ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕ್ರೈಸ್ತ ಭಾಂದವರು ತಮ್ಮ ಚರ್ಚುಗಳಲ್ಲಿ ಕ್ರೈಸ್ತರ ಪವಿತ್ರ ಹಬ್ಬವಾದ ಮೊಂತಿಫೆಸ್ತ್ ( ಹೊಸ್ತು ) ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಕುಂದಾಪುರ, ಬಸ್ರೂರು, ತಲ್ಲೂರು, ನಾಡ, ತ್ರಾಸಿ, ಬೈಂದೂರು ಸೇರಿದಂತೆ 11 ಚರ್ಚ್ ಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನೆರವೇರಿದವು.

ಕುಂದಾಪುರದಲ್ಲಿ ರೋಜಾರಿ ಅಮ್ಮನವರ ಇಗರ್ಜಿಯಲ್ಲಿ ಮಾತೆ ಮೇರಿಯ ಮೊಂತಿ ಫೆಸ್ತ್ ಹುಟ್ಟು ಹಬ್ಬವನ್ನು ಬಹಳ ಶ್ರದ್ದಾಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು. ಚಿಕ್ಕ ಮಕ್ಕಳು ಬಾಲಾ ಮೇರಿ ಮಾತೆಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಹಬ್ಬಕ್ಕೆ ಚಾಲನೆಯನ್ನು ನೀಡಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಹಬ್ಬದ ಶುಭಾಶಯಗಳನ್ನು ಕೋರಿದರು. ನಂತರ ಹೊಸ ತೆನೆಯನ್ನು ಸಹಾಯಕ ಧರ್ಮಗುರು ವಂ| ಆಶಿರ್ವದಿಸಿ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.ಬ್ಯಾಂಡು ವಾದ್ಯಗಳ ಜೊತೆ ಗುರಿಕಾರರು ಹೊಸ ತೆನೆಗಳನ್ನು ಹಿಡಿದುಕೊಂಡು, ಭಕ್ತಾಧಿಗಳೊಂದಿಗೆ, ಬ್ಯಾಂಡು ಗಾಯನದೊಂದಿಗೆ ಬಾಲ ಮೇರಿ ಮಾತೆಯ ಮೂರ್ತಿಯನ್ನು ಭಕ್ತಿ ಶ್ರದ್ದಾಪೂರ್ವಕವಾಗಿ ಇಗರ್ಜಿಯಿಂದ ಮೆರವಣಿಗೆ ಹೊರಟು ಪುನ: ತಿರುಗಿ ಚರ್ಚಿನೊಳಗೆ ತಂದು, ಎಲ್ಲಾ ಕುಟುಂಬದವರಿಗೆ ತೆನೆಗಳನ್ನು ಹಂಚಲಾಯಿತು. ಮಕ್ಕಳಿಗೆ ಕಬ್ಬುಗಳನ್ನು ಹಂಚಲಾಯಿತು.

ಚಿತ್ರಗಳು: ಲಾರೆನ್ಸ್ ಫೆರ್ನಾಂಡಿಸ್ 


ಬೈಂದೂರಿನ ಹೋಲಿಕ್ರಾಸ್ ಇಗರ್ಜಿಯಲ್ಲಿ ತೆನೆ ಹಬ್ಬವನ್ನು ಆಚರಿಸಲಾಯಿತು.ಧರ್ಮಗುರು ವಂದನಿಯ ವಿನ್ಸೆಂಟ್ ಕುವೆಲ್ಲೋ ಹಾಗೂ ವಂದನಿಯ ಜೋಕೀಂ ಡಿಸೋಜಾ ರವರ ನೇತ್ರತ್ವದಲ್ಲಿ ತೆನೆಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ತಂದು ಬಾಲೆ ಮರಿಯಮ್ಮಳಿಗೆ ಹೂವುಗಳನ್ನು ಅರ್ಪಿಸಿ, ತೆನೆಗಳ ಆಶೀರ್ವಚನ ನಡೆಸಲಾಯಿತು.
ನಂತರ ವಿಶೇಷ ಬಲಿಪೂಜೆಯನ್ನು ನೆರೆವೆರಿಸಿ, ಸಮಸ್ತರಿಗೆ ತೆನೆ ಮತ್ತು ಕಬ್ಬುಗಳನ್ನು ವಿತರಿಸಲಾಯಿತು.
















