ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಉಪ್ಪಿನಕುದ್ರುವಿನ ಯುವತಿ ಶಿಲ್ಪಾ ದೇವಾಡಿಗ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಪ್ರಮುಖ ಆರೋಪಿ ಅಝೀಝ್ (32) ಹಾಗೂ ಆತನಿಗೆ ಸಹಕರಿಸಿದ ರಹೀಮ್ (34) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮೃತ ಯುವತಿ ಶಿಲ್ಪಾ, ಅಜೀಜ್ ಎಂಬಾತನ ಜವಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಜೀಜ್ ಕೆಲಸದ ಆಕೆ ವೇಳೆ ಪುಸಲಾಯಿಸಿ ಸ್ನೇಹ ಬೆಳೆಸಿಕೊಂಡಿದ್ದಲ್ಲದೇ, ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ ಮಾಡಿಕೊಂಡಿದ್ದ. ಬಳಿಕ ಮತಾಂತರವಾಗಿ ಮದುವೆ ಮಾಡುಕೊಳ್ಳುವಂತೆ ಶಿಲ್ಪಾಗೆ ಅಝೀಜ್ & ಆತನ ಹೆಂಡತಿ ಒತ್ತಾಯ ಮಾಡಿದ್ದು ಇದರಿಂದಲೇ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಫಲಿಸದೆ ಶಿಲ್ಪಾ ಸಾವನ್ನಪ್ಪಿದ್ದಳು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅಝೀಜ್ ಮತ್ತು ಆತನ ಪತ್ನಿ ಸಲ್ಮಾ ವಿರುದ್ದ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿತ್ತು. ಅದರಂತೆ ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದ ಅಝೀಜ್ನನ್ನು ಸೋಮವಾರ ಬೆಳಿಗ್ಗೆ ಹೆಮ್ಮಾಡಿಯಲ್ಲಿ ವಶಕ್ಕೆ ಪಡೆದುಕೊಂಡು ಬಳಿಕ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬ್ಯಾರೀಸ್ ವಿದ್ಯಾ ಸಂಸ್ಥೆಗಳು ಕೋಡಿ ಕುಂದಾಪುರ ಇವರು ಪ್ರಾರಂಭಿಸಿದ ” ಸ್ವಚ್ಛ ಕಡಲ ತೀರ – ಹಸಿರು ಕೋಡಿ” ಅಭಿಯಾನ 2022 5ನೇ ಹಂತ ಕೋಡಿಯಲ್ಲಿ ದಿನಾಂಕ 29-05-2022 ರವಿವಾರ ನಡೆಯಿತು. ವಿದ್ಯಾರ್ಥಿಗಳು, ಶಿಕ್ಷಕರು ,ಆಡಳಿತ ಮಂಡಳಿಯ ಸದಸ್ಯರು, ರಕ್ಷಕ- ಶಿಕ್ಷಕ ಸಂಘದ ಸದಸ್ಯರು, ಪೋಷಕರು , ಪ್ರಾಕ್ತನ ವಿದ್ಯಾರ್ಥಿಗಳು, ಊರಿನ ಪ್ರಮುಖರು ಹಾಗೂ ಮಹಾಜನರು ಮತ್ತು ನಿಸರ್ಗ ಪ್ರಿಯರು ಈ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕೋಡಿಯ ಕಡಲ ತೀರವನ್ನು ಸ್ವಚ್ಛಗೊಳಿಸಿದರು. ಈ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಕುಂದಾಪುರ ಪುರಸಭೆಯ ಚೀಫ್ ಆಫೀಸರ್ ಹಾಗೂ ಪದಾಧಿಕಾರಿಗಳಿಗೆ ಮತ್ತು ಎಲ್ಲಾ ಸಿಬ್ಬಂದಿವರ್ಗದವರಿಗೆ ಬ್ಯಾರೀಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್ ರೆಹಮಾನ್ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. ನಾವಿರುವ ಪ್ರದೇಶದ ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿಯನ್ನು ತಿಳಿಸುವ ಕಾರ್ಯ ನಿರಂತರವಾಗಿ ಈ ಅಭಿಯಾನದ ಮೂಲಕ ನಡೆಯುತ್ತಿರುವದರ ಕುರಿತು ಹರ್ಷ ವ್ಯಕ್ತ ಪಡಿಸುತ್ತಾ ಇದರಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾರ್ನಾಡ್ ಸದಾಶಿವರಾಯರು ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನೆಲ್ಲಾ ಶ್ರೀಮಂತಿಕೆ ಧಾರೆಯೆರೆದರೆ, ಅವರ ಪತ್ನಿ ಸ್ವಾತಂತ್ರ್ಯ ಹೋರಾಟಗಾರರ ಹಸಿವು ನೀಗಿಸಲು ಧಾರೆ ಸೀರೆ ತ್ಯಾಗ ಮಾಡಿದರು. ಮಹಿಳೆಯರು ಮಾಂಗಲ್ಯವನ್ನೇ ತ್ಯಾಗ ಮಾಡಿದರು. ಇದು ಕರಾವಳಿಗರ ಕೊಡುಗೆಯಾಗಿದೆ. ಸ್ವಾಂತ್ರ್ಯಕ್ಕಾಗಿ ತ್ಯಾಗ, ಹೋರಾಟ ಮಾಡಿದ ಎಲ್ಲರ ನೆನಪಿಸಿಕೊಳ್ಳುವುದೇ ಅಮೃತ ಭಾರತಿಗೆ ಕನ್ನಡದ ಆರತಿ ಉದ್ದೇಶ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಆಡಳಿತ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ಬಸ್ರೂರು ಶ್ರೀ ಶಾರದಾ ಕಾಲೇಜ್ ಆವರಣದಲ್ಲಿ ಶನಿವಾರ ನಡೆದ ಅಮೃತ ಭಾರತಿಗೆ ಕನ್ನಡ ಆರತಿ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರಕ್ಕಾಗಿ ತಮ್ಮ ಇಡೀ ಜೀವನ ಮುಡಿಪಾಗಿಟ್ಟವರ, ದುಡಿದವರ, ಮಡಿದವರ ಹೋರಾಟ ನೆನಪಿಸಿಕೊಂಡು ನಾವು ಸ್ವಾತಂತ್ರ್ಯದ ನಂತರ ಎಷ್ಟು ಹೆಜ್ಜೆ ಮುಂದಿಟ್ಟಿದ್ದೇವೆ ಎನ್ನುವುದ ಯೋಚಿಸಿದರೆ ನಮ್ಮ ದೂರಗಾಮಿತ್ವ, ಕ್ರಮಿಸುವ ದೂರ ಬಹಳಷ್ಟಿದೆ ಎಂದು ಅನ್ನಿಸುತ್ತಿದೆ. ಸ್ವಾತಂತ್ರ್ಯ ನಂತರ ಅನೇಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಮೇ.28: ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಯುವ ಜನರಿಗೆ ಅರಿವು ಮೂಡಿಸುವ ಹಾಗೂ ಅವರಲ್ಲಿ ದೇಶಪ್ರೇಮ, ದೇಶಾಭಿಮಾನ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತಿಹಾಸ ಗೊತ್ತಿದ್ದಲ್ಲಿ ಮಾತ್ರ ಯಾರೊಬ್ಬರು ಇತಿಹಾಸವನ್ನು ಸೃಷ್ಠಿಸಲು ಸಾಧ್ಯ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಬಗ್ಗೆ ಪ್ರತಿಯೊಬ್ಬರು ತಿಳಿಯುವುದರೊಂದಿಗೆ ದೇಶ ಪ್ರೇಮವನ್ನು ಹಾಗೂ ದೇಶಾಭಿಮಾನವನ್ನು ಬೆಳೆಸಿಕೊಂಡು ನಾವು ಪಡೆದಿರುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅನೇಕ ಮಹಾನ್ ನಾಯಕರುಗಳಾದ ಜಾನ್ಸಿ ರಾಣಿ ಲಕ್ಷಿö್ಮÃ ಬಾಯಿ, ತಾಂತ್ಯಾ ಟೋಪಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಬಾಲಾ ಗಂಗಾಧರ ತಿಲಕ, ಸುಭಾಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮೇ28: ಕೋಟೇಶ್ವರದ ಅಂಕದಕಟ್ಟೆ ಎಂಬಲ್ಲಿ ಮೇ.27ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಕಟ್ಟೆ ಗೋಪಾಲಕೃಷ್ಣ ರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೊಳಹಳ್ಳಿ ಗಣೇಶ ಶೆಟ್ಟಿ ಅವರನ್ನು ಶುಕ್ರವಾರ ಸಂಜೆ ಬಂಧಿಸಲಾಗಿದೆ. ಆತ್ಮಹತ್ಯೆ ಸಂಬಂಧ ಮೃತರ ಪುತ್ರ ಸುಧೀಂದ್ರ ಕಟ್ಟೆ ಪೊಲೀಸರಿಗೆ ದೂರು ನೀಡಿದ್ದು, ಸೆಕ್ಷನ್ 306 ಪ್ರಕಾರ ಪ್ರಕರಣ ದಾಖಲಾಗಿತ್ತು. ತಂದೆಯ ಸಾವಿಗೆ ಮೊಳಹಳ್ಳಿ ಗಣೇಶ ಶೆಟ್ಟಿ ಮತ್ತು ಬ್ರೊಕರ್ ಇಸ್ಮಾಯಿಲ್ ಅವರ ಪ್ರಚೋದನೆಯೇ ಕಾರಣ ಎಂದು ಅವರು ದೂರಿದ್ದರು. ಪ್ರಕರಣ ಆಪಾದಿತರ ಪ್ಯೆಕಿ ಗಣೇಶ ಶೆಟ್ಟಿ ಬಂಧಿಸಲ್ಪಟ್ಟಿದ್ದು, ಇಸ್ಮಾಯಿಲ್ ಬಂಧನಕ್ಕೆ ಬಲೆ ಬೀಸಲಾಗಿದೆ. ಶುಕ್ರವಾರ ರಾತ್ರಿ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮನೆ ಮುಂದೆ ಹಾಜರುಪಡಿಸಲಾಗಿದ್ದು ಮೇ.30 ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅವಶ್ಯವಿದ್ದಲ್ಲಿ ವ್ಯೆದ್ಯಕೀಯ ಚಿಕಿತ್ಸೆಗೆ ಒಳಪಡಿಸಬಹುದು ಎಂದು ಅದೇಶಿಸಿದೆ. ಇದನ್ನೂ ಓದಿ: ► ಕುಂದಾಪುರ: ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ – https://kundapraa.com/?p=59468► ಆರ್ಥಿಕ ವ್ಯವಹಾರದಲ್ಲಿ 9 ಕೋಟಿ ಮೋಸ: ಡೆತ್ನೋಟ್ನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಕನ್ನಡದ ಸೊಗಡನ್ನು ಹೊತ್ತಿರುವ ಸಿನೆಮಾ ‘ಕೋಳಿ ತಾಳ್’ ಇದೀಗ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ. ಕುಂದಾಪುರ, ಮಲೆನಾಡ ಭಾಗದಲ್ಲಿ ಅಜ್ಜಿ ಮನೆಗೆ ಮೊಮ್ಮಗ ಬಂದರೆ ಕೋಳಿ ಸಾರು ಮಾಡುವ ಸಂಪ್ರದಾಯವಿದೆ. ಹಾಗೆ ಮೊಮ್ಮಗ ಬಂದ ಹೊತ್ತಲ್ಲಿ ಸಾರು ಮಾಡಬೇಕಿದ್ದ ಕೋಳಿಯೇ ನಾಪತ್ತೆಯಾಗುತ್ತದೆ. ಆ ಕೋಳಿಯನ್ನು ಹುಡುಕಾಡುವ ಪ್ರಸಂಗವೇ ‘ಕೋಳಿ ತಾಳ್’ ಚಿತ್ರದ ಸಾರಾಂಶ. 90 ನಿಮಿಷಗಳ ಈ ಸಿನಿಮಾವನ್ನು 15ರಿಂದ 20 ದಿನಗಳ ಅವಧಿಯಲ್ಲಿ ಸಾಗರ, ಬ್ರಹ್ಮಾವರ, ಉಡುಪಿ, ಮಂದಾರ್ತಿಯಲ್ಲಿ ಶೂಟಿಂಗ್ ಮಾಡಲಾಗಿದೆ. ಲಾಕ್ಡೌನ್ಗೂ ಮುನ್ನ ಚಿತ್ರದ ಶೂಟಿಂಗ್ ನಡೆದಿತ್ತು. ಕೋಳಿ ತಾಳ್ ಆಫ್ ಬೀಟ್ ಸಿನಿಮಾವಾಗಿದ್ದು, ಮೂವರ ನಡುವೆ ನಡೆಯುವ ಕಥೆಯಾಗಿದೆ. ನ್ಯೂಯಾರ್ಕ್ ಇಂಡಿಯನ್ ಸಿನಿಮೋತ್ಸವ ಸೇರಿದಂತೆ ಹಲವು ಸಿನಿಮೋತ್ಸವಕ್ಕೆ ಆಯ್ಕೆಯಾದ ಹೆಗ್ಗಳಿಯೂ ಈ ಸಿನೆಮಾಕ್ಕಿದೆ. ಹಿರಿಯ ನಟರಾದ ರಾಧಾ ರಾಮಚಂದ್ರ ಮತ್ತು ಪ್ರಭಾಕರ್ ಕುಂದರ್ ಪ್ರಮುಖ ಪಾತ್ರದಲ್ಲಿದ್ದಾರೆ. ನಿರ್ದೇಶನದ ಜತೆಗೆ ನಟನಾಗಿಯೂ ಅಭಿಲಾಷ್ ಶೆಟ್ಟಿ ನಟಿಸಿದ್ದಾರೆ. ಸಚಿನ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಲೇಷಿಯಾದಲ್ಲಿ ಜರುಗುತ್ತಿರುವ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ಗೆ ಬೆಂಗಳೂರಿನ ಎಸ್.ಇ.ಟಿ ಪಿಯು ಕಾಲೇಜು ವಿದ್ಯಾರ್ಥಿನಿ ಸ್ವಾತಿ ಎಸ್. ಪೂಜಾರಿ ಆಯ್ಕೆಯಾಗಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಸ್ವಾತಿ ಎಸ್. ಪೂಜಾರಿ ಈವರೆಗೆ ಹಲವು ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಪ್ರಸ್ತುತ ಓಕಿನವ ಡ್ರಾಗನ್ ಮಾರ್ಷಿಯಲ್ ಆರ್ಟ್ಸ್ ಫೆಡರೇಶನ್ ಸಂಸ್ಥೆಯಲ್ಲಿ ದಿಲೀಪ್ ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾಳೆ. ಈಕೆ ಬೆಂಗಳೂರಿನಲ್ಲಿ ನೆಲೆಸಿರುವ ಸುರೇಶ್ ಪೂಜಾರಿ ಹಾಗೂ ಚಂದ್ರಿಕಾ ಸುರೇಶ್ ಪೂಜಾರಿ ದಂಪತಿಗಳ ಪುತ್ರಿಯಾಗಿದ್ದಾಳೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಭಾರತ್ ಗ್ಯಾಸ್ ತನ್ನ ಗ್ರಾಹಕರಿಗಾಗಿ ಆಯೋಜಿಸಲಾಗಿರುವ ಅಡುಗೆ ಸ್ಪರ್ಧೆ ‘ಕಿಚನ್ ಚಾಂಪ್’ನಲ್ಲಿ ಭಾಗವಹಿಸಲು ಮೇ.31 ಕೊನೆಯ ದಿನವಾಗಿದೆ. ರಾಷ್ಟಮಟ್ಟದ ವಿಜೇತರಿಗೆ ರೂ. 51,000, ರನ್ನರ್ ಅಪ್ಗೆ ರೂ.25,000 ಹಾಗೂ 5 ಮಂದಿಗೆ ರೂ.10,000 ಬಹುಮಾನವಿದೆ. ರಾಜ್ಯಮಟ್ಟದಲ್ಲಿ ವಿಜೇತರಾಗುವವರಿಗೂ ಬಹುಮಾನವಿದ್ದು ಇದರೊಂದಿಗೆ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ಬೈಂದೂರಿನ ಶಾತೇರಿ ಕಾಮಾಕ್ಷಿ ಎಂಟರ್ಪ್ರೈಸಸ್ನ ಗ್ರಾಹಕರಿಗೆ ಪ್ರತ್ಯೇಕವಾಗಿ ತಲಾ ರೂ.10,000 ಬಹುಮಾನವನ್ನು ಘೋಷಿಸಲಾಗಿದೆ. ಸ್ವರ್ಧೆಯ ನಿಯಮಗಳು: ಸ್ವರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ನೀವು ತಯಾರಿಸುವ ಅಡುಗೆಗೆ ಬೇಕಾದ ಪದಾರ್ಥ, ಮಾಡುವ ವಿಧಾನ, ನಿಮ್ಮ ಹೆಸರು, ವಿಳಾಸ, ರಾಜ್ಯ ಹಾಗೂ ಸಂಪರ್ಕ ವಿವರಗಳನ್ನು ಲಿಖಿತ ರೂಪದಲ್ಲಿಯೇ ಸಲ್ಲಿಸಬೇಕು. ಇದರೊಂದಿಗೆ ಮೊಬೈಲ್ ಪೋನ್ ಅಡ್ಡಲಾಗಿ ಇರಿಸಿ ಎಂಪಿ-4 ಪಾರ್ಮ್ಯಾಟಿನಲ್ಲಿ 2 ನಿಮಿಷ ಮೀರದಂತೆ ಅಡುಗೆ ತಯಾರಿಯ ಸಣ್ಣ ವೀಡಿಯೋ ಮಾಡಿ ಕಳುಹಿಸಬೇಕು. ಸ್ವರ್ಧೆಯಲ್ಲಿ ಭಾಗವಹಿಸಲು ಮೇ.31 ಕೊನೆಯ ದಿನವಾಗಿದೆ. ಅಡಗೆಯ ವೀಡಿಯೋ ಹಾಗೂ ಲಿಖಿತ ರೂಪದ ಮಾಹಿತಿಯನ್ನು…
ಮಹಿಳೆಯರು ಯಾವಾಗಲೂ ಚೂಸಿ ಅಂದರೆ ತಪ್ಪಾಗಲಾರದು, ತುಂಬಾ ಯೋಚನೆ ಮಾಡಿ ಎಲ್ಲವನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾರ ಮೇಲೂ ಬೇಗನೆ ನಂಬಿಕೆ ಬರುವುದಿಲ್ಲ ತುಂಬಾ ಸಮಯದ ನಂತರ ಆಲೋಚನೆ ಮಾಡಿ ಪ್ರತಿಯೊಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲವೂ ಇಷ್ಟೊಂದು ಚೂಸಿ ಆಗಿರುವ ಮಹಿಳೆಯರು ಇನ್ನು ತಮ್ಮ ಸಂಗಾತಿಯ ಆಯ್ಕೆಯ ವಿಚಾರದಲ್ಲಿ ಸುಮ್ಮನಿರುವುದಿಲ್ಲ ಎಲ್ಲವೂ ಅಳೆದು ತೂಗಿ ಸಂಬಂಧವನ್ನು ಗಟ್ಟಿಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಹುಡುಗರು ಮಾಡುವ ಕೆಲವೊಂದು ವಿಚಾರಗಳು ಹುಡುಗಿಯರಿಗೆ ನೋವುಂಟಾಗುವುದು. ನೀವು ಮಾಡುವ ಕೆಲವೊಂದು ವಿಚಾರಗಳು ಹುಡುಗಿಯರಿಗೆ ಹಿಡಿಸದೇ ಹೋಗಬಹುದು. ಇಂತಹ ಸಮಯದಲ್ಲಿ ನೀವು ಯಾವುದು ಆಕೆಗೆ ಇಷ್ಟವಲ್ಲ ಎಂಬುದನ್ನು ಅರಿಯುವುದು ತುಂಬಾ ಮುಖ್ಯ. ಅದಕ್ಕಾಗಿ ಈ ಲೇಖನ ನಿಮಗಾಗಿ ಹಲವು ವಿಚಾರಗಳನ್ನು ತಿಳಿಸಿದ್ದೇವೆ. ನಕಾರಾತ್ಮಕ ಯೋಚನೆ:ಯಾವುದೇ ವಿಚಾರದಲ್ಲಿ ನಕಾರಾತ್ಮಕ ಮಾತು ಅವರಲ್ಲಿನ ಆತ್ಮವಿಶ್ವಾಸದ ಕೊರತೆಯನ್ನು ಸೂಚಿಸುತ್ತದೆ. ಅದಲ್ಲದೇ ಹುಡುಗಿಯರು ಯಾವಾಗಲೂ ಗಮನಿಸುವಂತಹ ವಿಚಾರವೆಂದರೆ ತಮ್ಮ ಬಗ್ಗೆ, ಕುಟುಂಬದ ಬಗ್ಗೆ, ಸ್ನೇಹಿತರು, ಕಚೇರಿ ಇತ್ಯಾದಿಗಳ ಬಗ್ಗೆ ತಮ್ಮ ಸಂಗಾತಿ ಯಾವ ರೀತಿ ಮಾತನಾಡುವರು ಎಂದು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ ಕಟ್ಟೆ ಗೋಪಾಲಕೃಷ್ಣ ರಾವ್ (ಕಟ್ಟೆ ಭೋಜಣ್ಣ) ಅವರು ಬರೆದಿಟ್ಟ ಡೆಟ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ಈರ್ವರ ಹೆಸರನ್ನು ಉಲ್ಲೇಖಿಸಲಾಗಿದೆ. ಕುಂದಾಪುರ ಪೊಲೀಸ್ ಎಸ್ಹೆಚ್ಓ ಅವರಿಗೆ ತಮ್ಮ ಕಚೇರಿಯ ಲೆಟರ್ಹೆಡ್ನಲ್ಲಿ ಡೆತ್ನೋಟ್ ಬರೆದಿದ್ದು ಹಣಕಾಸಿನ ವ್ಯವಹಾರದಲ್ಲಿ ತನಗೆ ಅನ್ಯಾಯವಾಗಿರುವ ಬಗ್ಗೆ ಬರೆದಿಟ್ಟಿದ್ದಾರೆ. ಗೋಪಾಲಕೃಷ್ಣ ರಾವ್ ಅವರು ಡೆತ್ನೋಟ್ನಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ, ಇಸ್ಮಾಯಿಲ್ ಹಂಗಳೂರು ಹೆಸರು ಪ್ರಸ್ತಾಪ ಮಾಡಿದ್ದು, ಇವರಿಬ್ಬರೂ ಗೋಲ್ಡ್ ಜ್ಯುವೆಲ್ಲರಿ ಹೆಸರಿನಲ್ಲಿ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ 2012 ಫೆಬ್ರವರಿ 3ರಂದು 3 ಕೋಟಿ 34 ಲಕ್ಷ ನಗದು, 5 ಕೆ.ಜಿ ಚಿನ್ನ ಪಡೆದುಕೊಂಡಿದ್ದರು. ಆ ಬಳಿಕ ನಗ-ನಗದು, ಅದಕ್ಕೆ ಸಲ್ಲಬೇಕಾದ ಬಡ್ಡಿಯನ್ನೂ ವಾಪಾಸ್ ಮರಳಿಸಿರಲಿಲ್ಲ. ಈ ವಿಚಾರದಲ್ಲಿ ಹಲವು ಬಾರಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಪಂಚಾಯತಿ ಮಾಡಿದ್ದು, ವಾಯಿದೆ ಪಡೆದಿದ್ದರು. ಈವರೆಗೆ 9 ಕೋಟಿ ಮೊತ್ತದ ಹಣ, ಚಿನ್ನ ವಾಪಾಸ್ ನೀಡದೆ ಮೋಸ ಮಾಡಿದ್ದಾರೆ. ಗಣೇಶ್ ಶೆಟ್ಟಿ ಮೊಳಹಳ್ಳಿ ಮನೆಗೆ…
