Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಡಾ. ಬಿ.ಬಿ ಹೆಗ್ಡೆ ಕಾಲೇಜಿನಲ್ಲಿ ವಸ್ತ್ರಭಾರತಿ – ದೇಶಭಕ್ತಿ ಮೂಡಿಸಿದ ಫ್ಯಾಷನ್ ಪೆರೇಡ್
    ಕ್ಯಾಂಪಸ್ ಕಾರ್ನರ್

    ಡಾ. ಬಿ.ಬಿ ಹೆಗ್ಡೆ ಕಾಲೇಜಿನಲ್ಲಿ ವಸ್ತ್ರಭಾರತಿ – ದೇಶಭಕ್ತಿ ಮೂಡಿಸಿದ ಫ್ಯಾಷನ್ ಪೆರೇಡ್

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ “ ವಸ್ತ್ರಭಾರತಿ 2026 – ಅಂತರ್ ತರಗತಿ ದೇಶಭಕ್ತಿ ಫ್ಯಾಷನ್ ಪೆರೇಡ್” ಕಾರ್ಯಕ್ರಮ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು.

    Click Here

    Call us

    Click Here

    ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸೃಜನಶೀಲತೆ, ಆತ್ಮವಿಶ್ವಾಸ, ತಂಡ ಭಾವನೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ತರಗತಿಗಳ 23 ತಂಡಗಳು ಉತ್ಸಾಹದಿಂದ ಭಾಗವಹಿಸಿದವು.

    ವಿದ್ಯಾರ್ಥಿಗಳ ಉತ್ಸಾಹಭರಿತ ಪ್ರದರ್ಶನವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಉಡುಪುಗಳ ಮೂಲಕ ಕೇವಲ ಫ್ಯಾಷನ್ ಪ್ರದರ್ಶನವನ್ನಷ್ಟೇ ಮಾಡದೆ, ಭಾರತದ ವೈವಿಧ್ಯತೆ, ಸಂಸ್ಕೃತಿ, ಪರಂಪರೆ ಮತ್ತು ದೇಶಭಕ್ತಿಯ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರಿದರು. ಅಲ್ಲದೆ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಪುಗಳು, ಸ್ವಾತಂತ್ರ್ಯ ಹೋರಾಟಗಾರರ ಪ್ರತಿರೂಪಗಳು, ತ್ರಿವರ್ಣ ಧ್ವಜದ ಸ್ಫೂರ್ತಿಯ ವಿನ್ಯಾಸಗಳು ಹಾಗೂ ಪರಿಸರ ಸ್ನೇಹಿ ದೇಶಭಕ್ತಿ ಸಂದೇಶ ಸಾರುವ ಉಡುಪುಗಳ ಮೂಲಕ ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಅನಾವರಣಗೊಳಿಸಿದರು.

    ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ವಿ. ಭಟ್, ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ವಿನಯಾ ವಿ. ಶೆಟ್ಟಿ ಹಾಗೂ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

    ತೀರ್ಪುಗಾರರಾಗಿ ಶ್ರೀ ವೆಂಕಟರಮಣ ಪದವಿ-ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಮಮತಾ ಎಸ್. ರೈ, ಆರ್. ಎನ್. ಶೆಟ್ಟಿ ಪದವಿ-ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಶ್ರೀಮತಿ ಸುಮತಿ ಶೆಣೈ ಹಾಗೂ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಹಾಗೂ ನ್ಯೂಸ್ ನೆಕ್ಸ್ಟ್ ನಿರೂಪಕರಾದ ದರ್ಶನ್ ಶೆಟ್ಟಿ ನಾರ್ಕಳಿ ಭಾಗವಹಿಸಿದ್ದರು.

    Click here

    Click here

    Click here

    Call us

    Call us

    ಸ್ಪರ್ಧೆಯ ಅಂತಿಮ ಫಲಿತಾಂಶದಲ್ಲಿ ತೃತೀಯ ಬಿಸಿಎ ‘ಬಿ’ ತಂಡ ಪ್ರಥಮ ಸ್ಥಾನ, ತೃತೀಯ ಬಿ.ಕಾಂ. ‘ಡಿ’ ಹಾಗೂ ದ್ವಿತೀಯ ಬಿಬಿಎ ತಂಡಗಳು ದ್ವಿತೀಯ ಸ್ಥಾನವನ್ನು  ಪಡೆದುಕೊಂಡರೆ, ದ್ವಿತೀಯ ಬಿ.ಕಾಂ. ‘ಬಿ’ ತೃತೀಯ ಸ್ಥಾನವನ್ನು ಹಾಗೂ ಪ್ರಥಮ ಬಿಸಿಎ ‘ಎ’ ವಿಭಾಗ ತಂಡ ತೀರ್ಪುಗಾರರ ವಿಶೇಷ ಮೆಚ್ಚುಗೆ ಬಹುಮಾನ ಪಡೆಯಿತು.

    ಕಾರ್ಯಕ್ರಮದ ಸಂಯೋಜಕರಾದ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

     

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರ: ‘ಡಾ.ಎಚ್. ಶಾಂತರಾಮ್ ಯಕ್ಷಗಾನ ಪುರಸ್ಕಾರʼ  – ಪೂರ್ವಭಾವಿ ಸಭೆ

    28/09/2026

    ಡಾ. ಬಿ.ಬಿ. ಹೆಗ್ಡೆ ಕಾಲೇಜು: ಚೆಸ್ ಪಂದ್ಯಾಟದಲ್ಲಿ ಪುರುಷರ ವಿಭಾಗ ಎರಡನೇ ಬಾರಿ ಚಾಂಪಿಯನ್

    28/09/2026

    ಮೂಡ್ಲಕಟ್ಟೆ: ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ

    28/09/2026
    Leave A Reply Cancel Reply

    18 − thirteen =

    Call us

    Click Here

    Call us

    Call us

    Call us
    Highest Viewed Recently
    • ಸವಾಲುಗಳನ್ನು ಎದುರಿಸಲು ಶಿಕ್ಷಕರು ಸದಾ ತಯಾರಾಗಿರಬೇಕು: ಉಪನಿರ್ದೇಶಕ ಲೋಕೇಶ್
    • ಕುಂದಾಪುರ: ‘ಡಾ.ಎಚ್. ಶಾಂತರಾಮ್ ಯಕ್ಷಗಾನ ಪುರಸ್ಕಾರʼ  – ಪೂರ್ವಭಾವಿ ಸಭೆ
    • ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ವ್ಹೀಲ್‌ಚೇರ್‌ ವಿತರಣೆ
    • ಪಾಂಡೇಶ್ವರ: ಕಲ್ಪತರು ಸ್ವ – ಸಹಾಯ ಸಂಘಗಳ ವಾರ್ಷಿಕ ಸಭೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ಚೆಸ್ ಪಂದ್ಯಾಟದಲ್ಲಿ ಪುರುಷರ ವಿಭಾಗ ಎರಡನೇ ಬಾರಿ ಚಾಂಪಿಯನ್

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.