ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೋಟೇಶ್ವರದಲ್ಲಿರುವ ಭಾರತ್ ಸಿನೆಮಾಮಾಸ್ಗೆ ಸೋಮವಾರ ಸಂಜೆ ಹೀರೋ ಚಿತ್ರತಂಡ ಭೇಟಿ ನೀಡಿ ಪ್ರೇಕ್ಷಕರೊಂದಿಗೆ ಒಂದಷ್ಟು ಹೊತ್ತು ಸಂವಾದ ನಡೆಸಿದರು. ಹೀರೋ ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ, ನಿರ್ದೇಶಕ ಎಂ. ಭರತ್ರಾಜ್, ನಟರಾದ ಪ್ರಮೋದ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಕಿರಣ್ ಚಂದ್ರಶೇಖರ್, ರಕ್ಷಿತ್ ರಾಮಚಂದ್ರ, ಸಲ್ಮಾನ್ ಅಹಮ್ಮದ್, ಸುಹಾಸ್ ಶೆಟ್ಟಿ ಸೇರಿದಂತೆ ಚಿತ್ರತಂಡದ ಹಲವರು ಸಂದರ್ಭ ಇದ್ದರು. ಲಾಕ್ಡೌನ್ ಬಳಿಕ ಕಡಿಮೆ ಅವಧಿಯಲ್ಲಿ ನಿರ್ಮಾಣವಾದ ಹೀರೋ ಸಿನೆಮಾ ಮಾರ್ಚ್ 5ರಂದು ಬಿಡುಗಡೆಗೊಂಡು ಯಶಸ್ವಿಯಾಗಿ ಸಾಗುತ್ತಿದ್ದು, ಪ್ರೇಕ್ಷಕವರ್ಗದಿಂದ ಉತ್ತಮ ಅಭಿಪ್ರಾಯ ಕೇಳಿಬಂದಿದೆ. ಈ ನಡುವೆ ಚಿತ್ರತಂಡ ಕೇಸ್ ಸ್ಟಡಿ ಕಂಟೆಸ್ಟ್ ಆಯೋಜಿಸಿದ್ದು ಚಿತ್ರದ ಕುರಿತಾಗಿ ನಡೆಸುವ 50 ಉತ್ತಮ ಕೇಸ್ ಸ್ಟಡಿಯನ್ನು ಆರಿಸಿ ರಿಷಬ್ ಶೆಟ್ಟಿ ಫಿಲ್ಮ್ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶ ನೀಡಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಜುವೆಲ್ಲರಿಯೊಂದರಲ್ಲಿ ಚಿನ್ನ ಮತ್ತು ನಗದು ಹೂಡಿಕೆ ಮಾಡಿದ ಗ್ರಾಹಕರಿಗೆ ಹಲವು ಸಮಯದಿಂದ ಹೂಡಿಕೆ ಮಾಡಿರುವ ಚಿನ್ನ ಮತ್ತು ನಗದು ಹಿಂದಿರುಗಿಸದೆ ವಂಚಿಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಮೊಹಮ್ಮದ್ ಇಪ್ತಿಕಾರ್ ಕಂಡ್ಲೂರು, ಮೋಮಿನ್ ಯೂಸೆಫ್ ಆಲಿ ಭಟ್ಕಳ, ಗಣೇಶ್ ಶೆಟ್ಟಿ, ಖತೀಬ್ ಅಬ್ದುಲ್ ರೆಹಮಾನ್ ಭಟ್ಕಳ, ಬಿ.ಎಂ.ಜಾಫರ್, ಫರಾಜ್ ಆಶೀಪ್, ನಜೀರ್ ಅಹಮ್ಮದ್, ಮೊಹಮ್ಮದ್ ಮುಶ್ರಫ್, ಮೊಹಮ್ಮದ್ ಆಸೀಪ್, ಮೊಹಮ್ಮದ್ ನೂರೈಸ್, ಎಸ್.ಜೀವನ್, ಬೆಟ್ಟಿ ಭಾಷಾ, ಬೆಟ್ಟಿ ಅಕ್ಬರ್, ಬಶೀರ್ ಅಹ್ಮದ್, ಕೆ.ಮುನೀರ್, ಅರ್ಫಾದ್ ಮೊಹಮ್ಮದ್, ಮೊಹಮ್ಮದ್ ಪಾಮೀಝಾ, ಸರ್ದಾರ್ ಸವೀದ್ ಅಕ್ಬರ್, ನೌಶಾದ್, ಮೊಹಮ್ಮದ್ ಫಾರೀಸ್, ಬಿ.ಭಾನು, ನಾಸೀಯಾ, ವಾಹಿದಾ ಆಪಾದಿತರು. ಕುಂದಾಪುರ ನಿವಾಸಿ ಇರ್ಷಾದ್ ಗುಲ್ಜಾರ್ ಸೇರಿ 24 ಜನ ಗ್ರಾಹಕರು ಚಿನ್ನ ಹಾಗೂ ನಗದು ಕಳೆದುಕೊಂಡವರು. ಕುಂದಾಪುರ ಮುಖ್ಯರಸ್ತೆಯಲ್ಲಿ 2000ರಲ್ಲಿ ಆರಂಭವಾದ ಜುವೆಲ್ಲರಿಯಲ್ಲಿ ಗ್ರಾಹಕರು ಹೆಚ್ಚಿನ ಬಡ್ಡಿಯಾಸೆಗೆ ಚಿನ್ನ ಹಾಗೂ ನಗದನ್ನು ಠೇವಣಿ ಇರಿಸಿದ್ದರು. 2500 ರೂನಂತೆ ನಗದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಮಕ್ಷತ್ರಿಯ ಸಮಾಜವನ್ನು ಸಾಮಾಜಿಕವಾಗಿ ಸಂಘಟಿಸುವ ಸಲುವಾಗಿ ಇಪ್ಪತ್ತಾರು ವರ್ಷಗಳ ಹಿಂದೆ ಅಖಿಲ ಕರ್ನಾಟಕ ರಾಮಕ್ಷತ್ರಿಯ ಸಂಘ ಸ್ಥಾಪಿಸಿದ್ದು, ಬಳಿಕ ಅದು ವಿಶ್ವ ರಾಮಕ್ಷತ್ರಿಯ ಮಹಾ ಸಂಘವಾಗಿ ಕಾರ್ಯನಿರ್ವಹಿಸುತ್ತಿದ್ದು ಸಮಾಜದ ಸಂಘಟನೆ ಹಾಗೂ ಉನ್ನತಿಗಾಗಿ ಶ್ರಮಿಸಲಾಗುತ್ತಿದೆ ಎಂದು ವಿಶ್ವ ರಾಮಕ್ಷತ್ರಿಯ ಮಹಾ ಸಂಘದ ಅಧ್ಯಕ್ಷ ಎಚ್. ಆರ್. ಶಶಿಧರ್ ನಾಯಕ್ ಹೇಳಿದರು. ಅವರು ಕುಂದಾಪುರ ಪಾರಿಜಾತ ಸಭಾಭವನದಲ್ಲಿ ನಡೆದ ವಿಶ್ವ ರಾಮಕ್ಷತ್ರಿಯ ಮಹಾ ಸಂಘದ ನೂತನ ಪಧಾದಿಕಾರಿಗಳ ಸಭೆ ಹಾಗೂ ಪಧಾದಿಕಾರಿಗಳ ವಿಳಾಸ ಕೈಪಿಡಿ ಬಿಡುಗಡೆಗೋಳಿಸಿ ಮಾತನಾಡಿದರು. ಸುಮಾರು 500 ವರ್ಷಗಳ ಹಿಂದೆ ಉತ್ತರದ ಮದ್ಯ ಪ್ರದೇಶ, ಗೋವಾದಲ್ಲಿ ನೆಲೆಸಿದ್ದ ವಿಶ್ವ ರಾಮಕ್ಷತ್ರಿಯರು ಪೋರ್ಚುಗೀಸರ ಆಳ್ವಿಕೆಯ ನಂತರ ದಕ್ಷಿಣಕ್ಕೆ ಬಂದು ಉತ್ತರ ಕನ್ನಡ, ಉಡುಪಿ, ದ.ಕ ಜಿಲ್ಲೆ ಹಾಗೆಯೇ ಕೇರಳದ ಬೇಕಲ್ ವರೆಗೆ ವಾಸ್ತವ್ಯ ಹೂಡಿದ್ದಾರೆ. ರಾಜ್ಯದ ಮಲೆನಾಡು, ಬಯಲುಸೀಮೆ, ಬೆಂಗಳೂರು, ಮೈಸೂರಿನಲ್ಲೂ ಭಾಗಗಳಲ್ಲಿಯೂ ಉದ್ಯೋಗಕ್ಕಾಗಿ ವಾಸವಾಗಿದ್ದಾರೆ.ಇತ್ತೀಚಿನ ದಿನಗಳಲ್ಲಿ ರಾಮಕ್ಷತ್ರಿಯ ಸಮಾಜ ಬಹಳ ಶ್ರಮವಹಿಸಿ ಆರ್ಥಿಕವಾಗಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲ್ಲೂಕಿನ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಗ್ರಾಮದ ಸರ್ವೆ ನಂ 180, 157, 189 ರಲ್ಲಿನ 11.90 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 4ರಲ್ಲಿ ಹಾಗೂ ಜಪ್ತಿ, ಹಳ್ನಾಡು ಗ್ರಾಮದ ಸರ್ವೆ ನಂ. 174. 56ರಲ್ಲಿನ 5.70 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 6 ರಲ್ಲಿ ಮರಳನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ SAND APPನ ಮೂಲಕ ಪೂರೈಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿರುತ್ತದೆ. ಅದ್ದರಿಂದ ಸದರಿ ಮರಳನ್ನು ಪಡೆದುಕೊಳ್ಳಲು ಇಚ್ಚಿಸುವವವರು UDUPI E-SAND APP ಮುಖಾಂತರ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ, ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ , ರಜತಾದ್ರಿ, A ಬ್ಲಾಕ್, ಮೊದಲನೇ ಮಹಡಿ, ಮಣಿಪಾಲ, ಉಡುಪಿ ಜಿಲ್ಲೆ, ಉಡುಪಿ, ದೂರವಾಣಿ ಸಂಖ್ಯೆ: 0820-2572333, UDUPI E-SAND APP ದೂರವಾಣಿ ಸಂಖ್ಯೆ – 6366248666, 6366743888, 6366871888 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಭೂವಿಜ್ಞಾನಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಲಲಿತ ಕಲೆಗಳ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಕ್ರಮದಲ್ಲಿ ಹರ್ಷಾ ಆಚಾರ್ ಕೋಟೇಶ್ವರ ಇವರು ವಿದ್ಯಾರ್ಥಿಗಳನ್ನು ಸಮ್ಮೇಳಿಸಿ ಟ್ರೆಡ್ ಆರ್ಟ್, ಏಕಪಾತ್ರಾಭಿನಯ, ಕರೋಕೆ ಗಾಯನ, ಜಾನಪದ ಗೀತೆ, ಉಭಯತಿಟ್ಟು ಯಕ್ಷಗಾನದ ಹೆಜ್ಜೆಯೊಂದಿಗೆ ಅಪೂರ್ವ ಸಂಭಾಷಣೆಯ ಮೂಲಕ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಮ್. ಅಬ್ದುಲ್ ರೆಹಮಾನ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಹಾಗೂ ಲಲಿತ ಕಲಾರಂಗದ ಸಂಯೋಜಕರಾದ ಡಾ. ಸಂದೀಪ ಕುಮಾರ ಶೆಟ್ಟಿ ಮತ್ತು ಲಲಿತ ಕಲಾರಂಗದ ವಿದ್ಯಾರ್ಥಿ ಕಾರ್ಯದರ್ಶಿ ಕುಮಾರಿ ಕಾವ್ಯಾ ಉಪಸ್ಥಿತರಿದ್ದರು. ವಿದ್ಯಾರ್ಥಿ ವಿಜಯ್ ಕುಮಾರ ಅತಿಥಿ ಪರಿಚಯಿಸಿ, ವಿದ್ಯಾರ್ಥಿ ಯಲ್ಲಪ್ಪ ಸ್ವಾಗತಿಸಿ, ವಿದ್ಯಾರ್ಥಿನಿ ನಮಿತಾ ವಂದಿಸಿದರು. ವಿದ್ಯಾರ್ಥಿನಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಓಕ್ ವುಡ್ ಇಂಡಿಯನ್ ಸ್ಕೂಲ್ನಲ್ಲಿ ಈಚೆಗೆ ಮಹಿಳಾ ದಿನದ ಅಂಗವಾಗಿ ಹದಿಹರೆಯದವರಿಗೆ ಗ್ರೆಸ್ಪುಲ್ ಗ್ರೋಯಿಂಗ್ ಎಂಬ ಬ್ಯಾನರ್ ಅಡಿಯಲ್ಲಿ 6 ಹಾಗೂ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು. ಆಯುರ್ವೇದ ತಜ್ಞೆ ಡಾ.ಸ್ವಾತಿ ಶೇಟ್ ಮಾತನಾಡಿ, ಮಗುವಿನ ಜೀವನದ ಪ್ರಮುಖ ಹಂತದ ಬಗ್ಗೆ ಹಾಗೂ ವಯಸ್ಸಿನಲ್ಲಿ ಮಗುವಿನ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಕುರಿತು ವಿವರಿಸಿದರು. ಕಾರ್ಯಾಗಾರವನ್ನು ಸಾಮಾನ್ಯ ಹಾಗೂ ಹುಡುಗಿಯರ ಆರೋಗ್ಯ ನೈರ್ಮಲ್ಯದ ಕುರಿತಾಗಿ ವಿಂಗಡಿಸಲಾಗಿತ್ತು. ಕಾರ್ಯಾಗಾರದಲ್ಲಿ ವಿದ್ಯಾಥಿ೯ಗಳು ಹಾಗೂ ಸಂಪನ್ಮೂಲ ವ್ಯಕ್ತಿ ಜತೆಗೆ ಪ್ರಶ್ನೋತ್ತರ ಸಂವಾದ ನಡೆಯಿತು. ಪೋರ್ಟ್ಗೇಟ್ ಎಜುಕೇಷನ್ ಕಾರ್ಯದರ್ಶಿ ನೀತಾ ಎ.ಶೆಟ್ಟಿ ಸ್ವಾಗತಿಸಿದರು, ವಿಜೇತ ಪರಿಚಯಿಸಿದರು, ಸ್ನೇಹಾ ನಿರೂಪಿಸಿದರು, ಪ್ರಜ್ಞಾ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಾವುದೇ ಸಮ ಸ್ಯೆಯೂ ಪರಿಹಾರವಾಗದೇ ಇರು ವಂತಹ ಸ್ಥಿತಿಯಲ್ಲಿ ಇರುವುದಿಲ್ಲ. ವಕೀಲರು ಪರಸ್ಪರ ಸಮನ್ವಯ ಸಾಧಿಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅಭಿಪ್ರಾಯಪಟ್ಟರು. ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ, ವಕೀಲರ ಸಂಘದ ವತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಪ್ರಕರಣವನ್ನು ದೀರ್ಘಾವಧಿ ಮುಂದುವರಿಸುವ ಬದಲು ಕಕ್ಷಿದಾರ ಸ್ನೇಹಿಯಾಗಿ ಅದನ್ನು ಬೇಗನೆ ಇತ್ಯರ್ಥ ಪಡಿಸಲು ಪ್ರಯತ್ನಿಸಬೇಕು. ಪ್ರತಿಯೊಬ್ಬ ಕಕ್ಷಿದಾರರಿಗೂ ತೀರ್ಪು ಏನಾಗುತ್ತದೆ ಎನ್ನುವುದಕ್ಕಿಂತ ಸಮಸ್ಯೆ ಪರಿಹಾರ ಆಗಬೇಕು ಎನ್ನುವ ನಿರೀಕ್ಷೆ ಇರುತ್ತದೆ. ಕಕ್ಷಿದಾರರಲ್ಲಿ ವಿಶ್ವಾಸ ಮೂಡಿಸುವುದರಿಂದ ಪರಿಹಾರದ ದಾರಿ ಕಂಡುಕೊಳ್ಳಬಹುದು ಎಂದು ಅವರು ಹೇಳಿದರು. ಕಳೆದ ಬಾರಿ ರಾಜ್ಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ 10 ಲಕ್ಷ ಪ್ರಕರಣ ಇತ್ಯರ್ಥ ಪಡಿಸಲಾಗಿದೆ. ಈ ಬಾರಿ ಇದೇ 27 ರಂದು ಲೋಕ ಅದಾಲತ್ ನಡೆಯಲ್ಲಿದೆ. ಕುಂದಾಪುರದಲ್ಲಿ 900 ಪ್ರಕರಣ ಇತ್ಯರ್ಥ ಮಾಡಲು ಬೇಡಿಕೆ ಬಂದಿದೆ, ಇದನ್ನು 2,000 ಕ್ಕೆ ಹೆಚ್ಚಿಸಲು ಪ್ರಯತ್ನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಎಲ್ಲರೂ ಪ್ರೀತಿಯಿಂದ ಮೂಕಜ್ಜಿ ಎಂದು ಕರೆಯುವ ಉಳ್ಳೂರು ಮೂಕಾಂಬಿಕಾ ಐತಾಳ್ ಕುಂದಗನ್ನಡದಲ್ಲಿ ಆಶು ಸಾಹಿತ್ಯ ರಚಿಸಿದ ಮೊದಲಿಗರು. ಅವರ ಕವನ ಮತ್ತು ಕತೆಗಳಲ್ಲಿ ಕುಂದಗನ್ನಡದ ಪದಗಳು, ನುಡಿಗಟ್ಟುಗಳು ಸಮೃದ್ಧವಾಗಿವೆ ಎಂದು ಸಾಹಿತಿ ಎ. ಎಸ್. ಎನ್. ಹೆಬ್ಬಾರ್ ಹೇಳಿದರು. ನಾಗೂರಿನಲ್ಲಿ ಖ್ಯಾತ ಆಶು ಕವಯತ್ರಿ ಉಳ್ಳೂರು ಮೂಕಾಂಬಿಕಾ ಐತಾಳ್ ಅವರ ಬದುಕು ಮತ್ತು ಸಮಗ್ರ ಸಾಹಿತ್ಯ ಕುರಿತ ಸುಬ್ರಹ್ಮಣ್ಯ ಐತಾಳ್ ಅವರ ಕೃತಿ ‘ಮೂಕಜ್ಜಿ’ ಅನಾವರಣಗೊಳಿಸಿ ಮಾತನಾಡಿದರು. ಯಾವುದೇ ಸಾಂಪ್ರದಾಯಿಕ ಶಿಕ್ಷಣ ವಿಲ್ಲದೆ, ಬಾಲ ವಿಧವೆಯಾಗಿ ಸಂಪ್ರದಾ ಯದ ಕಟ್ಟುಪಾಡುಗಳಿಗೆ ಒಳಗಾಗಿ ಬಾಹ್ಯ ಪ್ರಪಂಚದೊಂದಿಗೆ ಅಷ್ಟಾಗಿ ಬೆರೆಯದೆ ಬೆಳೆದ ಮೂಕಾಂಬಿಕಾ ಅಮ್ಮ ವಿವಿಧ ಛಂದಸ್ಸು ಗಳಲ್ಲಿ, ವೈವಿಧ್ಯಮಯ ವಿಚಾರಗಳ ಮೇಲೆ ಕವನ ರಚಿಸಿದುದು. ಕತೆಗಳನ್ನು ಕಟ್ಟಿರುವುದು ಅಚ್ಚರಿಯ ವಿಷಯ. ಅವರ ಹಲವು ಕೃತಿಗಳು ಬೆಳಕಿಗೆ ಬಂದಿಲ್ಲ. ಅವರ ಅಳಿದುಳಿದ ಕೃತಿಗಳನ್ನು ದಾಖಲಿಸುವ ಮಹತ್ವದ ಕೆಲಸ’ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ನೀಲಾವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ರಿ. ವತಿಯಿಂದ ಪ್ರತಿವರ್ಷ ವಿವಿಧ ಕ್ಷೇತ್ರದ ಸಾಧಕರಿಗೆ ನೀಡುವ ರಾಜ್ಯ ಮಟ್ಟದ ‘ಸೇವಾ ಭೂಷಣ ಪ್ರಶಸ್ತಿ’ಗೆ ರಂಗಭೂಮಿ ಕಲಾವಿದೆ ರೇವತಿರಾಂ ಕುಂದನಾಡು ಅವರನ್ನು ಆಯ್ಕೆ ಮಾಡಲಾಗಿದೆ. ಮಾರ್ಚ್ 21ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಎಚ್. ಎಲ್.ಯಮುನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕನ್ಯಾನ ಗುಡ್ಡೆಯಂಗಡಿ ಮೂಲದವರಾದ ಅವರು ಕುಂದಾಪುರ ರಂಗ ಅಧ್ಯಯನ ಕೇಂದ್ರದಲ್ಲಿ ನಾಟಕ ಡಿಪ್ಲೋಮಾ ಪದವಿ ಪಡೆದಿರುತ್ತಾರೆ. ಕಳೆದ ಹದಿನೈದು ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆಧುನಿಕ ರಂಗಭೂಮಿಯಲ್ಲಿ ಶಿವಮೊಗ್ಗ ರಂಗಾಯಣ ಸೇರಿದಂತೆ, ರಾಜ್ಯದ ಹಲವು ರಂಗತಂಡದಲ್ಲಿ ನಟನೆ, ನಿರ್ದೇಶನದ ಜೊತೆಗೆ ರಂಗ ಹಿನ್ನಲೆಯಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಸಾಹಿತ್ಯದಲ್ಲೂ ಆಸಕ್ತಿ ಇರುವ ಇವರು ಹಲವಾರು ಕಥೆ – ಕವಿತೆ – ನಾಟಕಗಳನ್ನು ಬರೆದಿರುತ್ತಾರೆ. ಮಕ್ಕಳ ನಾಟಕಗಳನ್ನು ಬರೆದು ಸ್ವತಃ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಜ್ ನ್ಯಾಷನಲ್ ಸ್ಪೆಲ್ ಬೀ ನಡೆಸಿದ ನ್ಯಾಷನಲ್ ಮೆಗಾ ಫೈನಲ್ ಸ್ಪೇಲ್ ಬೀ ಸ್ಪರ್ಧೆಯಲ್ಲಿ ಇಲ್ಲಿನ ಓಕ್ ವುಡ್ ಇಂಡಿಯನ್ ಸ್ಕೂಲ್ನ 5ನೇ ತರಗತಿಯ ವಿದ್ಯಾರ್ಥಿನಿ ಚೈತನ್ಯಶ್ರೀ ಉಡುಪ 27ನೇ ರ್ಯಾಂಕ್ ಪಡೆದುಕೊಂಡಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಸ್ಕೂಲ್ನ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಅಭಿನಂದನೆ ತಿಳಿಸಿದೆ.
