ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಅಂಪಾರು ಸಮೀಪದ ಮೂಡುಬಗೆ ಎಂಬಲ್ಲಿ ಮಂಗಳವಾರ ಸಂಜೆ ಕಾಣಿಸಿಕೊಂಡ ಬಿರುಗಾಳಿ ಅಬ್ಬರಕ್ಕೆ ಅಪಾರ ಮರಮಟ್ಟುಗಳು ಧರಾಶಾಹಿಗೊಂಡಿದ್ದು ಮನೆ, ದನದ ಕೊಟ್ಟಿಗೆ, ವಿದ್ಯುತ್ ಕಂಬ, ಕೃಷಿತೋಟ ಹಾನಿಗೊಂಡಿದೆ. ಕುಂದಾಪುರ ಸಿದ್ದಾಪುರ ರಾಜ್ಯ ಹೆದ್ದಾರಿ ಹೋಗುವ ಇಲ್ಲಿ ಮರಗಳು ಹೆದ್ದಾರಿಗೆ ಒರಗಿದ ಪರಿಣಾಮ ಎರಡುವರೆ ತಾಸು ಹೆದ್ದಾರಿ ಬಂದ್ ಆಗಿದ್ದು, ಮೆಸ್ಕಾಂ, ಅರಣ್ಯ ಇಲಾಖೆ, ಪೋಲಿಸರು ಹಾಗೂ ಸ್ಥಳೀಯರು ಹೆದ್ದಾರಿಯಲ್ಲಿನ ಮರಗಳ ತೆರವಿಗೆ ಶ್ರಮಿಸಿದರು. ಅಡಿಕೆ, ತೆಂಗು, ಮನೆಗಳಿಗೆ ಹಾನಿ:ಸಿದ್ದಾಪುರ: ಗ್ರಾಮೀಣ ಭಾಗದ ಶಂಕರನಾರಾಯಣ, ಅಂಪಾರು, ಕೊಂಡಳ್ಳಿ, ಶಾನ್ಕಟ್ಟು, ಮೂಡುಬಗೆ, ಗೊರಟೆ, ಕನ್ನಾಲಿ, ಕುಳ್ಳುಂಜೆ ಮುಂತಾದ ಕಡೆ ಮಂಗಳವಾರ ಮಧ್ಯಾಹ್ನ ಸಮಯದಲ್ಲಿ ಬೀಸಿದ ಸುಂಟರಗಾಳಿ ಅಬ್ಬರಕ್ಕೆ ಮನೆ, ಅಡಿಕೆ, ತೆಂಗು, ವಿದ್ಯುತ್ ಕಂಬ ಇತ್ಯಾದಿ ಭಾರಿ ಗಾತ್ರದ ಮರಗಳು ಧರೆಗುರುಳಿವೆ. ಹಠಾತ್ತನೆ ಬೀಸಿದ ಗಾಳಿಗೆ ಸಾವಿರಾರು ಅಡಿಕೆ ತೆಂಗಿನ ಮರಗಳು ಹಾಗೂ ಅಂದಾಜು ೩೦ಕ್ಕೂ ಮಿಕ್ಕಿ ಮನೆಗಳು ಗಾಳಿಯ ಅಬ್ಬರಕ್ಕೆ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಡವೆಯನ್ನು ಕೊಂದು ಮಾಂಸ ಮಾಡಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ತಾಲೂಕು ಯಡ್ತರೆ ಗ್ರಾಮದ ಮುದ್ದೋಡಿ ಸಮೀಪದ ಕುಂಜಳ್ಳಿ ಮಾರ್ಗದಲ್ಲಿ ನಡೆದಿದೆ. ಕಡವೆ ಮಾಂಸ, 2 ದ್ವಿಚಕ್ರ ವಾಹನ ಸಹಿತ ಯಡ್ತರೆ ನಿವಾಸಿಗಳಾದ ಮಮ್ಮಿಶಾಹ್ ಫೈಜಲ್, ಖರುರಿ ನಿಜಾಮುದ್ದೀನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದಾರೆನ್ನಾದ ಹೆರಿಯಣ್ಣ ಶೆಟ್ಟಿ, ಪ್ರವೀಣ್ ಶೆಟ್ಟಿ ಹಾಗೂ ಇತರರು ಪರಾರಿಯಾಗಿದ್ದಾರೆ. ಬೈಂದೂರಿನಿಂದ ಕುಂಜಳ್ಳಿಗೆ ಹೋಗುವ ರಸ್ತೆಯ ಮಾರ್ಗ ಮದ್ಯೆ ಕಡವೆಯೊಂದನ್ನು ಹೊಡೆದು ಕೊಂದು ಮಾಂಸ ಮಾಡಿ ಸಾಗಾಟ ಮಾಡುತ್ತಿದ್ದಾಗ ಮಾಹಿತಿ ಪಡೆದ ಬೈಂದೂರು ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು ನೇತೃತ್ವದ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಆರೋಪಿಗಳ ವಿರುದ್ಧ 1972 ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಜಿ. ಮಾರ್ಗದರ್ಶನದಲ್ಲಿ ಬೈಂದೂರು ವಲಯಾರಣ್ಯಾಧಿಕಾರಿ ಟಿ. ಕಿರಣ್ ಬಾಬು, ಉಪ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಅ.05: ಪ್ರತಿಯೊಬ್ಬ ನಾಗರಿಕನೂ ಸಾಮಾನ್ಯ ಕಾನೂನಿನ ಅರಿವು ಹೊಂದಿದಾಗ ಮಾತ್ರ ಉತ್ತಮ ಸಾಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್ ಹೇಳಿದರು. ಅವರು ಇಂದು ನಗರದ ಮಣಿಪಾಲ್ನ ಮಾಧವಕೃಪ ಶಾಲೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಕೀಲರ ಸಂಘ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಪೋಲಿಸ್ ಇಲಾಖೆ, ಅರಣ್ಯ ಇಲಾಖೆ, ಹಾಗೂ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ 75 ನೇ ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೋವಿಡ್-19 ಜಾಗೃತಿ ಮತ್ತು ಲಸಿಕಾ ಅಭಿಯಾನ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಮಾರ್ಗಸೂಚಿ ನಾಮಫಲಕವನ್ನು ಕೊಡುಗೆಯಾಗಿ ನೀಡಲಾಯಿತು. ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ., ರಾಷ್ಟೀಯ ಹೆದ್ದಾರಿಯ ಬದಿಯಲ್ಲೇ ಆಸ್ಪತ್ರೆ ಇದ್ದು ವೇಗದಲ್ಲಿ ವಾಹನಗಳು ಸಂಚರಿಸುತ್ತಿರುವುದರಿಂದ ಪಕ್ಕನೆ ಆಸ್ಪತ್ರೆಯ ಇರುವಿಕೆ ಗೋಚರಿಸುವುದಿಲ್ಲ. ಹೊಸಬರಿಗೆ, ಇಲಾಖಾ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಉಪಯುಕ್ತವಾಗಲಿ ಎನ್ನುವ ಉದ್ದೇಶದಿಂದ ಈ ಕೊಡುಗೆಯನ್ನು ರೋಟರಿ ಸಂಸ್ಥೆ ವತಿಯಿಂದ ನೀಡುತ್ತಿರುವುದಾಗಿ ಅವರು ಹೇಳಿದರು. ನಾಮಫಲಕವನ್ನು ಕೊಡುಗೆಯಾಗಿ ನೀಡಿದ ಗಂಗೊಳ್ಳಿ ರೋಟರಿ ಸದಸ್ಯ ಬೋರ್ಡಿನ ಲಿಫ್ಟನ್ ಒಲಿವೇರಾ ಅವರನ್ನು ಗೌರವಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಲಯ ಸೇನಾನಿ ಕೆ.ರಾಮನಾಥ್ಧ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ತಮ್ಮ ಸಾರ್ಥಕ ಸೇವೆಯನ್ನು ಪೂರೈಸಿ ನಿವೃತ್ತಿ ಹೊಂದಿದ ಹಿಂದಿ ಶಿಕ್ಷಕಿ ಫೆಲ್ಸಿಯಾನ ಡಿ’ಸೋಜರವರನ್ನು ಸನ್ಮಾನಿಸಲಾಯಿತು. ಹಾಗೇಯೆ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳಿಸಿ ಸಾಧನೆ ಮಾಡಿದ ಶ್ರೇಯಾ ಮೇಸ್ತ, ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಒಟ್ಟು 9 ವಿದ್ಯಾರ್ಥಿಗಳಾದ ಅನನ್ಯ ಬಿ, ಶಶಿಕಾಂತ, ಅಮಿಷ, ಸಂಜಯ್, ಸ್ವಾತಿ,ಸಿಂಚನ ಬಿ , ಸುಶಾಂತ್, ಆದಿತ್ಯ, ಸ್ವಪ್ನ ಇವರೊಂದಿಗೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಗೌರವ ಪಡೆದ ಒಟ್ಟು 7 ವಿದ್ಯಾರ್ಥಿಗಳಾದ ಪ್ರೀತಿ, ರಶ್ಮಿತಾ, ಅನನ್ಯ, ಸ್ವಪ್ನ, ಅನ್ಸಿಟಾ, ರಶ್ಮಿತಾ, ರೂಪ ಎಲ್ಲ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾದ ಭ. ವೈಲೆಟ್ ಮಾತನಾಡಿ ಹಿಂದಿ ಶಿಕ್ಷಕಿಯವರ ಅಮೂಲ್ಯ ಸೇವೆಯನ್ನು ಕೊಂಡಾಡಿದರು. ಈ ಸಂದರ್ಭ ಧರ್ಮಗುರುಗಳು ಆಶೀರ್ವಚನ ನುಡಿದರು. ಭ. ಡೋರಿನ್, ಜಾನ್ ಡಿ’ಸೋಜಾ, ಉಮೇಶ್ ಕರ್ಣಿಕ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ್, ಶಿಕ್ಷಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಸ್ವಾಸ್ಥ್ಯ ಸಮಾಜಕ್ಕೆ ಗಾಂಧಿ ತತ್ವಗಳು ಅವಶ್ಯ ಎಂದು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಕೃಷ್ಣರಾಜ ಕರಬ ಹೇಳಿದರು. ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ನಡೆದ ಸದಾನಂದ ನಾರಾವಿಯವರ ‘ಗಾಂಧಿ ಸಾಗರದ ಬಿಂದುಗಳು’ ಕೃತಿ ಅವಲೋಕನ ಕಾರ್ಯಕ್ರಮದಲ್ಲಿ ಕೃತಿಯನ್ನು ವಿಮರ್ಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶೋಷಣೆಗೆ ಒಳಾಗಾದ ಪಂಗಡ ಮತ್ತು ಗ್ರಾಮೀಣ ಜನರ ನೋವಿಗೆ ಸ್ಪಂದಿಸುವ ಗುಣ ಬೆಳಸಿಕೊಂಡರೆ, ಜಗತ್ತಿನ ಕಷ್ಟಗಳಿಗೆ ಸ್ಪಂದಿಸುವ ಸಾಮರ್ಥ್ಯ ಬೆಳೆಯುತ್ತದೆ. ಜಾತಿ ಲೆಕ್ಕಾಚಾರ ಇರದೇ ಸರ್ವ ಧರ್ಮ ಸಹಿಷ್ಣು ಭಾವನೆ ಎಲ್ಲರಲ್ಲೂ ಇರಬೇಕು, ಗಾಂಧೀಜಿಯು ಎಲ್ಲ ಧರ್ಮವನ್ನು ಗೌರವಿಸುವವರು, ಗಾಂಧಿ ತತ್ವಗಳಿಂದ ಸಮಾಜದ ಸ್ವಾಸ್ಥ್ಯತೆ ಹೆಚ್ಚುತ್ತದೆ. ಇಂತಹ ಕೃತಿಗಳನ್ನು ಪಠ್ಯ ಪುಸ್ತಕಕ್ಕೆ ಸೇರಿಸಿದರೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ನಿರ್ಮಾಣದ ಚಿಂತನೆಗಳು ಬೆಳೆಯುತ್ತದೆ ಎಂದು ಹೇಳಿದರು. ಇದೇ ಸಂರ್ದಭದಲ್ಲಿ ‘ಗಾಂಧಿ ಸಾಗರದ ಬಿಂದುಗಳು’ ಪುಸ್ತಕದ ಲೇಖಕರಾದ ಸದಾನಂದ ನಾರವಿ, ಬದುಕಿನಲ್ಲಿ ಮೌಲ್ಯಗಳು ಬಹಳ ಮುಖ್ಯ ಹಾಗೂ ಅವುಗಳು ಮನುಷ್ಯನ ಜೀವನದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸಾಹಿತ್ಯವನ್ನು ಚೌಕಟ್ಟಿನಲ್ಲಿ ಬಂಧಿಸದೇ ಸ್ವತಂತ್ರವಾಗಿ ಸಾಹಿತ್ಯ ರಚನೆಗೆ ತೊಡಗಿಸಿಕೊಂಡಾಗ ಉತ್ತಮ ಸಾಹಿತ್ಯ ಅನಾವರಣಗೊಳ್ಳಲು ಸಾಧ್ಯ, ಸಾಹಿತ್ಯ ಕೃತಿ ಸಂವಾಹನ ಕ್ರಿಯೆ ಆಗಬೇಕಾಗುತ್ತದೆ ಪರಿಸ್ಥಿತಿಗೆ ತಕ್ಕ ಸುತ್ತಲಿನ ಪರಿಸ್ಥಿತಿ ಹೇಗೆ ಇತ್ತು ಆ ಪರಿಸರ ಹೇಗೆ ಮಾರ್ಗದರ್ಶನ ನೀಡುತ್ತಿತ್ತು ಆ ಪರಿಸರದಲ್ಲಿದ್ದ ಭಾಷೆ ಸಂವಹನಕ್ಕೆ ಒಳಪಟ್ಟಗ ಯಾವ ರೀತಿ ಮಾರ್ಪಟು ಹೊಂದುತ್ತಿತ್ತು ಈ ಎಲ್ಲಾ ವಿಚಾರಗಳು ಒಂದು ಸಾಹಿತ್ಯದ ಕೃತಿಯಿಂದ ತಿಳಿಯಲ್ಪಡುತ್ತದೆ. ಲೇಖಕನ ಭಾವನೆಗಳೇ ಅಕ್ಷರ ರೂಪದ ಸಾಹಿತ್ಯ ಎಂದು ಕನ್ನಡ ಉಪನ್ಯಾಸಕಿ, ಪರ್ಯಟಕಿ ಅರ್ಚನ ಆರ್ಯ ಅವರು ಹೇಳಿದರು. ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 17ನೇ ವರುಷದ ಸಂಭ್ರಮದ ಸಾಹ್ಯಿತ್ಯಿಕ -ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-2021(ಎಣೆಯಿಲ್ಲದ ಚಕಿತ) ಕಾರ್ಯಕ್ರಮದ ನಾಲ್ಕನೇ ದಿನದ ನುಡಿ ಚೇತನದಲ್ಲಿ ಮಾತನಾಡಿದರು. ಆಯಾಕಾಲದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕ.ರಾ.ಅ.ಪ. ಗುತ್ತಿಗೆ ವಿದ್ಯುತ್ದಾರರ ಸಂಘದಿಂದ ಸರ್ವ ಸದಸ್ಯರ ಸಹಯೋಗದೊಂದಿಗೆ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜನ್ಮ ದಿನದ ಪ್ರಯುಕ್ತ ಹುಂಚಾರುಬೆಟ್ಟು ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಮಹಾತ್ಮ ಗಾಂಧಿಜೀ ಹಾಗೂ ಶಾಸ್ತ್ರಿಜೀ ಅವರ ಪುತ್ತಲಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭ ಉಡುಪಿ ಜಿಲ್ಲಾ ಉಪದ್ಯಕ್ಷರು ಶ್ರೀಕಾಂತ ಶೆಣ್ಯ್, ರಾಜ್ಯ ಸಮಿತಿಯ ಸದಸ್ಯ ಪ್ರಭಾಕರ್ ರಾವ್, ಅದ್ಯಕ್ಷರಾದ ಶೇಖರ್ ಪೂಜಾರಿ, ಉಪಾದ್ಯಕ್ಷರಾದ ಜಯಂತ ಶೆಟ್ಟಿ ಅಜ್ರಿ , ಕಾರ್ಯದರ್ಶಿ ವಿಜಯಕುಮಾರ್ ಗೋವಿಂದ, ಖಚಾoಚಿ ರಾಮಕ್ರಿಷ್ಣ ಆಚಾರ್ ಹಾಗೂ ಹಾಜರಿದ್ದ ಸರ್ವ ಸದಸ್ಯರು ಉಪಸ್ಥಿತರಿದ್ದರು. ನಂತರ ಸಂಘದ ಕಚೇರಿಯಲ್ಲಿ ಮಾಸಿಕ ಸಾಮಾನ್ಯ ಸಭೆ ನಡೆಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಬೈಂದೂರು ಸಿಟಿ ಘಟಕಕ್ಕೆ ಜೆಸಿಐ ವಲಯ 15ಅಧ್ಯಕ್ಷೆ ಪಿ. ಪಿ. ಪಿ. ಸೌಜನ್ಯ ಹೆಗ್ದೆ ಭೇಟಿ ನೀಡಿದರು. ಈ ಸಂದರ್ಭ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಾಶ್ವತ ನಾಮಫಲಕ ಉದ್ಘಾಟಿಸಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶಾಶ್ವತ ನಾಮಫಲಕವನ್ನು ವಲಯ ಅಧ್ಯಕ್ಷರಿಂದ ಹಸ್ತಾಂತರಿಸಿದರು. ಹಸ್ತಾಂತರಿಸಿ ಮಾತನಾಡಿದ ಅವರು, ಜೆಸಿಐ ಬೈಂದೂರು ಜೆಸಿಐ ಇಂತಹ ಒಂದು ಅದ್ಭುತ ಕಾರ್ಯಕ್ರಮವನ್ನು ಉದ್ಘಾಟಿಸಿದಕ್ಕೆ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ.ಹಾಗೂ ಜೆಸಿಐ ಬೈಂದೂರು ಸಿಟಿ ಘಟಕದ ಅಧ್ಯಕ್ಷರನ್ನು ಹಾಗೂ ಸರ್ವ ಸದಸ್ಯರನ್ನು ತನ್ನ ಮುಕ್ತಕಂಠದಿಂದ ಪ್ರಶಂಸಿಸಿದರು. ಜೆಸಿಐ ವಲಯ 15ರ EA TO ZP ಜೆ ಎಫ್ ಎಂ ದೀಪಕ್ ಗಂಗೋಲಿ, ಬೈಂದೂರು ಸಿಟಿ ಘಟಕದ ಅಧ್ಯಕ್ಷರಾದ ಜೆಸಿ ಎಚ್ ಜಿ ಎಫ್ ಶ್ರೀಧರ ಆಚಾರ್ಯ, ಜೆಸಿಐ ವಲಯಾಧಿಕಾರಿ ಎಚ್ ಜಿ ಎಫ್ ಮಣಿಕಂಠ ಎಸ್ ದೇವಾಡಿಗ, ಜೆಸಿ ಎಚ್ ಜಿ ಎಫ್ ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರ್, ಜೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಇವರ ಸಹಯೋಗದಲ್ಲಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಗಾಂಧಿ ಓದು ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವಕಾರ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಪ್ರತಿ ಶಾಲೆಯ ವಾಚನಾಲಯಕ್ಕೂ ಗಾಂಧೀಜಿಯವರ ಆತ್ಮಚರಿತ್ರೆಯ ಪುಸ್ತಕಗಳನ್ನು ನೀಡಲಾಯಿತು. ಈ ಸಂದರ್ಭ ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಭಾರ ಸಮನ್ವಯಾಧಿಕಾರಿ ಸದಾನಂದ ಬೈಂದೂರು, ಹಿರಿಯ ರಂಗಕರ್ಮಿ ಜಿ.ವಿ ಕಾರಂತ ಉಪಸ್ಥಿತರಿದ್ದರು. ಶಿಕ್ಷಕ ಬಾಬು ಶೆಟ್ಟಿ ಗಾಂಧಿ ಓದಿನ ಪ್ರಸ್ತುತೆಯನ್ನು ವಿವರಿಸಿದರು. ರವೀಂದ್ರ ಸ್ವಾಗತಿಸಿದರು, ರವಿ ಕಟ್ಕೆರೆ ನಿರೂಪಿಸಿದರು, ವಾಸುದೇವ ಗಂಗೇರ ವಂದಿಸಿದರು.
