Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಬುಧವಾರ 636 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 2 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 239, ಕುಂದಾಪುರ, ಬೈಂದೂರು ತಾಲೂಕಿನ 192, ಕಾರ್ಕಳ, ಹೆಬ್ರಿ ತಾಲೂಕಿನ 203 ಮಂದಿಗೆ ಹಾಗೂ ಹೊರ ಜಿಲ್ಲೆಯ 2 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 636 ಪ್ರಕರಣಗಳಲ್ಲಿ 15 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 621 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ಇಂದು ಉಡುಪಿಯ 84 ವರ್ಷದ ವೃದ್ಧೆ, ಕಾರ್ಕಳದ 62 ವರ್ಷದ ವೃದ್ಧೆ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 963 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 4876 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 3008 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಇಂದು 4133 ಮಂದಿಗೆ ಮೊದಲನೇ ಡೋಸ್, 1521 ಮಂದಿಗೆ ಎರಡನೇ ಡೋಸ್ ವಾಕ್ಸಿನೇಷನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರೋನಾ ಹೆಚ್ಚುತ್ತಿರುವ ಗ್ರಾಮಗಳು ಲಾಕ್ಡೌನ್ ಮಾಡಿಕೊಳ್ಳುತ್ತಿದ್ದು, ಹೊಸ ಪ್ರಕರಣ ಹಾಗೂ ಸೋಂಕು ಹೆಚ್ಚದಂತೆ ವೈದ್ಯರ ನಡಿಗೆ ಹಳ್ಳಿಯ ಕಡೆ ಮೂಲಕ ಹಳ್ಳಿಯಲ್ಲಿರುವ ಎಲ್ಲರ ಕರೋನಾ ಟೆಸ್ಟ್ ಮಾಡಬೇಕು ಎಂದು ತಿಳಿಸಲಾಗಿದೆ. ಇದರಿಂದ ಹಳ್ಳಿಗಳನ್ನು ಕರೋನಾ ಮುಷ್ಟಿಯಿಂದ ಬಿಡಿಸುವ ಪ್ರಯತ್ನ ನಡೆಯುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಕುಂದಾಪುರ ತಾಲೂಕು ಆಸ್ಪತ್ರೆ ಕೋವಿಡ್ ಸೆಂಟರ್ ಹಾಗೂ ಸ್ವಯಂಪ್ರೇರಿತ ಲಾಕ್ಡೌನ್ ಮಾಡಿಕೊಂಡ ಮಾಡಿಕೊಂಡು ಜಡ್ಕಲ್ ಗ್ರಾಮ ಪಂಚಾಯಿತಿಗೆ ಬುಧವಾರ ಭೇಟಿ ನೀಡಿ ಮಾತನಾಡಿ, ಕರೋನಾ ವಿಸ್ತರಣೆ ಚೈನ್ ತುಂಡರಿಸುವ ನಿಟ್ಟಿನಲ್ಲಿ ಲಾಕ್ಡೌನ್ ಮಾಡಲಾಗಿದ್ದು, ಜೂ.7ರ ಒಳಗೆ ಪಾಸಿಟಿವ್ ಪ್ರಮಾಣ 10ಕ್ಕಿಂತ ಕಡಿಮೆ ಬಾರದಿದ್ದರೆ ಲಾಕ್ಡೌನ್ ವಿಸ್ತರಣೆ ಅನಿವಾರ್ಯ. ಸಾರ್ವಜನಿಕರು ನಿಯಮ ಕಡ್ಡಾಯವಾಗಿ ಪಾಲಿಸುವ ಮೂಲಕ ಪಾಸಿಟಿವ್ ಪ್ರಮಾಣ ಇಳಿಸುವ ಜೊತೆ ಲಾಕ್ಡೌನ್ ಮುಕ್ತಿಗೆ ಸಹಕಾರ ನೀಡಬೇಕು ಎಂದರು. ಉಡುಪಿ ಜಿಲ್ಲೆಯಲ್ಲಿ ಕರೋನಾ ಪಾಸಿಟಿವಿಟಿ ರೇಟ್ ಶೇ.16ಕ್ಕೆ ಇಳಿದರೂ ಇದು ಸಾಕಾಗೋದಿಲ್ಲ. ಪಾಸಿಟಿವ್ ದರ 10ಕ್ಕಿಂತ ಕಡಿಮೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766 (ಅ)ಯನ್ನು ಬೈಂದೂರಿನಿಂದ ನಿಟ್ಟೂರಿನ ತನಕ ಅಭಿವೃದ್ಧಿಪಡಿಸಲು ಯೋಜನಾ ವರದಿ ತಯರಿಗೆ ಅನುದಾನ ನೀಡಿ ಅನುಮೋದನೆ ಮಾಡಲಾಗಿದೆ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ. ಬೈಂದೂರಿನಿಂತ ನಿಟ್ಟೂರು ತನಕ ಒಟ್ಟು 38.70 ಕಿ.ಮೀ ವರೆಗೆ ರಸ್ತೆ ಅಗಲೀಕರಣ, ಕೊಲ್ಲೂರು ಪಟ್ಟಣಕ್ಕೆ ಪಾಸ್ ರಸ್ತೆ ನಿರ್ಮಾಣ ಮತ್ತು ಕೊಲ್ಲೂರು ಘಾಟಿ ರಸ್ತೆಯ ಅಗಲೀಕರಣ ಒಳಗೊಂಡಂತೆ ದ್ವಿಪಥಕ್ಕಾಗಿ 10 ಮೀಟರ್ ಅಗಲದ ರಸ್ತೆ ನಿರ್ಮಾಣದ ಯೋಜನಾ ವರದಿ ತಯಾ ರೂ. 1.35 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ. ಪ್ರಗತಿಯಲ್ಲಿರುವ/ ಟೆಂಡರ್ ಅಂತಿಮ ಹಂತದಲ್ಲಿರುವ ಬೈಂದೂರು ರಾಣೆಬೆನ್ನೂರು ಹೆದ್ದಾರಿ ಕಾಮಗಾರಿ: ಬೈಂದೂರು ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯ ನಾಗೋಡಿ ಬಳಿ ನದಿ ಪಕ್ಕದ ರಸ್ತೆ ಹಾಗೂ ಗುಡ್ಡ ಕುಸಿತ ಪರಿಣಾಮದಿಂದಾಗಿ ಹಾಳಾಗಿರುವ ರಸ್ತೆಯ ಭಾಗದಲ್ಲಿ ತಾಂತ್ರಿಕವಾಗಿ ನೂತನ ಗೇಬಿಯನ್ ತಡೆಗೋಡೆ ನಿರ್ಮಿಸಿ ಒಡೆದ ಕಾಂಕ್ರಿಟ್ ರಸ್ತೆಯ ಪುನರ್ ನಿರ್ಮಾಣ ಕೆಲಸದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೇರಳದ ಬಿಜೆಪಿ -ಅರ್‌ಎಸ್‌ಎಸ್ ರಾಜ್ಯ ನಾಯಕರು 3.5 ಕೋಟಿ ಹವಾಲಾದಲ್ಲಿ ಭಾಗಿಯಾಗಿದ್ದು, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕೋಮು ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ವಿಧ್ವಂಸಕ ಕೃತ್ಯ ನಡೆಸಲು ಬಳಸಲಾಗಿತ್ತು. ಇದರ ಬಗ್ಗೆ ಈಡಿಯು ತನಿಖೆ ನಡೆಸಬೇಕು, ಈಡಿ ಆಯ್ದ ಕೆಲವೊಂದು ಕೇಂದ್ರ ಸರ್ಕಾರದ ವಿರುದ್ಧ ಧ್ವನಿಯೆತ್ತುವವರನ್ನು ಮಾತ್ರ ಭೇಟೆಯಾಡುತ್ತಿದೆ. ಇಂತಹ ಗಂಭೀರ ಪ್ರಕರಕರಣಗಳನ್ನು ಈಡಿಯು ಮರೆಮಾಚುತ್ತಿದೆ, ಈ ವಿಚಾರವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ಜಿಲ್ಲಾ ಸಮಿತಿ ವತಿಯಿಂದ ಬಿಜೆಪಿ ಹವಾಲಾ ಕಾಣಿಸಿಕೊಂಡಾಗ ಇಡಿ ಕಣ್ಮರೆಯಾಯಿತು ಎಂಬ ಸಾಮೂಹಿಕ ಮೇಲಿಂಗ್ ಅಭಿಯಾನ ನಡೆಸಿತು ಸಂಬಂಧಪಟ್ಟ ಇಲಾಖೆಗಳಿಗೆ, ಅಧಿಕಾರಿಗಳಿಗೆ ಇದರ ಬಗ್ಗೆ ಸೂಕ್ತ ತನಿಖೆ ನಡೆಸಲು ಈ ಮೇಲ್ ಮುಖಾಂತರ ಒತ್ತಾಯಿಸಲಾಯಿತು. ಜಿಲ್ಲೆಯಿಂದ ಸುಮಾರು ನೂರಕ್ಕೂ ಅಧಿಕ ಇಮೇಲ್ ಗಳನ್ನು ವಿದ್ಯಾರ್ಥಿಗಳು, ನಾಗರಿಕರು ಕಳುಹಿಸಿದರು. ಕ್ಯಾಂಪಸ್ ಫ್ರಂಟ್ ಕುಂದಾಪುರ ಜಿಲ್ಲಾ ಸಮಿತಿ ಸದಸ್ಯರಾದ ಸಹದ್ ಬಸ್ರೂರ್ ,ಮುಜಾಹಿದ್ ,ಸಿಂಹಾನ ,ಶಾಹಿಘ್ ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಾಲೂಕಿನ ಎನ್‌ಎಸ್‌ಯುಐನಿಂದ ಕುಂದಾಪುರ, ಬೈಂದೂರು ತಾಲೂಕಿನ 120 ಅತ್ಯಂತ ಬಡಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರು ಚಾಲನೆ ನೀಡಿದರು. ಬುಧವಾರ ಹೆಮ್ಮಾಡಿಯಲ್ಲಿ ದಿನಸಿ ಕಿಟ್ ಹಸ್ತಾಂತರಿಸಿ ಅವರು ಮಾತನಾಡಿ ರಾಜ್ಯಾದ್ಯಂತ ಕೋವಿಡ್ ಸಂಕಷ್ಟಗಳಿಂದಾಗಿ ಪರದಾಡುತ್ತಿರುವ ಬಡಕುಟುಂಬಗಳ ನೆರವಿಗೆ ಧಾವಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸೂಚನೆ ನೀಡಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎನ್‌ಎಸ್‌ಯುಐ ಸೇರಿದಂತೆ ಯುವ ಸಂಘಟನೆಗಳು, ಕಾರ್ಯಕರ್ತರು ಅರ್ಹ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ಹಂಚುತ್ತಿದ್ದಾರೆ. ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಪುರ್ಖಾನ್ ಅವರ ನೇತೃತ್ವದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ 120 ಬಡಕುಟುಂಬಗಳಿಗೆ ದಿನಸಿ ಕಿಟ್ ಹಂಚುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಈ ಸಂದರ್ಭದಲ್ಲಿ ಹೆಮ್ಮಾಡಿ ಪಂಚಾಯತ್ ಅಧ್ಯಕ್ಷ ಯು ಸತ್ಯನಾರಾಯಣ್ ರಾವ್, ಕಾಂಗ್ರೆಸ್ ಮುಖಂಡರಾದ ಶರತ್ ಕುಮಾರ್ ಶೆಟ್ಟಿ, ಸಯ್ಯದ್ ಯಾಸೀನ್, ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಎಲ್ಲಾ ವಗ೯ದ ಕಾಮಿ೯ಕರಿಗೆ ಕೊರೋನಾ ನಗದು ಪರಿಹಾರಕ್ಕೆ ಒತ್ತಾಯಿಸಿ, ಸಿಪಿಐ(ಎಂ) ಪಕ್ಷದ ಆಶ್ರಯದಲ್ಲಿ ಪ್ರತಿಭಟನೆ  ನಡೆಯಿತು. ಸಾವ೯ಜನಿಕ ಉಚಿತ ಲಸಿಕೆ, ಔಷಧಿಚಿಕಿತ್ಸೆಗಾಗಿ, ರೂ.10000 ನೇರ ನಗದು, ಉಚಿತ ಪಡಿತರಕ್ಕಾಗಿ, ರೈತ, ಕಾಮಿ೯ಕರ ವಿರೋಧಿ ಕಾನೂನುಗಳ ರದ್ಧತಿಗಾಗಿ, 200 ದಿನಗಳ ಉದ್ಯೋಗ ಖಾತ್ರಿಗಾಗಿ, ನಗರಗಳಿಗೂ ವಿಸ್ತರಣೆಗಾಗಿ, ಕೊರೊನಾ ಮುಂಚೂಣಿ ಕಾಯ೯ಕತ೯ರಿಗೆ ಸೂಕ್ತ ರಕ್ಷಣೆಗಾಗಿ, ಭಾದಿತ ಎಲ್ಲಾ ಕಾಮಿ೯ಕರಿಗೂ ಪೂಣ೯ ವೇತನ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಯಿತು. ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾಯ೯ದಶಿ೯ ಮಂಡಳಿ ಸದಸ್ಯ ಕೋಣಿ ವೆಂಕಟೇಶ ನಾಯಕ್ ,ನಾಗರತ್ನ ನಾಡ. ಬೈಂದೂರು ವಲಯ ಸಮಿತಿ ಮುಖಂಡ ಗಣೇಶ ತೊಂಡೆಮಕ್ಕಿ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಚಂದ್ರ ದೇವಾಡಿಗ ಉಪ್ಪುಂದ,ಮಾಧವ ದೇವಾಡಿಗ ಉಪ್ಪುಂದ ,ನಾಗಮ್ಮ ಮಸಾಲೆಮನೆ ಯಡ್ತರೆ, ರಾಮ ಕಾಟಿಮನೆ ಪಡುವರಿ, ನಾಗೇಂದ್ರ ಯಡ್ತರೆ, ಲಕ್ಷ್ಮಣ ಯಡ್ತರೆ, ಗಣೇಶ ಮೊಗವೀರ,ರವಿ ಗಾಣಿಗ ಉಪ್ಪುಂದ, ಹರೀಶ ಬೈಂದೂರು, ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಮಚಂದ್ರ ಭಟ್ ಕಾವೇರಿ ಮಾಗ೯…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮ ಮಟ್ಟದಲ್ಲಿ ಪಂಚಾಯತ್ ಪ್ರತಿನಿಧಿಗಳು, ಅಧಿಕಾರಿಗಳು, ಆಶಾ ಕಾರ್ಯಕರ್ತರು ಹಾಗೂ ವೈದ್ಯಕೀಯ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘಟಿತ ಕಾರ್ಯದಿಂದಾಗಿ ಕೆಲವೇ ದಿನಗಳಲ್ಲಿ ರಾಜ್ಯ ಕೋವಿಡ್ ಮುಕ್ತವಾಗುವ ವಿಶ್ವಾಸವಿದೆ ಎಂದು ರಾಜ್ಯ ಧಾರ್ಮಿಕ ದತ್ತಿ ಹಾಗೂ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಬುಧವಾರ ಬೈಂದೂರು ಪಟ್ಟಣ ಪಂಚಾಯತ್, ನಾವುಂದ, ಮರವಂತೆ ಹಾಗೂ ನಾಡ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಸಭೆ ನಡೆಸಿದ ಬಳಿಕ ಮಾತನಾಡಿ ನಮ್ಮ ಗ್ರಾಮ, ವಾರ್ಡ್ ಕೋವಿಡ್ ಮುಕ್ತವಾಗಿ ಮಾಡುತ್ತೇವೆ ಎಂದು ನಿಂತರೆ ಖಂಡಿತವಾಗಿ ಕೋವಿಡ್ ನಿಯಂತ್ರಣಕ್ಕೆ ತರಲು ಸಾಧ್ಯವಿದೆ ಎಂದರು. ಸಭೆಯಲ್ಲಿ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಹೆಚ್. ಎಸ್., ಪೊಲೀಸ್ ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ, ವೈದ್ಯಾಧಿಕಾರಿ, ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್, ಡಾ. ನಂದಿನಿ, ಡಾ. ಸಹನಾ, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.  ಇದನ್ನೂ ಓದಿ: ► ಬಿ.ಎಸ್.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಾನ್ಯ ಜಿಲ್ಲಾಧಿಕಾರಿಯ ಆದೇಶದ ಅನ್ವಯದಡಿ ಇಂದಿನಿಂದ ದಿನಗಳ ಕಾಲ ಕಂಬದಕೋಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗಡಿ, ಬ್ಯಾಂಕ್, ಸೊಸೈಟಿ ಹಾಗೂ ಸಂಘ ಸಂಸ್ಥೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ – 2 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ರಜತಾದ್ರಿ, ಮಣಿಪಾಲ ಇವರನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯತ್‌ಗೆ ಹೊಸ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರುವವರೆಗೆ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಸೆಕ್ಷನ್ 315 ರನ್ವಯ ಆಡಳಿತಾತ್ಮಕ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ಬೈಂದೂರು ಪಟ್ಟಣ ಪಂಚಾಯತ್ಗೆ ಆಡಳಿತಾಧಿಕಾರಿಯನ್ನಾಗಿ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್. ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.

Read More