Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಹಾಗೂ ರೋಟರಿ ಕ್ಲಬ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಆಶಾ ಕಾರ್ಯಕರ್ತರಿಗೆ ಕ್ಷಯ ರೋಗದ ಬಗ್ಗೆ ತರಬೇತಿ ಕಾರ್ಯಕ್ರಮ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ ತರಬೇತಿಯನ್ನು ನೀಡಿದರು. ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕನ್ನು ವಿತರಿಸಲಾಯಿತು. ರೋಟರಿ ಕ್ಲಬ್‌ನ ಸದಸ್ಯರಾದ ಜನಾರ್ಧನ ಪೂಜಾರಿ, ಬಿ. ಲಕ್ಷ್ಮೀಕಾಂತ ಮಡಿವಾಳ, ಪ್ರೇಮಾ ಸಿ. ಪೂಜಾರಿ, ಚಂದ್ರಕಲಾ, ಗೋಪಾಲ ಪೂಜಾರಿ, ಪ್ರೀತಿ ಫೆರ್ನಾಂಡಿಸ್, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಎಂ.ಜಿ. ಸ್ವಾಗತಿಸಿದರು. ವಲಯ ಸೇನಾನಿ ಕೆ.ರಾಮನಾಥ ನಾಯಕ್ ಪ್ರಾಸ್ತಾವಿಕ ಮಾತನಾಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿಗೆ ಶಾಲಾ ಪೂರ್ವ ವಿದ್ಯಾರ್ಥಿ ವಂಡ್ಸೆ ಕಟ್ಟೆಮನೆ ಸುಧಾಕರ ಶೆಟ್ಟಿಯವರ ಕೊಡುಗೆಯಾಗಿ ಅಂದಾಜು ರೂ.8 ಲಕ್ಷ ಮೊತ್ತದಲ್ಲಿ 5 ಕೆವಿ ಸಾಮರ್ಥ್ಯದ ಸೋಲಾರ್ ಅಳವಡಿಕೆಯಾಗಿದ್ದು, ಶಾಲಾ ಬಳಕೆಗೆ ಹಸ್ತಾಂತರಿಸಲಾಯಿತು. ಶಾಲಾ ಬೇಡಿಕೆಗಳಲ್ಲಿ ಒಂದಾದ ಸೋಲಾರ್ ವ್ಯವಸ್ಥೆಯು ಅತೀ ಅಗತ್ಯವಾಗಿದ್ದು ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳ ಉಪಯುಕ್ತವಾಗಿದೆ. ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್, ಪ್ರಾಜೆಕ್ಟರ್ ಇದ್ದು ಸೋಲಾರ್ ಅಳವಡಿಕೆ ಹೆಚ್ಚು ಅನುಕೂಲವಾಗಿದೆ. ಶಾಲೆಯ ಬಳಕೆಯಾಗಿ ಉಳಿಕೆ ವಿದ್ಯುತ್‌ನ್ನು ಮೆಸ್ಕಾಂ ನೀಡುವ ಯೋಜನೆಯೂ ಕೂಡಾ ಇದರೊಂದಿಗೆ ಜೋಡಿಸಿಕೊಳ್ಳಲಾಗಿದೆ. ಶಾಲೆಗೆ ಉಪಯೂಕ್ತವಾದ ಸೌರ ವಿದ್ಯುತ್ ಘಟಕವನ್ನು ಒದಗಿಸಿದ ದಾನಿಗಳಾದ ವಂಡ್ಸೆ ಕಟ್ಟೆಮನೆ ಸುಧಾಕರ್ ಶೆಟ್ಟಿಯವರನ್ನು ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರ ನಾಯ್ಕ, ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜರು, ಕಾರ್ಯದರ್ಶಿ ಉದಯಕುಮಾರ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಎ.ಜಿ ಕೃತಜ್ಞತೆ ಸಲ್ಲಿಸಿದರು. ಶತಮಾನೋತ್ಸವ ಆಚರಿಸಿಕೊಂಡಿರುವ ಈ ಶಾಲೆಯಲ್ಲಿ 2016ರಲ್ಲಿ 89 ವಿದ್ಯಾರ್ಥಿಗಳಿದ್ದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯ ಒದಗಿಸುವ ಉದ್ದೇಶದಿಂದ ಶಾಲಾ ಹಳೆ ವಿದ್ಯಾರ್ಥಿ ಸಂಘ ಬಸ್ ಕೊಡುಗೆ ನೀಡಿತು. ಕೋವಿಡ್ ಕಾರಣದಿಂದ ಹಿಂದಿನ ವರ್ಷ ತರಗತಿಗಳು ನಡೆಯದ್ದರಿಂದ ಬಸ್ ನಿರ್ವಹಣೆಗೆ ಹಣದ ಕೊರತೆ ಕಾಡುತ್ತಿದೆ ಎಂದು ಸಂಘದ ಅಧ್ಯಕ್ಷ ರವಿ ಮಡಿವಾಳ ಹೇಳಿದರು. ಮರವಂತೆ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದ ಬೆಂಬಲದಿಂದ ಶಾಲೆಯಲ್ಲಿ ವಿದ್ಯಾರ್ಥಿ ಸಂಖ್ಯೆ ವೃದ್ಧಿಸಿದೆ. ಹಳೆ ವಿದ್ಯಾರ್ಥಿಗಳು ಸಂಘದ ಆಜೀವ ಸದಸ್ಯರಾಗುವ ಮತ್ತು ಸಾಧ್ಯ ಇರುವವರು ದೇಣಿಗೆ ನೀಡುವ ಮೂಲಕ ಸಂಘಕ್ಕೆ ಆರ್ಥಿಕ ಬಲ ತುಂಬಬೇಕು ಎಂದು ವಿನಂತಿಸಿದರು. ಹಿಂದಿನ ಸಾಲಿನ ಏಳನೇ ತರಗತಿಯಲ್ಲಿ ಶ್ರೇಷ್ಠ ಅಂಕ ಪಡೆದು ಉತ್ತೀರ್ಣರಾದ ಮಕ್ಕಳಿಗೆ ಬಿ. ರಾಮಕೃಷ್ಣ ಮಾಲೂರು ಪ್ರವರ್ತಿಸಿದ ವಿದ್ಯಾರ್ಥಿವೇತನ ವಿತರಣೆ, ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ನಡೆಸಿದ ನಮ್ಮೂರ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿ ವಿಜೇತರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮೀನುಗಾರರಿಗೆ ಕಂಟಕವಾಗಿ ಪರಿಣಮಿಸುತ್ತಿರುವ ಗಂಗೊಳ್ಳಿಯ ಅಳಿವೆಬಾಗಿಲಿನಲ್ಲಿ ಹೂಳೆತ್ತುವಂತೆ ಆಗ್ರಹಿಸಿ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಯಶವಂತ ಗಂಗೊಳ್ಳಿ ನೇತೃತ್ವದಲ್ಲಿ ಗಂಗೊಳ್ಳಿ ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಮೀನುಗಾರಿಕ ಋತು ಪ್ರಾರಂಭವಾಗಿದ್ದು, ಗಂಗೊಳ್ಳಿ ಅಳಿವೆಬಾಗಿನಲ್ಲಿ ಹೂಳೆತ್ತುವ ಕಾಮಗಾರಿಗೆ ಈವರೆಗೆ ಚಾಲನೆ ದೊರೆತಿಲ್ಲ. ಅಳಿವೆ ಪ್ರದೇಶದಲ್ಲಿ ಹೂಳು ತುಂಬಿಕೊಂಡಿದ್ದು, ಸಮುದ್ರದ ಅಲೆಗಳ ರಭಸ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಮೀನುಗಾರರು ಮೀನುಗಾರಿಕೆಯನ್ನು ಮುಗಿಸಿ ಅಳಿವೆಬಾಗಿಲಿನ ಸಮೀಪ ತಲುಪಿದಾಗ ಮೀನುಗಾರರ ದೋಣಿ, ಬೋಟ್ ಸಂಕಷ್ಟದ ಸ್ಥಿತಿಗೆ ತುತ್ತಾಗುವ ಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯತೆ ಇದ್ದು ಇದರಿಂದಾಗಿ ಮೀನುಗಾರರು ಪ್ರಾಣಾಪಾಯಕ್ಕೆ ತುತ್ತಾಗುವ ಸಾಧ್ಯತೆಯಿದೆ. ಅಳಿವೆ ಪ್ರದೇಶದ ಸಮಸ್ಯೆಯಿಂದ ಮೀನುಗಾರರರು ಆತಂಕಕ್ಕೆ ಒಳಗಾಗಿದ್ದು, ಈ ಸಂಬಂಧ ಮೀನುಗಾರರ ಅನೇಕ ಮನವಿಗಳಿಗೆ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ಆದುದರಿಂದ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಮೀನುಗಾರರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ಬೂತ್ ಮಟ್ಟದ ಕಾರ್ಯಕರ್ತರನ್ನು ತಲುಪುವ ಆಶಯದ ಬೂತ್ ಅಧ್ಯಕ್ಷರ ಮನೆಗೆ ನಾಮ ಫಲಕ ಅಂಟಿಸುವ ಕಾರ್ಯಕ್ರಮಕ್ಕೆ ವಂಡ್ಸೆ ಜಿ.ಪಂ ವ್ಯಾಪ್ತಿಯ ಕಕುಂಜೆ ಗ್ರಾಮದ ನಾಲ್ಕು ಬೂತ್‌ಗಳಲ್ಲಿ ಚಾಲನೆ ನೀಡಲಾಯಿತು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಂಟಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ, ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅದನ್ನು ಪ್ರತಿ ಬೂತ್‌ನ ಜನರಿಗೆ ತಲುಪಿಸುವ ಕಾರ್ಯಗಳು ಪ್ರತಿ ಬೂತ್ ಅಧ್ಯಕ್ಷರ ತಂಡದಿಂದ ಆಗಬೇಕು. ಈ ಮೂಲಕ ಯೋಜನೆಗಳು ಅರ್ಹ ಜನರನ್ನು ತಲುಪಬೇಕು. ಎಲ್ಲಾ ಬೂತ್ ಮಟ್ಟದ ಕಾರ್ಯಕರ್ತರೇ ನಮಗೆ ಶಕ್ತಿ. ಪ್ರಧಾನಿ ಮೋದಿಯವರ ನುಡಿಯಂತೆ ‘ಬೂತ್ ಗೆದ್ದರೆ ದೇಶ ಗೆಲ್ಲುತ್ತೇವೆ’ ಎನ್ನುವಂತೆ ಬೂತ್ ಸಶಕ್ತವಾಗಬೇಕು. ಎಲ್ಲಾ ಚುನಾವಣೆಗಳಲ್ಲೂ ಬೂತ್ ಕಾರ್ಯಕರ್ತರ ಪಾತ್ರ ಮಹತ್ವದ್ದು ಎಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕು ಬಂಟರ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇಲ್ಲಿನ ಬಂಟರ ಸಮುದಾಯ ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಗಂಟಿಹೋಳೆ, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿಜಯ್ ಶೆಟ್ಟಿ ಮೂರೂರು, ಗೌರವಾಧ್ಯಕ್ಷರಾಗಿ ಪ್ರಜ್ವಲ್ ಶೆಟ್ಟಿ ಕಾಲ್ತೋಡು, ಜೊತೆ ಕಾರ್ಯದರ್ಶಿಯಾಗಿ ದೀಪಕ್ ಶೆಟ್ಟಿ ಶಿರೂರು, ಪ್ರತಾಪ್ ಶೆಟ್ಟಿ ಹಳಗೇರಿ, ಖಜಾಂಚಿ ರವೀಂದ್ರ ಶೆಟ್ಟಿ ಉಪ್ಪುಂದ, ಸಂಘಟನಾ ಕಾರ್ಯದರ್ಶಿಯಾಗಿ ಸುಭಾಷ್ ಶೆಟ್ಟಿ ಕುದ್ರುಕೊಡು, ಪ್ರದೀಪ್ ಶೆಟ್ಟಿ ಸೂರ್ಕುಂದ, ಕ್ರೀಡಾ ಕಾರ್ಯದರ್ಶಿಯಾಗಿ ಕೀರ್ತಿರಾಜ್ ಶೆಟ್ಟಿ ಉಳ್ಳೂರು ಆಯ್ಕೆಯಾಗಿದ್ದಾರೆ. ತಾಲೂಕಿನ ವಿವಿಧ ಪದಾಧಿಕಾರಿಗಳನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ಅಧ್ಯಕ್ಷ ವಿಶ್ವನಾಥ ಶೆಟ್ಟಿ ಗಂಟಿಹೋಳೆ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ನೀಡುವುದರ ಮೂಲಕ ಹಿರಿಯ ವ್ಯಕ್ತಿಗಳು ಕೋವಿಡ್ ಗೆ ಬಲಿಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಅರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ , ಕೋವಿಡ್-19 ಜಿಲ್ಲಾ ಪರಿಣಿತರ ಸಮಿತಿ ಸಭೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಮೊದಲೇ ಡೋಸ್ ಪಡೆದು ಎರಡನೇ ಡೋಸ್ ಬಾಕಿಯಿರುವ ಹಿರಿಯ ನಾಗರೀಕರ ವಿವರಗಳನ್ನು ಪಡೆದು ಅವರಿಗೆ ಅವರ ವಾಸಸ್ಥಳದ ಸಮೀಪವೇ ಲಸಿಕೆಗೆ ವ್ಯವಸ್ಥೆ ಮಾಡಿ, ಖಾಸಗಿಯಾಗಿ ಈಗಾಗಲೇ ಲಸಿಕೆ ಪಡೆದಿರುವ ಹಿರಿಯ ನಾಗರೀಕರ ವಿವರಗಳನ್ನೂ ಸಹ ಪಡೆದು, ಅವರಿಗೂ ಲಸಿಕೆಗೆ ವ್ಯವಸ್ಥೆ ಮಾಡಿ, ಗ್ರಾಮಾಂತರ ಪ್ರದೇಶದಲ್ಲಿ ಸಹ ಅಲ್ಲಿಯೇ ಕ್ಯಾಂಪ್ ಏರ್ಪಡಿಸಿ ಲಸಿಕೆ ನೀಡಲು ವ್ಯವಸ್ಥೆ ಮಾಡಿ . ಜಿಲ್ಲೆಯಲ್ಲಿರುವ ಎಲ್ಲಾ ಹಿರಿಯ ನಾಗರೀಕರಿಗೆ ಎರಡೂ ಡೋಸ್ ಲಸಿಕೆ ನೀಡುವುದರ ಮೂಲಕ ಅವರು ಕೋವಿಡ್ ಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಪೊಲೀಸ್ ಠಾಣೆಯ ನೂತನ ಪಿಎಸ್ಐ (ತನಿಕಾಧಿಕಾರಿ) ಆಗಿ ಅನಿಲ್ ಬಿ. ಎಂ. ಅವರು ಇತ್ತಿಚಿಗೆ ಅಧಿಕಾರ ಸ್ವೀಕರಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕವಟಗಿಯವರಾದ ಅನಿಲ್ ಅವರು ಪ್ರೊಬೇಷನರಿ ಅವಧಿ ಮುಗಿಸಿ ಹೊಸದಾಗಿ ಬೈಂದೂರು ಠಾಣೆಗೆ ನೇಮಕಗೊಂಡಿದ್ದಾರೆ. ಬೈಂದೂರು ತಾಲೂಕು ಕೇಂದ್ರವಾದ ಬಳಿಕ ಬೈಂದೂರು ಠಾಣೆಗೆ ಎರಡು ಪಿಸ್ಐ ಹುದ್ದೆ ಮಂಜೂರಾಗಿದ್ದು, ಪವನ್ ನಾಯಕ್ (ಸಿವಿಲ್) ಹಾಗೂ ಅನಿಲ್ ಬಿ.ಎಂ (ತನಿಕಾಧಿಕಾರಿ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬೈಂದೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ನಾಗೂರಿನಲ್ಲಿ ನಡೆಯಿತು. ರಕ್ತದಾನ ಶಿಬಿರಕ್ಕೆ ಮಾಜಿ ಶಾಸಕರಾದ ಗೋಪಾಲ ಪೂಜಾರಿ ಅವರು ಚಾಲನೆ ನೀಡಿದರು. ಕಾರ್ಯಕರ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸುವುದರ ಮೂಲಕ ಗೋಪಾಲ ಪೂಜಾರಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್. ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್ ಕುಮಾರ್, ಮುಖಂಡರುಗಳಾದ ರಘುರಾಮ ಶೆಟ್ಟಿ, ವಿಜಯ್ ಶೆಟ್ಟಿ, ರಮೇಶ ಗಾಣಿಗ, ಗೌರಿ ದೇವಾಡಿಗ, ನಾಗರಾಜ ಗಾಣಿಗ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ ಉಪ್ಪುಂದ, ಅರವಿಂದ ಪೂಜಾರಿ, ಜಗದೀಶ ಕೊಡೇರಿ, ಪ್ರಕಾಶ್, ತಭ್ರೆಜ್ ನಾಗೂರು, ಗಣೇಶ್ ಪೂಜಾರಿ, ಈಶ್ವರ ದೇವಾಡಿಗ, ಸಿ.ಎಸ್ ಖಾರ್ವಿ, ನರಸಿಂಹ ಹಳಗೇರಿ, ರಾಜೇಶ್ ಕಂಬದಕೋಣೆ, ಬ್ಲಡ್ ಹೆಲ್ಪ್ ಕೇರ್ ನ ಫಾಯಾಜ್ ಬೈಂದೂರು, ರೆಡ್ ಕ್ರಾಸ್ನ ವಿರೇಂದ್ರ, ಡಾ. ದೀಕ್ಷಾ…

Read More

ಕುಂದಾಪ್ರ ಡಾಟಡ್ ಕಾಂ ಸುದ್ದಿ.ಕುಂದಾಪುರ: ತ್ರಾಸಿ ಪ್ರವಾಸಿ ಮಂದಿರದಲ್ಲಿ ಇಬ್ಬರು ಗಾಂಜಾ ಮಾರಾಟ ಮಾಡುತಿದ್ದು, ಖಚಿತ ಮಾಹಿತಿ ಮೇರೆಗೆ ಗಂಗೊಳ್ಳಿ ಪಿಎಸ್ಐ ನಂಜಾ ನಾಯ್ಕ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮುಳ್ಳಿಕಟ್ಟೆ ಹೊಸಾಡು ಗ್ರಾಮದ ನಿಶಾನ್(21) ಹಾಗೂ ಮರವಂತೆಯ ಪ್ರಥಮ್ (2೦)ಬಂಧಿತ ಆರೋಪಿಗಳು. ಆಪಾದಿತರ ವಶದಲ್ಲಿದ್ದ 5 ಸಾವಿರ ರೂ. ಮೌಲ್ಯದ 120 ಗ್ರಾಂ ತೂಕದ ಗಾಂಜಾ, ನಗದು 680 ರೂ ವಶಪಡಿಸಿಕೊಳ್ಳಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More