ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ರಾಜ್ಯ ಸರ್ಕಾರವು ಕ್ರೀಡಾ ಸಾಧಕರಿಗೆ ನೀಡಿದ ಏಕಲವ್ಯ ಹಾಗೂ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಒಟ್ಟು ಎಂಟು ಕ್ರೀಡಾ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರೆಲ್ಲರೂ ಆಳ್ವಾಸ್ನ ದತ್ತು ಸ್ವೀಕಾರ ಯೋಜನೆಯಡಿ ತರಬೇತಿ ಪಡೆದು ಸಾಧನೆಗೈದ ಕ್ರೀಡಾಪಟುಗಳಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಭಿನಯ ಶೆಟ್ಟಿ, ಬಾಂಧವ್ಯ, ಅಭಿಷೇಕ್ಶೆಟ್ಟಿಯವರು ಏಕಲವ್ಯ ಪ್ರಶಸ್ತಿ ಹಾಗೂ ಜಯಲಕ್ಷ್ಮೀ ಜೆ ,ಲಾವಣ್ಯ ಬಿ. ಡಿ, ರಕ್ಷಿತ್ ಎಸ್, ಪಲ್ಲವಿ ಎಸ್ ಕೆ, ಮತ್ತು ಅನುಶ್ರೀ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಅಭಿಷೇಕ್ ಶೆಟ್ಟಿ ಅಥ್ಲೆಟಿಕ್ನಲ್ಲಿ2009ರ ಸಾಲಿನ ಪ್ರಶಸ್ತಿ ಗಳಿಸಿದ್ದಾರೆ. ಅಂತರಾಷ್ಟ್ರೀಯ ಕ್ರೀಡಾಪಟುವಾಗಿದ್ದು ಪ್ರಸ್ತುತ ಪಶ್ಚಿಮ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದಾರೆ. ಬಾಂಧವ್ಯ ಬಾಸ್ಕೆಟ್ಬಾಲ್ನಲ್ಲಿ 2008ರ ಏಕಲವ್ಯ ಪ್ರಶಸ್ತಿ ಗಳಿಸಿದ್ದು ಅಂತರಾಷ್ರ್ಟೀಯ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿದ್ದಾರೆ. ಪ್ರಸುತ್ತ ದಕ್ಷಿಣ ಪಶ್ಚಿಮ ರೈಲ್ವೆ ಉದ್ಯೋಗಿ. ಅಂತರಾಷ್ಟ್ರೀಯ ಕ್ರೀಡಾಪಟು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಝೀ ಕನ್ನಡ ಕುಟುಂಬದ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ ಕುಂದಾಪುರದ ಸಂತೋಷ್ ಖಾರ್ವಿ ಅವರಿಗೆ ಲಭಿಸಿದೆ. ಕುಂದಾಪುರದ ಖಾರ್ವಿಕೇರಿಯವರಾದ ಸಂತೋಷ್ ಖಾರ್ವಿ ಅವರು, ಕುಂದಾಪುರದ ಸೈಂಟ್ ಮೇರಿಸ್ ಹೈಸ್ಕೂಲಿನಲ್ಲಿ ಶಿಕ್ಷಣ ಪೂರೈಸಿ ಬದುಕಿನ ಬುತ್ತಿ ಅರಸಿ ಬೆಂಗಳೂರಿಗೆ ತೆರಳಿದರು. ಕಾದಂಬರಿ ಧಾರವಾಹಿ ಮೂಲಕ ಛಾಯಾಗ್ರಾಹಕರಾಗಿ ಕಿರುತೆರೆ ಪ್ರವೇಶಿಸಿ, ಸಪ್ತಪದಿ, ಅಶ್ವಿನಿ ನಕ್ಷತ್ರ, ಅಮ್ಮ, ಇವಳೇ ವೀಣಾ ಪಾಣಿ ಸೇರಿದಂತೆ 12ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ಪ್ರಸ್ತುತ ಮಡದಿ ಶ್ರೀಲಕ್ಷ್ಮೀ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 74 ವರ್ಷಗಳ ಬಳಿಕವೂ ದಲಿತರು ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟದ ಮಾರ್ಗ ಹಿಡಿಯಬೇಕಾಗಿರುವುದು ಅವರ ದುರ್ದೈವ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ, ವಕೀಲ ಮಂಜುನಾಥ ಗಿಳಿಯಾರು ವಿಷಾದಿಸಿದರು. ದಲಿತ ಸಂಘರ್ಷ ಸಮಿತಿಯ ಬೈಂದೂರು ತಾಲ್ಲೂಕು ಘಟಕ, ತಾಲ್ಲೂಕು ಮಹಿಳಾ ಒಕ್ಕೂಟ ಮತ್ತು ಅಂಬೇಡ್ಕರ್ ಮಹಿಳಾ ಸಂಘ ಸೋಮವಾರ ಇಲ್ಲಿನ ತಾಲ್ಲೂಕು ಕಚೇರಿ ಎದುರು ನಮ್ಮ ಭೂಮಿ ನಮ್ಮ ಹಕ್ಕು ಹೋರಾಟದ ಅಂಗವಾಗಿ ನಡೆಸಿದ ಧರಣಿಯಲ್ಲಿ ಮಾತನಾಡಿದರು. ಸರ್ಕಾರಿ ದಾಖಲೆಯಂತೆ ಉಡುಪಿ ಜಿಲ್ಲೆಯಲ್ಲಿ 1108 ಎಕ್ರೆ ದಲಿತ ಮೀಸಲು ಭೂಮಿ ಇದೆ. ದಾಖಲೆಗೆ ಸೇರದ ಇನ್ನೂ 300 ಎಕ್ರೆ ಇದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಬಹುಭಾಗವನ್ನು ನಿಯಮ ಉಲ್ಲಂಘಿಸಿ ವಿವಿಧ ಯೋಜನೆಗಳ ಹೆಸರಿನಲ್ಲಿ ಬಲಾಢ್ಯರಿಗೆ ಹಂಚಲಾಗಿದೆ. ಅದರ ವಿರುದ್ಧ ಮತ್ತು ದಲಿತರ ಹಕ್ಕಿನ ಭೂಮಿಯನ್ನು ಅವರಿಗೆ ನೀಡಿ ಎಂದು ಸಂಘಟನೆ ಆರು ವರ್ಷಗಳಿಂದ ಹೋರಾಡುತ್ತಿದೆ. ಆ ನಿಟ್ಟಿನಲ್ಲಿ ಆಡಳಿತದಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ನಾವುಂದದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಬೈಂದೂರು ತಾಲೂಕಿನ ಪಂಚಾಯಿತಿ ಪ್ರಥಮ ಅಧ್ಯಕ್ಷ ಮಹೇಂದ್ರ ಪೂಜಾರಿ ಅಭಿಮಾನಿಗಳು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮ ನಡೆಯಿತು. ಸನ್ಮಾನಿಸಿ ಮಾತನಾಡಿದ ಬಂದರು, ಮೀನುಗಾರಿಕೆ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಕೇಂದ್ರಿತವಾಗಿ ಹೊಸ ತಾಲೂಕು ರಚನೆಯ ಕನಸು ಕೈಗೂಡಿದೆ. ಈಗ ತಾಲ್ಲೂಕಿನ ಅಭಿವೃದ್ಧಿ ಕುರಿತಾಗಿ ಜನರ ನಿರೀಕ್ಷೆಗಳು ಗರಿಗೆದರಿರುವ ಕಾರಣ ಹೊಸತಾಗಿ ಅಸ್ತಿತ್ವ ಪಡೆದಿರುವ ತಾಲ್ಲೂಕು ಪಂಚಾಯಿತಿ ಮತ್ತು ಅದರ ಅಧ್ಯಕ್ಷ, ಸದಸ್ಯರ ಹೊಣೆ ಹೆಚ್ಚಿದೆ ಸ್ವಾತಂತ್ರ್ಯ ಗಳಿಸಿ 74 ವರ್ಷಗಳಾದರೂ ದೇಶದ ಸಂಪೂರ್ಣ ಪ್ರಗತಿ ಸಾಧ್ಯವಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ವಸತಿಯಂತಹ ಸಮಸ್ಯೆಗಳಿವೆ. ಕೇವಲ ರಸ್ತೆಗಳ ನಿರ್ಮಾಣ, ದುರಸ್ತಿಯಿಂದ ಅಭಿವೃದ್ದಿ ಆಗುವುದಿಲ್ಲ. ಮೊದಲು ಜನರ ಮೂಲ ಅಗತ್ಯಗಳನ್ನು ಒದಗಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು. ಹುಟ್ಟೂರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಹೇಂದ್ರ ಪೂಜಾರಿ, ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಹೋಟೆಲ್ ಅಂಬಿಕಾ ಇಂಟರ್ನ್ಯಾಶನಲ್ ಸಭಾಗಂಣದಲ್ಲಿ ಪ್ರಖಂಡದ ಅಭ್ಯಾಸ ವರ್ಗ ನಡೆಯಿತು. ಮಂಗಳೂರು ವಿಭಾಗದ ಕಾರ್ಯದರ್ಶಿ ಚರಣ ಪಂಪ್ವೆಲ್ ಅಭ್ಯಾಸ ವರ್ಗ ಉದ್ಘಾಟಿಸಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಬಿಜೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಯ ಮಹತ್ವ, ಉದ್ದೇಶ, ಜವಾಬ್ದಾರಿ ಕುರಿತು ಮಾಹಿತಿ ನೀಡಿದರು. ಉದ್ಯಮಿ ಭೀಮೇಶ್ ಕುಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ಹಾಗೂ ಸಂಘಟನೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ಮಾಡುವುದಾಗಿ ಹೇಳಿದರು. ಈ ಸಂದರ್ಭ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ, ಜಿಲ್ಲಾ ಧರ್ಮ ಪ್ರಚಾರಕ್ ಗುರುರಾಜ್, ಬೈಂದೂರು ತಾಲೂಕು ಕಾರ್ಯದರ್ಶಿ ಪ್ರಶಾಂತ್, ವಿಶ್ವ ಹಿಂದೂ ಪರಿಷತ್ ಸಂಘಟನ ಕಾರ್ಯದರ್ಶಿ ಜಗದೀಶ್ ಕೊಲ್ಲೂರು ಉಪಸ್ಥಿತರಿದ್ದರು. ಶ್ರೀನಿವಾಸ್ ಮುದೂರು ಸ್ವಾಗತಿಸಿದರು. ನಿತ್ಯಾನಂದ ಗೀತೆ ಹಾಡಿದರು ಶರತ್ ಮೊವಾಡಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಲಯನ್ಸ್ ಕ್ಲಬ್ನ ಪ್ರಾಯೋಜಕತ್ವದಲ್ಲಿ ಪ್ರಾರಂಭವಾದ ಜಿಲ್ಲೆಯ 103ನೇ ಇಂಜಿನಿಯರ್ಸ್ ಲಯನ್ಸ್ ಕ್ಲಬ್ ಉದ್ಘಾಟನೆ ನಡೆಯಿತು ಉದ್ಘಾಟಿಸಿ ಪ್ರಮಾಣ ವಚನ ಬೋದಿಸಿದ ಲಯನ್ಸ್ 317 ’ಸಿ’ ಯ ಜಿಲ್ಲಾ ಗವರ್ನರ್ ನೀಲಕಂಠ ಎಂ ಹೆಗಡೆ, ವೈಯಕ್ತಿಕವಾಗಿ ನೀಡುವ ಸೇವೆಗಿಂತಲೂ ಸಂಘಟನಾತ್ಮಕವಾಗಿ ನೀಡುವ ಸೇವೆಯು ತುಂಬಾ ಪರಿಣಾಮಾಕಾರಿಯಾದುದು. ವಿಶೇಷವಾಗಿ ಇಂಜಿನಿಯರ್ಗಳ ಒಗ್ಗೂಡೂವಿಕೆಯಿಂದ ಮೂಡಿಬರುವ ಕ್ಲಬ್ ಸಾಮಾಜಿಕ ಸೇವೆಯನ್ನು ಸಂಘಟನಾತ್ಮಕವಾಗಿ ಹಾಗೂ ಯೋಜನಾಬದ್ದವಾಗಿ ನೀಡಿ ಯಶಸ್ಸನ್ನು ಗಳಿಸುತ್ತದೆ ಸೇವಾ ಮನೋಬಾವದಿಂದ ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಲ್ಲ ಶಕ್ತಿಯನ್ನು ಈ ಕ್ಲಬ್ ಹೊಂದಿದೆ ಹಾಗೂ ಈ ಕ್ಲಬ್ನಿಂದ ಮಹತ್ತರ ಕಾರ್ಯಗಳು ನಡೆಯಲಿ ಎಂದು ಹೇಳಿದರು. ಲಯನ್ಸ್ ಕ್ಲಬ್ ಕುಂದಾಪುರ ಅಧ್ಯಕ್ಷರಾದ ಚಂದ್ರಶೇಖರ್ ಕಲ್ಪತರು ಅಧ್ಯಕ್ಷತೆ ವಹಿಸಿದ್ದರು, ಕ್ಲಬ್ನ ಪ್ರಾರಂಭಕ್ಕೆ ಕಾರಣೀಕರ್ತರಾದ ಇಂಜಿನಿರ್ ರಮಾನಂದ ಕೆ. ನೂತನ ಸದಸ್ಯರನ್ನು ಪರಿಚಯಿಸಿದರು, ಲಯನ್ಸ್ 317 ’ಸಿ’ ಯ ಪ್ರಥಮ ಉಪಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ ಮಾಜಿ ಜಿಲ್ಲಾ ಗವರ್ನರ್ಗಳಾದ ಲಯನ್ ಪ್ರಕಾಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ಗೆ ಬಂದರು ಇಲಾಖೆಯ ಜಂಟಿ ನಿರ್ದೇಶಕ ಗೋಪಾಲ್ ನಾಯರಿ ಭೇಟಿ ನೀಡಿ ಕಾರಂತರ ಪುತ್ಥಳಿಗೆ ಮಾಲರ್ಪಣೆ ಮಾಡಿ, ರಂಗ ಮಂದಿರ, ಆರ್ಟ್ ಗ್ಯಾಲರಿ ಗ್ರಂಥಾಲಯ ವೀಕ್ಷಿಸಿದರು ವೀಕ್ಷಿಸಿ ಮಾತನಾಡಿದ ಬಂದರು ಇಲಾಖೆಯ ಜಂಟಿ ನಿರ್ದೇಶಕ ಗೋಪಾಲ್ ನಾಯರಿ, ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಜೊತೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಕಾರಂತರದ್ದು ಎಲ್ಲಾರಿಗೂ ಮಾದರಿಯಾದ ಬದುಕು, ಇದನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಜವಬ್ದಾರಿ ನಮ್ಮ ಮೇಲಿದೆ, ಈ ನಿಟ್ಟಿನಲ್ಲಿ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಶ್ಲಾಘನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ ಇದರ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಟ್ರಸ್ಟಿ ಸುಬ್ರಾಯ್ ಆಚಾರ್ಯ, ಉಡುಪಿ ಜಿಲ್ಲೆಯ ಬಂದರು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಾಂತಕರಾದ ಉದಯ ಕುಮಾರ್, ದ.ಕ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕೊಚ್ಚಕ್ಕಿ ಕುಡಿಗಳು ಕುಂದಾಪ್ರ ಕನ್ನಡದ ಸಾಮಾಜಿಕ ಜಾಲತಾಣ ಬಳಗ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕುಂದಗನ್ನಡ ಕವನ ರಚನಾ ಸ್ಪರ್ಧೆಯಲ್ಲಿ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಇವರು ರಚಿಸಿದ ‘ನಮ್ ಭಾಷಿ ನಮ್ ಗತ್’ ಎನ್ನುವ ಕವನ ಈ ಗೌರವಕ್ಕೆ ಪಾತ್ರವಾಗಿದೆ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಗೋಳಿಹೊಳೆ ಯಲ್ಲಿ ಶ್ರೀ ವಿನಾಯಕ ಆಟೋರಿಕ್ಷಾ ಗೂಡ್ಸ್ ಟೆಂಪೋ ಮತ್ತು ಟ್ಯಾಕ್ಸಿ ಚಾಲಕ-ಮಾಲಕರ ಸಂಘದಿಂದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಮತ್ತು ವಾಹನದ ಮೆರವಣಿಗೆ ಆಚರಿಸಲಾಯಿತು . ಸಮಾರಂಭಕ್ಕೆ ಬೈಂದೂರು ಪೊಲೀಸ್ ಠಾಣಾಧಿಕಾರಿ ಸಂಗೀತ ರವರು ತಾಯಿ ಭುವನೇಶ್ವರಿ ಮಾಲಾರ್ಪಣೆ ಮಾಡಿ ನಂತರ ಧ್ವಜರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮೂಕಾಂಬಿಕಾ ದೇವಳದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶಿವರಾಮ್ ಭಟ್ಟರು ಶ್ರೀ ಭುವನೇಶ್ವರಿ ತಾಯಿ ರಥಕ್ಕೆ ಪೂಜೆಯನ್ನು ಮಾಡಿ ರಾಜ್ಯೋತ್ಸವದ ಸಂದೇಶವನ್ನು ಹೇಳಿದರು ಈ ಕಾರ್ಯಕ್ರಮದಲ್ಲಿ ಚಾಲಕ – ಮಾಲಕ ಸಂಘದ ಅಧ್ಯಕ್ಷರಾದ ಮಂಜು ಪೂಜಾರಿ ಸಸಿಹಿತ್ಲು ಮತ್ತು ಕಾರ್ಯದರ್ಶಿ ನಾರಾಯಣ ಪೂಜಾರಿ ಹಾಗೂ ಖಜಾಂಚಿ ಯವರಾದ ಗೋಪಾಲ್ ಮರಾಠಿ ಮತ್ತು ಗೋಳಿಹೊಳೆ ಅರೆಶಿರೂರು ಎಲ್ಲೂರು ಎಳಜಿತ ಘಟಕದ ಸರ್ವ ಸದಸ್ಯರು ಊರಿನ ಗ್ರಾಮಸ್ಥರು ಹಾಜರಿದ್ದರು
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ಭಾನುವಾರ ತಾಲ್ಲೂಕು ಆಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು ಧ್ವಜಾರೋಹಣ ಮಾಡಿ ಮಾತನಾಡಿದ ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಎಲ್ಲ ಭಾಷೆಗಳನ್ನು ಪ್ರೀತಿಸುವ ಜತೆ ಮಾತೃ ಭಾಷೆಯನ್ನು ರಕ್ಷಿಸುವ ಬದ್ಧತೆಯನ್ನು ಕನ್ನಡ ನಾಡು ಹೊಂದಿದೆ’. ಆಚರಣೆ, ಸಂಸ್ಕೃತಿ, ಪರಂಪರೆ, ಆಹಾರ ಹಾಗೂ ಭಾಷಾ ಸೊಗಡಿನಲ್ಲಿ ವಿಭಿನ್ನತೆ ಇದ್ದರೂ, ನಮ್ಮೆಲ್ಲರ ಹೃದಯ ಭಾಷೆ ಕನ್ನಡ ಒಂದೇ ಆಗಿದೆ. ಜನಪದ, ಜಾನಪದವನ್ನು ಉಳಿಸಿ ಬೆಳೆಸಬೇಕಿದೆ’ ಎಂದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎಚ್.ಇಂದಿರಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸದಸ್ಯರಾದ ದೇವಕಿ ಪಿ. ಸಣ್ಣಯ್ಯ, ಪ್ರಭಾಕರ್ ವಿ, ಶ್ರೀಧರ ಶೇರೆಗಾರ್, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣಿಕರ್, ತಾಲ್ಲೂಕು ಯುವಜನ ಸೇವಾ ಮತ್ತು ಕ್ರೀಡಾಕಾರಿ ಕುಸುಮಾಕರ್ ಶೆಟ್ಟಿ ಇದ್ದರು.
