ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ತ್ರಾಸಿ ಬೀಚ್ ಸಮೀಪದ ಪಾರ್ಕ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗಂಗೊಳ್ಳಿ ಪೋಲಿಸ್ ತಂಡ ದಾಳಿ ನಡೆಸಿ ರವಿರಾಜ್ (46)ನನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ತಾಲೂಕು ದಂಡಾಧಿಕಾರಿ ಅವರ ಅನುಮತಿ ಮೇರೆಗೆ ಗಂಗೊಳ್ಳಿ ಪಿಎಸ್ಐ ನಂಜಾ ನಾಯ್ಕ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತನ ವಶದಲ್ಲಿದ್ದ 3000ರೂ. ಮೌಲ್ಯದ 100 ಗ್ರಾಂ ತೂಕದ ಗಾಂಜಾ, ನಗದು 380 ರೂ. ಸ್ವಾಧೀನಪಡಿಸಿಕೊಳ್ಳಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಯಡ್ತೆರೆಯಲ್ಲಿ ಸುಮಾರು 3 ವರ್ಷದ ಹಿಂದೆ ಆರಂಭವಾದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರು ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಂಜುರು ಮಾಡಿ ಶಂಕುಸ್ಥಾಪನೆ ಮಾಡಿದ್ದರು. ನಂತರ ಹಾಲಿ ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಅವರು ಕೂಡ ಶಂಕುಸ್ಥಾಪನೆ ಮಾಡಿ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ಕಳೆದ ಮೂರು ವರ್ಷಗಳಿಂದ ಈ ಬಸ್ ನಿಲ್ದಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಶೀಘ್ರವೇ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ಹಾಗೂ ತಾಲೂಕು ಕೇಂದ್ರವಾದ ಬೈಂದೂರಿಗೆ ಕೆ.ಎಸ್. ಆರ್.ಟಿ.ಸಿ ಬಸ್ ಡಿಪೋ ನಿರ್ಮಿಸುವಂತೆ ಕ್ರಮ ಕೈಗೊಳ್ಳಲು ನಾಗರಿಕರು ಶಾಸಕರು ಹಾಗೂ ಸಂಸದರನ್ನು ಒತ್ತಾಯಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಸಂತೋಷ್ ಕುಂದೇಶ್ವರ್ ಅವರನ್ನು ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ. ಅವರು ಸಂತೋಷ ಕುಂದೇಶ್ವರ ಅವರನ್ನು ರೋಟರಿ ಕ್ಲಬ್ ಪರವಾಗಿ ಗೌರವಿಸಿದರು. ರೋಟರಿ ವಲಯ ಸೇನಾನಿ ಕೆ. ರಾಮನಾಥ ನಾಯಕ್, ಗಂಗೊಳ್ಳಿ ರೋಟರಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಸದಸ್ಯ ಕೃ? ಪೂಜಾರಿ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ನಾರಾಯಣ ನಾಯ್ಕ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರಾವಳಿ ಫ್ರೆಂಡ್ಸ್ ಬೀಜಾಡಿ ಎಂಬ ಹೆಸರಿನ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಮಯದಲ್ಲಿ ಕೋಡಿ ಸಿವಾಕ್ ಸಮೀಪದಲ್ಲಿ ಅಬ್ಬರದ ಅಲೆಗಳ ಹೊಡೆತಕ್ಕೆ ನಾಡದೋಣಿಯ ಬಲೆ ಸಂಪೂರ್ಣ ಛಿದ್ರಗೊಂಡು ಲಕ್ಷಂತಾರ ರೂ. ಹಾನಿಗೀಡಾಗಿದೆ. ಮೀನುಗಾರಿಕೆಯ ಬಲೆಗಳು ಸೇರಿದಂತೆ ಹಲವು ಉಪಕರಣಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಬೀಜಾಡಿ ಹಮೀದ್ ಸಾಹೇಬ್ ಎಂಬುವರ ಮಾಲಿಕತ್ವದ ದೋಣಿಯಲ್ಲಿ ಸುಮಾರು20 ಕ್ಕೂ ಹೆಚ್ಚು ಮಂದಿ ಕೈರಂಪಣಿ ಮೀನುಗಾರಿಕೆ ನಡೆಸುತ್ತಿದ್ದು ಮೀನುಗಾರಿಕೆಯನ್ನೇ ನಂಬಿ ಬದುಕು ಸಾಗಿಸುತ್ತಿದ್ದು, ಎಲ್ಲಾ ಮೀನುಗಾರರು ಸೇರಿ ಬಲೆಯನ್ನು ರಕ್ಷಣೆ ಮಾಡುವಲ್ಲಿ ಶ್ರಮ ವಹಿಸಿದರೂ ಅಲೆಗಳ ನೀರಿನ ಸೆಳತಕ್ಕೆ ಯಾವುದೇ ಪ್ರಯೋಜನವಾಗದೇ ಸಂಪೂರ್ಣ ಬಲೆ ತುಂಡು ತುಂಡಾಗಿ ಸೀವಾಕ್ನ ತಡೆಗೋಡೆಯ ಟೆಟ್ರಾಪೋಡ್ ಬ್ಲಾಕ್ಗಳಿಗೆ ಸಿಲುಕಿ ಹಿಡಿದ ಮೀನುಗಳು ಪುನಃ ಕಡಲು ಸೇರಿದೆ. ಹಿಡಿದ ಮೀನು ಉಳಿಸಿಕೊಳ್ಳಲು ಪ್ರಯತ್ನ: ದಿನವಿಡೀ ಹಿಡಿದ ಮೀನುಗಳನ್ನು ಉಳಿಸಿಕೊಳ್ಳಲು ಎಷ್ಟು ಪ್ರಯತ್ನ ಪಟ್ಟರೂ ಯಾವುದೇ ಫಲ ಸಿಗಲಿಲ್ಲ. ಸೀವಾಕ್ನ ತಡೆಗೋಡೆಗಳ ಸಮೀಪವೇ ಈ ಘಟನೆ ಆಗಿರುವುದರಿಂದ ಅಬ್ಬರದ ಅಲೆಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಚಿತ್ರ ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತಾವು ಹೊಸದಾಗಿ ಖರೀದಿಸಿದ ಆಡಿ ಕ್ಯೂ8 ಕಾರಿಗೆ ದೇವರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಒಂದು ಮುಡಿ ಅಕ್ಕಿ ಕಡುಬಿನ ಹರಕೆಯನ್ನು ದೇವರಿಗೆ ಸಮರ್ಪಿಸಿದರು. ಈ ಸಂದರ್ಭ ದೇವಳದ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಅವರು ನಟ ರಕ್ಷಿತ್ ಶೆಟ್ಟಿಯನ್ನು ದೇವಳದ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಪರ್ಯಾಯ ಅರ್ಚಕ ವೆಂಕಟನಾರಾಯಣ ಉಪಾಧ್ಯಾಯ ಮತ್ತು ಸಹೋದರರು, ಮ್ಯಾನೇಜರ್ ನಟೇಶ್ ಕಾರಂತ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಆರಂಭಿಸುವ ಗುರಿ ಇರಿಸಿಕೊಂಡಿದ್ದೇವೆ. ಕಳೆದ ವರ್ಷ ಹಾಗೂ ಈ ವರ್ಷ ಸೇರಿ ಈಗಾಗಲೆ 10 ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಆರಂಭಿಸಲಾಗಿದೆ. ಕೋವಿಡ್ ಕಳೆದ ಒಂದೂವರೆ ವರ್ಷಗಳಿಂದ ಮಕ್ಕಳ ಶಿಕ್ಷಣವನ್ನು ಹಾಳು ಮಾಡಿದೆ. ಕೋವಿಡ್ನಿಂದ ಹೋಟೆಲ್ ಉದ್ಯಮಕ್ಕೆ, ಬಸ್ ಉದ್ಯಮಕ್ಕೆ ಹಾಗೂ ಶಾಲೆಗಳಿಗೆ ತುಂಬಲಾರದ ನಷ್ಟವಾಗಿದೆ. ಹೋಟೆಲ್ ಹಾಗೂ ಬಸ್ ಉದ್ಯಮ ಸರಿಪಡಿಸಿಕೊಳ್ಳಬಹುದು. ಆದರೆ ಮಕ್ಕಳ ಶಿಕ್ಷಣದಲ್ಲಾದ ನಷ್ಟ ಸರಿಪಡಿಸಿಕೊಳ್ಳುವುದೇ ಕಷ್ಟ ಎಂಬಂತಾಗಿದೆ. ಈ ನಷ್ಟವನ್ನು ಶಿಕ್ಷಕರು ವಿಶೇಷ ಕಾಳಜಿ ಇಟ್ಟು ಸರಿಪಡಿಸಬೇಕು. ಎಲ್ಲಾ ಶಿಕ್ಷಕರು ಮುಂದಿನ ಎರಡು ವರ್ಷಗಳಲ್ಲಿ ಮಕ್ಕಳನ್ನು ಪುನರ್ ಸಿದ್ದಪಡಿಸಬೇಕು. ಸಮಾಜದ ಕಟ್ಟಕಡೆಯ ಮಗು ಕೂಡ ಯೋಗ್ಯ ಶಿಕ್ಷಣ ಪಡೆದಲ್ಲಿ ದೇಶ ಬದಲಾಗಲಿದೆ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ನುಡಿದರು. ಅವರು ಚಿತ್ತೂರು ಸರಕಾರಿ ಹಿರಿಯ ಪ್ರಥಮಿಕ ಶಾಲೆಯಲ್ಲಿ ನೋಟ್ ಪುಸ್ತಕ ವಿತರಣೆ, ಸುಸಜ್ಜಿತ ಶೌಚಾಲಯ, ಆಂಗ್ಲ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಭಟ್ಕಳ: ಇಲ್ಲಿನ ಹನುಮಾನನಗರದ ಮಮತಾ ದೇವೇಂದ್ರ ನಾಯ್ಕ್ ಅವರು ಮಂಡಿಸಿರುವ ‘ಕೆಲವು ಪ್ರಮುಖ ಆವರ್ತಕ ಸಂಯುಕ್ತಗಳ ಸಂಶ್ಲೇಷಣೆ, ಗುಣಲಕ್ಷಣ ಮತ್ತು ಜೈವಿಕ ಮೌಲ್ಯಮಾಪನ’ (Synthesis, Characterization And Biological Evaluation Of Some Novel Heterocyclic Compounds) ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ಪ್ರದಾನ ಮಾಡಿದೆ. ಅವರು ಕುವೆಂಪು ವಿಶ್ವವಿದ್ಯಾಲಯದ ರಸಾಯನಶಾಸ್ತ್ರದ ಸಂಶೋಧನೆ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗದ ಯಾದವ ಬೋಡ್ಕೆ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಮಮತಾ ನಾಯ್ಕ್ ಅವರು ಪ್ರಸ್ತುತ ಭಟ್ಕಳದ ಸಿದ್ದಾರ್ಥ ಪದವಿಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸಾಧನೆಗೆ ಕುಟುಂಬಸ್ಥರು, ಹನುಮಾನನಗರದ ನಾಮಧಾರಿ ಸಮಾಜ, ಯುವಕ ಮಂಡಲ, ಜೈ ಹನುಮಾನ್ ಯುವಕ ಮಂಡಲ, ಜೈ ಹನುಮಾನ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಊರಿನ ಮುಖಂಡರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿಬೈಂದೂರು: ತಾಲೂಕು ಕೊಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಸಮಾವೇಶ ಜರಗಿತು. ಅಖಿಲ ಭಾರತ ಕೃಷಿಕೂಲಿಕಾರರ ಸಂಘ(AIAWU)ದ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೆಂಕಟೇಶ್ ಕೋಣಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕೊಲ್ಲೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಉದ್ಯೊಗ ಚೀಟಿಗಾಗಿ ಕೂಲಿಕಾರರು ಸಲ್ಲಿಸಿದ ಅಜಿ೯ಗೆ ಅನುಸಾರವಾಗಿ ಈ ಕೂಡಲೇ ಉದ್ಯೊಗ ಚೀಟಿ ಕೊಟ್ಟು,ನರೇಗಾ ಕೆಲಸ ಕೊಡಲು ಕ್ರಮ ವಹಿಸಬೇಕು ಎಂದು ಸ್ಥಳೀಯಾಡಳಿತವನ್ನು ಆಗ್ರಹಿಸಿದರು. ಈ ಸಂದರ್ಭ ಕೊಲ್ಲೂರು ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕ ಸಂಘದ ಅಧ್ಯಕ್ಷ ನರಸಿಂಹ ಆಚಾರ್, ಮಧು, ಅಂಬಿಕಾ ಬಾಳಿಗ, ಡಾ. ಬಿ. ವಿ. ಬೇಬಿ ಹಾಲ್ಕಲ್ ಉಪಸ್ಥಿತರಿದ್ದರು. ರೇಣುಕಾ ಧನ್ಯವಾದ ಗೈದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಪ್ರಸಿದ್ಧ ಮೂಡಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ಮಂಗಳವಾರ ಕನ್ನಡದ ಖ್ಯಾತ ನಟ, ನಿರ್ದೇಶಕರುಗಳಾದ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಭೇಟಿ ನೀಡಿದರು. ಕುಟುಂಬಿಕರೊಂದಿಗೆ ದೇವಸ್ಥಾನಕ್ಕೆ ಮೊದಲ ಭಾರಿಗೆ ಆಗಮಿಸಿದ್ದ ರಕ್ಷಿತ್ ಶೆಟ್ಟಿ ಪೂಜೆ ಸಲ್ಲಿಸಿದರು. ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ಕರೆಯ ಮೇರೆಗೆ ರಕ್ಷಿತ್ ಶೆಟ್ಟಿ ಆಗಮಿಸಿದ್ದರು. ಈ ಸಂದರ್ಭ ಪ್ರದೀಪ್ ಶೆಟ್ಟಿ, ದಿವ್ಯಾಧರ ಶೆಟ್ಟಿ, ಸುಹಾಸ್ ಶೆಟ್ಟಿ ಮೊದಲಾದವರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತ್ ಪೆಟ್ರೋಲಿಯಂ ಕಂಪೆನಿ ಲಿ. ನೂತನ ಗ್ರಾಹಕ ಅನುಕೂಲ ವ್ಯವಸ್ಥೆ ‘ಫ್ಯೂಯಲ್ ಕಾರ್ಟ್’ ವಾಹನದ ಮೂಲಕ ಡೀಸೆಲ್ ಇಂಧನ ಕರೆಯ ಮೇರೆಗೆ ಉದ್ಯಮಗಳಿಗೆ ತಲುಪಿಸುವ ಸೌಲಭ್ಯವನ್ನು ಬಿಪಿಸಿಎಲ್ನ ಜನರಲ್ ಮೆನೇಜರ್ ಟಿ. ಎನ್. ರಾಮಕೃಷ್ಣನ್ ಉದ್ಘಾಟಿಸಿದರು. ಕಾಲಕ್ಕೆ ಅನುಗುಣವಾಗಿ ಇಂಧನ ಸರಬರಾಜು ಮಾಡುವ ವ್ಯವಸ್ಥೆಯಲ್ಲೂ ಗ್ರಾಹಕರ ಅನುಕೂಲ ಸೌಲಭ್ಯದ ಕಡೆ ಗಮನ ಹರಿಸುತ್ತಿದ್ದೇವೆ. ಕೈಗಾರಿಕೋದ್ಯ ಮಿಗಳು ಸಹಿತ ಹೆಚ್ಚು ಇಂಧನ ಉಪಯೋಗಿಸುವವರಿಗೆ ತುಂಬ ಅನುಕೂಲ ಮಾಡಿಕೊಡುವ ‘ಫ್ಯೂಯಲ್ ಕಾರ್ಟ್’ ಎಂಬ ಸಂಚಾರಿ ಇಂಧನ ಸರಬರಾಜು ಮಾಡುವ ವ್ಯವಸ್ಥೆ ಪರಿಚಯಿಸುತ್ತಿದ್ದೇವೆ. ಮಹಾಲಸಾ ಮೋಟಾರ್ ಫ್ಯೂಯಲ್ಸ್ ಈ ಯೋಜನೆ ಅಳವಡಿಸುವಲ್ಲಿ ಮುತುವರ್ಜಿ ವಹಿಸಿ ಬಿಪಿಸಿಎಲ್ ಕಂಪೆನಿಯ ಉದ್ದೇಶ ಈಡೇರಿಸುತ್ತಿದೆ ಎಂದು ಹೇಳಿದರು. ಈ ಸಂದರ್ಭ ಕಂಪೆನಿಯ ಟೆರಿಟೆರಿ ಮೆನೇಜರ್ ಸಚಿನ್ ಕುಲಕರ್ಣಿ, ಕೋ ಒರ್ಡಿನೇಟರ್ ಗೋರಕ್ನಾಥ್, ಉಡುಪಿ ವಿಭಾಗದ ಸೇಲ್ಸ್ ಆಫೀಸರ್ ಶ್ರಾವ್ಯ, ಹಲವು ಉದ್ಯಮಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕುಂಭಾಸಿ ಪ್ರಭು ಕುಟುಂಬದವರು ಉಪಸ್ಥಿತರಿದ್ದರು. ಕೆ. ಪ್ರಜ್ಞೇಶ್…
