ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾರವಾರ – ಬೆಂಗಳೂರು ಹಗಲು ರೈಲು ಕುಂದಾಪುರಕ್ಕೆ ಬೇಗನೆ ತಲುಪುವಂತೆ ಕ್ರಮ ವಹಿಸಬೇಕು ಎಂದು ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸಂಸದರು ಹಾಗೂ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದೆ. ಬೆಂಗಳೂರಿನಿಂದ ಬರುವಾಗ ಮಂಗಳೂರು ಜಂಕ್ಷನ್ ಬೇಗನೇ ತಲುಪುತ್ತಿದ್ದು ಅಲ್ಲಿಂದ ಕೊಂಕಣ ರೈಲ್ವೆ ಪ್ರವೇಶಿಸಲು ವಿಪರೀತ ವಿಳಂಬವಾಗುತ್ತಿದೆ. ಕುಂದಾಪುರಕ್ಕೆ ಸಂಜೆ 6 ಗಂಟೆಯೊಳಗೆ ತಲುಪುವಂತೆ ವೇಳಾಪಟ್ಟಿ ಬದಲಾಯಿಸಬೇಕು ಎಂದು ಸಮಿತಿ ಮನವಿಯಲ್ಲಿ ತಿಳಿಸಿದೆ. ಸಂಜೆ ನಾಲ್ಕರಿಂದ ಏಳರವರೆಗೆ ವಿಸ್ಟಾಡೋಮ್ ಸೌಂದರ್ಯ ಪ್ರಯಾಣಿಕರಿಗೆ ಲಭ್ಯವಾಗಲಿದೆ ಬೇಗನೇ ರೈಲು ಬರುವುದರಿಂದ ಕಾರವಾರ ಕಡೆ ತೆರಳುವ ಮತ್ತು ಕರಾವಳಿಗೆ ಬಂದಿಳಿಯುವ ಜನರಿಗೂ ಅನುಕೂಲವಾಗಲಿದೆ. ಯಶವಂತಪುರ ಕಾರವಾರ ರೈಲು ಸೇರಿದಂತೆ ಯಾವುದೇ ರೈಲಿಗೂ ಕುಂದಾಪುರ ನಿಲ್ದಾಣದಲ್ಲಿ ರಿಸರ್ವಡ್ ಮತ್ತು ಅನ್ ರಿಸರ್ವಡ್ ಟೀಕೆಟ್ ಸಿಗದೆ ಇರುವುದು ತೀವ್ರ ಸಮಸ್ಯೆ ತಂದೊಡ್ಡಿದೆ. ಕೌಂಟರ್ ಟಿಕೆಟ್ ಸಿಗದೆ ಇರುವುದರಿಂದ ಮತ್ತೊಂದು ಸಮಸ್ಯೆಯಾಗಿದೆ. ಪೋಸ್ಟ್ ಆಫೀಸ್ ಪಿಆರ್ಎಸ್ ಸಂಪೂರ್ಣ ವಿಫಲವಾಗಿದೆ. ಸಮಸ್ಯೆಗಳನ್ನು ಕೂಡಲೆ ಪರಿಹರಿಸಲು ಕ್ರಮ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರ ಬೃಹತ್ ರಂಗೋಲಿಯನ್ನು ಸ್ವಯಂಸ್ಪೂರ್ತಿಯಿಂದ ಬಿಡಿಸಿದ ಕಲಾವಿದನ ಕೈಚಳಕಕ್ಕೆ ಸ್ವತಃ ಮಂತ್ರಾಲಯದ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಘವೇಂದ್ರ ಸ್ವಾಮಿಯ ಪರಮಭಕ್ತರಾಗಿರುವ ತಾಲೂಕಿನ ವಕ್ವಾಡಿಯ ಕಲಾವಿದ ಮಹೇಂದ್ರ ಆಚಾರ್ಯ ಪ್ರತಿವರ್ಷದಂತೆ ಈ ಬಾರಿಯೂ ಮಂತ್ರಾಲಯಕ್ಕೆ ತೆರಳಿದ್ದರು. ಆ.24ರಂದು ಸ್ವ ಇಚ್ಚೆಯಿಂದ ಕ್ಷೇತ್ರದಲ್ಲಿ ಬೃಹತ್ ರಂಗೋಲಿ ರಚನೆಗೆ ಮುಂದಾದರು. ಸತತ 8 ತಾಸುಗಳ ಪರಿಶ್ರಮದಿಂದ 7.5 ಅಡಿ ಎತ್ತರ ಹಾಗೂ 4 ಅಡಿ ಅಗಲದ ಮಂತ್ರಾಲಯದ ಪ್ರಸ್ತುತ ಪೀಠಾಧಿಪತಿ 1008 ಶ್ರೀಸುಬುಧೇಂದ್ರ ತೀರ್ಥ ಶ್ರೀಗಳ ಪಾದರ ರಂಗೋಲಿ ರಚಿಸಿ ಭಕ್ತವೃಂದವನ್ನು ನಿಬ್ಬೆರುಗೊಳಿಸಿದ್ದಾರೆ. ರಂಗೋಲಿಯಲ್ಲಿ ಮೂಡಿದ ತನ್ನ ಭಾವ ಚಿತ್ರ ಕಂಡ ಶ್ರೀಗಳು ಬೆರಗಾಗಿ ಕಲಾವಿದ ಮಹೇಂದ್ರ ಆಚಾರ್ಯ ಅವರಿಗೆ ಫಲಮಂತ್ರಾಕ್ಷತೆ ನೀಡಿ ಹರಸಿದ್ದಾರೆ. ವಕ್ವಾಡಿ ನಿವಾಸಿಯಾಗಿರುವ ಮಹೇಂದ್ರ ಆಚಾರ್ಯ ಗ್ರಾಮೀಣ ಕಲಾಪ್ರತಿಭೆ. ಮಂಗಳೂರಿನ ಮಹಾಲಸಾ ಆರ್ಟ್ ಕಾಲೇಜಿನಲ್ಲಿ ಬಿಬಿಎ (ಬಾಚುಲರ್ ಆಫ್ ವಿಷುವಲ್ ಆರ್ಟ್) ಪದವಿ ಪಡೆದವರು. ಪದವಿ ಬಳಿಕ ಊರಿನಲ್ಲಿ ಕಲಾಶಾಲೆ ಆರಂಭಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವೈದ್ಯಕೀಯ ರಂಗದಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡಿರುವ ಗಣ್ಯರಿಗೆ ಕೊಡಮಾಡಲಾಗುವ ‘ಸಿಎಂಇ ಎಕ್ಸಲೆನ್ಸ್ ದ್ರೋಣಾಚಾರ್ಯ’ ಪ್ರಶಸ್ತಿಯನ್ನು ಈ ಬಾರಿ ಮಂಗಳೂರಿನ ಹಿರಿಯ ವೈದ್ಯ ಡಾ. ಶಾಂತಾರಾಮ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಗುತ್ತಿದೆ. 1942ರ ಏಪ್ರಿಲ್ 14ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡ್ಲಕಟ್ಟೆ ದೊಡ್ಡಮನೆಯ ಕಿದಿಯೂರು ತೇಜಪ್ಪ ಶೆಟ್ಟಿ ಮತ್ತು ಮೊಳಹಳ್ಳಿ ವಿಶಾಲಾಕ್ಷಿ ಶೆಟ್ಟಿ ದಂಪತಿ ಪುತ್ರನಾಗಿ ಬಂಟ್ಸ್ ಮನೆತನದಲ್ಲಿ ಜನಿಸಿದ ಡಾ. ಶಾಂತಾರಾಮ ಶೆಟ್ಟಿ ಅವರು, ಮಂಗಳೂರಿನ ಹಿರಿಯ ವೈದ್ಯರಾಗಿ, ಅಂತಾರಾಷ್ಟ್ರೀಯ ಖ್ಯಾತಿಯ ಓರ್ಥೋಪೆಡಿಕ್ ಸರ್ಜನ್, 50 ವರ್ಷಗಳ ವೈದ್ಯಕೀಯ ಬೋಧನೆ, ಉಪನ್ಯಾಸರಾಗಿ ಪ್ರಸ್ತುತ ಮಂಗಳೂರಿನ ತೇಜಸ್ವಿನಿ ಹಾಸ್ಪಿಟಲ್ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ, ನಿಟ್ಟೆ ವಿವಿಯ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅವರು ಮೈಸೂರಿನ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ತನ್ನ ಉನ್ನತ ವ್ಯಾಸಂಗವನ್ನು ಪೂರ್ಣಗೊಳಿಸಿ ವೈದ್ಯಕೀಯ ರಂಗದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ವೈದ್ಯಕೀಯ ರಂಗದ ಇವರ ಅನನ್ಯ ಸೇವೆಯನ್ನು ಗುರುತಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಗ್ರಾಮದ ರಾಮಂದಿರ ರಸ್ತೆಯ ದೇವಾಡಿಗರ ಬೆಟ್ಟು ನಿವಾಸದ ಸುನೀತಾ (32) ಎಂಬವರು ಆಗಸ್ಟ್ 14 ರಿಂದ ಮನೆಯಿಂದ ತೆರಳಿದ್ದು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. 5.2 ಅಡಿ ಎತ್ತರ, ಬಿಳಿ ಮೈ ಬಣ್ಣ, ಕಪ್ಪು ಬಣ್ಣದ ಬಿಳಿ ಚುಕ್ಕೆ ಇರುವ ಚೂಡಿದಾರ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಮತ್ತು ಬಿಳಿ ಚುಕ್ಕೆವುಳ್ಳ ಬಿಳಿ ಬಣ್ಣದ ವೇಲ್ ಧರಿಸಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೋಟ ಪೋಲಿಸ್ ಠಾಣೆ: 0820-2564155 ಮೊ.ನಂ: 94808 05454 ಅಥವಾ ಪೋಲಿಸ್ ವೃತ್ತ ನಿರೀಕ್ಷಕರ ಕಚೇರಿ, ಬ್ರಹ್ಮಾವರ: 0820-2561966,94808 05432 ನ್ನು ಸಂಪರ್ಕಿಸುವಂತೆ ಕೋಟ ಪೋಲಿಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಉತ್ತರಾಖಾಂಡದ ಡೆಹ್ರಾಡೂನ್ ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ 8 ನೇ ತರಗತಿಗಾಗಿ ಪ್ರವೇಶ ಬಯಸುವ ರಾಜ್ಯದ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆಯು ಬೆಂಗಳೂರು ಕೇಂದ್ರದಲ್ಲಿ ಡಿಸೆಂಬರ್ 18 ನಡೆಸಲಾಗುವುದು. 7 ನೇ ತರಗತಿಯಲ್ಲಿ ಓದುತ್ತಿರುವ , ಜುಲೈ 1 2022 ಕ್ಕೆ 11.5 ವರ್ಷದಿಂದ 13 ವರ್ಷದೊಳಗಿನ ಬಾಲಕರು ಮಾತ್ರ ಪ್ರವೇಶಕ್ಕೆ ಅರ್ಹರಿದ್ದು, ಅರ್ಜಿಯನ್ನು ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕವನ್ನು ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು, ಗರಹಿ ಕ್ಯಾಂಟ್, ಡೆಹ್ರಾಡೂನ್, ಉತ್ತರಾಖಂಡ್, ಪಿನ್-248003 ಮೂಲಕ ಪಡೆಯಬಹುದು.ಅಥವಾವೆಬ್ಸೈಟ್:http://www.rimc.gov.in/ ನ್ನು ಸಂಪರ್ಕಿಸಬಹುದಾಗಿದೆ. ಭರ್ತಿಮಾಡಿದ ಅರ್ಜಿಯನ್ನು ಅಕ್ಟೋಬರ್ 5 ರೊಳಗೆ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ ಎಮ್ ಕಾರ್ಯಪ್ಪ ಭವನ್, ನಂ 58 ಫೀಲ್ಡ್ ಮಾರ್ಷಲ್ ಕೆ ಎಮ್ ಕಾರ್ಯಪ್ಪ ರಸ್ತೆ ಬೆಂಗಳೂರು-25 ಇವರಿಗೆ ಸಲ್ಲಿಸಬಹುದಾಗಿದೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ವ್ಯಾಪ್ತಿಯಲ್ಲಿ ಬಾಲಕಾರ್ಮಿಕ ಮತ್ತು ಕಿಶೊರ ಕಾರ್ಮಿಕರನ್ನು ಸಮೀಕ್ಷೆ ಮೂಲಕ ಗುರುತಿಸಲು ಅರ್ಹ ಸರ್ಕಾರೇತರ ಸಂಘ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಸರ್ಕಾರೇತರ ಸಂಘ ಸಂಸ್ಥೆಗಳು ನಿಗದಿತ ದಾಖಲೆಗಳೊಂದಿಗೆ ಸೆಪ್ಟೆಂಬರ್ 7 ರೊಳಗೆ ಕಾರ್ಮಿಕ ಅಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಅಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ : ಎ-201, ಎ ಬ್ಲಾಕ್ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ರಜತಾದ್ರಿ ಮಣಿಪಾಲ ನ್ನು ಸಂಪರ್ಕಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಕುರಿತು ಅರ್ಹತೆಗಳ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2574977 ಅಥವಾ ಮೊಬೈಲ್ ಸಂಖ್ಯೆ: 85531 41512 ಗೆ ಸಂಪರ್ಕಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು , ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಅವರ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಯಡ್ತಾಡಿ ಯುವವಾಹಿನಿ ಘಟಕದಿಂದ ರುದ್ರಭೂಮಿ ಸ್ವಚ್ಛತೆ ಮತ್ತು ಜಲ ಸಂರಕ್ಷಣೆಗೆ ತಡೆಗೋಡೆ ನಿರ್ಮಾಣ ಕಾರ್ಯ ಮಾಡುವ ನಡೆಯಿತು. ಯಡ್ತಾಡಿ ಹಿಂದೂ ರುದ್ರಭೂಮಿ ಸ್ವಚ್ಛತೆ ಹಾಗೂ ಪೋಲಾಗುತ್ತೀರುವ ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ ತಡೆಗೋಡೆ ನಿರ್ಮಾಣ ಮಾಡುವ ಕ್ರಾಂತಿಕಾರಿ ಹೆಜ್ಜೆ ಇಡುವ ಮೂಲಕ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡರು. ಯುವವಾಹಿನಿ ಸದಸ್ಯರ ಈ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದರು. ಈ ಶ್ರಮದಾನ ಕಾರ್ಯದಲ್ಲಿ ಘಟಕದ ಅಧ್ಯಕ್ಷರಾದ ರಾಜು ಪೂಜಾರಿ ಕಾರ್ಯದರ್ಶಿ ಅಜಿತ್ ಕುಮಾರ್ ಎಸ್ ಮಾಜಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು .
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ಶೆಟ್ಟಿ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಸಿನೆಮಾ ’ಕಾಂತಾರ’ ಮುಹೂರ್ತ ತಾಲೂಕಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿತು. ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಮಂಜುನಾಥ್ ಕೆ.ಎಸ್ ಕ್ಲಾಪ್ ಮಾಡಿದರು, ಯುವ ಮೆರಿಡಿಯನ್ ಉದಯಕುಮಾರ್ ಶೆಟ್ಟಿ ಕ್ಯಾಮರಾಕ್ಕೆ ಚಾಲನೆ ನೀಡಿದರು. ಈ ವೇಳೆ ನಿರ್ಮಾಪಕ ವಿಜಯ ಕಿರಗಂದೂರು, ನಟರಾದ ಪ್ರಮೋದ್ ಶೆಟ್ಟಿ, ನಟಿ ಸಪ್ತಮಿ ಗೌಡ, ಕಾರ್ತಿಕ್ ಗೌಡ ಹಾಗೂ ಇತರರು ಉಪಸ್ಥಿತರಿದ್ದರು. ಕಾಂತಾರ – ಒಂದು ದಂತಕಥೆ ಚಿತ್ರಕ್ಕೆ ರಿಷಬ್ ಶೆಟ್ಟಿ ಅವರೇ ಆಕ್ಷನ್ ಕಟ್ ಹೇಳುತ್ತಿದ್ದು, ನಾಯಕ ನಟನಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ನಟಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ನ ವಿಜಯ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇತ್ತಿಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಿನೆಮಾದ ಪೋಸ್ಟ್ರ್ ಬಿಡುಗಡೆಗೊಳಿಸಿ, ಈ ಕಿಚ್ಚು ನಮ್ಮ ಸುತ್ತಲೂ ಸದ್ಯ ಕವಿದಿರುವ ಕರಾಳತೆಯನ್ನು ದಹಿಸುತ್ತದೆ ಎಂಬ ನಂಬಿಕೆಯೊಂದಿಗೆ… ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದರ ವಿನೂತನ ಯೋಜನೆಯಾದ ಹೈವೆ ನೆಕ್ಸ್ಟ್ (ಮಿನಿ) ಮಳಿಗೆಯನ್ನು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಶಿರೂರಿನಲ್ಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಹಲವು ಸವಲತ್ತುಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತಿದೆ. ಜೊತೆಗೆ ಇನ್ನಷ್ಟು ಸೌಲಭ್ಯಗಳು ಲಭಿಸಲಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಪಾರ್ಕಿಂಗ್ ಹಾಗೂ ಎಮ್ಯುನಿಟಿಸ್ ಸೆಂಟರ್ಗಳನ್ನು ಮಾಡಲಾಗುತ್ತದೆ ಹಾಗೂ ಯಾತ್ರಿಗರ ಸೌಲಭ್ಯವನ್ನು ಮಾಡುವ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತಿದೆ. ಮುಂದಿನ ದಿನದಲ್ಲಿ ಹೆದ್ದಾರಿ ಪ್ರಾಧಿಕಾರದ ಸಹಕಾರದೊಂದಿಗೆ ಆದಷ್ಟು ಶೀಘ್ರ ಇನ್ನಷ್ಟು ವಿನೂತನ ಯೋಜನೆಗಳನ್ನು ಹೆದ್ದಾರಿ ಪ್ರಾಕಾರಗಳಲ್ಲಿ ಅನುಷ್ಟಾಣಗೊಳಿಸಲಾಗುವುದು ಎಂದರು ಮತ್ತು ಮಿನಿ ನೆಕ್ಸ್ಟ್ ನಿಂದ ಸರಳ ಹಾಗೂ ಅತ್ಯಂತ ರಿಯಾಯಿತಿ ದರದಲ್ಲಿ ಪ್ರಯಾಣಿಕರಿಗೆ ತುರ್ತು ಸೇವೆ ದೊರೆಯಲಿರುವುದು ಅತ್ಯಂತ ಉತ್ತಮ ವ್ಯವಸ್ಥೆಯಾಗಿದೆ ಎಂದರು. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಂದ ಉತ್ತಮ ಕಾರ್ಯ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರಿನ ಪ್ರೊಜೆಕ್ಟ್ ಡೈರೆಕ್ಟರ್ ಶಿಶುಮೋಹನ್ ಬಂದ ಬಳಿಕ ಮಂಗಳೂರು ವಿಭಾಗದಲ್ಲಿ ಅತ್ಯಂತ ಉತ್ತಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ದಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಮ್.ಎಮ್.ಹೌಸ್ ಶಿರೂರು ಇದರ ವತಿಯಿಂದ ಸುಮಾರು 5 ಲಕ್ಷ ರೂಪಾಯಿ ವೆಚ್ಚದ ಸಲಕರಣೆಗಳನ್ನು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಹಸ್ತಾಂತರಿಸಲಾಯಿತು. ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮದ ಅಭಿವೃದ್ದಿಗೆ ಇಲಾಖೆಗಳ ಜೊತೆಗೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ. ಶಿರೂರಿನಂತಹ ಗ್ರಾಮೀಣ ಭಾಗದಲ್ಲಿ ಮಣಿಗಾರ್ ಮೀರಾನ್ ರವರ ಎಮ್.ಎಮ್.ಹೌಸ್ ಇದರ ಕೊಡುಗೆ ಅಪಾರವಾಗಿದೆ. ಊರಿನ ಅಭಿವೃದ್ದಿಗೆ ಇವರ ಕೊಡಗೆ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಸಹಾಯಕ ಕಮಿಷನರ್ ರಾಜು, ಬಂದೂರು ತಹಶೀಲ್ದಾರ ಶೋಭಾಲಕ್ಷ್ಮೀ ಎಚ್.ಎಸ್., ಶಿರೂರು ಗ್ರಾ.ಪಂ ಅಧ್ಯಕ್ಷೆ ದಿಲ್ಶಾದ್ ಬೇಗಂ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್, ಗ್ರಾ.ಪಂ ಸದಸ್ಯರಾದ ಮುಕ್ರಿ ಮಹ್ಮದ್ ಅಲ್ತಾಫ್, ಉದಯ ಪೂಜಾರಿ ಮೈದಿನಪುರ, ಪ್ರಸನ್ನ ಕುಮಾರ್ ಶೆಟ್ಟಿ, ರಘುರಾಮ ಕೆ. ಪೂಜಾರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಸಲಕರಣೆಗಳನ್ನು…
