Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಇದರಿಂದ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳ ಬಗ್ಗೆ ಅರಿವು ಉಂಟು ಮಾಡುವಲ್ಲಿ ಸಹಕಾರಿಯಾಗುತ್ತದೆ ಎಂದು ಬೆಳ್ವೆ ಸತೀಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್‌ನ ಸತೀಶ್ ಕಿಣಿ ಬೆಳ್ವೆ ಹೇಳಿದರು. ಅವರು ಕೋಟೇಶ್ವರ ಶ್ರೀ ಮಹಾದೇವಿ ಮಾರಿಯಮ್ಮ ದೇವಸ್ಥಾನ ೧೮ನೇ ವರ್ಷದ ಪ್ರತಿಷ್ಠಾವರ್ಧಂತ್ಸುತ್ಸವ ಮತ್ತು ಸಾಂಸ್ಕೃತಿಕ ಸಂಘದ ೩೦ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಕೋಟೇಶ್ವರ ಎನ್.ಆರ್.ಆಚಾರ್ಯ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಎನ್.ಭಾಸ್ಕರ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕೋಟಿಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್, ಶ್ರೀ ಮಹಾದೇವಿ ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ರಮೇಶ್ ಜಿ ಪೈ, ಶ್ರೀ ಮಾರಿಯಮ್ಮ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸುಕೇಶ್ ಶೇಟ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವೇದಮೂರ್ತಿ ಪ್ರಸನ್ನಕುಮಾರ ಐತಾಳ್ ಇವರ ನೇತೃತ್ವದ ಪೌರೋಹಿತ್ಯದಲ್ಲಿ ಬ್ರಹ್ಮಕಲಶ ಸಹಿತ ಅಷ್ಟೋತ್ತರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಮಂಡಲದ ಶಿರೂರು, ಬೈಂದೂರು, ಕಿರಿಮಂಜೇಶ್ವರ,ಕೊಲ್ಲೂರು,ಗಂಗೊಳ್ಳಿ, ಕಾವ್ರಾಡಿ, ಸಿದ್ದಾಪುರ ಹಾಗೂ ಕರ್ಕುಂಜೆ ಮಹಾಶಕ್ತಿ ಕೇಂದ್ರಗಳಲ್ಲಿ ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಸ್ಮರಣಾರ್ಥ ಸಮರ್ಪಣಾ ದಿನ ನೆರವೇರಿತು. ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ನಿಧಿ ಸಮರ್ಪಣೆ ಮಾಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಡಿಸೆಂಬರ್ 2021ರಲ್ಲಿ ನಡೆದ ಸಿ.ಎ.-ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜು ಅಭೂತಪೂರ್ವ ಫಲಿತಾಂಶವನ್ನು ಪಡೆದು ರಾಜ್ಯದಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವಿದ್ಯಾರ್ಥಿಗಳಾದ ದೀಪಕ್ ಹೆಗ್ಡೆ-325(81.25%), ಎಂ. ಅಭಿಷೇಕ್ ರಾವ್-302 (75.5%), ದೀಕ್ಷಾ-301 (75.25%), ನೇಹ ನಾಯಕ್- 299(74.75%), ನಿತೀಶ್ ಕಾಮತ್ -297(74.25%), ದಶಮಿ ಎನ್ -295(73.75%), ಐಶ್ವರ್ಯ ಎಂ- 285(71.25%), ನಂದನ-281 (70.25%), ನಾಗರಾಜ್ ಎಂ 280 (70%), ಭುವನ ಶೆಣೈ -278 (69.5%) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆಳ್ವಾಸ್ ಕಾಲೇಜಿನಿಂದ ಒಟ್ಟು 155 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 103 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದೇಶಿಯ ಫಲಿತಾಂಶ 30.28% ಆಗಿದ್ದು, ಆಳ್ವಾಸ್ ಕಾಲೇಜು 66.45% ಫಲಿತಾಂಶ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದೆ. ವಿದ್ಯಾರ್ಥಿಗಳಾದ ದೀಕ್ಷಿತ ಆರ್, ಆಶ್ರಿತಾ ಎಂ. ಎಸ್, ಮಂಜೂಷ, ತನುಷ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಸಾಮಾನ್ಯ ಸಭೆಯ ನಡೆಯಿತು. ಲೋಕಾಯುಕ್ತದಲ್ಲಿ ದೂರು ಇರುವುದರಿಂದ ಯುಜಿಡಿ ಕಾಮಗಾರಿ ಮುಂದುವರಿಸಲು ತೊಡಕಾಗುತ್ತದೆ ಎಂಬ ವಿಷಯದಲ್ಲಿ ಸದಸ್ಯ ಶ್ರೀಧರ ಶೇರೆಗಾರ್ ಹಾಗೂ ಕೆ. ನಿತ್ಯಾನಂದ ಅವರು ಚರ್ಚೆ ಆರಂಭಿಸಿದರು. ಲೋಕಾಯುಕ್ತಕ್ಕೆ ದೂರು ನೀಡಲು ಪುರಸಭೆ ೨೩ ಸದಸ್ಯರು ಬೆಂಬಲ ನೀಡಿದ್ದಾರೆ. ದೂರು ನೀಡಿದ ಆಡಳಿತ ಸದಸ್ಯ ಗಿರೀಶ್ ಜಿ. ಎಸ್., ಭೂಮಿ ವಿಕ್ರಯದಲ್ಲಿ ಹೆಚ್ಚಿಗೆ ಹಣ ಹೋಗಿದೆ ಎನ್ನುವ ಆರೋಪ ಮಾಡಿದ್ದು ಅದರಂತೆ ತನಿಖೆ ಮಾಡಲು ದೂರು ನೀಡಿದ್ದು, ಕಾಮಗಾರಿ ನಿಲ್ಲಸದೇ ಕಾನೂನು ಸಲಹೆಗಾರರ ಮಾಹಿತಿ ಪಡೆದು ಮುಂದುವರಿಯಬಹುದು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಗಿರೀಶ್ ಜಿ. ಎಸ್., ಕಾಮಗಾರಿಯಲ್ಲಿನ ಅಕ್ರಮ ಪ್ರಶ್ನಿಸಿ ದೂರು ನೀಡಿದ್ದೇನೆ. ಹಣ ಹೆಚ್ಚಿಗೆ ಹೋದ ಬಗ್ಗೆ ಅದಕ್ಕೆ ಸಂಬಂಧಪಟ್ಟವರು ಹೊಣೆಯಾಗಲಿದ್ದು, ಹೆಚ್ಚುವರಿ ಹಣ ಯಾರು ಕಾರಣರೋ ಅವರಿಂದ ವಸೂಲು ಮಾಡಲಾಗುತ್ತದೆ. ಇದಕ್ಕೂ ಕಾಮಗಾರಿ ಮುಂದುವರಿಸುವುದಕ್ಕೂ ಸಂಬಂಧಿವಿಲ್ಲ. ಆದ ಅನ್ಯಾಯದ ವಿರುದ್ಧ ದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಫೆ.12: ಉಡುಪಿ ಕೇಂದ್ರೀಕೃತವಾಗಿ ರಾಜ್ಯ ವ್ಯಾಪ್ತಿಯಲ್ಲಿ ಅಶಾಂತಿ ಮೂಡಿಸಲು ಕಾರಣವಾಗಿರುವ ಹಿಜಾಬ್-ಕೇಸರು ಶಾಲು ವಿವಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಗರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಹಾಗೂ ಸಾರ್ವಜನಿಕರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ರೂಟ್ ಮಾರ್ಚ್ (ಪಥ ಸಂಚಲನ) ನಡೆಸಿದ್ದು, ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿಯೂ ಶುಕ್ರವಾರ ಸಂಜೆ ನಡೆಯಿತು. ಶಾಸ್ತ್ರೀ ವೃತ್ತದಿಂದ ಆರಂಭಗೊಂಡ ಪಥಸಂಚಲನ ಹೊಸ ಬಸ್ ನಿಲ್ದಾಣದ ಮೂಲಕವಾಗಿ ನಗರದಲ್ಲಿ ಸಂಚರಿಸಿ ಮತ್ತೆ ಪುನಃ ಶಾಸ್ತ್ರೀ ವೃತ್ತಕ್ಕೆ ಆಗಮಿಸಿ ಸಮಾಪ್ತಿಗೊಂಡಿತು. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಕುಂದಾಪುರ ಪಿಎಸ್ಐ ಸದಾಶಿವ ಗವರೋಜಿ, ಗ್ರಾಮಾಂತರ ಠಾಣೆ ಪಿಎಸ್ಐ ನಿರಂಜನ್, ಟ್ರಾಫಿಕ್ ಠಾಣೆ ಪಿಎಸ್ಐ ಸುಧಾಪ್ರಭು, ಶಂಕರನಾರಾಯಣ ಠಾಣೆ ಪಿಎಸ್ಐ ಶ್ರೀಧರ್ ನಾಯ್ಕ್, ಅಮಾಸೆಬೈಲು ಪಿಎಸ್ಐ ಸುಬ್ಬಣ್ಣ ಸೇರಿದಂತೆ ಪೊಲೀಸ್ ಸಹಾಯಕ ಉಪನಿರೀಕ್ಷಕರುಗಳು, ಸಿಬ್ಬಂದಿಗಳು ಇದ್ದರು. ಕೆ.ಎಸ್.ಆರ್.ಪಿ ಮಹಿಳಾ ವಿಭಾಗದ ಪೊಲೀಸರು, 2 ಡಿಎಆರ್ ತುಕಡಿಯ ಪೊಲೀಸರು ಪಥಸಂಚಲನದಲ್ಲಿ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಉಡುಪಿ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ರವೀಂದ್ರ ನಾಯಕ್ 400 ಮೀ ಓಟದಲ್ಲಿ ಪ್ರಥಮ ಸ್ಥಾನ, 800 ಮೀ ಓಟದಲ್ಲಿ ಪ್ರಥಮ ಸ್ಥಾನ, ಕಬಡ್ಡಿಯಲ್ಲಿ ದ್ವಿತೀಯ ಸ್ಥಾನದೊಂದಿಗೆ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿಬಂದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಉಡುಪಿ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಅಶೋಕ ತೆಕ್ಕಟ್ಟೆ ಅವರು ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಕೇರಮ್ (ಸಿಂಗಲ್ಸ್) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಫೆ.11: ತಾಲೂಕಿನ ಕೋಡಿ ಲೈಟ್ ಹೌಸ್ ಎದುರು 55 ದಿನಗಳ ಹಿಂದೆ ಪತ್ತೆಯಾದ ಕಡಲಾಮೆ ಮೊಟ್ಟೆಯಿಂದ ಹೊರಬಂದ ಆಲೀವ್ ರಿಡ್ಲಿ ಜಾತಿಗೆ ಸೇರಿದ 74 ಕಡಲಾಮೆ ಮರಿಗಳು ಸುರಕ್ಷಿತವಾಗಿ ಕಡಲ ಸೇರಿವೆ. ಅರಣ್ಯ ಇಲಾಖೆ ಎಫ್.ಎಸ್.ಎಲ್ ಇಂಡೀಯಾ ಸ್ಥಳೀಯ ಮೀನುಗಾರರು ಮತ್ತು ರೀಫ್ ವಾಚ್ ಸಂಸ್ಥೆಯ ಕಡಲಾಮೆ ಮೊಟ್ಟೆಗಳನ್ನು ರಕ್ಷಣೆ ಮಾಡಿದ್ದು, ಗುರುವಾರ ರಾತ್ರಿ ಕಡಲು ಸೇರುವ ಪ್ರಕ್ರಿಯೆ 2 ಗಂಟೆಗಳ ಹೆಚ್ಚು ಕಾಲ ನಡೆಯಿತು. ಅರಣ್ಯ ಇಲಾಖೆ ಅಧಿಕಾರಿಗಳಾದ ಉದಯ ಬಿ, ಬಸವರಾಜ್, ರಂಜಿತ್ ಪೂಜಾರಿ ಹಾಗೂ ಎಫ್.ಎಸ್.ಎಲ್ ಸಂಸ್ಥೆಯ ದಿನೇಶ್ ಸಾರಂಗ, ನಾಗರಾಜ ಶೆಟ್ಟಿ ಸಬ್ಲಾಡಿ, ವೆಂಕಟೇಶ್ ಎಂ ಮತ್ತು ರೀಪ್ ವಾಚ್ ಸಂಸ್ಥೆಯ ಕಾರ್ಯಕರ್ತರಾದ ತೇಜಸ್ವಿನಿ, ವಿರೀಲ್ ಕುಮಾರ್ ಜೊತೆಗಿದ್ದರು. ಅಲ್ಲದೆ ಸ್ಥಳೀಯ ಮೀನುಗಾರರಾದ ಸಂತೋಷ, ಸುಬ್ರಮಣ್ಯ ಸಾರಂಗ, ಧನುಷ್ ಬಿ.ಆರ್, ಭರತ್ ಖಾರ್ವಿ, ಲಕ್ಷ್ಮಣ ಪೂಜಾರಿ, ಉದಯ ಖಾರ್ವಿ ಕೊನೆತನಕ ಇದ್ದು ಸಹಕರಿಸಿದರು. ವಿಶೇಷವಾಗಿತ್ತು. ಇನ್ನೂ 4 ಕಡಲಾಮೆ ಮೊಟ್ಟೆಯ ಗೂಡು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಡಿಸೆಂಬರ್ 2021ರಲ್ಲಿ ನಡೆಸಿದ ಸಿ.ಎ ಪರೀಕ್ಷೆಯಲ್ಲಿ ತಾಲೂಕಿನ ಹಕ್ಲಾಡಿಯ ಉದಯ ಪುತ್ರನ್ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉಮೇಶ್ ಪುತ್ರನ್ ಹಾಗೂ ವಿನೋದಾ ದಂಪತಿಯ ಪುತ್ರನಾಗಿರುವ ಉದಯ ಪುತ್ರನ್ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಖಾಸಗಿ ಉದ್ಯೋಗವನ್ನು ನಿರ್ವಹಿಸುವ ಜೊತೆಗೆ ತಮ್ಮ ನಿರಂತರ ಸ್ವ‌-ಅಧ್ಯಯನ ಹಾಗೂ ಪರಿಶ್ರಮದ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ಪುಸ್ತಕ ಸ್ನೇಹಿ ಮನೋಭಾವನೆಯನ್ನು ರೂಡಿಸಿಕೊಂಡು ವೃತ್ತಿ ಪರತೆಯನ್ನು ಕಾಯ್ದುಕೊಳ್ಳಬೇಕೆಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣ ಇಲ್ಲಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವಿಜಯಾ ಬಿ ಹೇಳಿದರು. ಅವರು ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಆಧ್ಯಯನ ಕೇಂದ್ರದಲ್ಲಿ ವಾಣಿಜ್ಯ ವಿಭಾಗದ ಸ್ನಾತಕೋತ್ತರ ಘಟಕದ ನೇತೃತ್ವದಲ್ಲಿ ಜರುಗಿದ ಸ್ನಾತಕೋತ್ತರ ವಿಭಾಗದ ಎಂ.ಕಾಂ. ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ರಾಜೆಂದ್ರ ಎಸ್.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಉಷಾದೇವಿ ಜೆ.ಎಸ್., ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಶೇಖರ ಬಿ., ಐಕ್ಯೂಎಸಿ ಸಂಚಾಲಕ ನಾಗರಾಜ ಯು., ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ.ಗೀತಾ ಎಂ. ಉಪಸ್ಥಿತರಿದ್ದರು. ಎಂ.ಕಾಂ. ವಿದ್ಯಾರ್ಥಿಗಳಾದ ಪಲ್ಲವಿ, ಪವಿತ್ರ ಹಾಗೂ ಸಂಗೀತಾ ಪ್ರಾರ್ಥಿಸಿದರು. ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ಗೀತಾ…

Read More