ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹವನ್ನು ಅಡ್ಡಗಟ್ಟಿದ ಬೈಂದೂರು ಪೊಲೀಸರು ಆರು ಗೋವುಗಳನ್ನು ರಕ್ಷಣೆ ಮಾಡಿದ್ದು, ವಾಹನ ಹಾಗೂ ಆರೋಪಿ ಶಬ್ಬೀರ್ (35) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯೊಂದಿಗೆ ಕಾರ್ಯಚರಣೆ ನಡೆಸಿದ ಬೈಂದೂರು ಪೊಲೀಸರು, ವಾಹನವನ್ನು ಹಿಂಬಾಲಿಸಿಕೊಂಡು ಹೋಗಿ ತಡೆಗಟ್ಟಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿರುವುದು ದೃಢವಾಗುತ್ತಿದ್ದಂತೆ ಪಿಕಪ್ ವಾಹನ ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡರು. ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಪವನ್ ನಾಯಕ್ ಮತ್ತು ಸಿಬ್ಬಂದಿಗಳಾದ ಹೆಡ್ ಕಾನ್ಸಟೆಬಲ್ ಶ್ರೀನಿವಾಸ್ ನಾಯಕ್, ಸುಜಿತ್, ಅಶೋಕ್ ರಾಠೋಡ್ ಭಾಗಿಯಾಗಿದ್ದರು. ವಶಕ್ಕೆ ಪಡೆದ ಆರು ಗೋವುಗಳನ್ನು ಬೈಂದೂರು ಪೋಲಿಸ್ ವಸತಿ ಗೃಹದಲ್ಲಿ ಉಪಚರಿಸಲಾಯಿತು. ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದರಾದ ಬಿ. ವೈ ರಾಘವೇಂದ್ರ ಅವರು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿರುವ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ‘ವನ್ಯಜೀವಿ ಪ್ರಾಣಿ ರಕ್ಷಣಾ ಕೇಂದ್ರ ಹಾಗೂ ಮೂಕಾಂಬಿಕಾ ಪ್ರಾಣಿಶಾಸ್ತ್ರೀಯ ಉದ್ಯಾನ’ ಸ್ಥಾಪನೆ ಬಗ್ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಮೂಕಾಂಬಿಕಾ ಅಭಯಾರಣ್ಯವು ಕುಂದಾಪುರ, ಬೈಂದೂರು ತಾಲೂಕು ಹಾಗೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಸೇರಿ 370.37 ಚ.ಕಿಮೀ ಪಶ್ಚಿಮ ಕರಾವಳಿ ಅರೆ ಉಷ್ಣವಲಯ ಹಾಗೂ ಉಷ್ಣವಲಯ ನಿತ್ಯಹರಿದ್ವರ್ಣ ಅರಣ್ಯ (west coast semi-tropical and tropical evergreen forest) ಪ್ರದೇಶವಾಗಿದ್ದು, ಮೂಕಾಂಬಿಕಾ ಅಭಯಾರಣ್ಯದಲ್ಲಿ ಚಿರತೆ, ಕರಡಿ, ಕಾಡುಕೋಣ, ಕೆನ್ನಾಯಿ, ಗುಳ್ಳೆನರಿ, ಕಡವೆ, ಸಾರಂಗ ಹಾಗೂ ಇನ್ನಿತರೆ ಪ್ರಾಣಿ ಸಂಕುಲಗಳು, ಜಂಗಲ್ ಮೈನಾ, ಬಿಳಿ ಹಾಗೂ ಕೆಂಪು ಬುಲ್ ಬುಲ್, ಮಂಗಟ್ಟೆ(hornbill) ಹಾಗೂ ಇನ್ನಿತರೆ ಹಕ್ಕಿಗಳು ನೆಲೆಸಿವೆ. ಪ್ರಾಣಿಗಳ ಸಂಘರ್ಷ ನಡುವೆ ಅಪಘಾತದಲ್ಲಿ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯ ಧಾರ್ಮಿಕ ಕ್ಷೇತ್ರದ, ಪರಿಸರದ ಸ್ವಚ್ಛತೆ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಅರೆಹಾಡಿ ಜಟ್ಟಿಗೇಶ್ವರ ದೇವಾಲಯದ ಪರಿಸರ ಸ್ವಚ್ಛತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಪ್ಪುಂದ ಒಕ್ಕೂಟದ ವತಿಯಿಂದ ನಡೆಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಪ್ಪುಂದ ಒಕ್ಕೂಟದ ಅಧ್ಯಕ್ಷೆ ವೀಣಾ, ಸೇವಾಪ್ರತಿನಿಧಿ ಚೈತ್ರ ಅವರ ನೇತೃತ್ವದಲ್ಲಿ ಸದಸ್ಯರು ದೇವಸ್ಥಾನದ ಪರಿಸರ ಹಾಗೂ ವಠಾರವನ್ನು ಸ್ವಚ್ಛಗೊಳಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯ ಧಾರ್ಮಿಕ ಕ್ಷೇತ್ರದ, ಪರಿಸರದ ಸ್ವಚ್ಛತೆ ಕಾರ್ಯಕ್ರಮದ ಅಂಗವಾಗಿ ಗಂಗೊಳ್ಳಿಯ ಶ್ರೀ ಇಂದುಧರ ದೇವಾಲಯದ ಪರಿಸರ ಸ್ವಚ್ಛತೆಯನ್ನು ಇಲ್ಲಿನ ಶ್ರೀ ಇಂದುಶ್ರೀ ಮಹಿಳಾ ಸಂಘದ ವತಿಯಿಂದ ನಡೆಸಲಾಯಿತು. ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಸದಸ್ಯರು ದೇವಸ್ಥಾನದ ಪರಿಸರ, ನಾಗದೇವರ ಸ್ವಾಮೀ ಹಾಗೂ ದೇವಸ್ಥಾನದ ವಠಾರವನ್ನು ಸ್ವಚ್ಛಗೊಳಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ವಿ. ಸುನಿಲ್ ಕುಮಾರ್ ಅವರ ನಡೆ ಗಮನ ಸೆಳೆಯಿತು. ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಭಾರತಾಂಬೆ ಮತ್ತು ನಾಡ ದೇವತೆಯ ಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆಯೇ ಕುಳಿತು ಕಡತಕ್ಕೆ ಸಹಿ ಹಾಕಿ ಇಲಾಖಾ ಕಾರ್ಯ ಆರಂಭಿಸಿದರು. ಈ ಸಂದರ್ಭ 2019-20ನೇ ಸಾಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದಶ್ರೀ ಪ್ರಶಸ್ತಿ ಪುರಸ್ಕೃತೆ ಭೀಮವ್ವ ದೊಡ್ಡ ಬಾಳವ್ವ ಶಿಳ್ಳೆ ಕ್ಯಾತರ ಮತ್ತು ಬಿಬಿ ಕೊರಂಟೈನ್ ಪ್ರಶಸ್ತಿಗೆ ಭಾಜನರಾದ ಹೆಚ್ ವಿ ವೆಂಕಟಸುಬ್ಬಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಅಧಿಕಾರ ಸ್ವೀಕರಿಸಿದ ನಂತರ ಕಲಾಕ್ಷೇತ್ರದ ಆವರಣದಲ್ಲಿ ಇರುವ ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಮಾರಾಟ ಮಳಿಗೆಯಲ್ಲಿ ಪುಸ್ತಕ ಖರೀದಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಸಾಹಿತಿ ಮತ್ತು ಕಲಾವಿದರೊಂದಿಗೆ ಅಲ್ಲಿಯೇ ಇದ್ದ ಕ್ಯಾಂಟೀನ್ ನಲ್ಲಿ ಕಾಫಿ ಸೇವನೆ ಮಾಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ರೋಟರಿ ಕ್ಲಬ್ ನಿಂದ ಹಗಲು ರಾತ್ರಿ ಎನ್ನದೇ ಕಷ್ಟದಲ್ಲಿರುವ ಜನರಿಗೆ ಎಂಬುಲೆನ್ಸ್ ಸೇವೆಯನ್ನು ಬಹಳ ವರ್ಷಗಳಿಂದಲೂ ನೀಡುತ್ತಾ ಬಂದಿರುವ ಸಮಾಜ ಸೇವಕ ಇಬ್ರಾಹಿಮ್ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು. ರೋಟರಿಯ ಸುಗುಣಾ ಸನ್ಮಾನಿತರನ್ನು ಪರಿಚಸಿಯಿದರು, ಗಿರೀಶ್ ಮತ್ತು ಕೃಷ್ಣ ಇವರ ಸೇವೆಯ ಕುರಿತು ಹೇಳಿದರು, ಕ್ಲಬ್ ಅಧ್ಯಕ್ಷರಾದ ರಾಜೇಶ್ ಎಂ ಜಿ. ಹಾಗೂ ಹಿರಿಯ ಸದಸ್ಯರನ್ನೊಳಗೊಂಡು ಇಬ್ರಾಹಿಮ್ ಅವರನ್ನು ಗೌರವಿಸಲಾಯಿತು. ಸನ್ಮಾನಿತರಾದ ಇಬ್ರಾಹಿಮ್ ಅವರು ಸಂತಸ ವ್ಯಕ್ತ ಪಡಿಸಿದರು. ಕಾರ್ಯದರ್ಶಿ ನಾರಾಯಣ ನಾಯ್ಕ ಧನ್ಯವಾದ ಸಮರ್ಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕತಾರ್: ಭಾರತೀಯ ಸಮುದಾಯ ಹಿತೈಷಿ ವೇದಿಕೆಯ (ಐ.ಸಿ.ಬಿ.ಎಫ್ – ಇಂಡಿಯನ್ ಕಮ್ಯುನಿಟಿ ಬೆನಿವೊಲೆಂಟ್ ಫೋರಂ) ಆಡಳಿತ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವರು ಒಂದೇ ಭಾರತ್ ಮಿಷನ್ ಅಡಿಯಲ್ಲಿ ಕತಾರಿನಿಂದ ಭಾರತಕ್ಕೆ ವಿಶೇಷ ವಿಮಾನ ಸೇವೆ ಕಲ್ಪಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದರು. ಕತಾರ್ ನಲ್ಲಿ ಕರೋನಾ ಪರಿಣಾಮವಾಗಿ ಬಹಳ ಜನ ನಿರಾಶ್ರಿತರಾಗಿದ್ದ ಸಮಯದಲ್ಲ್ಲಿ ಅನ್ನಾಹಾರ, ಊಟದ ಅವಶ್ಯಕತೆಯನ್ನು ಪೂರ್ಣಗೊಳಿಸಿ ದಿನನಿತ್ಯ ಸುಮಾರು 100-200 ಜನರಿಗೆ ತರಕಾರಿ ಅಥವ ಅನ್ನ ನೀರುಗಳನ್ನು ಸ್ವತಃ ತಮ್ಮ ವಾಹನದಲ್ಲಿ ಸರಬರಾಜು ಮಾಡುವ ಮೂಲಕ ಕತಾರ್ ನಲ್ಲಿ ಕೋವಿಡ್ ನಿಂದ ಅಸುನೀಗಿದ ಪಾರ್ಥಿವ ಶರೀರಗಳನ್ನು ಭಾರತದಲ್ಲಿನ ಸ್ವಗೃಹಕ್ಕೆ ತಲುಪಿಸುವ ಕಾರ್ಯ ಮಾಡಿದರು. ಅವರ ಸೇವೆಯನ್ನು ಗುರುತಿಸಿ ಕತಾರ್ನ ಭಾರತೀಯ ರಾಯಭಾರಿ ಕಾರ್ಯಾಲಯದ ಪ್ರಥಮ ಕಾರ್ಯದರ್ಶಿ (ಕಾರ್ಮಿಕ ಹಾಗು ಸಮುದಾಯ ಕಲ್ಯಾಣ ವಿಭಾಗ) ಎಸ್. ಆರ್.ಎಚ್. ಫಾಹ್ಮಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಕಾರ್ಯಕ್ರಮ ಸಂಘಟಿತ ಭಾರತೀಯ ಸಮುದಾಯ ಕೇಂದ್ರದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಯುವ ಜನತೆ ತಮ್ಮ ಪದವಿ ವಿದ್ಯಾಭ್ಯಾಸದ ನಂತರ ಸ್ವಉದ್ಯೋಗ ಕೈಗೊಂಡು ಯಶಸ್ವಿಯಾಗುವ ಕುರಿತಂತೆ ಕಾಲೇಜುಗಳಲ್ಲಿ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ನೆಹರು ಯುವ ಕೇಂದ್ರದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸೂಚಿಸಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ನೆಹರು ಯುವ ಕೇಂದ್ರದ ವಾರ್ಷಿಕ ಕ್ರಿಯಾ ಯೋಜನೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯುವ ಜನರು ಪದವಿ ನಂತರ ತಮ್ಮ ಭವಿಷ್ಯದ ಬಗ್ಗೆ ಚಿಂತಿಸಲು ಅವಕಾಶ ನೀಡದಂತೆ, ಅವರು ಪದವಿ ಅಂತಿಮ ವರ್ಷದಲ್ಲಿ ಇರುವಾಗಲೇ, ಪದವಿ ನಂತರ ಅವರು ಕೈಗೊಳ್ಳಬಹುದಾದ ಸ್ವ ಉದ್ಯೋಗಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿವರವಾದ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಎಲ್ಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳಿ, ಈ ಕಾರ್ಯಕ್ರಮಗಳಿಗೆ ಲೀಡ್‌ಬ್ಯಾಂಕ್ ಅಧಿಕಾರಿಗಳನ್ನು ಆಹ್ವಾನಿಸಿ, ವಿವಿಧ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್ಗಳು ನೀಡುವ ವಿವಿಧ ಬಗೆಯ ಸಾಲಗಳು, ಸಬ್ಸಿಡಿ ಮೊತ್ತ ಮುಂತಾದವುಗಳ ಬಗ್ಗೆ ಸಮಗ್ರ ವಿವರಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಎಂದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಭಿನವ ಕಲಾತಂಡದ ಕರ್ಕಾಟಿ ಅಮಾಸಿ ಕಲಾತ್ಮಕ ಕಿರುಚಿತ್ರ ಬಿಡುಗಡೆ ಹಾಗೂ ಅಭಿನವ ಪ್ರಶ್ನಾವಳಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯನ್ನು ಇಲ್ಲಿನ ಶ್ರೀ ಕಾರ್ತಿಕೇಯ ಕೃಪಾ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ. ರಾಮಚಂದ್ರ ಉಡುಪ, ಕಲಾತಂಡದಿಂದ ಪ್ರದರ್ಶಿಸಲ್ಪಟ್ಟ ರತ್ನ ಶಾಮಿಯಾನ ನಾಟಕ ಅದೊಂದು ಯಶಸ್ವೀ ನಾಟಕ, ಕರೋಣ ಕಾರಣದಿಂದ ಪ್ರದರ್ಶನದಿಂದ ವಂಚಿತರಾದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಹಲವಾರು ಹಾಸ್ಯ ಚಿತ್ರಗಳು, ಕಿರುಚಿತ್ರ ಹಾಗೂ ತಮ್ಮ ತಂಡದ ಕಲಾವಿದರು ಮಾತ್ರವಲ್ಲದೆ ಬೇರೆ ತಂಡಗಳ ಕಲಾವಿದರನ್ನು ಕೂಡಿಕೊಂಡು ಕಲಾತ್ಮಕ ಕಿರುಚಿತ್ರಗಳನ್ನು ಮಾಡಿ ಜನ ಮನ್ನಣೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು. ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ನ ಪೂರ್ವಧ್ಯಕ್ಷರಾದ ಎ. ಎಸ್. ಏನ್. ಹೆಬ್ಬಾರ್ ಕಿರುಚಿತ್ರ ಬಿಡುಗಡೆಗೊಳಿಸಿ ಮಾತನಾಡಿ, ಇದೊಂದು ಅಭೂತ ಪೂರ್ವ ಕಿರುಚಿತ್ರ ಇದನ್ನು ನೋಡಿದಷ್ಟು ಇನ್ನೊಮ್ಮೆ ನೋಡಬೇಕಿನಿಸುವಷ್ಟು ಸಂದೇಶದ ಹಂದರವಿದೆ ಎಂದು ಹರ್ಷ ವ್ಯಕ್ತಪಡಿಸಿ, ಅಭಿನವ ಕಲಾ ತಂಡದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಗ್ಗರ್ಸೆ ನಿವಾಸಿ ನಿವೃತ್ತ ಪ್ರಾಂಶುಪಾಲ ಬಾಳ್‌ಕುದ್ರು ರಘುರಾಮ ಶೆಟ್ಟಿ (88) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿರಿಸಿದ ಇವರು ಅನೇಕ ಸರ್ಕಾರಿ ವಿದ್ಯಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಕೊನೆಯಲ್ಲಿ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಂತರ ಇಲ್ಲಿಯೇ ನಿವೃತ್ತಿಯಾಗಿದ್ದರು. 1986-87ನೇ ಸಾಲಿನಲ್ಲಿ ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಇವರು ಬೈಂದೂರು ತಾಲೂಕು ರಚನಾ ಹೋರಾಟ ಸಮಿತಿ ಸದಸ್ಯರಾಗಿದ್ದರು. ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಾಗೂ ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿದ್ದ ಇವರು ಜೀವಿತದ ಕೊನೆಯ ತನಕ ಆಸಕ್ತ ಮಕ್ಕಳಿಗೆ ಪಾಠ, ಉಪನ್ಯಾಸ ನೀಡುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
