ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕ್ರೈಸ್ತ ಭಾಂದವರು ತಮ್ಮ ಚರ್ಚುಗಳಲ್ಲಿ ಕ್ರೈಸ್ತರ ಪವಿತ್ರ ಹಬ್ಬವಾದ ಮೊಂತಿಫೆಸ್ತ್ ( ಹೊಸ್ತು ) ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಕುಂದಾಪುರ, ಬಸ್ರೂರು, ತಲ್ಲೂರು, ನಾಡ, ತ್ರಾಸಿ, ಬೈಂದೂರು ಸೇರಿದಂತೆ 11 ಚರ್ಚ್ ಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನೆರವೇರಿದವು. ಕುಂದಾಪುರದಲ್ಲಿ ರೋಜಾರಿ ಅಮ್ಮನವರ ಇಗರ್ಜಿಯಲ್ಲಿ ಮಾತೆ ಮೇರಿಯ ಮೊಂತಿ ಫೆಸ್ತ್ ಹುಟ್ಟು ಹಬ್ಬವನ್ನು ಬಹಳ ಶ್ರದ್ದಾಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು. ಚಿಕ್ಕ ಮಕ್ಕಳು ಬಾಲಾ ಮೇರಿ ಮಾತೆಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಹಬ್ಬಕ್ಕೆ ಚಾಲನೆಯನ್ನು ನೀಡಿದರು. ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಹಬ್ಬದ ಶುಭಾಶಯಗಳನ್ನು ಕೋರಿದರು. ನಂತರ ಹೊಸ ತೆನೆಯನ್ನು ಸಹಾಯಕ ಧರ್ಮಗುರು ವಂ| ಆಶಿರ್ವದಿಸಿ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.ಬ್ಯಾಂಡು ವಾದ್ಯಗಳ ಜೊತೆ ಗುರಿಕಾರರು ಹೊಸ ತೆನೆಗಳನ್ನು ಹಿಡಿದುಕೊಂಡು, ಭಕ್ತಾಧಿಗಳೊಂದಿಗೆ, ಬ್ಯಾಂಡು ಗಾಯನದೊಂದಿಗೆ ಬಾಲ ಮೇರಿ ಮಾತೆಯ ಮೂರ್ತಿಯನ್ನು ಭಕ್ತಿ ಶ್ರದ್ದಾಪೂರ್ವಕವಾಗಿ ಇಗರ್ಜಿಯಿಂದ ಮೆರವಣಿಗೆ ಹೊರಟು ಪುನ:…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪ್ಪುಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪುಂದ ಇದರ 49ನೇ ವರ್ಷದ ಗಣೇಶೋತ್ಸವದ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದ ಅಪ್ರತಿಮ ಸಾಧನೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೀಥಹಳ್ಳಿ ಗೋಪಾಲ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಆಚಾರ್ಯ ಅವರು ಶುದ್ಧ ಕನ್ನಡದ ಬಳಕೆ ಯಕ್ಷಗಾನದಲ್ಲಿ ಮಾತ್ರ ಸಾಧ್ಯ ಕನ್ನಡ ಉಳಿಸಿ ಬೆಳೆಸುವಲ್ಲಿ ಯಕ್ಷಗಾನದ ಪಾತ್ರ ಮಹತ್ವವಾಗಿದ್ದು ಇಂಗ್ಲಿಷ್ ವ್ಯಾಮೋಹದ ಬರಾಟೆಯಲ್ಲಿಯೂ ಪೋಷಕರು ಯಕ್ಷಗಾನ ಕಲಿಯುವಿಕೆಯಲ್ಲಿ ಮಕ್ಕಳಿಗೆ ಆಸಕ್ತಿ ಬರುವಂತೆ ಮಾಡುವ ದೊಡ್ಡ ಜವಬ್ದಾರಿ ಇದ್ದು ಹೆತ್ತರವರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉದ್ಯಮಿ ಜಿ. ಗೋಕುಲ ಶೆಟ್ಟಿ, ಗಣೇಶೋತ್ಸವದ ಅಧ್ಯಕ್ಷ ಯು. ಸಂದೇಶ ಭಟ್, ಉದ್ಯಮಿ ಕುಶಲ ಶೆಟ್ಟಿ ಕಾರ್ಯದರ್ಶಿ ಜನಾರ್ಧನ ಖಾರ್ವಿ ಸಮಿತಿಯ ಸದಸ್ಯರಾದ ಮಂಜುನಾಥ ದೇವಾಡಿಗ, ಅನಿಲ್ ಡಿ ಉಪ್ಪುಂದ, ಆನಂದ ದೇವಾಡಿಗ ಉಪಸ್ಥಿತರಿದ್ದರು. ವೇದಮೂರ್ತಿ ಶಂಕರನಾರಾಯಣ ಭಟ್ ಸ್ವಾಗತಿಸಿದರು, ಕಾರ್ಯದರ್ಶಿ ಜನಾರ್ಧನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ನಿರ್ಮಿಸಲಾಗಿರುವ ‘ಕರುನಾಡ ಶಾಲೆ’ ಸಿನೆಮಾದ ಧ್ವನಿಸುರುಳಿಯನ್ನು ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ಬಿಡುಗಡೆಗೊಳಿಸಲಾಯಿತು. ಬಾಲ್ಯದ ನೆನಪುಗಳನ್ನು ನೆನಪಿಸುವಂಥ ದೃಶ್ಯಗಳನ್ನು ಸಂಯೋಜಿಸಲಾಗಿರುವ ಗೀತೆಯೊಂದನ್ನು ಚಿತ್ರತಂಡ ಬಿಡುಗಡೆಗೊಳಿಸಿತು. ನಾಯಕನ ತಂದೆ ಪಾತ್ರದಲ್ಲಿ ಹಿರಿಯ ನಟ ರಮೇಶ್ ಭಟ್ ಅಭಿನಯಿಸಿದ್ದು, ಆಯುರ್ ಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ರಿಯಾ ದೇವಾಡಿಗ, ರಾಜೀವ್ ಕೊಠಾರಿ, ರಘು ಪಾಂಡೇಶ್ವರ, ಸ್ಪೂರ್ತಿ ದೊಡ್ಮನೆ, ಸ್ಮಿತಾ, ಉಲ್ಲಾಸ್, ಮನೀಶ್, ನಾಗರಾಜ್ ಅಭಿನಯಿಸಿದ್ದಾರೆ.’ ಜಿ.ಆರ್. ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಮುತ್ತಾರೀಫ್ ತೆಕ್ಕಟ್ಟೆಯವರ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಮಾಡಿದ್ದಾರೆ. ದಿಲ್ ಶಾದ್ ಬಂಡವಾಳ ಹೂಡಿದ್ದಾರೆ. ಗಿರೀಶ್, ಯೋಗೇಂದ್ರ ಕನ್ನುಕೆರೆ, ಸಚಿನ್ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡರೆ, ಆಕಾಶ್ ಪರ್ವರ ಸಂಗೀತ, ಆಯುರ್ ಸ್ವಾಮಿ ಸಾಹಿತ್ಯ – ಸಂಕಲನ, ರಾಜೇಶ್ ಕೃಷ್ಣನ್ ಹಿನ್ನೆಲೆ ಗಾಯನ, ಜಯರಾಮ್ ಆಲೂರು ಛಾಯಾಗ್ರಹಣ, ರಾಘವರ ನೃತ್ಯ ನಿರ್ದೇಶನವಿದೆ. ಸರ್ಕಾರಿ ಶಾಲೆಗಳ ಪ್ರಗತಿಗಾಗಿ ನಾಯಕ ಪಡುವ ಸಾಹಸವೆ ಚಿತ್ರದ ಪ್ರಮುಖ ಕಥಾವಸ್ತುವಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಹೆರಂಜಾಲು ಗ್ರಾಮದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಸಭೆ ಇತ್ತಿಚಿಗೆ ಜರುಗಿತು. ಅಖಿಲ ಭಾರತ ಕೃಷಿಕೂಲಿಕಾರರ ಸಂಘ (ಎಐಎಡಬ್ಲ್ಯುಯು) ದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಸಭೆಯನ್ನುದ್ದೇಶಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಕೃಷಿಕೂಲಿಕಾರರಿಗೆ ನರೇಗಾ ಕೂಲಿ ಕೆಲಸ ಕೊಡಲು ನಿರಾಕರಿಸಿದ ಸ್ಥಳಿಯ ಗ್ರಾಮ ಪಂಚಾಯತ್ ಅಧಿಕಾರಿಗಳ ನಡೆಯನ್ನು ಖಂಡಿಸಿದರು. ಅಗತ್ಯವಿರುವಲ್ಲಿ ಈ ಕೂಡಲೇ ಕೆಲಸ ಕೊಡಬೇಕು ಎಂದು ಸ್ಥಳಿಯಾಡಳಿತವನ್ನು ಒತ್ತಾಯಿಸಿದರು. ಇಲ್ಲವಾದರೆ ಕೂಲಿಕಾರರೊಡನೆ ಕೆಲಸಕ್ಕಾಗಿ ಒತ್ತಾಯಿಸಿ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಸಿಐಟಿಯು ಮುಖಂಡ ಗಣೇಶ ತೊಂಡೆಮಕ್ಕಿ ಕೂಲಿಕಾರರ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದರು. ಕೂಲಿ ಬೇಡಿಕೆಯನ್ನು ನಮೂನೆ-6 ರಲ್ಲಿ ಗ್ರಾಮ ಪಂಚಾಯತಿಗೆ ಈ ಕೂಡಲೆ ಅಜಿ೯ ಸಲ್ಲಿಸಲು ಸಭೆಯಲ್ಲಿ ತೀಮಾ೯ನಿಸಲಾಯಿತು. 30 ಮಂದಿ ಕೂಲಿಕಾರರನ್ನೊಳಗೊಂಡ ಕಾಯಕ ಗುಂಪು ರಚಿಸಲಾಯಿತು. ಸುಶೀಲ ದೇವಾಡಿಗ ಇವರನ್ನು ಕಾಯಕ ಬಂಧುವಾಗಿ ಆಯ್ಕೆ ಮಾಡಲಾಯಿತು ಮಹಾಬಲ ದೇವಾಡಿಗ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರವರ್ತಿತ ಯಳಜಿತ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಯಳಜಿತ ಕೇಸರಿ ಯುವಕ ಮಂಡಲದ ಸಹಯೋಗದೊಂದಿಗೆ ೧೮ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಇಲ್ಲಿನ ಶಾಲಾ ವಠಾರದಲ್ಲಿ ವಿಜೃಂಭಣೆಯಿಂದ ಜರುಗಿತು. ಅಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಯಳಜಿತ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಧನಂಜಯ ಗೌಡ ಕೇಂಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉ.ಸ. ಅಧಿಕಾರಿ ಚಂದ್ರ ನಾಯಕ್ ಗೋಳಿಹೊಳೆ ಧಾರ್ಮಿಕ ಉಪನ್ಯಾಸ ನೀಡಿದರು. ಈ ಸಂದರ್ಭ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ನಾಗೇಶ್ ಕೊಠಾರಿ, ಯಳಜಿತ ಶಾಲಾ ಮುಖ್ಯೋಪಧ್ಯಾಯಿನಿ ಪದ್ಮಾವತಿ, ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ತಾಲೂಕು ಯೋಜನಾಧಿಕಾರಿ ವಿನಾಯಕ ಪೈ, ಕೇಸರಿ ಯುವಕ ಮಂಡಲ ಅಧ್ಯಕ್ಷ ರಾಘವೇಂದ್ರ ಪೂಜಾರಿ ತುಂಡಿಹಿತ್ಲು, ಪ್ರಗತಿಬಂಧು ಸ್ವಸಹಾಯ ಸಂಘದ ಅಧ್ಯಕ್ಷರುಗಳಾದ ಗೋವಿಂದ ಗೌಡ, ಪ್ರದೀಪ್ ಪೂಜಾರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಘವೇಂದ್ರ ಪೂಜಾರಿ ಅರೆಹೊಳೆ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆಯ 32ನೆಯ ವಾರ್ಷಿಕ ವೈಜ್ಞಾನಿಕ ಸಮ್ಮೇಳನವು ಇದೇ ಸೆ.10ರ ಶನಿವಾರ ಮತ್ತು 11 ರ ಭಾನುವಾರ ಕೋಟೇಶ್ವರದ ಯುವ ಮೆರಿಡಿಯನ್ ಬೇ ರೆಸಾರ್ಟ್’ನಲ್ಲಿ ನಡೆಯಲಿದೆ. ಯುವ ಮೆರಿಡಿಯನ್ ಹೋಟೆಲ್ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ, ಮನೋವೈದ್ಯ ಡಾ. ಪ್ರಕಾಶ್ ತೋಳಾರ್ ಈ ಬಗ್ಗೆ ವಿವರಗಳನ್ನು ನೀಡಿದರು. ಉಡುಪಿ ಮತ್ತು ಮಂಗಳೂರಿನ ಮನೋವೈದ್ಯಕೀಯ ಸಂಘಗಳು ಜಂಟಿಯಾಗಿ ಆಯೋಜಿಸಿರುವ ಈ ಸಮ್ಮೇಳನವು ಸೆ.10 ರ ಶನಿವಾರ ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಸಚಿವ ಡಾ. ಅಶ್ವಥ್ ನಾರಾಯಣ್ ಸಿ. ಎನ್., ಹಿಂದುಳಿದ ವರ್ಗಗಳ ಅಭಿವೃದ್ಧಿ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ನಾಡೋಜ ಡಾ. ಜಿ. ಶಂಕರ್ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ. ಕಿರಣ್ ಕುಮಾರ್ ಪಿ. ಕೆ. ವಹಿಸುವರು. ಸಮ್ಮೇಳನದ ಪೂರ್ವಭಾವಿಯಾಗಿ ಸೆ.9ರ ಶುಕ್ರವಾರ ಎರಡು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ವೈದ್ಯಕೀಯ ಸಂಘ ( ಐಎಂಎ) ಕುಂದಾಪುರ ಆಶ್ರಯದಲ್ಲಿ ಕೆಎಂಸಿ ಮಣಿಪಾಲ ಸಹಯೋಗದಲ್ಲಿ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಇಲ್ಲಿನ ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ರೋಟರಿ ಭವನದಲ್ಲಿ ನೆರವೇರಿತು. ಕೆಎಂಸಿ ನ್ಯೂರೋಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಗಿರೀಶ್ ಮೆನನ್ ಅವರು ಪಕ್ಷವಾತದಲ್ಲಿ ಶಸ್ತ್ರ ಚಿಕಿತ್ಸೆಯ ಪಾತ್ರ” ಎಂಬ ವಿಷಯ ಬಗ್ಗೆ ಹಾಗೂ ಎಲುಬು ಕೀಲು ವಿಭಾಗದ ಡಾ. ಕೃಷ್ಣಪ್ರಸಾದ ಅವರು “ಹಿಮ್ಮಡಿ ನೋವಿನ ಉಪಶಮನ” ವಿಷಯದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಭಾರತೀಯ ವೈದ್ಯಕೀಯ ಸಂಘ ಕುಂದಾಪುರದ ಅಧ್ಯಕ್ಷ, ಎಲುಬು ಕೀಲು ಶಸ್ತ್ರ ಚಿಕಿತ್ಸಾ ತಜ್ನ ಡಾ. ಸಂದೀಪ ನಾವಡ ಪಡುಕೋಣೆ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕಾರ್ಯದರ್ಶಿ, ಮಾನಸಿಕ ತಜ್ಞ ಡಾ. ರವೀಂದ್ರ ಮುನೊಳಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಗುಜ್ಜಾಡಿ ಮಂಕಿಯಲ್ಲಿ ಸ್ಪಂದನ ಯುವ ಸಂಘದಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ “ಗುರುಗಳಿಗೆ ಶಿಷ್ಯರ ಗೌರವ ವಂದನೆ” ನಡೆಯಿತು. ಈ ಸಂದರ್ಭಮಂಕಿ ಸ.ಹಿ.ಪ್ರಾ. ಶಾಲೆ ಇದರ ಮುಖ್ಯೋಪಾಧ್ಯಾಯನಿಯಾದ ಗೀತಾ ಭಾಸ್ಕರ ಮಯ್ಯ ಹಾಗೂ ಶಾಲಾ ಶಿಕ್ಷಕ ವೃಂದದವರನ್ನು ಸಹ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಶಂಕರ ಬಿಲ್ಲವ, ಪರಮೇಶ್ವರ ಶ್ರೀಯಾನ್ ಮತ್ತು ಸ್ಪಂದನ ಸಂಘದ ಅಧ್ಯಕ್ಷರಾದ ರಘು ಎಂ. ಉಪಸ್ಥಿತರಿದರು. ಸುಧೀರ್ ಪಿ. ನಾಯ್ಕ್ ಸ್ವಾಗತಿಸಿ, ಸದಾನಂದ ಎಂ. ವಂದಿಸಿದರು. ತದನಂತರ ಸ್ಪಂದನ ಕಲಾತಂಡ ಮಂಕಿ-ಗುಜ್ಜಾಡಿ, ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬಂಟ ಸಮಾಜದ ಇವತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ಶೈಕ್ಷಣಿಕವಾಗಿ ಸಮಾಜ ಜಾಗೃತವಾದಗ ಮಾತ್ರ ಬೆಳವಣಿಗೆ ಮತ್ತು ಬದಲಾವಣೆ ಸಾಧ್ಯವಿದೆ. ಸಮುದಾಯವನ್ನು ಒಂದುಗೂಡಿಸುವ ದೃಷ್ಠಿಯಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಜೌಚಿತ್ಯ ಪೂರ್ಣವಾಗಿದೆ ಎಂದು ಜಿಲ್ಲಾ ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು. ಯಡ್ತರೆ ಬಂಟರ ಭವನದಲ್ಲಿ ಬೈಂದೂರು ಬಂಟರ ಯಾನೆ ನಾಡವರ ಸಂಘದ ಆಶ್ರಯದಲ್ಲಿ ಬೆಂಗಳೂರು ಬಂಟರ ಸಂಘದ ದಾನಿಗಳ ಸಹಯೋಗದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಂಗಳೂರು ರಾಮಕೃಷ್ಣ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಉತ್ತಮ ಅಂಕಗಳಿಸಿದ ಎಲ್ಲಾ ವಿದ್ಯಾರ್ಥಿಗಳು ಓದಿನಲ್ಲಿಯೂ ಒಂದು ಶಿಸ್ತು ಅಳವಡಿಸಿಕೊಂಡಿರುತ್ತಾರೆ. ಅದರಂತೆಯೇ ಬದುಕಿನ ರೀತಿಯನ್ನು ಓದಿಗೆ ಅನುಕೂಲವಾಗುವಂತೆ ಬದಲಿಸಿಕೊಂಡಿರುತ್ತಾರೆ. ಅಂತವರಿಗೆ ಯಶಸ್ಸು ಕೂಡಲೇ ಒಲಿಯುತ್ತದೆ. ಈ ಯಶಸ್ಸಿನತ್ತ ಎಲ್ಲಾ ಮಕ್ಕಳು ಹೆಜ್ಜೆಯಿಡುವಂತಾಗಬೇಕು. ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನ, ದಾರಿ, ಕನಸುಗಳನ್ನು ನನಸು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರು ಕುಲಶೇಖರದಲ್ಲಿ ಜರುಗಿದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಒಕ್ಕೂಟದ ನಿರ್ದೇಶಕರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ಶ್ರೇಷ್ಠ ಹೈನುಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಹಕಾರಿ ಕೃಷಿ ಹಾಗೂ ಹೈನುಗಾರಿಕೆ ಕ್ಷೇತ್ರದಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿದ್ದಾರೆ. ದ.ಕ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ನಿರ್ದೇಶಕರುಗಳು ಉಪಸ್ಥಿತರಿದ್ದರು.
