ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅಖಿಲ ಭಾರತ ನಿಮಾ೯ಣ ಕಾರ್ಮಿಕರ ಫೆಡರೇಶನ್ (CWFI) ಸಂಯೋಜಿಸಲ್ಪಟ್ಟ ಕನಾ೯ಟಕ ರಾಜ್ಯ ಕಟ್ಟಡ ಮತ್ತು ಇತರೆ ನಿಮಾ೯ಣ ಕಾರ್ಮಿಕರ ಫೆಡರೇಶನ್ ರಾಜ್ಯ ಸಮಿತಿ ಕರೆಯ ಮೇರೆಗೆ ರಾಜ್ಯ ವ್ಯಾಪಿ ಜರಗುವ ಕಟ್ಟಡ ಕಾರ್ಮಿಕರ ಬೇಡಿಕೆ ದಿನಾಚರಣೆಯ ಅಂಗವಾಗಿ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿಮಾ೯ಣ ಕಾರ್ಮಿಕರ ಸಂಘ ರಿ. ಇದರ ನೇತೃತ್ವದಲ್ಲಿ ಇಂದು ಬೈಂದೂರು ಸಿಐಟಿಯು ಕಚೇರಿ ಬಳಿ ಕಟ್ಟಡ ಕಾರ್ಮಿಕರ ಬೃಹತ್ ಪ್ರತಿಭಟನೆ ನಡೆಯಿತು. ಮದುವೆ ಸಹಾಯಧನದ ಮೊತ್ತ ರೂಪಾಯಿ ಒಂದು ಲಕ್ಷಕ್ಕೆ ಹೆಚ್ಚಿಸಬೇಕು,ಸಹಜ ಮರಣ ಪರಿಹಾರ ರೂಪಾಯಿ ಎರಡು ಲಕ್ಷಕ್ಕೆ ಹೆಚ್ಚಿಸಬೇಕು. ಮನೆ ನಿಮಾ೯ಣಕ್ಕೆ ರೂಪಾಯಿ ಐದು ಲಕ್ಷ ಸಹಾಯಧನ ನೀಡಬೇಕು.ಹೆರಿಗೆ ಭತ್ಯೆಯನ್ನು ಪುರುಷ ಫಲಾನುಭವಿಯ ಪತ್ನಿಗೂ ವಿಸ್ತರಿಸಬೇಕು, ಅಡುಗೆ ಅನಿಲ, ಕನ್ನಡಕ, ಅಂಗವಿಕಲ ಪರಿಕರ ಕೊಳ್ಳಲು ಸಹಾಯಧನ, ಕಾರ್ಮಿಕರ ಮಕ್ಕಳಿಗೆ ಮೆರಿಟ್ ವಿದ್ಯಾಥಿ೯ ವೇತನ ಜಾರಿಮಾಡಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಯಿತು. ಮುಖಂಡರಾದ ರಾಜೀವ ಪಡುಕೋಣೆ, ರೊನಾಲ್ಡ್ ರಾಜೇಶ್ ಕ್ವಾಡ್ರಸ್,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಉಚಿತ ಕಾನೂನು ನೆರವನ್ನು ಪಡೆಯಲು ಅರ್ಹರಾದ ವ್ಯಕ್ತಿಗಳನ್ನು ಗುರುತಿಸಿ ಕಾನೂನಾತ್ಮಕ ಸೇವೆಯನ್ನು ಉಚಿತವಾಗಿ ನೀಡಬೇಕು. ಲೋಕ ಅದಾಲತ್ ಏರ್ಪಡಿಸಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಳಿಸಿ, ಕಾನೂನು ಅರಿವು ಮೂಡಿಸಬೇಕು ಎಂದು ಉಡುಪಿ ಜಿಲ್ಲಾ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಶರ್ಮಿಳಾ ಎಸ್. ಹೇಳಿದರು. ಅವರು ಯು. ಕಮಲಾ ಬಾಯಿ ಪ್ರೌಢಶಾಲೆಯಲ್ಲಿ ನಡೆದ ಉಡುಪಿ ವಲಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯರಾದ ವಿಜಯ ವಾಸು ಪೂಜಾರಿ ಕಾನೂನಿನ ಕುರಿತು ಮಾಹಿತಿಯನ್ನು ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಿವಕುಮಾರ್ ಕಣ್ಣನ್, ಸುಮಿತ್ ಅಣ್ಣಾಮಲೈ, ಪ್ರವೀಣ್ ಮಾಹೆ ಮಣಿಪಾಲ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಮಲ್ಲಿಕ, ಡೊಮಿಯನ್ ನೊರೋಹ್ನ, ರಮೇಶ್ ದೇವಾಡಿಗರನ್ನು ಗೌರವಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವಿಜಯೇಂದ್ರ ವಸಂತ್, ಜಿಲ್ಲಾ ದೈ.ಶಿಕ್ಷಣ ಅಧಿಕಾರಿ ರಘನಾಥ್,…
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಎರಡು ವರ್ಷಗಳಿಂದ ಮುದ್ದಾಗಿ ಸಾಕಿದ ಹಸುವಿಗೆ ಅದ್ದೂರಿ ಸೀಮಂತ ಶಾಸ್ತ್ರ ನೆರವೇರಿಸಿದ ವೈಶಿಷ್ಟ್ಯಪೂರ್ಣ ಘಟನೆ ತಾಲೂಕಿನ ಗುಲ್ವಾಡಿ ಗ್ರಾಮದ ಕೌಂಜೂರು ಎಂಬಲ್ಲಿ ನಡೆದಿದೆ. ಕೌಂಜೂರು ನಿವಾಸಿ ಬಾಲಕೃಷ್ಣ ಆಚಾರ್ಯ ಅವರ 2 ವರ್ಷದ ಹಿಂದೆ ಮುದ್ದಾದ ಹೆಣ್ಣು ಕರುವನ್ನು ತಂದು ನಂದಿನಿ ಎಂಬ ಹೆಸರಿಟ್ಟು ಪ್ರೀತಿಯಿಂದ ಸಾಕಿದ್ದರು. ಈ ಕರು ಮನೆಯೊಳಗೆಯೇ ಹೆಚ್ಚಾಗಿ ಇರುತ್ತಿತ್ತು. ರಾತ್ರಿ ಹೊತ್ತು ಮಾತ್ರ ಕೊಟ್ಟಿಗೆಯೊಳಗೆ ಇರುತ್ತಿದ್ದು, ಮನೆಯ ಸದಸ್ಯರಿಗೆ ಅಚ್ಚುಮೆಚ್ಚಿನದಾಗಿತ್ತು. ಈ ನಂದಿನಿ ಈಗ ಗರ್ಭ ಧರಿಸಿದ್ದು 7 ತಿಂಗಳ ಗರ್ಭಿಣಿಗೆ ಮನೆಯವರು ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಬಯಕೆ ಶಾಸ್ತ್ರ ಮಾಡಿದ್ದಾರೆ. ಸೀಮಂತಕ್ಕೆ ನಂದಿನಿ ಹಸುವನ್ನು ಮದುಮಗಳಂತೆ ಸಿಂಗರಿಸಲಾಗಿತ್ತು. ಚಿನ್ನದ ಸರ, ತಲೆಗೆ ಬಿಂದಿ ಹಾಕಿ ಸೀರೆ ಉಡಿಸಿ, ಸಿಂಗಾರ ಮೊದಲಾದ ಹೂಗಳಿಂದ ಸಿಂಗರಿಸಲಾಗಿತ್ತು. ಬಯಕೆ ಶಾಸ್ತ್ರವನ್ನು ಮನುಷ್ಯರಿಗೆ ಹೇಗೆ ಮಾಡಬೇಕೋ ಅದೇ ರೀತಿ ನಾನಾ ರೀತಿಯಲ್ಲಿ ಭಕ್ಷ್ಯಗಳನ್ನು (ಸಿಹಿತಿಂಡಿ, ಚಕ್ಕುಲಿ ಮೊದಲಾದ ತಿನಿಸು) ಬಡಿಸಿ 15ಕ್ಕೂ ಅಧಿಕ…
ಕುದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ, ಅ.13: ಬಡಗು ತಿಟ್ಟಿನ ಹಿರಿಯ ವೇಷಧಾರಿ ಅನಂತ ಕುಲಾಲ (66) ಅವರು ಮಂಗಳವಾರ ರಾತ್ರಿ ಮೊಳಹಳ್ಳಿಯಲ್ಲಿ ನಿಧನ ಹೊಂದಿದರು. ಅವರು ಕಳೆದ ಆರು ತಿಂಗಳಿನಿಂದ ಅಸೌಖ್ಯದಲ್ಲಿದ್ದರು. ಅಮೃತೇಶ್ವರೀ, ಹಿರಿಯಡಕ, ಸಾಲಿಗ್ರಾಮ, ಪೆರ್ಡೂರು, ಹಾಲಾಡಿ, ಮಾರಣಕಟ್ಟೆ ಮೇಳಗಳಲ್ಲಿ ಕಲಾವಿದರಾಗಿ ದುಡಿದಿದ್ದರು. ಮಾರಣಕಟ್ಟೆ ಮೇಳವೊಂದರಲ್ಲೇ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಅವರು ಯಕ್ಷಗಾನ ಕಲಾರಂಗ ಪ್ರಶಸ್ತಿ ಹಾಗೂ ಎಮ್. ಎಮ್. ಹೆಗಡೆ ಪ್ರಶಸ್ತಿ ಪಡೆದುಕೊಂಡಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಡಿಸೆಂಬರ್ 3ರಂದು ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ಸರ್ಕಾರದ ವತಿಯಿಂದ ವಿಕಲಚೇತನರ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ 15 ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ / ಸಲ್ಲಿಸಿರುವ ವಿಶೇಷ ಶಿಕ್ಷಕರಿಗೂ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ನಮೂನೆಯನ್ನು ಉಡುಪಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳು, ಸಿ ಬ್ಲಾಕ್, ತಳಮಹಡಿ, ಜಿಲ್ಲಾ ಪಂಚಾಯತ್ ವಿಭಾಗ, ಜಿಲ್ಲಾಧಿಕಾರಿ ಕಛೇರಿ, ಮಣಿಪಾಲ ಆಥವಾ ಇಲಾಖಾ ವೆಬ್ ಸೈಟ್ www.dwdsc.kar,nic.in ನಿಂದ ಪಡೆದು ಅಕ್ಟೋಬರ್ 25ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0820-2574810/811 ನ್ನು ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: 47 ನೇ ವರುಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಎರಡನೇ ದಿನವಾದ ಮಂಗಳವಾರದಂದು ಗಂಗೊಳ್ಳಿಯ ಸ್ಯಾಕ್ಸೋಫೋನ್ ವಾದನದ ಬಹುಮುಖ ಬಾಲ ಪ್ರತಿಭೆ ಸಂಜಿತ್ ಎಮ್ ದೇವಾಡಿಗ ತಮ್ಮ ತಂಡದೊಂದಿಗೆ ಸ್ಯಾಕ್ಸೋಫೋನ್ ವಾದನ ಸೇವೆಯನ್ನು ಸಲ್ಲಿಸಿದರು. ಗಣನಾಯಕಾಯ, ನಮ್ಮಮ್ಮ ಶಾರದೆ, ಎಂತ ಅಂದ ಎಂತ ಚೆಂದ, ಶಾರದೆ ದಯೆ ತೋರಿದೆ, ಬ್ರಹ್ಮ ಮುಕುಟೆ, ಭಾಗ್ಯದ ಲಕ್ಷ್ಮಿ ಬಾರಮ್ಮ, ತಂಬೂರಿ ಮೀಟಿದವ ಮೊದಲಾದ ಗೀತೆಗಳನ್ನು ಸಾಕ್ಸೋಫೋನ್ ವಾದನದ ಮೂಲಕ ಸುಂದರವಾಗಿ ಪ್ರಸ್ತುತಪಡಿಸಿ ಜನಮನವನ್ನು ಸೆಳೆದರು. ತವಿಲ್ ನಲ್ಲಿ ಹರ್ಷವರ್ಧನ ಖಾರ್ವಿ, ತಬಲಾದಲ್ಲಿ ಸುಧೀಂದ್ರ ಆಚಾರ್ಯ ವಂಡ್ಸೆ, ಗೆಜ್ಜೆಯಲ್ಲಿ ಅಭಿಷೇಕ್ ಪೂಜಾರಿ ಮತ್ತು ತಾಳದಲ್ಲಿ ಮಾಧವ ದೇವಾಡಿಗ ಸಹಕರಿಸಿದರು. ಪ್ರಧಾನ ಪುರೋಹಿತರಾದ ಜಿ. ರಾಘವೇಂದ್ರ ನಾರಾಯಣ ಆಚಾರ್ಯು ಉಪಸ್ಥಿತರಿದ್ದರು. ಸರಸ್ವತಿ ವಿದ್ಯಾಲಯದ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಶಾರದ ಮಹೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಜಿ. ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೆರಾಡಿ ವರಸಿದ್ಧಿ ವಿನಾಯಕ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಮಾಹಿತಿ ಕಾರ್ಯಾಗಾರ ಏರ್ಪಡಿಸಿದ್ದು, ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿಎ, ಸಿಎಸ್ ಕೋರ್ಸ್‌ಗಳ ಅಧ್ಯಯನ, ಪರೀಕ್ಷಾ ಸಿದ್ಧತೆ ಹಾಗೂ ಅದಕ್ಕಿರುವ ವಿಪುಲ ಉದ್ಯೋಗವಕಾಶಗಳ ಕುರಿತು ಚಾರ್ಟೆಡ್ ಅಕೌಂಟೆಂಟ್ ಗುರುರಾಜ್ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಕುಮಾರ್ ಆರ್ ವಹಿಸಿದ್ದು, ಪದವಿ ಕಾಲೇಜಿನ ಮುಖ್ಯಸ್ಥರಾದ ಸತೀಶ್ ನಾಗದ್ದೆ ಪ್ರಾಸ್ತವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಅಶ್ರಿತಾ ಆರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕ ಅಭಿಜಿತ್ ಹೆಮ್ಮಾಡಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ‘ಆಳ್ವಾಸ್ ಐ ಕೇರ್ ಯುನಿಟ್’ಗೆ ಅಧಿಕೃತ ಚಾಲನೆ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ರಿಬ್ಬನ್ ಕತ್ತರಿಸಿ ಕನ್ನಡಕ ವಿತರಿಸುವ ಮೂಲಕ ಉದ್ಘಾಟಿಸಿದರು. ಬೆಳಿಗ್ಗೆ 6ರಿಂದ ಸಂಜೆ 5ರ ವರೆಗೆ ಗ್ಲೌಕೋಮ ಚೆಕ್ ಅಪ್, ರೆಟಿನಾ ಇವಾಲ್ಯುಯೇಷನ್, ಡ್ರೈ ಐ ಇವಾಲ್ಯುಯೇಷನ್ ಸೇರಿದಂತೆ ಇತರ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆಗಳ ಸೌಲಭ್ಯ ಇರಲಿದೆ. ವಿವಿಧ ರೀತಿಯ ಕನ್ನಡಕಗಳ ಲಭ್ಯವಿರುತ್ತದೆ. ಕಾರ್ಯಕ್ರಮದಲ್ಲಿ ಟ್ರಸ್ಟಿ ಡಾ. ಹನಾ ಶೆಟ್ಟಿ, ಪ್ರಾಂಶುಪಾಲ ಡಾ. ಸಜಿತ್ ಎಂ., ಡಾ. ವಿಶಾಕ್, ಡಾ. ಅಪೇಕ್ಷ ರಾವ್, ಆಳ್ವಾಸ್ ನಿರಾಮಯದ ನಿರ್ದೇಶಕಿ ಡಾ. ಸುರೇಖಾ ಪೈ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಾನು ಎನ್ನುವುದು ಅಹಂಕಾರದ ಸಂಕೇತ. ಮುಖ್ಯವಾಗಿ ಸಂಘಟನೆಗೆ ಅದು ಮಾರಕ ಮತ್ತು ವರ್ಜ್ಯವಾಗಿ ನಾವು ಎಂಬ ಪದ ಬಳಕೆಯಲ್ಲಿರಬೇಕು ಎಂದು ಬಾರಕೂರಿನ ಏಕನಾಥೇಶ್ವರಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಅಣ್ಣಯ್ಯ ಶೇರಿಗಾರ್ ಹೇಳಿದರು. ಮರವಂತೆ ದೇವಾಡಿಗ ಸಂಘದ ಆಶ್ರಯದಲ್ಲಿ ಇಲ್ಲಿನ ನೀರೋಣಿ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆದ ಪುಸ್ತಕ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದುಳಿದ ದೇವಾಡಿಗ ಸಮುದಾಯವು ಸಮಾಜದ ಪ್ರಧಾನ ವಾಹಿನಿಗೆ ಬರಬೇಕಾದರೆ ಅದರ ಎಲ್ಲ ಮಕ್ಕಳು ಶಿಕ್ಷಣ ಪಡೆಯಬೇಕು. ಅದಕ್ಕೆ ಸೂಕ್ತ ಪ್ರೋತ್ಸಾಹ, ನೆರವು ನೀಡುವ ಹೊಣೆಯನ್ನು ಸಂಘಟನೆ ವಹಿಸಿಕೊಳ್ಳಬೇಕು ಎಂದು ಹೇಳಿದರು. ಅರಣ್ಯ ಇಲಾಖೆಯ ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ರಘುರಾಮ ದೇವಾಡಿಗ ಆಲೂರು ಕಾರ್ಯಕ್ರಮ ಉದ್ಘಾಟಿಸಿದರು. ಕೋಶಾಧಿಕಾರಿ ಹರೀಶ ದೇವಾಡಿಗ ಸ್ವಾಗತಿಸಿದರು. ಗೌರವಾಧ್ಯಕ್ಷ ನಾರಾಯಣ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ್ ದೇವಾಡಿಗ ವಂದಿಸಿದರು. ಗೋಪಾಲ ದೇವಾಡಿಗ ನಿರೂಪಿಸಿದರು. ಸಮುದಾಯದ ಎಲ್ಲ ವಿದ್ಯಾರ್ಥಿಳಿಗೆ ನೋಟ್ ಪುಸ್ತಕ, ಪ್ರತಿಭಾನ್ವಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗೋ ಹತ್ಯೆಯನ್ನು ವಿರೋಧಿಸಿ ನಡೆದ ಬೃಹತ್ ಪಾದಯಾತ್ರೆಯ ಬಳಿಕ ಅನ್ಯಕೋಮಿನ ಒಂದು ವರ್ಗ ಗಂಗೊಳ್ಳಿ ಮೀನು ಖರೀದಿಗೆ ಬಹಿಷ್ಕಾರ ಹಾಕಿರುವುದನ್ನು ಖಂಡಿಸಿ, ಮೀನುಗಾರ ಮಹಿಳೆಯರಿಗೆ ನೈತಿಕ ಬೆಂಬಲ ನೀಡಲು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕುಂದಾಪುರ ಪ್ರಖಂಡ ಮುಂದಾಗಿದೆ. ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕುಂದಾಪುರ ಪ್ರಖಂಡದ ಪ್ರಮುಖರು ಹಾಗೂ ನಂದಗೋಕುಲ ಗೇರುಬೀಜ ಕಾರ್ಖಾನೆಯ ನೌಕರರು, ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮಂಗಳವಾರ ಮೀನು ಖರೀದಿಸಿ ಮಹಿಳಾ ಮೀನುಗಾರರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಮುಂದಿನ ದಿನಗಳಲ್ಲಿ ಬೇರೆ ಬೇರೆ ಗ್ರಾಮದ ಹಿಂದು ಸಮಾಜದವರು ಗಂಗೊಳ್ಳಿಗೆ ಬಂದು ಮೀನು ಖರೀದಿಸುವ ಕಾರ್ಯ ಮಾಡಲಿದ್ದಾರೆ. ಯಾವುದೇ ಕಾರಣಕ್ಕೂ ಮಹಿಳಾ ಮೀನುಗಾರರು ಎದೆಗುಂದಬಾರದು ಎಂದು ಮಹಿಳೆಯರಲ್ಲಿ ವಿಶ್ವಾಸ ತುಂಬಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್‌ನ ಕೇಂದ್ರಿಯ ವಿಶ್ವಸ್ಥ ಮಂಡಳಿ ಸದಸ್ಯ ಪ್ರೇಮಾನಂದ ಶೆಟ್ಟಿ, ಗಂಗೊಳ್ಳಿಯಲ್ಲಿ ನಡೆದಿರುವ ವಿದ್ಯಮಾನದ ಬಳಿಕ ಅನ್ಯಕೋಮಿನವರು ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ…
