ಹಿಂದೆಲ್ಲಾ ವಿಚ್ಛೇದನ ಅಪರೂಪದ, ಅತ್ಯಂತ ಚರ್ಚೆಯ ವಿಷಯವಾಗಿರುತ್ತಿತ್ತು. ಆದರೆ ಇತ್ತೀಚಿಗೆ ಅದು ಮದುವೆಯಷ್ಟೇ ಕಾಮನ್ ಆಗಿದೆ. ತಾನು ತನ್ನದೆಂಬ ಅಹಂಕಾರದಲ್ಲಿ ಬೇರೆಯವರ ಭಾವನೆ ಅರ್ಥ ಮಾಡಿಕೊಳ್ಳುವುದರಲ್ಲಿ, ಮನುಷ್ಯ ಸಂಬಂಧವನ್ನು ಉಳಿಸಿಕೊಳ್ಳುದರಲ್ಲಿ ನಾವು ವಿಫಲರಾಗುತ್ತದ್ದೇವೆ. ಹಿಂದಿನ ಕಾಲದಲ್ಲಿ ಪರಸ್ಪರ ಹೊಂದಾಣಿಕೆ ಕಷ್ಟವೆಂಬುದು ಅರಿವಿಗೆ ಬಂದ ಮೇಲೂ ಕೆಲವು ವರ್ಷ ಜೊತೆಗಿದ್ದು, ಗಂಭೀರ ಕಾರಣಕ್ಕೆ ಇನ್ನು ಹೊಂದಾಣಿಕೆ ಸಾಧ್ಯವೇ ಇಲ್ಲ ಎಂಬುದು ಖಚಿತವಾದ ಮೇಲೆ ಜೋಡಿಗಳು ಕೋರ್ಟ್ ಮೆಟ್ಟಿಲೇರಿ ವಿಚ್ಛೇದನೆ ಪಡೆಯುತ್ತಿದ್ದರು. ಆದರೆ ಈಗ ಮದುವೆಯಾಗಿ ಕೆಲವೇ ದಿನಕ್ಕೆ ವಿಚ್ಚೇದನೆ ಬಯಸುವವರ ಸಂಖ್ಯೆ ಸಾಕಷ್ಟಿದೆ. ಮಕ್ಕಳಾದ ಮೇಲೆ ವಿಚ್ಛೇದನೆ ಬಯಸುವ ದಂಪತಿಗಳು ಇಂಥ ಗಂಭೀರ ನಿರ್ಧಾರ ತೆಗೆದುಕೊಳ್ಳೋ ಮುನ್ನ ಸಾಕಷ್ಟು ಆಯಾಮದಲ್ಲಿ ಯೋಚಿಸೋದು ಅಗತ್ಯ ತಂದೆ ತಾಯಿಯರಲ್ಲಿರುತ್ತದೆ.ಇಲ್ಲಿ ವಿಚ್ಛೇದನೆ ಪರಿಣಾಮ ಬೀರೋದು ಕೇವಲ ಇಬ್ಬರ ಬದುಕಿನ ಮೇಲಲ್ಲ. ಬದಲಿಗೆ ಇನ್ನೂ ಬಾಳಿ ಬದುಕಬೇಕಾದ ಇನ್ನೊಂದು ಜೀವ ಅಥವಾ ಜೀವಗಳ ಜೀವನದ ಮೇಲು ಕೂಡ. ಹಾಗಾಗಿ ವಿಚ್ಛೇದನೆ ತೀರ್ಮಾನಕ್ಕೆ ಬರೋ ಮುನ್ನ ಒಮ್ಮೆ ಹೀಗೂ ಯೋಚಿಸಿ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾಗಮ ಹಾಗೂ ಕರ್ನಾಟಕದ ನಾಲ್ಕು ರೋಟರಿ ಜಿಲ್ಲೆಗಳ ಪ್ರಯೋಜಕತ್ವದ ಗಂಗೊಳ್ಳಿ ರೋಟರಿ ಕ್ಲಬ್ ಆಶ್ರಯದಲ್ಲಿ ಮಹತ್ವಾಕಾಂಕ್ಷಿಯ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್. ಎಲ್.ಸಿ ಓದುತ್ತಿರುವ ವಿದ್ಯಾರ್ಥಿಗಳ ಪ್ರೋತ್ಸಾಹಕ “ವಿದ್ಯಾಸೇತು” ಪುಸ್ತಕಗಳ ವಿತರಣಾ ಕಾರ್ಯಕ್ರಮ ನಾಡ ಗುಡ್ಡೆಯಂಗಡಿಯ ಗ್ರೆಗರಿ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಂಗೊಳ್ಳಿ ರೋಟರಿ ಅಧ್ಯಕ್ಷ ರಾಜೇಶ್ ಎಂ. ಜಿ. ಅವರು ವಿದ್ಯಾರ್ಥಿಗಳಿಗೆ ವಿದ್ಯಾಸೇತು ಪುಸ್ತಕಗಳನ್ನು ವಿತರಿಸಿ ಶುಭ ಹಾರೈಸಿದರು. ಶಾಲೆಯ ಮುಖ್ಯೋಪಾಧ್ಯಾಯ ಸೀತಾರಾಮ್ ಶೆಟ್ಟಿ ರೋಟರಿಯ ಸಾಮಾಜಿಕ ಕಳಕಳಿಯನ್ನು ಪ್ರಶಂಸಿಸಿ, ಕೊಡುಗೆಯ ಸದುಪಯೋಗ ಮಾಡಿಕೊಂಡು ಉತ್ತಮ ಅಂಕ ಗಳಿಸಿ ಶಾಲೆಗೂ, ಊರಿಗೂ ಕೀರ್ತಿ ತಂದು ರೋಟರಿಯ ಪ್ರಯತ್ನವನ್ನು ಸಾರ್ಥಕ ಗೊಳಿಸುವಂತೆ ವಿನಂತಿಸಿದರು. ಶಿಕ್ಷಕ ಸುದೇಶ್ ಶೆಟ್ಟಿ ಶುಭಾಶಂಸನೆಗೈದರು. ಶಿಕ್ಷಕ ಭುಜಂಗ ಗಾಣಿಗ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಹ ಶಿಕ್ಷಕ ಸುಬ್ರಹ್ಮಣ್ಯ ಎನ್. ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪಣಜಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಥಾಯ್ ಕಿಕ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಮೊದಲ ಬಾರಿಗೆ ಅಮೆಚೂರು ವಿಭಾಗದಲ್ಲಿ ಸ್ಪರ್ಧಿಸಿದ್ದ ಕರ್ನಾಟಕ ವೃತಿಪರ ಕಿಕ್ ಬಾಕ್ಸರ್ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಟ್ಕೇರೆ ಅನೀಶ್ ಶೆಟ್ಟಿ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಮುಂಬರುವ ವೃತ್ತಿಪರ ಸ್ಪರ್ಧೆಗಳಲ್ಲಿ ಹೆಚ್ಚಿನ ಯಶಸ್ಸು ಕಾಣಲು ಗೋವಾದಲ್ಲಿ ತರಬೇತಿ ಪಡೆಯುತ್ತಿರುವ ಅನೀಶ್, ಅಲ್ಲಿಯ ಟ್ರೈಬಲ್ ವಾರಿಯರ್ಸ್ ಗೋವಾ ತಂಡವನ್ನು ಪ್ರತಿನಿಧಿಸಿದ್ದಾರೆ. ನಾಲ್ಕು ಸುತ್ತಿನ ಹೋರಾಟದಲ್ಲಿ ಅನೀಶ್ ಒಡಿಶಾದ ಸ್ಪರ್ಧಿಯ ವಿರುದ್ದ ಅಚಿತಿಮ ಸುತ್ತಿನಲ್ಲಿ ಸೋಲು ಅನುಭವಿಸಿದರು. ಇದನ್ನೂ ಓದಿ:► ಅಂತರಾಷ್ಟ್ರೀಯ ಮುಯಿಥಾಯ್ ಕಿಕ್ ಬಾಕ್ಸಿಂಗ್: ಅನೀಶ್ ಶೆಟ್ಟಿಗೆ ಗೆಲುವು – https://kundapraa.com/?p=52163 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗ್ರಾಮ ಪಂಚಾಯತ್ ಕೊರ್ಗಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊರ್ಗಿ ಹಾಗೂ ಕ್ಷಯ ಘಟಕ ಕುಂದಾಪುರ ಇವರ ಆಶ್ರಯದಲ್ಲಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ಮುಕ್ತ ಗ್ರಾಮಕ್ಕಾಗಿ ಸಮುದಾಯದ ಸಹಭಾಗಿತ್ವ ಆಂದೋಲನವನ್ನುಹಮ್ಮಿಕೊಳ್ಳಲಾಯಿತು. ಉಡುಪಿ ಜಿಲ್ಲೆಯ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳಾದ ಡಾ. ಚಿದಾನಂದ ಸಂಜು ಅವರ ಮಾರ್ಗದರ್ಶದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೌರೀಶ್ ಹೆಗ್ಡೆ, ಕ್ಷಯ ರೋಗದ ಮಾಹಿತಿಯನ್ನೊಳಗೊಂಡ ಕರಪತ್ರವನ್ನು ಬಿಡುಗಡೆ ಮಾಡಿದರು ಮತ್ತು ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಳ ಹಾಗೂ ಸಿಬ್ಬಂದಿಗಳ ಆರೋಗ್ಯ ಸೇವೆಯನ್ನು ಶ್ಲಾಘಿಸಿದರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ಕಾರ್ಯಕ್ರಮಗಳಿಗೂ ಪಂಚಾಯತ್ ನ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳು ಕ್ಷಯ ರೋಗದ ಬಗ್ಗೆ ಮಾಹಿತಿಯನ್ನು ನೀಡುವುದರೊಂದಿಗೆ ಸಮುದಾಯದಲ್ಲಿ ಕ್ಷಯ ರೋಗವನ್ನು ನಿಯಂತ್ರಿಸಲು ಮಾಡಬೇಕಾದ ಅನಿವಾರ್ಯತೆ ಮತ್ತು ಕೈಗೊಳ್ಳ ಬೇಕಾದ ಕ್ರಮಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಖಾಸಗಿ ಶಿಕ್ಷಕರಿಗೆ ನೀಡಲಾಗುತ್ತಿರುವ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿಯನ್ನು ಕುಂದಾಪುರ ತಾಲೂಕಿನ ಬಳ್ಕೂರು ನಿವಾಸಿ ದೈಹಿಕ ಶಿಕ್ಷಕರಾದ ಉದಯ ಬಳ್ಕೂರು ಅವರು ಪಡೆದುಕೊಂಡಿದ್ದಾರೆ. ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ ರಿ. ಇದರ ವತಿಯಿಂದ ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಜಾನುವಾರು ಕಳವು ಮತ್ತು ಅಕ್ರಮ ಸಾಗಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಗೂ ದನದ ದಲ್ಲಾಳಿಗಳನ್ನು ಬುಧವಾರ ಠಾಣೆಗೆ ಕರೆಯಿಸಿ ಪೆರೇಡ್ ನಡೆಸಲಾಯಿತು. ಬೈಂದೂರು ಪೊಲೀಸ್ ಠಾಣೆ ಉಪನಿರೀಕ್ಷಕ ಪವನ್ ನಾಯಕ್ ಮಾತನಾಡಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿ, ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡದೇ ಉತ್ತಮ ಜೀವನ ನಡೆಸುವಂತೆ ಸಲಹೆ ನೀಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ನಿವೃತ್ತ ಶಿಕ್ಷಕ ಎಸ್. ಜನಾರ್ದನ ಮರವಂತೆ ಅವರು ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಜ್ಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಪ್ರತಿವರ್ಷ ಹಿರಿಯ ನಾಗರಿಕರ ದಿನಾಚರಣೆಯಂದು ಕೊಡಮಾಡುವ ಈ ಪ್ರಶಸ್ತಿಗೆ ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಜನಾರ್ದನ ಮರವಂತೆ ಅವರನ್ನು ಆಯ್ಕೆಮಾಡಲಾಗಿದೆ. ರಾಜ್ಯದ ಒಟ್ಟು ಆರು ಮಂದಿ ಹಿರಿಯ ನಾಗರಿಕರಿಗೆ ಹಾಗೂ ಒಂದು ಸಂಸ್ಥೆಗೆ ಅ.1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಎಸ್. ಜನಾರ್ದನ ಮರವಂತೆ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಳಿಕ ತಮ್ಮ ನಿವೃತ್ತಿಯ ಬದುಕನ್ನು ಸಕ್ರೀಯವಾಗಿ ಕಳೆಯುತ್ತಿದ್ದಾರೆ. ರಾಜಕೀಯ, ಸಾಹಿತ್ಯ, ಸಂಘಟನೆಯಲ್ಲಿ ತೊಡಗಿಸಿಕೊಂಡು ತಮ್ಮ ಮಾದರಿ ಕಾರ್ಯಗಳ ಮೂಲಕ ಖ್ಯಾತಿ ಗಳಿಸಿದ್ದಾರೆ. ಮರವಂತೆ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಷ್ಟ್ರಮಟ್ಟದಲ್ಲಿ ಮರವಂತೆ ಪಂಚಾಯತ್ ಗುರುತಿಸಿಕೊಳ್ಳಲು ಮಹತ್ತರ ಪಾತ್ರ ವಹಿಸಿದ್ದರು. ಅವರು ಕರ್ನಾಟಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ಕೇವಲ ಪಠ್ಯದಿಂದ ಸಂಪೂರ್ಣ ಜ್ಞಾನ ಪಡೆಯಲು ಸಾಧ್ಯವಿಲ್ಲ. ಬದಲಿಗೆ ಅನುಭವದಿಂದಲೇ ಯಾವುದೇ ವಿಷಯದ ಬಗ್ಗೆ ಪರಿಪೂರ್ಣ ಜ್ಞಾನ ಪಡೆಯಲು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಪದವಿ ಸಮಾಜ ಕಾರ್ಯ ವಿಭಾಗದ ವತಿಯಿಂದ ನಡೆದ ಸ್ಫಟಿಕ ವೇದಿಕೆಯ ವಾರ್ಷಿಕ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಎಲ್ಲಾ ಕೋರ್ಸ್ಗಳು ಸಮಾಜದ ಬಗ್ಗೆ ಸ್ಪಷ್ಟ ಪರಿಕಲ್ಪನೆ ನೀಡುವುದಿಲ್ಲ. ಆದರೆ ಸಮಾಜ ಕಾರ್ಯದಂತಹ ಕೋರ್ಸ್ಗಳಿಂದ ಮಾತ್ರ ವಿದ್ಯಾರ್ಥಿಗಳಿಗೆ ಸಮಾಜದ ಸ್ಥಿತಿಗತಿಗಳನ್ನು ಅರಿಯಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಸಮಾಜ ಕಾರ್ಯ ವಿಭಾಗದಿಂದ ನಡೆಯುವ ಕಾರ್ಯಕ್ರಮಗಳು ಕೇವಲ ವಿಭಾಗದ ವಿದ್ಯಾರ್ಥಿಗಳಿಗೆ ಸೀಮಿತವಾಗದೇ, ಬೇರೆ ವಿಭಾಗದ ವಿದ್ಯಾರ್ಥಿಗಳಿಗೂ ವಿಸ್ತರಿಸಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು. ಬಳಿಕ, ಸಮಾಜ ಕಾರ್ಯ ವಿಭಾಗದ ಮುಂದಿನ ಯೋಜನೆಗಳು, ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಂತ್ರಿಕವಾಗಿ ಮುಂದುವರಿದ ದೇಶಗಳು ಇಂದು ಪ್ರತಿಯೊಂದು ಮನೆಯಲ್ಲಿ, ಕ್ಷೇತ್ರದಲ್ಲಿ ಅಂತರ್ಜಾಲವನ್ನು ಉಪಯೋಗಿಸುತ್ತಿದೆ. ಶಿಕ್ಷಣ, ಬ್ಯಾಂಕಿಂಗ್, ವ್ಯವಹಾರ ಕ್ಷೇತ್ರ ಅಥವಾ ನಮ್ಮ ಇಂದಿನ ಆಗುಹೋಗುಗಳ ವಿನಿಮಯ ಹಾಗೂ ಬೇರೆ ಬೇರೆ ವಿಚಾರಗಳಿಗೆ ಅಂತರ್ಜಾಲದ ಬಳಕೆ ಹೆಚ್ಚಾಗುತ್ತಿದೆ. ಕೋವಿಡ್ನ ಈ ದಿನಗಳಲ್ಲಿ ಇ-ಶಿಕ್ಷಣ ವಿದ್ಯಾರ್ಥಿಗಳಿಗೆ ವರದಾನವಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕುಂದಾಪುರ ವಕೀಲ, ತರಬೇತಿದಾರ ಶ್ರೀಧರ್ ಪಿ.ಎಸ್. ಹೇಳಿದರು. ರೋಟರಿ ಕ್ಲಬ್ ಗಂಗೊಳ್ಳಿ, ಯುವ ಸ್ಪಂದನ ಕೇಂದ್ರ ಉಡುಪಿ, ನಿಮಾನ್ಸ್ ಆಸ್ಪತ್ರೆ ಬೆಂಗಳೂರು, ಸಂಗಮ ಸಂಜೀವಿನಿ ಸ್ವಸಾಯ ಸಂಘ ಒಕ್ಕೂಟ, ನಾವುಂದ ಗ್ರಾಮ ಪಂಚಾಯತ್ ಇವರ ಜಂಟಿ ಆಶ್ರಯದಲ್ಲಿ ರೋಟರಿಯ ಸಾಕ್ಷರತಾ ಮಾಸದ ಕಾರ್ಯಕ್ರಮದ ಭಾಗವಾಗಿ ನಾವುಂದ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಲ್ಪಟ್ಟ ಇ-ಶಿಕ್ಷಣ ಸಾಧಕ ಬಾಧಕ ವಿಚಾರ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಂಗೊಳ್ಳಿ ರೋಟರಿ ಅಧ್ಯಕ್ಷ ರಾಜೇಶ್ ಎಂ. ಜಿ. ಕಾರ್ಯಕ್ರಮ ಉದ್ಘಾಟಿಸಿದರು. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಪಂಚಾಯತ್ ಸದಸ್ಯೆ ಮುತ್ತು ಮೊಗವೀರ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ರೋಟರಿ ಇಂಡಿಯಾ ಮತ್ತು ‘ಆರ್ ಎಸ್ ಎಸ್ ಡಿ ಐ’ ಯೋಜನೆಯಾದ ಒಂದೇ ದಿನದಲ್ಲಿ ಮಿಲಿಯನ್ ಬ್ಲಡ್ ಶುಗರ್ ಟೆಸ್ಟ್ ಮಾಡುವ ಉದ್ದೇಶದಿಂದ ಇಡೀ ಭಾರತದಲ್ಲಿ ಶಿಬಿರ ಹಮ್ಮಿಕೊಂಡಿದ್ದು ಅದರ ಅಂಗವಾಗಿ ಸೈಬ್ರಕಟ್ಟೆ ರೋಟರಿ ಕ್ಲಬ್ನಿಂದ ಆರೋಗ್ಯ ಕೇಂದ್ರದಲ್ಲಿ ಉಚಿತ ಮಧುಮೇಹ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ರೋ ವಲಯ 3ರ ಸಹಾಯಕ ಗವರ್ನರ್ ಪದ್ಮನಾಭ್ ಕಾಂಚನ್ ಉದ್ಘಾಟಿಸಿ ಮಾತನಾಡಿ, ಇಂದು ಇಡೀ ಭಾರತದಲ್ಲಿ ರೋಟರಿ ಅವರಿಂದ ಮಿಲಿಯನ್ ಗಟ್ಟಲೆ ಮಧುಮೇಹ ತಪಾಸಣೆ ನಡೆಸಿ ಗಿನ್ನೆಸ್ ರೆಕಾರ್ಡ್ ಮಾಡುವ ಯೋಜನೆ ಇದ್ದು,ಎಲ್ಲ ಸಾರ್ವಜನಿಕರು ಉಪಯೋಗ ಪಡೆದುಕೊಳ್ಳಿ ಮತ್ತು ಭಾರತ ವು ಸಕ್ಕರೆ ಕಾಯಿಲೆ ಯಲ್ಲಿ ವಿಶ್ವದಲ್ಲಿ 2ನೆ ಸ್ಥಾನದಲ್ಲಿದ್ದು ಹೆಚ್ಚು ಹೆಚ್ಚು ವಯಸ್ಸಿನ ಭೇದ ಇಲ್ಲದೆ ಕಾಲ ಕಾಲಕ್ಕೆ ರಕ್ತ ತಪಾಸಣೆ ಮಾಡಿ ಈ ಕಾಯಿಲೆ ತಡೆಗಟ್ಟುವಲ್ಲಿ ಸಫಲಾರಗಬೇಕು ಎಂದು ಸಲಹೆ ನೀಡಿದರು. ಸೈಬ್ರಕಟ್ಟೆಯ ವೈದ್ಯಾಧಿಕಾರಿ ಡಾ. ಜಯಶೀಲ ಆಚಾರ್ ಮಾತನಾಡಿ ಸಕ್ಕರೆ ತುಂಬಾ ಸಿಹಿ ಯಾಗಿದ್ದು…
