನೀರ್ ಜನ್ಸಾಲೆ ಅವರನ್ನು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ. ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ಸಮಿತಿ ರಾಜ್ಯಾಧ್ಯಕ್ಷರಾದ ಪ್ರಿಯಾಂಕ ಖರ್ಗೆ ಅವರ ಶಿಪಾರಸ್ಸಿನಂತೆ ನೂತನ ಸಮಿತಿಯನ್ನೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಅನುಮೋದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ 45ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಇಲ್ಲಿನ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಭಾನುವಾರ ಜರುಗಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು 45 ವರ್ಷಗಳುದ್ದಕ್ಕೆ ಏರುಗತಿಯ ಪ್ರಗತಿಯನ್ನು ದಾಖಲಿಸುತ್ತ ಬಂದಿದೆ. ವರದಿ ವರ್ಷದಲ್ಲಿ ರೂ.853 ಕೋಟಿ ವ್ಯವಹಾರ ನಡೆಸಿ, ರೂ 4.69 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಗ್ರಾಹಕರ ಸಹಕಾರ, ನಿಧಿಗಳ ಸಮರ್ಪಕ ನಿರ್ವಹಣೆ, ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ಉತ್ತಮ ಪ್ರಗತಿ ಸಾಧಿಸಿದೆ. ಸತತ 18 ವರ್ಷಗಳಿಂದ ‘ಎ’ ವರ್ಗದ ಆಡಿಟ್ ವರ್ಗೀಕರಣದಲ್ಲಿದೆ ಎಂದು ಹೇಳಿದರು. ಸಂಘವು ವರ್ಷದಲ್ಲಿ ರೂ. 193.47 ಕೋಟಿ ಠೇವಣಿ ಸಂಗ್ರಹಿಸಿ, ರೂ. 161.46 ಕೋಟಿ ಸಾಲ ನೀಡಿದೆ. ವಿವಿಧ ಸಂಸ್ಥೆಗಳಲ್ಲಿ ರೂ. 82.08 ಕೋಟಿ ಹೂಡಿಕೆ ಮಾಡಿದೆ. ರೂ.27.02 ಕೋಟಿ ನಿಧಿಗಳು,…

Read More