Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕಾರವಾರ-ಬೆಂಗಳೂರು ವಯಾ ಪಡೀಲ್ ಬೈಪಾಸ್ ಸೂಪರ್ ಫಾಸ್ಟ್ ರೈಲಿಗೆ ‘ಪಂಚ ಗಂಗಾ ಎಕ್ಸ್‌ಪ್ರೆಸ್’ ಎಂಬ ಹೆಸರನ್ನು ಕೆಂದ್ರ ರೈಲ್ವೆ ಸಚಿವಾಲಯ ಮರುನಾಮಕರಣ ಮಾಡಿ ಆದೇಶಿಸಿದೆ. ಉಡುಪಿ ಜಿಲ್ಲೆಯ ಐದು ಪ್ರಮುಖ ಪುಣ್ಯ ನದಿಗಳು ಸಂಗಮಿಸಿ ಸೃಷ್ಟಿಯಾಗುವ ಪ್ರಾಕೃತಿಕ ಅಚ್ಚರಿ ಪಂಚಗಂಗಾವಳಿ ನದಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿಯ ಹೆಸರು ಸೇರಿಸಿ ಜನರ ಅಪೇಕ್ಷೆಯಂತೆ ಪಂಚಗಂಗಾ ಎಕ್ಸ್‌ಪ್ರೆಸ್  ಎಂದು ನಾಮಕರಣ ಮಾಡಲಾಗಿದೆ. ಈ ಹೆಸರನ್ನು ಬೆಂಗಳೂರು ಕಾರವಾರ (16595/16596) ರೈಲಿಗೆ ಪಂಚಗಂಗಾ ಹೆಸರು ಇಡುವಂತೆ ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹಾಗೂ ಸಾರ್ವಜನಿಕರು ಸಂಸದರಿಗೆ ಮನವಿ ಮಾಡಿದ್ದು ಅದರಂತೆ ಸಂಸದೆ ಶೋಭಾ ಕರಂದ್ಲಾಜೆ ಅವರು ಹಿಂದಿನ ರೈಲ್ವೆ ರಾಜ್ಯ ಸಚಿವರಾದ ಸುರೇಶ್ ಅಂಗಡಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.  ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ,ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಟೈಮ್ಸ್ ಆಫ್ ಇಂಡಿಯಾ ನಡೆಸಿದ 2021ರ ಟೈಮ್ಸ್ ಇಂಜಿನಿಯರಿಂಗ್ ಇನ್ಸ್‌ಟಿಟ್ಯೂಟ್ ರ‍್ಯಾಂಕಿಂಗ್ ಸರ್ವೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ರಾಷ್ಟ್ರಮಟ್ಟದಲ್ಲಿ 147ನೇ ರ‍್ಯಾಂಕ್ ಪಡೆದಿದೆ. ರಾಷ್ಟ್ರಮಟ್ಟದಲ್ಲಿ ನಡೆದ ಈ ಪ್ರತಿಷ್ಠಿತ ಸಮೀಕ್ಷೆಯಲ್ಲಿ ಎಐಇಟಿ ಈ ಅತ್ಯುನ್ನತ ಸ್ಥಾನ ಪಡೆದಿದೆ. ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅದ್ಭುತ ಸಾಧ್ಯತೆಗಳನ್ನು ಒದಗಿಸುತ್ತಿರುವ ಈ ಭಾಗದ ಪ್ರತಿಷ್ಠಿತ ಕಾಲೇಜುಗಳಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಒಂದಾಗಿದೆ. ದೇಶದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳನ್ನು ಗುರುತಿಸಿ ರ‍್ಯಾಂಕಿಂಗ್ ನೀಡುವುದು ಈ ಸಮೀಕ್ಷೆಯ ಆಶಯ. ಕಾಲೇಜಿನ ಮೂಲಸೌಕರ‍್ಯ, ಕುಶಲ ಉಪನ್ಯಾಸಕ ವೃಂದ, ಪಠ್ಯಕ್ರಮ, ಔದ್ಯೋಗಿಕ ಕ್ಷೇತ್ರದೊಡನೆಯ ಸಂಬಂಧ, ಬೋಧನ ಕ್ರಮ, ಸಂಶೋಧನೆಯ ವೈವಿಧ್ಯಮಯ ಸಾಧ್ಯತೆಗಳು, ಜಾಗತಿಕ ಮಟ್ಟದ ಅವಕಾಶಗಳು, ಉದ್ಯೋಗಾವಕಾಶಗಳು ಮತ್ತು ಕಾಲೇಜಿನ ಒಟ್ಟು ಬ್ರ್ಯಾಂಡ್ ಮೌಲ್ಯ ಈ ಸಮೀಕ್ಷೆಯ ವಿವಿಧ ಮಾನದಂಡಗಳಾಗಿದ್ದವು. ಈ ಮಾನದಂಡಗಳ ಆಧಾರದ ಮೇಲೆ ಅತ್ಯುತ್ತಮ ಕಾಲೇಜಿನ ಸೂಚ್ಯಂಕವನ್ನು ನೀಡಲಾಗಿದೆ. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಶಿಕ್ಷಣಕ್ಕೆ ಅರಿವು ಮತ್ತು ಅಕ್ಷರವೇ ಮೂಲ, ಚೋಮನ ದುಡಿಯಂತಹ ತಳ ಸಮುದಾಯದ ಬದುಕಿನ ಕುರಿತು ಕೃತಿ ರಚಿಸಿ ಚಿಂತಕನೊಬ್ಬನ ಚಿಂತನೆಗೆ ದಾರಿ ತೋರಿದ ಕಾರಂತರ ನೆನಪಿನಲ್ಲಿರುವ ಈ ಕಾರಂತ ಥೀಮ್ ಪಾರ್ಕ್ ಸಮಾಜಕ್ಕೆ ಕಾರಂತರ ಚಿಂತನೆಗಳನ್ನು, ಅವರ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಸ್ಥಳವಾಗಿದ್ದು, ಇನ್ನಷ್ಟೂ ಅಭಿವೃದ್ಧಿಗೊಂಡು ಸಾಹಿತ್ಯ ಪ್ರೇಮಿಗಳನ್ನು ಸೆಳೆಯುವಂತಾಗಲಿ ಎಂದು ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ್ ಮೂರ್ತಿ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಭೇಟಿ ನೀಡಿ ಕಾರಂತರ ಕಂಚಿನ ಪುತ್ಥಳಿಗೆ ಮಾಲರ್ಪಣೆ ಮಾಡಿ ರಂಗ ಮಂದಿರ ಆರ್ಟ್ ಗ್ಯಾಲರಿ, ಅಂಗನವಾಡಿ, ಗ್ರಂಥಾಲಯ ವೀಕ್ಷಿಸಿದರು. ಗ್ರಂಥಾಲಯದಲ್ಲಿನ ಪುಸ್ತಕಗಳ ಶೇಖರಣೆ ವ್ಯವಸ್ಥೆ ಶ್ಲಾಘಿಸಿ, ತಾವು ಒಂದಿಷ್ಟೂ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಪಿ.ಡಿ.ಓ ಶೈಲಾ ಎಸ್ ಪೂಜಾರಿ, ಕೋಟ ಕಂದಾಯ ನಿರೀಕ್ಷಕ ರಾಜು, ಗ್ರಾಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಟ್ಟಿಯಂಗಡಿ ‘ನಮ್ಮ ಭೂಮಿ’ಸಂಸ್ಥೆಯ ಮಕ್ಕಳಿಗೆ ಒಂದು ದಿನದ ಅನ್ನದಾನ ನೀಡುವ ಮೂಲಕ 2021-22ನೇ ಸಾಲಿನ ಕುಂದಾಪುರ ರೋಟರಿ ಮಿಡ್ ಟೌನ್ ಇದರ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕುಂದಾಪುರ ರೋಟರಿ ಮಿಡ್ ಟೌನ್ ಅಧ್ಯಕ್ಷರಾದ ರೋ| ಎಡಿವಿ ರವೀಶ್ಚಂದ್ರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ನಮ್ಮ ರೋಟರಿ ಸಂಸ್ಥೆಯ ಪ್ರಥಮ ಕಾರ್ಯಕ್ರಮದ ಅಂಗವಾಗಿ, ನಮ್ಮ ಭೂಮಿ ಸಂಸ್ಥೆಯ ಮಕ್ಕಳಿಗೆ ಅನ್ನದಾನ ಮಾಡುವ ಮೂಲಕ ಚಾಲನೆಯನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ಸೇವೆಗಳನ್ನು ಮಾಡುವ ಮೂಲಕ ಸಮಾಜಕ್ಕೆ ಮಾದರಿ ಕಾರ್ಯಕ್ರಮಗಳನ್ನು ನೀಡಲಿದ್ದೇವೆ ಎಂದರು. ಈ ಸಂಧರ್ಭ ರೋಟರಿ ಜಿಲ್ಲೆ 3182 ಝೋನ್ 1ರ ಅಸಿಸ್ಟೆಂಟ್ ಗವರ್ನರ್  ಪಿಎಚ್‌ಎಫ್ ರೋ| ಜಯಪ್ರಕಾಶ್ ಶೆಟ್ಟಿ, ಜಿಲ್ಲಾ ಪ್ರಾಜೆಕ್ಟ್ ಕಮಿಟಿ ಸದಸ್ಯರಾದ ಪಿಎಚ್‌ಎಫ್  ರೋ|ಶಿವರಾಮ ಶೆಟ್ಟಿ ಹಾಗೂ ಕಾರ್ಯದರ್ಶಿ ರೋ| ಎಡಿವಿ ರವಿ ಶೆಟ್ಟಿ ಮಚ್ಚಟ್ಟು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಂತರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಕುಂದಾಪುರದ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಗರದ ವೈದ್ಯರಾದ ಡಾ. ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್‌ನ ಮುಖಂಡರಾದ  ಚಂದ್ರಶೇಖರ ಕಲ್ಪತರು ವೈದ್ಯರನ್ನು ಸನ್ಮಾನಿಸಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ವೈದ್ಯರು ತಮ್ಮನ್ನು ತಾವು ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡ ಬಗ್ಗೆ ಶ್ಲಾಘಿಸಿ ವೈದ್ಯರನ್ನು ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ ಡಾ. ಚಂದ್ರಶೇಖರ ಮಾತನಾಡಿ, ಈ ವೃತ್ತಿ ಅತೀ ಶ್ರೇಷ್ಠವಾದುದು ಈ ಮಾರಣ ಕೋವಿಡ್ ಸಂದರ್ಭದಲ್ಲೂ ಕೇವಲ ವೈದ್ಯರ ಸೇವೆ ಮಾತ್ರ ಪ್ರಮುಖವಲ್ಲ ಸಾರ್ವಜನಿಕರ ಜವಾಬ್ದಾರಿಯು ಮುಖ್ಯ ಎನ್ನುತ್ತಾ ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಕುಂದಾಪುರದ ಲಯನ್ಸ್ ಕ್ಲಬ್ ಮಾಡಿರುವ ಸೇವಾ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು. ಲಯನ್ಸ್ ಕ್ಲಬ್ ಕುಂದಾಪುರದ ನೂತನ ಅಧ್ಯಕ್ಷರಾದ ರಾಧಾಕೃಷ್ಣ ನಾಯಕ್ ವೈದ್ಯರಿಗೆ ತಮ್ಮ ಶುಭಶಯಗಳನ್ನು ಹೇಳಿದರು. ಲಯನ್ ನವೀನ್ ಕುಮಾರ ಶೆಟ್ಟಿ, ಪ್ರಜ್ಞೇಶ್ ಪ್ರಭು, ಡಾ. ರವೀಂದ್ರ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂದು ಸರ್ಕಾರಿ ಶಾಲೆಗಳು ಎಲ್ಲ ರೀತಿಯಿಂದಲೂ ಸುಸಜ್ಜಿತವಾಗಿವೆ. ಅಲ್ಲಿ ಮೂಲ ಸೌಲಭ್ಯಗಳ ಕೊರತೆ ಇಲ್ಲ. ಖಾಸಗಿ ಶಾಲೆಗಳಿಗಿಂತ ಉತ್ತಮ ಅರ್ಹತೆ, ತರಬೇತಿ, ಅನುಭವ ಪಡೆದ ಶಿಕ್ಷಕರಿದ್ದಾರೆ. ಹಾಗಿದ್ದರೂ ಪೋಷಕರು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಒಲವು ತೋರುತ್ತಿರುವುದರ ಮರ್ಮ ಅರ್ಥವಾಗುತ್ತಿಲ್ಲ ಎಂದು ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ಸಂಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಹೇಳಿದರು. ಅವರು ವರ್ಚುವಲ್ ವೇದಿಕೆಯಲ್ಲಿ ನಡೆದ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ ಆರಂಭೋತ್ಸವದಲ್ಲಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ, ಶಿಕ್ಷಣ, ಪುಸ್ತಕವೇ ಮೊದಲಾದ ಸೌಕರ್ಯಗಳು ಉಚಿತವಾಗಿ ಸಿಗುತ್ತವೆ. ಗುಣಮಟ್ಟದ ಶಿಕ್ಷಣದ ಕಾರಣದಿಂದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೆ. ಮುಂದಿನ ದಿನಗಳಲ್ಲಾದರೂ ಪೋಷಕರು ಅವುಗಳ ಲಾಭ ಪಡೆಯುವ ಜಾಣತನ ಪ್ರದರ್ಶಿಸಬೇಕು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷೆ ಅನಿತಾ ಆರ್. ಕೆ, ಹಿರಿಯ ಪ್ರಾಥಮಿಕ ಶಾಲಾ ಹಳೆವಿದ್ಯಾರ್ಥಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರಸಕ್ತ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕನ್ನಡ, ಆಂಗ್ಲ ಮತ್ತು ಭಾರತೀಯ ಇತರೇ ಭಾಷೆಯ ಪುಸ್ತಕಗಳನ್ನು ಬೆಂಗಳೂರಿನ ರಾಜ್ಯ ಕೇಂದ್ರ ಗ್ರಂಥಾಲಯದ ಗ್ರಂಥಸ್ವಾಮ್ಯ ವಿಭಾಗದಲ್ಲಿ ಜುಲೈ 30 ರ ಒಳಗೆ ಕಾಫಿರೈಟ್ ಮಾಡಿಸಿರಬೇಕು. ಕಾಫಿರೈಟ್ ಮಾಡಿಸಿರುವ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಸಲ್ಲಿಸಲು ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಲೇಖಕರು, ಲೇಖಕ ಪ್ರಕಾಶಕರು ಹಾಗೂ ಪ್ರಕಟಣಾ ಸಂಸ್ಥೆಗಳು ಪುಸ್ತಕವನ್ನು ಆಯ್ಕೆಗೆ ಸಲ್ಲಿಸುವಾಗ ಅನುಮತಿ ಪತ್ರದೊಂದಿಗೆ ಪುಸ್ತಕದ ಸಾಫ್ಟ್ ಕಾಫಿಯನ್ನು ಸಿ.ಡಿ. ರೂಪದಲ್ಲಿ (ನೋಂದಣಿ ಪತ್ರದ ಪ್ರತಿಯೊಂದಿಗೆ) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು ಇಲ್ಲಿಗೆ ಸಲ್ಲಿಸಲು ಜುಲೈ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್ಸೈಟ್ https://dpl.karnataka.gov.in/ ಅಥವಾ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯಗಳ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಛೇರಿಗಳನ್ನು ಸಂಪರ್ಕಿಸುವಂತೆ ನಗರ ಕೇಂದ್ರ ಗ್ರಂಥಾಲಯದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.  ಗಂಗೊಳ್ಳಿ: ವೈದ್ಯರ ದಿನದ ಅಂಗವಾಗಿ ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ ಅವರನ್ನು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಸನ್ಮಾನಿಸಿ ಅಭಿನಂದಿಸಲಾಯಿತು. ಗಂಗೊಳ್ಳಿ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ರಾಜೇಶ ಎಂ.ಜಿ., ನಿಕಟಪೂರ್ವ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ, ಸದಸ್ಯರಾದ ಕೆ.ರಾಮನಾಥ ನಾಯಕ್, ವಾಸುದೇವ ಶೇರುಗಾರ್, ಜನಾರ್ದನ ಪೂಜಾರಿ ಪೆರಾಜೆ, ಪ್ರೇಮಾ ಸಿ.ಪೂಜಾರಿ, ಫಿಲೋಮಿನಾ ಫೆರ್ನಾಂಡಿಸ್, ಚಂದ್ರಕಲಾ, ಗೋಪಾಲ ಪೂಜಾರಿ, ಜಯಂತಿ ಶೇರುಗಾರ್, ಆಸ್ಪತ್ರೆಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಮಿಡ್ ಟೌನ್ ಕುಂದಾಪುರ ಹಾಗೂ ಇಂಚರ ಇಕೋ ಕ್ಲಬ್ ಇವರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸ್ಕತ್ತೂರಿನಲ್ಲಿ ವನ ಮಹೋತ್ಸವ ಕಾರ್ಯಕ್ರಮ ನಡೆಯಿತು. ರೋಟರಿ ಕ್ಲಬ್ ಮಿಡ್ ಟೌನ್ ಕುಂದಾಪುರ ಅಧ್ಯಕ್ಷರಾದ ರೊ. ನಳಿನ್ ಕುಮಾರ್ ಶೆಟ್ಟಿ ಹಾಗೂ ನಿಯೋಜಿತ ಅಧ್ಯಕ್ಷರಾದ ರೊ. ಎಚ್ ರವೀಶ್ಚಂದ್ರ ಶೆಟ್ಟಿ ಜೊತೆಯಾಗಿ ಹೊಂಗೆ ಗಿಡಗಳನ್ನು ನೆಡುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಠಲ ಕುಲಾಲ ವಹಿಸಿದ್ದರು. ರೋಟರಿ ಕ್ಲಬ್ ಮಿಡ್ ಟೌನ್ ಕುಂದಾಪುರದ ಪೂರ್ವಾಧ್ಯಕ್ಷರು ಹಾಗೂ ವಲಯ 1 ರ ನಿಯೋಜಿತ ಸಹಾಯಕ ಗವರ್ನರ್ ರೊ. ಜಯಪ್ರಕಾಶ್ ಶೆಟ್ಟಿ ವೈ, ಕಾರ್ಯದರ್ಶಿ ರೊ. ನಿರಂಜನ್ ಶೆಟ್ಟಿ , ಹುಣಸೆಮಕ್ಕಿ ಸಮೂಹ ಸಂಪನ್ಮೂಲ ವ್ಯಕ್ತಿ ರಾಜೀವ ಕುಲಾಲ, ಶಾಲಾ ಎಸ್ ಡಿ ಎಂ ಸಿ ಸದಸ್ಯರು, ಸಹಶಿಕ್ಷಕರಾದ ಸಂಜೀವ ಎಂ, ಜಯಲಕ್ಷ್ಮಿ ಬಿ., ವಿಜಯಾ ಆರ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಇನ್ಫೋಸಿಸ್ ವತಿಯಿಂದ ಉಡುಪಿ ಜಿಲ್ಲಾಡಳಿತಕ್ಕೆ ಸುಮಾರು 70 ಲಕ್ಷ ರೂ. ಮೌಲ್ಯದ 10 ಆಕ್ಸಿಜನ್ ಕಾನ್ಸನ್ಟ್ರೇಟರ್ ಹಾಗೂ 10 ವೆಂಟಿಲೇಟರ್‌ಗಳನ್ನು  ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಹಸ್ತಾಂತರಿಸಲಾಯಿತು. ನಂತರ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಇನ್ಫೋಸಿಸ್ ವತಿಯಿಂದ ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲೂ ಸಹ ಜಿಲ್ಲಾಡಳಿತದ ಮನವಿಗೆ ಕೂಡಲೇ ಸ್ಪಂದಿಸಿ ಅಗತ್ಯವಿದ್ದ ಅರೋಗ್ಯ ಸಾಮಗ್ರಿಗಳನ್ನು ನೀಡಲಾಗಿದ್ದು, ಕೋವಿಡ್ 2 ನೇ ಅಲೆಯ ಈ ಸಮಯದಲ್ಲೂ ಸಹ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ, ಅಕ್ಸಿಜನ್ ಕಾನ್ಸನ್ಟ್ರೇಟರ್ ಮತ್ತು ವೆಂಟಿಲೇಟರ್ಗಳನ್ನು ನೀಡಿದ್ದು, ಸಂಸ್ಥೆಯ ಮುಖ್ಯಸ್ಥರಿಗೆ ಜಿಲ್ಲಾಡಳಿತ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಪ್ರಸ್ತುತ ನೀಡಿರುವ ಉಪಕರಣಗಳಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ 5 ವೆಂಟಿಲೇಟರ್ ಮತ್ತು ಅಕ್ಸಿಜನ್ ಕಾನ್ಸನ್ಟ್ರೇಟರ್, ಕುಂದಾಪುರ ತಾಲೂಕು ಆಸ್ಪತ್ರೆಗೆ 2 ವೆಂಟಿಲೇಟರ್ ಮತ್ತು ಅಕ್ಸಿಜನ್ ಕಾನ್ಸನ್ಟ್ರೇಟರ್, ಕಾರ್ಕಳ ತಾಲೂಕು ಆಸ್ಪತ್ರೆಗೆ 3 ವೆಂಟಿಲೇಟರ್ ಮತ್ತು ಅಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ…

Read More