ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ರಹ್ಮಾವರ ಫಾರ್ಚೂನ್ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಇವರ ನೇತೃತ್ವದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ರಕ್ತದಾನ ಕೇಂದ್ರ, ಕುಂದಾಪುರ ಲಯನ್ಸ್ ಕ್ಲಬ್ ಬೃಹ್ಮಗಿರಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮೂಡಹಡು, ಪಾಂಡೇಶ್ವರ ಸಾಮ್ರಾಜ್ಜಿ ಆಟೋ ಚಾಲಕರ ಸಂಘ ಮಾಬುಕಳ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರದಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಕಾಲೇಜಿನ ಅಡಿಟೋರಿಯಂನಲ್ಲಿ ನಡೆಯಿತು.

ಭಾರತೀಯ ರೆಡ್ ಕ್ರಾಸ್ ಸೊಸೈಟಿ ರಕ್ತ ಕೇಂದ್ರದ ಅಧ್ಯಕ್ಷ ಕುಂದಾಪುರ ಎಸ್. ಜಯಕರ ಶೆಟ್ಟಿ ಅವರು ಕಾರ್ಯ್ರಮವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನಕ್ಕಿಂತ ಶ್ರೇಷ್ಠದಾನ ಇನ್ನೊಂದಿಲ್ಲ. ಇನ್ನೊಬ್ಬರ ಜೀವ ಉಳಿಸುವ ಸಲುವಾಗಿ ತನ್ನ ರಕ್ತವನ್ನು ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಫಲಪೇಕ್ಷೆ ಇಲ್ಲದೆ ಇದೊಂದು ಪವಿತ್ರ ದಾನವಾಗಿದೆ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ ಈ ಕಾರಣಕ್ಕೆ ರಕ್ತವನ್ನು ಪರ್ಯಾಯವಾದ ವಸ್ತು ಇನ್ನೊಂದು ಇಲ್ಲ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾಲುಮರದ ತಿಮ್ಮಕ್ಕ ರಾಷ್ಟ್ರೀಯ ಹಸಿರು ಪ್ರಶಸ್ತಿ ಪುರಸ್ಕೃತರಾದ ದಿನೇಶ್ ಅವರು ಮಾತನಾಡಿ, ನಾನು 45 ಬಾರಿ ರಕ್ತದಾನ ಮಾಡಿದ್ದೇನೆ. ನಾವೆಲ್ಲರೂ ಜಾತಿ, ಮತ, ಧರ್ಮ, ಲಿಂಗ ಭೇದವನ್ನು ಬದಿಗಿಟ್ಟು ರಕ್ತದಾನ ಮಾಡಿ ಜೀವದಾನ ಮಾಡೋಣ ಎಂದರು.
ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಅಧ್ಯಕ್ಷ ಡಾ. ತಾರಾನಾಥ ಶೆಟ್ಟಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನದ ಶ್ರೇಷ್ಠದಾನಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಅತಿಥಿಗಳನ್ನು ಗೌರವಿಸಿದರು.
ವೇದಿಕೆಯಲ್ಲಿ ಬ್ರಹ್ಮಾವರ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಪ್ರಾಂಶುಪಾಲರಾದ ಸ್ಮಿತಾ ಮೋಲ್ ಇಎಮ್., ಪಾಂಡೇಶ್ವರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡಹಡು ಅಧ್ಯಕ್ಷ ವೆಂಕಟೇಶ ಪೂಜಾರಿ, ಲಯನ್ಸ್ ಉಮೇಶ್ ನಾಯಕ್, ಟ್ರಸ್ಟಿ ಸುಜಾತ ಟಿ. ಶೆಟ್ಟಿ, ವಿಜೇತ ಹರಿಪ್ರಸಾದ್ ಶೆಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಕಲ್ಪನಾ ಶೆಟ್ಟಿ ಮತ್ತು ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಲಯನ್ಸ್ ಕಾರ್ಯದರ್ಶಿ ಶೈನ್ ಸತ್ಯಭಾಮ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಾದ ಕೀರ್ತನ ಮತ್ತು ತಂಡದವರಿಂದ ಪ್ರಾರ್ಥನೆ ನಡೆಯಿತು. ಸಹಾಯಕ ಉಪನ್ಯಾಸಕಿ ಚೈತ್ರ ಸ್ವಾಗತಿಸಿದರು. ಸಹಾಯಕ ಉಪನ್ಯಾಸಕಿ ಪ್ರೀತಿಕಾ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿನಿ ನಿತ್ಯ ವಂದಿಸಿದರು.
















