ಝೋನಲ್ ಸೆಮಿನಾರ್ ಆನ್ ಲಿಟರಸಿ ‘ಜ್ಞಾನಾಂಬುಧಿ’ ಕಾರ್ಯಕ್ರಮ ಉದ್ಘಾಟನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ನಮ್ಮಲ್ಲಿನ ಕೌಶಲ್ಯದ ಮೂಲಕ ಸಮುದಾಯವನ್ನು ಅಭಿವೃದ್ಧಿಗೆ ಪ್ರತಿಯೊಬ್ಬರೂ ನೆರವಾಗಬಹುದಾಗಿದೆ. ಆಸಕ್ತಿ ಆಧಾರಿತ ಕಲಿಕೆಯಿಂದ ವಿವಿಧ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಲು ಸಾಧ್ಯವಿದೆ ಅಲ್ಲದೇ ಅದರಿಂದ ಸಮಾಜಕ್ಕೂ ಒಳಿತಾಗಲಿದೆ ಎಂದು ಜಿಲ್ಲಾ ಲಿಟರೆಸಿ ಛೇರ್ಮನ್ ಶ್ರೀಕಾಂತ್ ಪ್ರಭು ಹೇಳಿದರು.

Call us

Click Here

ರೋಟರಿ ಜಿಲ್ಲೆ 3182 ರೋಟರಿ ಕ್ಲಬ್ ಬೈಂದೂರು ಆಶ್ರಯದಲ್ಲಿ ಇಲ್ಲಿನ ರೋಟರಿ ಭವನದಲ್ಲಿ ಆಯೋಜಿಸಲಾದ ಝೋನಲ್ ಸೆಮಿನಾರ್ ಆನ್ ಲಿಟರಸಿ ‘ಜ್ಞಾನಾಂಬುಧಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಿಗ್ರಿ ಗಳಿಸುವುದಕ್ಕೂ, ಸಾಕ್ಷರರಾಗುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ರೋಟರಿ ಜಿಲ್ಲೆ 3182 ಝೋನ್ 1ರ ಅಸಿಸ್ಟೆಂಟ್ ಗವರ್ನರ್ ಉಮೇಶ್ ಪುತ್ರನ್, ಝೋನಲ್ ಟ್ರೇನರ್ ರವಿರಾಜ್ ಶೆಟ್ಟಿ, ಝೋನಲ್ ಲೆಫ್ಟಿನೆಂಟ್ಗಳಾದ ಪ್ರವೀಣ ಶೆಟ್ಟಿ, ಸಂದೀಪ್ ಕುಮಾರ್ ಶೆಟ್ಟಿ, ಪೂರ್ಣಿಮಾ ಭವಾನಿಶಂಕರ್, ಝೋನಲ್ ಲಿಟರಸಿ ಕೋ-ಆರ್ಟಿನೇಟರ್ ಮಂಜುನಾಥ ಶೆಟ್ಟಿ, ಡಿಸ್ಟಿಕ್ ಲಿಟರಸಿ ಸಬ್ ಕಮಿಟಿ ಉಪಾಧ್ಯಕ್ಷ ಐ. ನಾರಾಯಣ, ಬೈಂದೂರು ರೋಟರಿ ಲಿಟರೆಸಿ ಛೇರ್ಮನ್ ಸುಬ್ರಹ್ಮಣ್ಯ ಜಿ.

ಬೈಂದೂರು ರೋಟರಿ ಅಧ್ಯಕ್ಷ ಎಚ್. ಉದಯ ಆಚಾರ್ ಸ್ವಾಗತಿಸಿದರು. ಅಸಿಸ್ಟೆಂಟ್ ಗವರ್ನರ್ ಉಮೇಶ್ ಪುತ್ರನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪೂರ್ಣಿಮಾ ವಿಷ್ಣು ಪೈ ಪ್ರಾರ್ಥನೆಗೈದರು. ಆನಂದ ಮದ್ದೋಡಿ, ಸುಬ್ರಹ್ಮಣ್ಯ ಜಿ. ಉಪ್ಪುಂದ ಸನ್ಮಾನಿತರ ಪರಿಚಯ ವಾಚಿಸಿದರು. ಕಾರ್ಯದರ್ಶಿ ಸುಧಾಕರ ಪಿ. ವಂದಿಸಿದರು. ಸೋಮನಾಥನ್ ಆರ್. ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕೆ. ಅವರಿಂದ ‘ಸಾಕ್ಷರತೆ – ದೇಶ ಕಟ್ಟಲು ಅನಿವಾರ್ಯ ಸಾಧನ’ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು.

ಪೋಟೋ –ಶಶಾಂಕ್ ಕಾರಂತ್

Click here

Click here

Click here

Click Here

Call us

Call us

Leave a Reply