ರೈತಕೂಟ ಸಭೆ ಹಾಗೂ ಸ್ವ ಉದ್ಯೋಗ ಮಾಹಿತಿ ಕಾರ್ಯಕ್ರಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜತೆಗೆ ತಾವು ಮಾಡುತ್ತಿರುವ ಉದ್ಯೋಗದಲ್ಲಿ ಅವರನ್ನು ಸಾಧ್ಯವಾದಷ್ಟು ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

Call us

Click Here

ಸಂಘದ ಉಪ್ಪುಂದದ ರೈತಸಿರಿ ಸಭಾಭವನದಲ್ಲಿ ಸಂಘ ಪ್ರಾಯೋಜಿತ ರೈತಸಿರಿ ರೈತ ಸೇವಾ ಒಕ್ಕೂಟದ ಆಶ್ರಯದಲ್ಲಿ ಈಚೆಗೆ ನಡೆದ ರೈತಕೂಟ ಸಭೆ ಹಾಗೂ ಸ್ವ ಉದ್ಯೋಗ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮನೆಯವರು ನಡೆಸುವ ಉದ್ಯೋಗದಲ್ಲಿ ಮಕ್ಕಳು ಭಾಗಿಗಳಾಗುವುದರಿಂದ ಅವರಿಗೆ ಉದ್ಯೋಗದ ಕಲೆ, ಕೌಶಲ ಕರಗತವಾಗುವುದರ ಜತೆಗೆ ಶ್ರಮದ ಬಗೆಗೆ ಗೌರವ ಮೂಡುತ್ತದೆ ಎಂದು ಅವರು ಹೇಳಿದರು.

ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ಸ್ವ ಉದ್ಯೋಗ, ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಕ್ರಮ ಮತ್ತು ರುಡ್‌ಸೆಟ್ ಸಂಸ್ಥೆಯ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಕೃಷಿ ಸಹಾಯಕ ಈಶ್ವರ ಜೆ. ನಾಯ್ಕ್ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ ಇದ್ದರು.

Click here

Click here

Click here

Click Here

Call us

Call us

Leave a Reply