ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮಣಿಪಾಲದ ರಜತಾದ್ರಿಯಲ್ಲಿನ ಉಡುಪಿ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣದಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಬಳಕೆ, ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ, ಇಡೀ ಪ್ರದೇಶವನ್ನು ತಂಬಾಕು ಮುಕ್ತ ವಲಯವನ್ನಾಗಿ ಘೋಷಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಅವರು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಜಿಲ್ಲಾ ತಂಬಾಕು ನಿಷೇಧ ಕೋಶದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳೂ ಸೇರಿದಂತೆ, ಕಛೇರಿಗಳಿಗೆ ಆಗಮಿಸುವ ಸಾರ್ವಜನಿಕರು, ಆವರಣದಲ್ಲಿ ಯಾವುದೇ ಬಗೆಯ ತಂಬಾಕು ಉತ್ಪನ್ನಗಳ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಾಗೂ ಆವರಣದಲ್ಲಿನ ಕ್ಯಾಂಟೀನ್ ಹಾಗೂ ಇತರೆ ಮಳಿಗೆಗಳಲ್ಲಿ ಸಹ ಕಡ್ಡಾಯವಾಗಿ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ತಂಬಾಕು ಮುಕ್ತ ಕಚೇರಿ ಎಂದು ಆಯಾ ಕಚೇರಿಯ ಮುಖ್ಯಸ್ಥರು ಘೋಷಣೆ ಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಈ ಪ್ರದೇಶಗಳಲ್ಲಿ ಆದೇಶ ಮೀರಿ ತಂಬಾಕು ಉತ್ಪನ್ನ ಬಳಸುವವರ ವಿರುದ್ದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಅಲಹಾಬಾದ್ (ಐಐಐಟಿ-ಎ) ಹಾಗೂ ಆಳ್ವಾಸ್ ಇಂಜಿನಿಯರ್ ಕಾಲೇಜಿನ ನಡುವಿನ ಒಪ್ಪಂದವು ಮುಂದಿನ ಐದು ವರ್ಷಕ್ಕೆ ವಿಸ್ತರಣೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಇದ್ದ ಒಪ್ಪಂದದಿಂದಾಗಿ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನ, ಅವಕಾಶಗಳು ಸಿಕ್ಕಿವೆ. ರಾಜ್ಯದ ಎರಡು ಖಾಸಗಿ ಶಿಕ್ಷಣ ಸಂಸ್ಥೆಗಳು ಐಐಐಟಿ ಜೊತೆ ಒಡಂಬಡಿಕೆ ಮಾಡಿದ್ದು, ಅದರಲ್ಲಿ ಆಳ್ವಾಸ್ ಕೂಡ ಒಂದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಒಡಂಬಡಿಕೆಯಿಂದಾಗಿ ಇಂಟರ್ಶಿಪ್, ಸಂಶೋಧನೆ ಮತ್ತು ಕಾರ್ಯಾಗಾರಗಳನ್ನು ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ವಾಂಸರ ತಂಡವು ಡೇಟಾ ವಿಶ್ಲೇಷಣೆ, ಯಂತ್ರ ಕಲಿಕೆ, ಆಳವಾದ ಕಲಿಕೆ, ಪೈಥಾನ್, ಜಾವಾ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಜಂಟಿಯಾಗಿ ನಡೆಸಲಾಗುತ್ತದೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು ಮತ್ತು ಸಂಬಂಧಿತ ಪ್ರದೇಶಗಳಲ್ಲಿ ಪಿಎಚ್ಡಿ ಮತ್ತು ಪೋಸ್ಟ್ ಡಾಕ್ಟರೇಟ್ ಕಾರ್ಯಕ್ರಮಗಳನ್ನು ಮುಂದುವರಿಸಲು ಐಐಐಟಿ-ಎ ನಲ್ಲಿ ವಿದ್ಯಾರ್ಥಿಗಳು ಮತ್ತು ಎಐಇಟಿಯ ಅಧ್ಯಾಪಕರನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಒಪ್ಪಂದವು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಯಾವುದೇ ಬಗೆಯ ಆಹಾರ ತಯಾರಿಕೆಯಲ್ಲಿ ಮಿತಿ ಮೀರಿದ ಟೇಸ್ಟಿ ಪೌಡರ್ ಬಳಕೆ ಕಂಡು ಬಂದಲ್ಲಿ ಅಂತಹ ಆಹಾರ ತಯಾರಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ , ಆಹಾರ ಸುರಕ್ಷತೆ ಕುರಿತ ಜಿಲ್ಲಾ ಮಟ್ಟದ ಸಲಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಬಿ ಮಂಚೂರಿ, ಚೈನೀಸ್ ತಿನಿಸುಗಳು ಮುಂತಾದ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ರುಚಿಯ ಹೆಚ್ಚಳಕ್ಕೆ ಟೇಸ್ಟಿ ಪೌಡರ್ನ ಬಳಕೆ ನಡೆಯುತ್ತಿದೆ, ಆದರೆ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಬಳಸಿದ್ದಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ಅಹಾರ ಸುರಕ್ಷತಾ ಅಧಿಕಾರಿಗಳು ಈ ಬಗ್ಗೆ ದಿಢೀರ್ ದಾಳಿ ನಡೆಸಿ, ಆಹಾರ ಪದಾರ್ಥಗಳ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿ, ತಪ್ಪಿತಸ್ಥರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ, ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು. ಅಲ್ಲದೇ ಅನುಮತಿಯಿಲ್ಲದೇ ಅನಧಿಕೃತವಾಗಿ ಟೇಸ್ಟಿ ಪೌಡರ್ ಮಾರಾಟ ಮಾಡುವವರ ವಿರುದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸ್ಟಾರ್ ಸುವರ್ಣ ಕನ್ನಡದ ಖಾಸಗಿ ವಾಹಿನಿ ನಡೆಸುವ ಸುವರ್ಣ ಸೂಪರ್ ಸ್ಟಾರ್ ಎರಡನೇ ಸೀಸನ್ ಮೊದಲ ಎಪಿಸೋಡ್ನಲ್ಲಿ ಕುಂದಾಪುರದವರಾದ ದೀಪಿಕಾ ರಾಘವೇಂದ್ರ ಅವರು ವಿನ್ನರ್ ಆಗಿದ್ದಾರೆ. ಅಗಸ್ಟ್ 23ರ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೂವರು ಸ್ವರ್ಧಿಗಳು ಕೂಡ ಕುಂದಾಪುರದವರು ಎಂಬುದು ವಿಶೇಷವಾಗಿತ್ತು. ವಿಜೇತರಾದ ದೀಪಿಕಾ ಅವರು ಕುಂದಾಪುರ ಬಿ.ಬಿ ಹೆಗ್ಡೆ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿದ್ದಾರೆ. ಉಳಿದಂತೆ ಸೌಮ್ಯಾ ಗೃಹಿಣಿ ಹಾಗೂ ಆನ್ಲೈನ್ ವ್ಯವಹಾರ ಮಾಡಿಕೊಂಡಿದ್ದರೆ, ರಂಜಿತಾ ಸಾಫ್ಟವೇರ್ ಕಂಪೆನಿಯಲ್ಲಿ ಹೆಚ್ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂವರು ಒಂದೇ ದಿನ ವಿವಿಧ ಟಾಸ್ಕ್ಗಳ ಮೂಲಕ ಎದುರಾಳಿಗಳಾಗಿದ್ದರು. ನಟಿ ಶಾಲಿನಿ ಈ ಕಾರ್ಯಕ್ರಮ ನಿರೂಪಿಸುತ್ತಿದ್ದು ಮಹಿಳೆಯರೇ ಭಾಗವಹಿಸುವ ಕಾರ್ಯಕ್ರಮ ಇದಾಗಿದೆ. ಅಗಸ್ಟ್ 23ರ ಸಂಜೆ ಈ ಕಾರ್ಯಕ್ರಮ ವಾಹಿನಿಯಲ್ಲಿ ಪ್ರಸಾರವಾಗಿದ್ದು, ಅಗಸ್ಟ್ 10ರಂದು ಶೂಟಿಂಗ್ ನಡೆದಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾಹಿತಿ ಮತ್ತು ಕಲಾವಿದರ ವೇದಿಕೆ ಬೆಂಗಳೂರು, ಸಂಗೀತ ಸಂಭ್ರಮ ಬೆಂಗಳೂರು ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ಸಂಭ್ರಮದ ಗ್ರಾಮೀಣ ಮಕ್ಕಳ ಅಮೃತಮಹೋತ್ಸವ ಅಂಗವಾಗಿ ರಾಜ್ಯಾದ್ಯಂತ ನಡೆದ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳೇ, ನಡೆಸಿಕೊಟ್ಟ ಅಮೃತಸಿಂಚನ ಕಾರ್ಯಕ್ರಮ ಹಕ್ಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಎನ್.ಎಚ್ ನಾಗೂರ, ಭಾಗವಹಿಸಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸುವ ಮೂಲಕ ಚಾಲನೆ ನೀಡಿದರು. ಸಮೂಹ ಗಾಯನ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಿಂದ 7 ತಾಲೂಕಿನ ವಿವಿಧ ಭಾಗಗಳಿಂದ 83 ಶಾಲೆಗಳ 274 ವಿದ್ಯಾರ್ಥಿ ವಿದ್ಯಾರ್ಥಿನಿಯರ ಅಮೃತಸಿಂಚನ ಸಮೂಹ ಗಾಯನದಲ್ಲಿ ಪಾಲ್ಗೊಂಡಿದ್ದರು. ಜನಪದ ಗೀತೆ, ಭಕ್ತಿ ಗೀತೆ, ನಾಡ ಗೀತೆ, ದೇಶಭಕ್ತಿ ಗೀತೆ, ರಾಷ್ಟ್ರಗೀತೆ, ವಚನ ಹೀಗೆ ಆಯ್ಕೆ ಮಾಡಿದ ಹನ್ನೆರಡು ಹಾಡು ಸಮೂಹ ಗಾಯನ ಮೂಲಕ ಚಿತ್ರೀಕರಿಸಿ ರಾಜ್ಯಮಟ್ಟಕ್ಕೆ ಕಳುಹಿಸಲಾಯಿತು. ಹಕ್ಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾದ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಾವುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೊಯಿಸರ ಕ್ಲಾಂಪೆಕ್ಸ್ನಲ್ಲಿ ಬೆಳಕು ಎಂಟರ್ಪ್ರೈಸಸ್ನ ಸ್ಥಳಾಂತರಿತ ಕಛೇರಿ ಗುರುವಾರ ಶುಭಾರಂಭಗೊಂಡಿತು. ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಸ್ಥಳಾಂತರಿತ ಕಛೇರಿ ಉದ್ಘಾಟಿಸಿದರು. ಈ ಸಂದರ್ಭ ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ, ಕಟ್ಟದ ಮಾಲಿಕರಾದ ಚಂದ್ರ ಜೋಯಿಸ್, ಉದ್ಯಮಿ ನೌಷದ್, ಬೆಳಕು ಎಂಟರ್ಪ್ರೈಸಸ್ನ ಮಾಲೀಕ ಉದಯ ಹಾಗೂ ಅವರ ತಂದೆತಾಯಿಗಳಾದ ಯಶೋಧ ಹಾಗೂ ನಾರಾಯಣ ದಂಪತಿಗಳು ಸೇರಿದಂತೆ ಇತರರರು ಉಪಸ್ಥಿತರಿದ್ದರು. ಕಳೆದ ಮೂರು ವರ್ಷಗಳಿಂದ ಬೆಳಕು ಎಂಟರ್ಪ್ರೈಸಸ್ – ಕಾಮನ್ ಸರ್ವಿಸ್ ಸೆಂಟರ್ ಹಾಗೂ ಸೇವಾ ಸಿಂಧು ಮೂಲಕ ಸರಕಾರಿ ಸೇವೆಗಳು, ಸ್ಕಾಲರ್ಶಿಪ್ ಸಲ್ಲಿಕೆ, ಉದ್ಯೋಗದ ಅರ್ಜಿ ಸಲ್ಲಿಕೆ ಸೇರಿದಂತೆ ಹತ್ತು ಹಲವು ಸೇವೆಗಳನ್ನು ಯಶಸ್ವಿಯಾಗಿ ನೀಡಲಾಗುತ್ತಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಗ್ಗರ್ಸೆ ಗ್ರಾಮವನ್ನು ಈ ಭಾಗದ ಸಾರ್ವಜನಿಕರನ್ನು ಮತ್ತು ರೈತರಿಗೆ ಯಾವುದೇ ಮಾಹಿತಿ ನೀಡದೇ ಏಕಾಏಕಿ ಬೈಂದೂರು ಪಟ್ಟಣ ಪಂಚಾಯತ್ಗೆ ಸೇರಿಸಿರುವುದನ್ನು ವಿರೋಧಿಸಿ ಗುರುವಾರ ತಗ್ಗರ್ಸೆ ಗ್ರಾಮದ ಸಮಸ್ತ ರೈತರು ಬೈಂದೂರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಕೃಷಿಕ ವೀರಭದ್ರ ಗಾಣಿಗ, ಈ ಹಿಂದೆ ಸರ್ಕಾರದ ಎಲ್ಲಾ ಸವಲತ್ತುಗಳು ಗ್ರಾಪಂ ವ್ಯಾಪ್ತಿಯ ಎಲ್ಲಾ ಫಲಾನುಭವಿಗಳಿಗೆ ಸಿಗುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಈ ಭಾಗದ ರೈತಾಪಿ ಜನರಿಗೆ ಯಾವುದೇ ಸವಲತ್ತುಗಳು ದೊರಕುತ್ತಿಲ್ಲ. ಬಡವರ್ಗದವರಿಗೆ ಆಶ್ರಯ ಯೋಜನೆಯಿಂದ ಸಿಗುವ ಮನೆಗಳಿಗೆ ಬಿಲ್ ಪಾವತಿಯಾಗುವುದಿಲ್ಲ. ಇತ್ತೀಚಿಗೆ ಮಳೆಯಿಂದ ಅಪಾರ ಹಾನಿಯಾಗಿದ್ದು, ಈ ಬಗ್ಗೆ ಸರ್ಕಾರದಿಂದ ಒಂದು ಚಿಕ್ಕಾಸು ಕೂಡ ಪರಿಹಾರ ದೊರೆಯಲಿಲ್ಲ. ತೋಟಗಾರಿಗೆ, ಕೃಷಿ ಸಂಬಂಧಿತ ಯಾವುದೇ ಪರಿಹಾರ ಸಿಗುತ್ತಿಲ್ಲ. ಎಂದು ಅವರು ಆರೋಪಿಸಿದರು. ಸ್ಥಳೀಯ ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳಲ್ಲಿ ಈ ವಿಚಾರ ತಿಳಿಸಿದ್ದು, ಯಾರೊಬ್ಬರೂ ರೈತರ ಸಹಾಯಕ್ಕೆ ಬಂದಿಲ್ಲ. ಹೀಗಾಗಿ ನಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ನಾಲ್ಕು ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ವೆಬ್ಸೈಟ್ https://udupi.nic.in/ ನಲ್ಲಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 20 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಆಗಸ್ಟ್ 28 ಮತ್ತು 29ರಂದು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗಳು ಉಡುಪಿ 5, ಕುಂದಾಪುರದ 3 ಮತ್ತು ಕಾರ್ಕಳ 2 ಸೇರಿದಂತೆ ಜಿಲ್ಲೆಯ ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಕೋವಿಡ್ ನಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ, ಜಿಲ್ಲಾ ಆಸ್ಪತ್ರೆ, ಆವರಣ, ಉಡುಪಿ ಯಲ್ಲಿ ಪ್ರತ್ಯೇಕ ಕೇಂದ್ರ ತೆರೆದಿದ್ದು, ಕೋವಿಡ್ ಬಾಧಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಾಗೂ ಪರೀಕ್ಷಾ ಕೇಂದ್ರಕ್ಕೆ ಬರಲು ಸೂಕ್ತ ವಾಹನ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ಪದವಿ ಪೂರ್ವಶಿಕ್ಷಣ ಇಲಾಖೆಯ ಅಧಿಕಾರಿಗಳ ದೂ.ಸಂ: 9845953978 (ಗಿರೀಶ್ ಕುಲಕರ್ಣಿ) 9448416987 (ಮಂಜುನಾಥ ಭಟ್) ಇವರ ಬಳಿ ಮುಂಚಿತವಾಗಿ ನೀಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ತ್ರಾಸಿ ಬೀಚ್ ಸಮೀಪದ ಪಾರ್ಕ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗಂಗೊಳ್ಳಿ ಪೋಲಿಸ್ ತಂಡ ದಾಳಿ ನಡೆಸಿ ರವಿರಾಜ್ (46)ನನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ತಾಲೂಕು ದಂಡಾಧಿಕಾರಿ ಅವರ ಅನುಮತಿ ಮೇರೆಗೆ ಗಂಗೊಳ್ಳಿ ಪಿಎಸ್ಐ ನಂಜಾ ನಾಯ್ಕ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತನ ವಶದಲ್ಲಿದ್ದ 3000ರೂ. ಮೌಲ್ಯದ 100 ಗ್ರಾಂ ತೂಕದ ಗಾಂಜಾ, ನಗದು 380 ರೂ. ಸ್ವಾಧೀನಪಡಿಸಿಕೊಳ್ಳಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
