ಆಳ್ವಾಸ್‌ನ ವೃತ್ತಿಪರ ವಾಣಿಜ್ಯ ವಿಭಾಗದ ಎ.ಸಿ.ಸಿ.ಎ. ಕೋರ್ಸಿಗೆ ಇಂಗ್ಲೆಂಡ್‌ನಿಂದ ಅಧಿಕೃತ ಕಲಿಕಾ ಕೇಂದ್ರದ ಮಾನ್ಯತೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ:
ಆಳ್ವಾಸ್ ಕಾಲೇಜಿನಲ್ಲಿ ವಿವಿಧ ವೃತ್ತಿಪರ ಕೋರ್ಸುಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಾಣಿಜ್ಯ ವಿಭಾಗದ ಎ.ಸಿ.ಸಿ.ಎ. ಕೋರ್ಸಿಗೆ ಇತ್ತೀಚೆಗೆ ಇಂಗ್ಲೆಂಡ್ ನಿಂದ ’ಅಧಿಕೃತ ಕಲಿಕಾ ಕೇಂದ್ರ’ದ ಮಾನ್ಯತೆ ದೊರಕಿದೆ. ಆಳ್ವಾಸ್ ನಲ್ಲಿ 2019-2020ರಿಂದಲೂ ಯು.ಕೆ.ಯಿಂದ ಪ್ರಮಾಣಿತ ಎ.ಸಿ.ಸಿ.ಎ ಮತ್ತು ಯು.ಎಸ್.ಎ. ಯಿಂದ ಪ್ರಮಾಣಿತ ಸಿ.ಎಮ್.ಎ. ಕೋರ್ಸುಗಳು ಚಾಲ್ತಿಯಲ್ಲಿದ್ದು ಉತ್ತಮ ಫಲಿತಾಂಶ ನೀಡುತ್ತಿವೆ.

Call us

Click Here

ವಿನಾಯಿತಿ ಸಿಗುವ ವಿಷಯಗಳು: ಎಸೋಸಿಯೇಷನ್ ಆಫ್ ಚಾರ್ಟರ್ಡ್ ಸರ್ಟಿಫೈಡ್ ಅಕೌಟೆಂಟ್ (ಎ.ಸಿ.ಸಿ.ಎ) ಮೂರು ವರ್ಷದ ಕೋರ್ಸಾಗಿದ್ದು ಒಟ್ಟು 13 ಪತ್ರಿಕೆಗಳನ್ನು ವಿದ್ಯಾರ್ಥಿಗಳು ಬರೆಯಬೇಕಾಗುತ್ತದೆ. ಆಳ್ವಾಸ್ ಕಾಲೇಜಿಗೆ ಸಿಕ್ಕಿರುವ ಈ ‘ಅಧಿಕೃತ ಕಲಿಕಾ ಕೇಂದ್ರದ ಮಾನ್ಯತೆಯ ಫಲವಾಗಿ ಬಿ.ಕಾಂ. ವಿದ್ಯಾರ್ಥಿಗಳಿಗೆ 5 ವಿಷಯಗಳಲ್ಲಿ ವಿನಾಯಿತಿ ದೊರೆಯಲಿದೆ. ಬಿಸಿನೆಸ್ ಆಂಡ್ ಟೆಕ್ನೋಲಾಜಿ, ಮ್ಯಾನೇಜ್ ಮೆಂಟ್ ಎಕೌಂಟಿಂಗ್, ಫೈನಾನ್ಶಿಯಲ್ ಎಕೌಂಟಿಂಗ್, ಕಾರ್ಪೋರೇಟ್ ಆಂಡ್ ಬಿಸಿನೆಸ್ ಲಾ, ಮತ್ತು ಟ್ಯಾಕ್ಸೇಶನ್ ಪತ್ರಿಕೆಗಳು ವಿನಾಯಿತಿಗೆ ಒಳಪಡುವ ವಿಷಯಗಳಾಗಿವೆ. ಈ ಹಿನ್ನಲೆಯಲ್ಲಿ 2021-22ರ ಶೈಕ್ಷಣಿಕ ವರ್ಷದಲ್ಲಿ ವಾಣಿಜ್ಯ ಪದವಿಯೊಂದಿಗೆ ಎ.ಸಿ.ಸಿ.ಎ. ಕಲಿಯುವ ವಿದ್ಯಾರ್ಥಿಗಳು, ಮೂರು ವ?ಗಳಲ್ಲಿ ಕೇವಲ 8 ವಿಷಯಗಳನ್ನು ಅಧ್ಯಯನ ಮಾಡಿ, ಎ.ಸಿ.ಸಿ.ಎ. ಪದವಿ ಪಡೆಯಲು ಅರ್ಹರಾಗುತ್ತಾರೆ.

ಉದ್ಯೋಗದಲ್ಲಿ ವಿಫುಲ ಅವಕಾಶಗಳು: ಎ.ಸಿ.ಸಿ.ಎ. ಇಂಗ್ಲೆಂಡ್‌ನಿಂದ ಉದ್ಯೋಗ ಮಾಹಿತಿ ಶಿಬಿರಗಳು, ಕೌಶಲ್ಯಾಭಿವೃದ್ಧಿ ತರಗತಿಗಳು, ಆನ್‌ಲೈನ್ ಉದ್ಯೋಗ ಮೇಳಗಳು ಹೀಗೆ ಹತ್ತು ಹಲವು ಅವಕಾಶಗಳು ವಿದ್ಯಾರ್ಥಿಗಳಿಗೆ ನೇರವಾಗಿ ದೊರೆಯಲಿವೆ. ಬಿಗ್ 4 ನಂತಹ ಕಂಪೆನಿಗಳಲ್ಲಿ ಅತೀ ಹೆಚ್ಚಿನ ಬೇಡಿಕೆಯಿರುವ ವಿದ್ಯಾರ್ಹತೆ ಇದಾಗಿದ್ದು ಸತತವಾಗಿ ಇಂಟರ್ನ್‌ಶಿಪ್‌ಗಳನ್ನು ಪಡೆದುಕೊಳ್ಳುವ ಮತ್ತು ನೇರ ನೇಮಕಾತಿಯನ್ನು ಹೊಂದುವ ಅವಕಾಶಗಳು ವಿದ್ಯಾರ್ಥಿಗಳಿಗೆ ದೊರೆಯಲಿದೆ. ಅಲ್ಲದೆ ಆಳ್ವಾಸ್ ಕಾಲೇಜಿನಲ್ಲೆ ವಿದ್ಯಾರ್ಥಿಗಳಿಗೆ ಉನ್ನತ ಉದ್ಯೋಗಗಳಿಗೆ ನೇರ ಸಂದರ್ಶನ ನಡೆಯಲಿದ್ದು, ಎಸಿಸಿಎ ಪ್ರಮಾಣಪತ್ರಕ್ಕೆ ಪ್ರಪಂಚದ 180ಕ್ಕೂ ಅಧಿಕ ದೇಶಗಳಲ್ಲಿ ಅಧಿಕೃತ ಮನ್ನಣೆಯಿದೆ. ಸಿಎಫ್‌ಓ ನೆಕ್ಸ್ಟ್ ಮಂಗಳೂರು ಸಂಸ್ಥೆಯ ನಿರ್ದೇಶಕ ಡಾನ್ ಆಂಡ್ರಿಯೋ ಮುಂದಾಳತ್ವದಲ್ಲಿ ಎಸಿಸಿಎಗೆ ಸಂಬಂಧಪಟ್ಟ ತರಬೇತಿಗಳನ್ನು ನೀಡಲಾಗುತ್ತದೆ.

ಕಾಲೇಜಿನ ಈ ಸಾಧನೆಗೆ ಸಂಸ್ಥೆಯ ಮೋಹನ್ ಆಳ್ವ, ಕಾಲೇಜಿನ ಪ್ರಾಚಾರ‍್ಯ ಡಾ ಕುರಿಯನ್ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಪ್ರಮಾಣಪತ್ರ ವಿನಿಮಯ ಕಾರ‍್ಯಕ್ರಮದಲ್ಲಿ ಸಿಎಫ್‌ಓ ನೆಕ್ಸ್ಟ್ ಮಂಗಳೂರು ಸಂಸ್ಥೆಯ ನಿರ್ದೇಶಕ ಡಾನ್ ಆಂಡ್ರಿಯೋ, ಎಸಿಸಿಎ(ಯುಕೆ) ಸಂಯೋಜಕ ಅಶೋಕ ಕೆ ಜಿ, ಸಿಎಂಎ(ಯುಎಸ್‌ಎ) ವಿಭಾಗದ ಸಂಯೋಜಕಿ ಶಿಲ್ಪಾ ಭಟ್ ಉಪಸ್ಥಿತರಿದ್ದರು.

Leave a Reply