Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬ್ರಹ್ಮಾವರ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬ್ರಹ್ಮಾವರ ತಾಲೂಕು ಘಟಕದ 2025–28ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದಯವಾಣಿಯ ರಾಜೇಶ್ ಗಾಣಿಗ ಅಚ್ಲಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಕರ್ನಾಟಕದ ಚಂದ್ರಶೇಖರ್ ಬೀಜಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬ್ರಹ್ಮಾವರ ಗಜಾನನ ಭವನದಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪ್ರಜಾವಾಣಿಯ ಶೇಷಗಿರಿ ಭಟ್, ಕೋಶಾಧಿಕಾರಿಯಾಗಿ ವಿಜಯವಾಣಿಯ ರವೀಂದ್ರ ಕೆ., ಕಾರ್ಯದರ್ಶಿಯಾಗಿ ಹರೀಶ್ ಕಿರಣ್ ತುಂಗ ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಬಂಡಿಮಠ ಶಿವರಾಮ ಆಚಾರ್ಯ, ಉದಯ ಆಚಾರ್ಯ, ಅಲ್ತಾರು ನಾಗರಾಜ್, ಪ್ರವೀಣ್ ವಿ., ಅನಂತ ನಾಯಕ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಹಾಗೂ ರಾಜ್ಯ ಸಮಿತಿ ಸದಸ್ಯ ಅಸ್ಟ್ರೋ ಮೋಹನ್ ಸಹಕರಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಡಿ ಹೆಚ್ಚಿನ ಸಂಖ್ಯೆಯ ಅಸಂಘಟಿತ ಕಾರ್ಮಿಕರುಗಳನ್ನು ನೋಂದಣಿ ಮಾಡಿಸುವುದರೊಂದಿಗೆ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯ ಪ್ರಗತಿ ಪರಿಶೀಲನೆಯ ಕುರಿತು ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಸಂಘಟಿತ ಕಾರ್ಮಿಕರು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಆರ್ಥಿಕ ಮೂಲಗಳು ಇರುವುದಿಲ್ಲ. ಇಂತಹ ಅಸಂಘಟಿತ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಎಂಬ ಮಹತ್ವಾಕಾಂಕ್ಷಿ ವಂತಿಕೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಹೆಬ್ಬಾವುಗಳು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದು ಜನರನ್ನು ಭಯಭೀತರನ್ನಾಗಿಸಿದೆ. ಇತ್ತೀಚಿನ ದಿನಗಳಲ್ಲಿ ಗಂಗೊಳ್ಳಿಯ ಅಸುಪಾಸಿನಲ್ಲಿ ರಾತ್ರಿ ವೇಳೆ ದೊಡ್ಡ ಗಾತ್ರದ ಮತ್ತು ಚಿಕ್ಕ ಗಾತ್ರದ ಹೆಬ್ಬಾವುಗಳು ತುಂಬಾ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ನೋಡಿದ ಕ್ಷಣ ಮಾತ್ರದಲ್ಲಿ ಪೊದೆಗಳ ನಡುವೆ ನಿರ್ಜನ ಜಾಗದಲ್ಲಿ ಕಣ್ಮರೆಯಾದ ಕಾರಣ ಸಾಕಷ್ಟು ಹೆಬ್ಬಾವುಗಳು ಸೆರೆ ಹಿಡಿಯಲಾಗದೆ ತಪ್ಪಿಸಿಕೊಂಡಿದೆ. ಭಾನುವಾರ ರಾತ್ರಿ ಗಂಗೊಳ್ಳಿ ಬಂದರು ಬೇಲಿಕೇರಿ ಬಳಿ ಬೃಹತ್ ಗಾತ್ರದ ಹೆಬ್ಬಾವೊಂದು ದಾರಿ ಮದ್ಯ ಕಾಣಿಸಿಕೊಂಡಿದ್ದು, ಭಯಭಿತರಾದ ಅವರು ಕೂಡಲೇ ಉರಗ ತಜ್ಞ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಮಡಿ ನಾಗರಾಜ್ ಖಾರ್ವಿ ಅವರಿಗೆ ವಿಚಾರ ತಿಳಿಸಿದ್ದಾರೆ. ನಾಗರಾಜ ಖಾರ್ವಿ ಅವರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ವಿಶ್ವನಾಥ್ ಗಂಗೊಳ್ಳಿ ಮತ್ತು ಗಣೇಶ್ ಖಾರ್ವಿ ಅವರ ಸಹಾಯದಿಂದ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರಿಸಿದರು. ಸೆರೆ ಹಿಡಿದ ಹೆಬ್ಬಾವು ಸುಮಾರು 11 ಕೆಜಿ ತೂಕವಿದ್ದು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ. ನಡೆಸಿದ ಜೆಇಇ ಮೈನ್ಸ್ ಪರೀಕ್ಷೆಯ ಪ್ರಥಮ ಹಂತದ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪಿಯುಷ್ ಎಚ್. 99.4585176 ಪರ್ಸೇಂಟೈಲ್ ಗಳಿಸಿ ಸಾಧನೆ ಮೆರೆದಿದ್ದಾರೆ. 8 ವಿದ್ಯಾರ್ಥಿಗಳು 98.5 ಪರ್ಸೇಂಟೈಲ್‌ಗಳಿಗಿಂತ ಅಧಿಕ ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ. ಶಶಾಂಕ್ ಬೋರ್ಕರ್ (98.9610456), ಸೃಜನ್ ವಿ. (98.7320359), ಮೆಲ್ರೋಯ್ ಕಾಸ್ಟೆಲಿನೋ (98.648776), ಪ್ರಣವ್ ಎನ್. ಪಂಡಿತ್ (98.5677958), ಹರ್ಷವರ್ಧನ ಕೆ. ಪಿ. (98.5552656), ಕ್ಷಮ ಅಶೋಕ್ ಹಕಟಿ (98.5177603), ಕ್ಲಾರೆನ್ಸ್ ಡಿಸೋಜ (98.4810184) ಸೇರಿದಂತೆ ಈ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದಾರೆ.97 ಪರ್ಸೆಂಟೈಲ್‌ಗಿಂತ ಅಧಿಕ 22 ವಿದ್ಯಾರ್ಥಿಗಳು, 96 ಪರ್ಸೆಂಟೈಲ್‌ಗಿಂತ ಅಧಿಕ 38 ವಿದ್ಯಾರ್ಥಿಗಳು ಮತ್ತು 95 ಪರ್ಸೆಂಟೈಲ್‌ಗಿಂತ ಅಧಿಕ 58 ವಿದ್ಯಾರ್ಥಿಗಳು ಅಂಕ ಪಡೆದಿದ್ದಾರೆ. ಭೌತಶಾಸ್ತ್ರ ವಿಷಯದಲ್ಲಿ 5 ವಿದ್ಯಾರ್ಥಿಗಳು, ರಸಾಯನಶಾಸ್ತ್ರ ವಿಷಯದಲ್ಲಿ 11 ವಿದ್ಯಾರ್ಥಿಗಳು ಮತ್ತು ಗಣಿತದಲ್ಲಿ 3 ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಳಿಗಿಂತ ಅಧಿಕ ಅಂಕ ಪಡೆದಿದ್ದಾರೆ. ಸಾಧನೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕೇಂದ್ರ ಸರಕಾರದ ಎನ್ ಟಿ ಎ ಪ್ರಾಧಿಕಾರವು ನಡೆಸುವ ರಾಷ್ಟ್ರ ಮಟ್ಟದ ಜೆಇಇ ಮೈನ್ಸ್  2026ರ  ಪರೀಕ್ಷೆಯಲ್ಲಿ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿಗಳು  ಕುಂದಾಪುರ ತಾಲೂಕಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಧೀರಜ್ ಜಿ.ಡಿ. 99.3604 ಪರ್ಸಂಟೈಲ್, ಮಾನ್ಯ ಪೂಜಾರಿ 98.6832 ಪರ್ಸಂಟೈಲ್ , ಶ್ರೇಯಸ್ ಪಿ. ಗಾಣಿಗ 98.4693 ಪರ್ಸಂಟೈಲ್, ಶ್ರೀರಾಮ್ ಪಿ. ಭಟ್ 97.4402ಪರ್ಸಂಟೈಲ್, ಶ್ರೀಧಾನ್ ಎಂ. ಶೆಟ್ಟಿ 97.5834 ಪರ್ಸಂಟೈಲ್, ನಹುಷ್ ಚಂದ್ರ ಬಿಲ್ಲವ 96.1127, ಆಯುಷ್ ಯು ಮೆಂಡನ್ 96.1817 ಪರ್ಸಂಟೈಲ್ಅಂಕಗಳಿಸಿ ಸಾಧನೆ ಮೆರೆದಿದ್ದಾರೆ. ಗ್ರಾಮೀಣ ಭಾಗವಾದ ಹೆಮ್ಮಾಡಿ, ಬೈಂದೂರು, ಕುಂದಾಪುರದ ಅನೇಕ ವಿದ್ಯಾರ್ಥಿಗಳು ಜೆಇಇ ಮೈನ್ಸ್ ಪರೀಕ್ಷೆಗೆ ತರಬೇತಿ ಪಡೆಯಲು ದೂರದ ಕಾರ್ಕಳ, ಮಂಗಳೂರಿಗೆ ತೆರಳಬೇಕಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕುಂದಾಪುರ ಭಾಗದ ಪ್ರತಿಷ್ಠಿತ ಸಂಸ್ಥೆಯಾದ ಜನತಾ ಪಿಯು ಕಾಲೇಜಿನಲ್ಲಿ ನುರಿತ ಉಪನ್ಯಾಸಕರ ಸತತ ಮಾರ್ಗದರ್ಶನದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲೂ ಇಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯವರು ನಡೆಸುವ  ಅತಿ ಕ್ಲಿಷ್ಟಕರವೆನಿಸಿದ ಪರೀಕ್ಷೆಗಳಲ್ಲೊಂದಾದ ಜೆಇಇ ಮೈನ್ಸ್ (ಸೆಷನ್-1) 2026ನೇ ಸಾಲಿನ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 102 ಮಂದಿ ವಿದ್ಯಾರ್ಥಿಗಳು 90 ಪರ್ಸೆಂಟೈಲ್ ಗಿಂತ ಅಧಿಕ ಅಂಕವನ್ನು ಪಡೆದು ವಿಶಿಷ್ಟ ಸಾಧನೆ ಗೈದು ಮುಂದಿನ ಹಂತದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ತೇರ್ಗಡೆಯನ್ನು ಹೊಂದಿದ್ದಾರೆ. ವಿದ್ಯಾರ್ಥಿಗಳಾದ ನಮಿತ್ ಕೃಷ್ಣಮೂರ್ತಿ ಹೆಗಡೆ – 99.4981217 ಪರ್ಸೆಂಟೈಲ್, ನಾಗದೇವ್ ಎಂ.ಜಿ. – 99.3310617 ಪರ್ಸೆಂಟೈಲ್, ಪ್ರಥಮ್ ತಮ್ಮಣ್ಣ ಗೌಡರ್ – 99.1416986 ಪರ್ಸೆಂಟೈಲ್ ಪಡೆದುಕೊಳ್ಳುವ ಮೂಲಕ ವಿಶಿಷ್ಟ ಶ್ರೇಣಿಗಳಿಸಿದ್ದಾರೆ. ತೇಜಸ್ ಆರ್. ಬಿ.- 98.9615457ನಿನಾದ್ ರಾಜೇಶ್ ನಾಯ್ಕ್- 98.9463580ಧನುಷ್  ಹೆಚ್. ಎ.- 98.5706065ಸಂವಿತ್‌ ಅಮಿತ್ ಗೋಕರ್ಣ- 98.5706065ದೃಶ್ಯ್‌- 98.4130581ಸುಕ್ಷಿತ್ ಗಿರೀಶ್ ಗೌಡ- 98.3503880ತೇಜಸ್  ಎನ್. ಇ. – 98.3227894ತೇಜಸ್ ಹೆಗಡೆ ಎಚ್. ಡಿ.- 98.1925416ಅಕ್ಷತಾ ಮೋಹನ್ ಹೆಗಡೆ -…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬಿಲ್ಲವಾಸ್ ಕತಾರ್ ಸಂಸ್ಥೆಯು ದೋಹಾದ “ದಿ ಹ್ಯಾಮಿಲ್ಟನ್ ಇಂಟರ್‌ನ್ಯಾಷನಲ್ ಸ್ಕೂಲ್”ನ  ಭವ್ಯವಾದ ಒಳ ಕ್ರೀಡಾಂಗಣದಲ್ಲಿ ತನ್ನ ಚೊಚ್ಚಲ ತ್ರೋಬಾಲ್ ಟೂರ್ನಮೆಂಟ್‌ನ್ನು ಯಶಸ್ವಿಯಾಗಿ ಆಯೋಜಿಸಿತು. ಪುರುಷರು, ಮಹಿಳೆಯರು ಹಾಗೂ ಮಿಶ್ರ ವಿಭಾಗಗಳಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಕತಾರ್ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ನಡೆದ ಈ ಪಂದ್ಯಾಟ ಕ್ರೀಡಾಸ್ಫೂರ್ತಿ, ಕ್ರೀಡಾ ಚಾಕಚಕ್ಯತೆ, ದೈಹಿಕ ಕ್ಷಮತೆ ಮತ್ತು ವಿಶೇಷವಾಗಿ ಸಾಮೂಹಿಕ ಒಗ್ಗಟ್ಟನ್ನು ಬಿಂಬಿಸುವ ಕೇಂದ್ರ ಬಿಂದುವಾಗಿತ್ತು. ಈ ಪಂದ್ಯಾಟವನ್ನು ಕತಾರ್‌ನ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ (ಶಿಕ್ಷಣ, ಸಂಸ್ಕೃತಿ ಮತ್ತು ವೀಸಾ) ಹರೀಶ್ ಪಾಂಡೆ ಅವರು ಉದ್ಘಾಟಿಸಿದರು. ಸಮಾರಂಭದಲ್ಲಿ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರಾದ ಎಂ. ಪಲ್ಲೊಂಜಿ ಸಂಸ್ಥೆಯ ನಿರ್ದೇಶಕರಾದ ಚಿದಾನಂದ ನಾಯಕ್, ಐ.ಎಸ್‌.ಸಿ ಸಲಹಾ ಸದಸ್ಯರಾದ ಸುಬ್ರಹ್ಮಣ್ಯ ಹೆಬ್ಬಾಗಿಲು, ಐ.ಸಿ.ಸಿ, ಐ.ಸಿ.ಬಿ.ಎಫ್, ಐ.ಎಸ್‌.ಸಿ. ಪ್ರತಿನಿಧಿಗಳು ಹಾಗೂ ವಿವಿಧ ಸಂಘಗಳ ಅಧ್ಯಕ್ಷರು ಸೇರಿದಂತೆ  ಅನೇಕ ಗಣ್ಯರು ಭಾಗವಹಿಸಿದ್ದರು. ಬಿಲ್ಲವಾಸ್ ಕತಾರ್‌ನ ಅಧ್ಯಕ್ಷೆಯಾದ ಅಪರ್ಣ ಶರತ್ ಅವರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ದ್ವಿತೀಯ ಪಿ.ಯು.ಸಿ ಪರೀಕ್ಷೆಯು ಫೆಬ್ರವರಿ 28ರಿಂದ ಮಾರ್ಚ್ 17ರ ವರೆಗೆ ನಡೆಯಲಿದ್ದು, ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡುವುದರೊಂದಿಗೆ ಗೊಂದಲಗಳಿಗೆ ಆಸ್ಪದ ನೀಡದೇ ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು  ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು. ಅವರು ಮಂಗಳಾವರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕೆಸ್ವಾನ್ ವಿಡಿಯೋ ಕಾನ್ಫ್ರೆನ್ಸ್ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆ-01ನ್ನು ಸುವ್ಯವಸ್ಥಿತವಾಗಿ ನಡೆಸುವ ಕುರಿತು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದ್ವಿತೀಯ ಪಿಯುಸಿ ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಭವಿಷ್ಯದ ವಿದ್ಯಾಭ್ಯಾಸಕ್ಕೆ ಮೂಲವಾಗಿರುವುದರ ಜೊತೆಗೆ ಬಹಳ ಮಹತ್ವದ್ದಾಗಿದ್ದು, ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು ವ್ಯವಸ್ಥಿತ ಹಾಗೂ ದೋಷರಹಿತವಾಗಿ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆಯನ್ನು ಬರೆಯುವ ವಾತಾವರಣವನ್ನು ಕಲ್ಪಿಸಬೇಕು ಎಂದರು. ಪ್ರಸಕ್ತ ಸಾಲಿಗೆ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯು ಫೆಬ್ರವರಿ 28 ರಿಂದ ಮಾರ್ಚ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕಾರ್ಕಳದಲ್ಲಿ ಹಾದುಹೋಗುವ 169ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದರ ಜೊತೆಗೆ ಭೂ ಮಾಲೀಕರಿಗೆ ಪರಿಹಾರದ ಹಣವನ್ನು ವೈಜ್ಞಾನಿಕವಾಗಿ ಮೌಲ್ಯವನ್ನು ನಿಗಧಿಪಡಿಸಿ ನೀಡಬೇಕೆಂದು ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.  ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಕಳ, ಬಜಗೋಳಿ, ಮಾಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಮತ್ತು ಭೂ ಸ್ವಾಧೀನ ಪರಿಹಾರ ಪಾವತಿಗೆ ಸಂಸಂಬಂಧಿಸಿದಂತೆ ಚರ್ಚಿಸುವ ಕುರಿತು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ 169ಎ ಯ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ಭೂ ಸ್ವಾಧೀನ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಅಲ್ಲಿನ ಸ್ಥಳೀಯ ಜನರು ಅನೇಕ ವರ್ಷಗಳಿಂದ ತಾವು ವಾಸವಿರುವ ಮನೆ ಹಾಗೂ ಕೃಷಿ ಭೂಮಿಯನ್ನು ರಸ್ತೆ ಅಭಿವೃದ್ಧಿ ಕಾಮಗಾರಿಗೆ ನೀಡುವ ಅಗತ್ಯತೆ ಉಂಟಾಗಿದೆ. ಅವರುಗಳಿಗೆ ಪ್ರಸ್ತುತ ಮಾರುಕಟ್ಟೆ ಅನುಗುಣವಾಗಿ ಪರಿಹಾರದ ಹಣವನ್ನು ನೀಡಿದ್ದಲ್ಲಿ ಅವರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ವಲಯ ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ, ನಿವೃತ್ತ ಮುಖ್ಯಶಿಕ್ಷಕ ಶ್ರೀನಿವಾಸ ಉಬ್ಬೇರಿ (76) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಉಪ್ಪುಂ ದಲ್ಲಿರುವ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಕಾರ್ಕಳ ವಲಯದ ಕಪ್ಪೆಟ್ಟು, ಬೈಂದೂರು ವಲಯದ ಮೊಗೇರಿ, ಮಡಿಕಲ್ ಸೇರಿದಂತೆ ಹಲವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ಅಪಾರ ಶಿಷ್ಯವೃಂದ ಹೊಂದಿದ್ದರು. ಬೈಂದೂರು ವಲಯ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ, ಬಿಲ್ಲವ ಸಮಾಜದ ಸಂಘಟನೆಗಾಗಿ ಶ್ರಮಿಸಿದ್ದರು. ಅವರಿಗೆ ಪತ್ನಿ ನಿವೃತ್ತ ಮುಖ್ಯ ಶಿಕ್ಷಕಿ ಚಿಕ್ಕಮ್ಮ, ಮೂವರು ಪುತ್ರರು ಹಾಗೂ ಪುತ್ರಿ ಇದ್ದಾರೆ.

Read More