Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ರಾಮಕ್ಷತ್ರಿಯ ಯುವಕ ಸಮಾಜದಿಂದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ 35ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭದಲ್ಲಿ ಶುಕ್ರವಾರ ಶಾರದಾ ಪುರಮೆರವಣಿಗೆ ಶಾರದಾ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಪುರಮೆರವಣಿಗೆಯಲ್ಲಿ ಚಂಡೆ ವಾದನ ಹಾಗೂ ಇನ್ನಿತರ ಕಲಾತಂಡಗಳು ಪುರಮೆರವಣಿಗೆಗೆ ಮೆರಗು ನೀಡಿದ್ದವು. ಈ ವೇಳೆ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಪಟ್ವಾಲ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ದಡ್ಡು, ಗೌರವ ಅಧ್ಯಕ್ಷ ಗುರುರಾಜ ಹೋಬಳಿದಾರ್, ಕಾರ್ಯದರ್ಶಿ ರಾಘವೇಂದ್ರ ಎನ್. ತಗ್ಗರ್ಸೆ ಭಾಗವಹಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗ್ರಾಮೀಣ ಭಾಗದ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸ್ಪಂದಿಸುವ ಜೊತೆಗೆ ಸರಕಾರದ ಯೋಜನೆಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಹೇಳಿದರು. ಅವರು ಶನಿವಾರ ಜಡ್ಕಲ್ ಗ್ರಾಮದ ಬಿಸಿನಪಾರೆಯ ಶ್ರೀ ಮೂಕಾಂಬಿಕಾ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಸರಕಾರದ ಸೌಲಭ್ಯಗಳಿಂದ ವಂಚಿತರಾದ ವಿಕಲಚೇತನರು, ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆ ಪರಿಹಾರಕ್ಕೆ ಈ ಅಭಿಯಾನದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡ ಈ ಅಭಿಯಾನ ಕೋವಿಡ್ ಎರಡನೇ ಅಲೆಯ ಬಳಿಕ ಮತ್ತೆ ಜಡ್ಕಲ್ ಗ್ರಾಮದಿಂದ ಆರಂಭಗೊಳ್ಳುತ್ತಿದ್ದು, ಕಂದಾಯ ಇಲಾಖೆಯ ಸಮಸ್ಯೆಗಳು, ಕೃಷಿ ಸಂಬಂಧಿತ ಯೋಜನೆಗಳ ಮಾಹಿತಿ ಸೇರಿದಂತೆ ಸರಕಾರದ ಉತ್ತಮ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲಾಗುತ್ತದೆ ಎಂದರು. ಜಡ್ಕಲ್ ಗ್ರಾಮ ಜಿಲ್ಲಾ ಕೇಂದ್ರದಿಂದ ದೂರವಿರುವುದರಿಂದ ಈ ಗ್ರಾಮ ಆಯ್ದುಕೊಳ್ಳಲಾಗಿದೆ ಜೊತೆಗೆ ಜಡ್ಕಲ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಳೆದ ಒಂದು ದಶಕದಿಂದ ಜನಮನ ರಂಜಿಸಿದ ಇನಿದನಿ ಕಾರ್ಯಕ್ರಮ ಜನವರಿ 9ಕ್ಕೆ ನಿಗದಿಯಾಗಿದೆ. ಕಲಾಕ್ಷೇತ್ರ-ಕುಂದಾಪುರ ಕಛೇರಿಯಲ್ಲಿ ಇನಿದನಿ ದಿನಾಂಕ ನಿಗದಿ ಪಡಿಸಿದ ಗಣ್ಯರು ಕಾರ್ಯಕ್ರಮದ ತಯಾರಿಗೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರು ಕುಂದಾಪುರ ಹಲವು ಪ್ರಥಮಗಳಿಗೆ ಕಾರಣವಾದ ಇತಿಹಾಸವಿದೆ. ಅದಕ್ಕೆ ಇನಿದನಿಯೂ ಸೇರ್ಪಡೆಯಾಗಿದೆ. ಅಷ್ಟೊಂದು ಸಂಖ್ಯೆಯಲ್ಲಿ ಸಂಗೀತ ಕಲಾಸಕ್ತರು 4-5 ಗಂಟೆ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ ಅಂತಾದರೆ ಅದರ ಸೆಳೆತಕ್ಕೆ ಇನಿದನಿಯ ಗುಣಮಟ್ಟವೇ ಕಾರಣವಾಗಿದೆ. ಹಾಗಾಗಿ ಇನಿದನಿ ಪ್ರಸ್ತುತಿ ಮಾಡುವ ಕಲಾಕ್ಷೇತ್ರ-ಕುಂದಾಪುರ, ಕುಂದಾಪುರಕ್ಕೊಂದು ಹೆಮ್ಮೆಯ ಸಂಸ್ಥೆ ಎನ್ನುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ಡಾ. ಆದರ್ಶ ಹೆಬ್ಬಾರ್ ಮಾತನಾಡುತ್ತಾ ನಾನು ವೃತ್ತಿಯಲ್ಲಿ ವೈದ್ಯ, ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸಬೇಕಾದ ಸನ್ನಿವೇಶಗಳು ಬಹಳಷ್ಟು ಇರುತ್ತದೆ. ಆಗ ನಮ್ಮ ಮನಸ್ಸಿಗೆ ಮುದ ನೀಡುವ, ಒತ್ತಡವನ್ನು ನಿವಾರಿಸುವ ಎಕೈಕ ಔಷಧಿ ಎಂದರೆ ಅದು ಸಂಗೀತ. ಅದೆಷ್ಟೋ ಬಾರಿ ಇನಿದನಿ ನೋಡಬೇಕೆಂದು ಆಗಮಿಸಿದಾಗಲೆಲ್ಲ ಕೂರಲು ಸ್ಥಳಾವಕಾಶವಿಲ್ಲದೆ ನಿಂತುಕೊಂಡು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಿಂದೂ ಧರ್ಮೀಯರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ ಎಂಬ ಆರೋಪದಡಿ ನ್ಯಾಯಾಂಗ ಬಂಧಿತರಾಗಿದ್ದ ಕುಂದಾಪುರ ಹಳ್ಳಾಡಿ- ಹರ್ಕಾಡಿ ನಿವಾಸಿಗಳಾದ ಜ್ಯೋತಿ ಪ್ರಕಾಶ್, ರವಿ ಮನೋಹರ್, ಪ್ರಕಾಶ್ ಕುಂದರ್ ಅವರಿಗೆ ಪ್ರಥಮ ದರ್ಜೆ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಬ್ರಹ್ಮಾವರ ಸ್ಯಾಬರಕಟ್ಟೆ ನಿವಾಸಿ ಆನಂದ (36) ಅವರು ಆರೋಪಿಗಳು ಎರಡು ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡುವ ಉದ್ದೇಶದಿಂದ ಮತಾಂತರ ಮಾಡಲು ಪ್ರಯತ್ನಪಟ್ಟಿದ್ದರು ಎಂದು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗಳ ಪರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ವಕೀಲರು ರಾಜಕೀಯ ದುರುದ್ದೇಶದಿಂದ ಆರೋಪಿಗಳ ಮೇಲೆ ಸುಳ್ಳು ದೂರು ದಾಖಲಾಗಿದೆ ಎಂದು ವಾದ ಮಂಡಿಸಿದ್ದರು. ಆರೋಪಿಗಳ ಪರ ಉಡುಪಿ ಯುವ ನ್ಯಾಯವಾದಿಗಳಾದ ಅಸದುಲ್ಲಾ ಕಟಪಾಡಿ, ಪ್ರದೀಪ್ ಪಿ.ಜೆ ಮತ್ತು ಆದಿತ್ಯ ಬೈಲೂರು ವಾದಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಕಳೆದ ಮೂರ‍್ನಾಲ್ಕು ದಿನಗಳಿಂದ ಸುರಿಯುತ್ತಿರುವ ಗುಡುಗು ಸಹಿತ ಮಳೆ ಭತ್ತ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ವಾರದ ಮೊದಲು ಅಚಾನಕ್ ಉಂಟಾಗಿದ್ದ ಬಿರುಗಾಳಿ ಅಬ್ಬರಕ್ಕೆ ತಲ್ಲಣಗೊಂಡಿದ್ದ ರೈತರು ಇದೀಗ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಫಸಲು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಉತ್ತಮ ಮುಂಗಾರು ಹಿನ್ನಲೆಯಲ್ಲಿ ಈ ಭಾರಿ ಉತ್ತಮ ಫಸಲಿದೆ. ಕರಾವಳಿಯಲ್ಲಿ ಕಟಾವಿಗೆ ರೈತರು ಅಣಿಯಾಗುತ್ತಿರುವಾಗಲೇ ಮಳೆ ಆರಂಭಗೊಡಿದೆ. ಮಲೆನಾಡು ಪ್ರಾಂತ್ಯದಲ್ಲಿಯೂ ರೈತರು ಮನೆಯಂಗಳ ಸಜ್ಚುಗೊಳಿಸುವ ತಯಾರಿಯಲ್ಲಿದ್ದಾರೆ. 14 ಸಾವಿರ ಹೆಕ್ಟೇರ್ ಭತ್ತ ಕೃಷಿ:ಕುಂದಾಪುರ ತಾಲೂಕಿನಲ್ಲಿ 202-21ನೇ ಸಾಲಿನಲ್ಲಿ 14 ಸಾವಿರ ಹೆಕ್ಟೇರ್ ಭತ್ತ ಕೃಷಿಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 500 ಹೆಕ್ಟೇರ್ ಹೆಚ್ಚುವರಿ ಮುಂಘಾರು ಕೃಷಿ ಆಗಿದೆ. ವರಾಹಿ ನೀರಿನ ಲಭ್ಯತೆ ಹಿನ್ನಲೆಯಲ್ಲಿ ಮಲೆನಡು, ನಡುಬಯಲು ಭಾಗದಲ್ಲಿಯೂ ಹಡಿಲು ಬಿದ್ದ ಭೂಮಿಯಲ್ಲೂ ಭತ್ತ ಚಿಗುರಿದೆ. ಹದವಾದ ಮಳೇಯ ದೆಸೆಯಿಂದ ಸಸಿಗಳು ದಷ್ಟಪುಷ್ಟವಾಗಿ ಬೆಳೆದು ನಿಂತಿದ್ದು ತೆನೆಯ ಗೊಂಚಲು ಸಮೃದ್ದತೆಯಿಂದ ಕೂಡಿದೆ. ಬೆಳೆದು ನಿಂತ ಪೈರು ಮಳೆ ನೀರಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ತರುಣ ಕಲಾವೃಂದ ರಿ. ಇದರ ನೂತನ ಅಧ್ಯಕ್ಷರಾಗಿ ರವೀಂದ್ರ ಜಿ. (ರಾಮಕೃಪಾ) ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಕೊ.ಶಿವಾನಂದ ಕಾರಂತ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳಿಗೆ ಕಲಾವೃಂದದ ಸದಸ್ಯರು ಶುಭಾಶಯ ಕೋರಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತುಮಕೂರಿನ ಅಡಿಕೆ ವ್ಯಾಪಾರಿ ವಿವೇಕ್ ಮತ್ತು ಅವರ ತಾಯಿ ಭಾಗ್ಯ ನಿಗೂಢ ನಾಪತ್ತೆಯಾಗಿದ್ದಾರೆ. ಕಾರು ಚಾಲಕ ಜಾಫರ್ ಖಾನ್ ಎಂಬವರೊಂದಿಗೆ ತುಮಕೂರು ಚಿಕ್ಕನಾಯಕನ ಹಳ್ಳಿಯಿಂದ ಮಂಗಳೂರಿಗೆ ಹೊರಟಿದ್ದ ಇವರು ತ್ರಾಸಿಯಲ್ಲಿ ಕಾಣೆಯಾಗಿದ್ದಾರೆ. ವಿವೇಕ್ ಅವರ ತಂದೆ ವರ್ಷದ ಹಿಂದೆ ತಾಯಿ ಜೊತೆ ಬೊಲೆರೊ ಜೀಪ್‌ನಲ್ಲಿ ಹೊರಟು ಆದಿಚುಂಚನಗಿರಿ ದೇವಳದಲ್ಲಿ ಪೂಜೆ ಸಲ್ಲಿಸಿ ನಂತರ ಮಂಗಳೂರಿಗೆ ಹೋಗಲಿದೆ ಎಂದು ತಿಳಿಸಿ ಕಾರು ಚಾಲಕ ಜಾಫರ್‌ಗೆ ತಿಳಿಸಿ ಹೊರಟಿದ್ದು, ತ್ರಾಸಿಯಿಂದ ಸುಮಾರು 15 ಕಿಮೀ ಹಿಂದೆ ನಿದ್ರೆ ಬರುತ್ತಿದ್ದ ಕಾರಣ ಕಾರು ನಿಲ್ಲಿಸಿ ನಿದ್ರೆಗೆ ಜಾರಿದ್ದರು ಬೆಳಿಗ್ಗೆ 6 ಗಂಟೆಗೆ ಚಾಲಕ ಎದ್ದು ನೋಡುವಾಗ ವಿವೇಕ್ ಮತ್ತು ಅವರ ತಾಯಿ ಕಾಣದಾಗಿದ್ದು, ಮೊಬೈಲ್ ಸ್ವೀಚ್ ಆಪ್ ಆಗಿದೆ. ಅಡಿಕೆ ವ್ಯಾಪಾರಸ್ಥರಾಗಿದ್ದು, ವ್ಯವಹಾರದಲ್ಲಿ ನಷ್ಟ ಉಂಟಾಗಿ ಹಣದ ಅಡಚಣೆಯಿಂದ ಎಲ್ಲಿಗೋ ಹೋಗಿರಬಹುದೆಂದು ಜಾಫರ್ ಖಾನ್ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಬೈಂದೂರು ಪೇಟೆಯ ಲಾಡ್ಜ್‌ವೊಂದರಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಶಿರೂರು ಗ್ರಾಮದ ಲಾಡ್ಜ್‌ವೊಂದರಲ್ಲಿ ವ್ಯಕ್ತಿಯೋರ್ವ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬೈಂದೂರು ಲಾಡ್ಜ್‌ವೊಂದರಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದು ಮಂಗಳೂರು ಬಿಜೈ ನ್ಯೂರೋಡ್ ನಿವಾಸಿ ಮನೋಜ್ ಆರ್ ಸಾಲಿಯಾನ್ ( 45) ಎಂದು ಗುರುತಿಸಲಾಗಿದೆ. ಅವರು ಭಟ್ಕಳದ ಶಿರಾಲಿ ಎಂಬಲ್ಲಿರುವ ನೆಟ್‌ಕಾನ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಶಿರೂರು ಸಮೀಪದ ಲಾಡ್ಜ್‌ವೊಂದರಲ್ಲಿ ಉಳಿದುಕೊಂಡಿದ್ದ  ಎಂ.ಆರ್‍ ಬಾಬು ಎಂಬವರು ಲಾಡ್ಜ್‌ಗೆ ಹೋಗಲು ಮೆಟ್ಟಿಲು ಏರುವಾಗ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದ ಪರಿಣಾಮ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಎರಡು ಪ್ರಕರಣ ಬೈಂದೂರು ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಣಿ ಹೆಚ್. ಎಂ.ಟಿ ರಸ್ತೆಯ ಅಂಗನವಾಡಿ ಕಟ್ಟಡಕ್ಕೆ ಶಿಲನ್ಯಾಸ ನೆರವೇರಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಎನ್, ಬಸ್ರೂರು ವಲಯದ ಮೇಲ್ವಿಚಾರಕಿ ಸುಜಯ ಅವರು ಕಟ್ಟಡಕ್ಡೆ ಶಿಲನ್ಯಾಸ ನೆರವೇರಿಸಿದರು. ಈ ಸಂದರ್ಭ ಕೋಣಿ ಗ್ರಾಮ ಪಂಚಾಯತ್ ಅದ್ಯಕ್ಷೆ ವಸಂತಿ, ಸದಸ್ಯರಾದ ದಿವಾಕರ ಶೆಟ್ಟಿ,ರಾಘವೇಂದ್ರ ಶೆಟ್ಟಿ, ಸೌಮ್ಯ, ಅಂಗನವಾಡಿ ಶಿಕ್ಷಕಿ ಗುಲಾಬಿ, ಸಹಾಯಕಿ ವೆರೊನಿಕಾ, ಊರಿನ ಪ್ರಮುಖರಾದ ನಾರಾಯಣ ಆಚಾರ್ ಕೋಣಿ, ರಾಜೇಶ್ ಮಯ್ಯ, ಬಾಲವಿಕಾಸನ ಸಮಿತಿಯ ಗಿರೀಶ್ ಪೂಜಾರಿ, ಗಜೇಂದ್ರ ಆಚಾರ್ ಕೋಣಿ, ಕಟ್ಟಡದ ಗುತ್ತಿಗೆದಾರರಾದ ಮುರುಳಿ ಗಾಣಿಗ ಕೋಟೇಶ್ವರ ಹಾಗೂ ಎಚ್.ಎಂ.ಟಿ.ಪ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ನವರಾತ್ರಿಯ ಅಂಗವಾಗಿ ಪ್ರಸಿದ್ಥ ಯಾತ್ರಾಸ್ಥಳ ಕೊಲ್ಲೂರಿಗೆ ಆಗಮಿಸಿದ್ದ ಸಹಸ್ರಾರು ಭಕ್ತರು ವಿಜಯದಶಮಿಯಂದು ತಮ್ಮ ಮಕ್ಕಳಿಗೆ ವಿದ್ಯಾರಂಭ ಮಾಡಿಸಿದರು. ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಾಂಗಣದ ಸರಸ್ವತಿ ಮಂಟಪದ ಮುಂಭಾಗದಲ್ಲಿ ಮಕ್ಕಳಿಗೆ ಪ್ರಾಥಃಕಾಲದಿಂದಲೇ ಅಕ್ಷರಾಭಾಸ ಮಾಡಿಸಲಾಯಿತು. ಹೆತ್ತವರು ಕಾಲಿನ ಮೇಲೆ ಮಕ್ಕಳನ್ನು ಕುರಿಸಿಕೊಂಡು ವಿದ್ಯಾರಂಭ ಮಾಡಿಸಲಾಗುತ್ತದೆ. ಅರ್ಚಕರು ಚಿನ್ನದಿಂದ ಮಗುವಿನ ನಾಲಗೆಯ ಮೇಲೆ ಓಂ ಎಂದು ಬರೆಯುತ್ತಾರೆ, ಬಳಿಕ ಹೆತ್ತವರು ಮಗುವಿನ ಬೆರಳಿಂದ ಅಕ್ಕಿ ತುಂಬಿದ ಹರಿವಾಣದಲ್ಲಿ ಓಂ ಎಂದು ಬರೆಯಿಸಿ ಬಳಿಕ ಮಾತೃಭಾಷೆಯಲ್ಲಿ ಅ,ಆ,ಇ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಇದರಿಂದ ಮಕ್ಕಳ ನಾಲಿಗೆಯ ಮೇಲೆ ಸರಸ್ವತಿ ದೇವಿ ನೆಲೆಸಿ ಅವರ ಶೈಕ್ಷಣಿಕ ಭವಿಷ್ಯ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಕುಂದಾಪ್ರ ಡಾಟ್ ಕಾಂ ಸುದ್ದಿ. ನವಾನ್ನಪ್ರಾಶನ: ಎಳೆಯ ಕಂದಮ್ಮಗಳಿಗೆ ನವಾನ್ನಪ್ರಾಶನದ ಮೂಲಕ ಮೊದಲ ಭಾರಿಗೆ ಅನ್ನವನ್ನು ತಿನ್ನಿಸಲಾಗುತ್ತದೆ. ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಅನ್ನಾಹಾರ ಆರಂಭಿಸಿದ ಮಗು ಮುಂದೆ ಯಾವುದೇ ರೀತಿಯ ಅನಾರೋಗ್ಯದಿಂದ ಬಳಲುವುದಿಲ್ಲ ಎಂಬುದು ನಂಬಿಕೆ.…

Read More