ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಕಾರವು ಪಿಎಂಎವೈ ಯೋಜನೆಯಡಿ ಮೊದಲನೇ ಮನೆ ನಿರ್ಮಾಣ ಮಾಡುವವರಿಗೆ 2.67 ಲಕ್ಷ ರೂ ಸಹಾಯಧನ ನೀಡುತ್ತಿದ್ದು, ಹಾಗೂ ಎಲ್ಲರಿಗೂ ಸೂರು (PMAY(U)Housing For All) ಯೋಜನೆಯ ಸೌಲಭ್ಯ ಪಡೆಯಲು ಬ್ಯಾಂಕಿನ ಪೋರ್ಟಲ್ ನಲ್ಲಿ ಅಪ್ಡೇಟ್ ಆಗದ ಕಾರಣ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ಇದರ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುವುದನ್ನು ಅರಿತ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅವರು ತುರ್ತಾಗಿ ಸ್ಪಂದಿಸಿ ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಂಡಿದ್ದಾರೆ. ಬೈಂದೂರು ಪಟ್ಟಣ ಪಂಚಾಯತ್ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಶೀಘ್ರ ಕ್ರಮ ಕೈಗೊಳ್ಳುವಂತೆ ಅವರು ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ್ದು ಅದರಂತೆ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ದಿಂದ ಆದೇಶ ಮಾಡಿಸಿದ್ದಾರೆ.ಇದರಿಂದ ಇನ್ನೂ ಮುಂದೆ ಹೊಸದಾಗಿ ಮೊದಲನೇ ಮನೆ ಕಟ್ಟುವವರಿಗೆ 2.67 ಲಕ್ಷ ಸಬ್ಸಿಡಿ ಹಾಗೂ ಎಲ್ಲರಿಗೂ ಸೂರು ಸೌಲಭ್ಯ ಅರ್ಹ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಜೆಸಿಐ ಕುಂದಾಪುರ ಸಿಟಿಯ ಮಹಿಳಾ ಘಟಕ ಜೆಸಿರೆಟ್ ಕುಂದಾಪುರ ಸಿಟಿ ಇದರ ಸಹಯೋಗದಲ್ಲಿ ಮಹಿಳಾದಿನ ದ ಪ್ರಯುಕ್ತ ಹಮ್ಮಿಕೊಂಡ ಮಹಿಳಾ ಉತ್ಸವ್- ‘ಬಂಧನ್’-2021′- ಸಪ್ತಾಹದ ಅಂಗವಾಗಿ ನಡೆದ ಮಾಹಿತಿ ಉಪನ್ಯಾಸ ಕಾರ್ಯಕ್ರಮ ಇಲ್ಲಿನ ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಕುಂದಾಪುರದ ಎ.ಎಸ್.ಐ ಸುಧಾಕರ್ ಮಾತನಾಡಿ, ಆತ್ಮರಕ್ಷಣಾ ಮಾರ್ಗಗಳ ನಿಖರವಾದ ತಿಳುವಳಿಕೆ ಪ್ರತಿಯೊಬ್ಬ ಹುಡುಗಿ ಅಥವಾ ಮಹಿಳೆಗೂ ಇರಬೇಕು. ಆತ್ಮ ರಕ್ಷಣೆಯ ಸ್ಪಷ್ಟ ಅರಿವು ದೇಹದಲ್ಲಿ ಶಕ್ತಿ, ಧೃಢತೆಯನ್ನು ಕಾಪಾಡುವಲ್ಲಿ ಸಹಕಾರಿಯಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಜೆ.ಸಿ.ಐ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಮಾತನಾಡಿ, ಆತ್ಮರಕ್ಷಣೆಯೆಂದರೆ ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೇ ಅಗತ್ಯವಿದ್ದ ಇತರರಿಗೂ ಸಹಾಯ ಮಾಡುವುದಾಗಿರುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ದಿನಾಚರಣಾ ಅಂಗವಾಗಿ ಜೆ.ಸಿಐ ಕುಂದಾಪುರ ಸಿಟಿಯವರು ವಾರದುದ್ದಕ್ಕೂ ನಡೆಸುತ್ತಿರುವ ಮಾಹಿತಿ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಮಾತನಾಡಿ, ಮಹಿಳೆಯರಲ್ಲಿ ಆತ್ಮಸ್ಥೈರ್ಯವಿದ್ದು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಲಾಭಗಳಿಕೆಯ ಸಂಶೋಧನೆ ಸಮಷ್ಟಿಯ ಶ್ರೇಯಸ್ಸಿಗೆ ಕೊಡುಗೆ ನೀಡದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಬಯೋಟೆಕ್ನಾಲಜಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಘಟಕದ ಸಹಯೋಗದಲ್ಲಿ ಮಿಜಾರಿನ ಎಂಬಿಎ ಸೆಮಿನಾರ್ ಹಾಲ್‌ನಲ್ಲಿ ನಡೆದ ಕೊರೊನಾ ನಂತರದಲ್ಲಿ ಜೈವಿಕ ವಿಜ್ಞಾನದ ಅಭಿವೃದ್ಧಿ ಕುರಿತ ಅಂತರರಾಷ್ಟ್ರೀಯ ಆನ್ಲೈನ್ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಲಾಭದ ನಿರೀಕ್ಷೆಯಿಂದ ಸಂಶೋಧನೆ ನಡೆಸಬಾರದು. ಸಂಶೋಧನೆಗೆ ಅಗತ್ಯವಿರುವ ಪ್ರೇರಣೆ ಯಾವುದೇ ಮೂಲದಿಂದ ಪಡೆಯಬಹುದು. ತರಗತಿಯೊಳಗಿನ ಜ್ಞಾನದೊಂದಿಗೆ ಹೊಸ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದು ಕಲಿಕೆಗೆ ಅಗತ್ಯ. ಕೋವಿಡ್ ನಿಯಂತ್ರಣದಲ್ಲಿ ವಿಜ್ಞಾನ ಪ್ರಮುಖ ಪಾತ್ರವಹಿಸಿದೆ. ಕೊರೊನಾ ಪ್ರಭಾವದಿಂದ ವಿಜ್ಞಾನದ ತೀಕ್ಷಣೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಂಶೋಧನಾ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಪ್ರಸ್ತುತ ಪ್ರಪಂಚವು ಕೊರೊನಾ ಭೀತಿಯಲ್ಲೇ ಬದುಕುವ ಪರಿಸ್ಥಿತಿಯಲ್ಲಿದೆ ಆದ್ದರಿಂದ ವಿಜ್ಞಾನ ಜನರಲ್ಲಿ ಆತ್ಮವಿಶ್ವಾಸ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಹಳದಿ ರೋಗದಿಂದ ಅಡಕೆ ತೋಟ ನಾಶ ಹೊಂದಿದವರಿಗೆ ಒಂದು ಬಾರಿ ಪರಿಹಾರವಾಗಿ 25 ಕೋಟಿ ರೂ. ಪ್ಯಾಕೇಜ್ ಬಜೆಟ್‌ನಲ್ಲಿ ಘೋಷಿಸಲು ಹಾಗೂ ಹಳದಿ ರೋಗ ನಿವಾರಣೆಗೆ ಉನ್ನತ ಮಟ್ಟದ ಸಂಶೋಧನೆಗೆ ಆದೇಶ ನೀಡುವಂತೆ ಕರಾವಳಿ ಬಾಗದ ಮಂತ್ರಿಗಳು ಹಾಗು ಮಲೆನಾಡು ಮತ್ತು ಕರಾವಳಿಯ ಶಾಶಕರುಗಳು ತೋಟಗಾರಿಕಾ ಸಚಿವರೊಂದಿಗೆ ಸಭೆ ನಡೆಸಿ ಮುಂದುವರಿದ ಫಲವಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಅವರು ಬಜೆಟ್‌ನಲ್ಲಿ ಪ್ಯಾಕೇಜ್ ಘೋಷಿಸುವುದಾಗಿ ಭರವಸೆ ನೀಡಿದ್ದಾರೆ. ಹಳದಿ ರೋಗ ನಿವಾರಣೆಗೆ ಉನ್ನತ ಮಟ್ಟದ ಸಂಶೋಧನೆಗೆ ಆದೇಶ ನೀಡುವುದಾಗಿಯೂ ಮುಖ್ಯಮಂತ್ರಿ ಅವರು ಭರವಸೆ ನೀಡಿದರು ತೋಟಗಾರಿಕೆ ಸಚಿವ ಆರ್. ಶಂಕರ್, ಕರಾವಳಿಯ ಸಚಿವರಾದ ಎಸ್.ಅಂಗಾರ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರ ನೇತ್ರತ್ವದಲ್ಲಿ ಶಾಸಕರ ನಿಯೋಗ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿತ್ತು. ಅಡಕೆಗೆ ಪ್ರಸ್ತುತ ಬೆಲೆ ಬಂದಿದೆ. ಆದರೆ ಕರಾವಳಿ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ದೈನಂದಿನ ಕಾರ್ಯಗಳಲ್ಲಿ ತಂತ್ರಜ್ಞಾನದ ಬಳಕೆಯ ಜೊತೆಗೆ ಅವುಗಳ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡುವುದು ಅವಶ್ಯವೆಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಅವರು ನಗರದ ಮಣಿಪಾಲ್ನ ಜಿಲ್ಲಾ ಪಂಚಾಯತ್ನ ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಆಡಳಿತ ತರಬೇತಿ ಸಂಸ್ಥೆ, ಇ-ಆಡಳಿತ ಕೇಂದ್ರ ಬೆಂಗಳೂರು, ಇ- ಆಡಳಿತ ದತ್ತಾಂಶ ಕೇಂದ್ರ ಮೈಸೂರು ಇವರ ಸಹಯೋಗದೊಂದಿಗೆ ಸಾಮರ್ಥ್ಯ ಸಂಘಟನೆ ಯೋಜನೆಯ ಅಡಿಯಲ್ಲಿ ಸೈಬರ್ ಸೆಕ್ಯೂರಿಟಿ ಮತ್ತು ಇ- ಆಡಳಿತ ವಿಷಯಗಳ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಾಹಿತಿ ತಂತ್ರಜ್ಞಾನದ ಬಳಕೆ ದೈನಂದಿನ ಜೀವನದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೆಲವರು ಇದರ ದುರುಪಯೋಗ ಪಡಿಸಿಕೊಂಡು ದೇಶದ ಯಾವುದೋ ಮೂಲೆಯಲ್ಲಿ ಕುಳಿತು ಅಮಾಯಕರ ಬ್ಯಾಂಕ್ ಖಾತೆಗಳಿಗೆ ಖನ್ನಾ, ಇ-ಮೇಲ್ ಐ.ಡಿ.ಗಳ ಹ್ಯಾಕ್, ಜಾಲತಾಣಗಳ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇವುಗಳಿಗೆ ಕಡಿವಾಣ ಹಾಕಲು ಸೈಬರ್ ಸೆಕ್ಯೂರಿಟಿಗಳ ಮಾಹಿತಿ ಹೊಂದಿ ಸುರಕ್ಷತೆಗೆ ಆದ್ಯತೆ ನೀಡುವುದು ಒಳಿತು ಎಂದರು. ಯಾವುದೇ ಓರ್ವ ಅಪರಿಚಿತ…
ಕುಂದಾಪ್ರ ಡಾಟ್ ಸುದ್ದಿ. ಕುಂದಾಪುರ: ತಾಲೂಕಿನ ತ್ರಾಸಿ ಗ್ರಾಮ ಪಂಚಾಯತ್ನ ಕಛೇರಿಯಲ್ಲಿ ಸಂಗ್ರಹಿಸಿದ ವಿವಿಧ ರೀತಿಯ ತೆರಿಗೆಯ ಬಾಬ್ತು 35,833 ರೂ. ನಗದನ್ನು ತೆರಿಗೆ ಸಂಗ್ರಹಿಸಿದ ಸಿಬ್ಬಂದಿಯು ಕ್ರೋಢೀಕರಿಸಿ ಕಛೇರಿಯ ಅಲ್ಮೇರಾ ಹಾಗೂ ಕಪಾಟಿನಲ್ಲಿ ಇರಿಸಿದ್ದ ಹಣವನ್ನು ಕಳ್ಳರು ಕಿಟಕಿಯ ಕಬ್ಬಿಣದ ಸರಳನ್ನು ಬಗ್ಗಿಸಿ ಒಳಪ್ರವೇಶಿಸಿ, ಕಳವು ಮಾಡಿದ್ದಾರೆ ಎನ್ನುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಗಂಗೊಳ್ಳಿ ಠಾಣಾಧಿಕಾರಿ ಭೀಮಾಶಂಕರ್ ಹಾಗೂ ಅವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಕಳವಾದ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಎನ್ ಅವರ ನಿರ್ದೇಶನದಲ್ಲಿಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಕುಂದಾಪುರ ಉಪವಿಭಾಗ ಪೊಲೀಸ್ ಅಧೀಕ್ಷಕ ಶ್ರೀಕಾಂತ. ಕೆ., ಬೈಂದೂರು ವೃತ್ತ ನೀರೀಕ್ಷಕ ಸಂತೋಷ್ ಕಾಯ್ಕಿಣಿ ಇವರ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಭೀಮಾಶಂಕರ ಸಿನ್ನೂರ ಸಂಗಣ್ಣ ಇವರ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳಾದ ಮೋಹನ ಪೂಜಾರಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ. ಗಾಯತ್ರಿ ಪೈ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ. ಅವರು ಮಂಗಳೂರು ವಿಶ್ವ ವಿದ್ಯಾನಿಲಯದ ಜೀವ ವಿಜ್ಞಾನ ವಿಭಾಗದ ಪ್ರೊ. ಚಂದ್ರ ಎಂ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಐಸೋಲೇಶನ್, ಐಡೆಂಟಿಫಿಕೇಶನ್ ಆಂಡ್ ಆಂಟಿಮೈಕ್ರೋಬಿಯಲ್ ಆಕ್ಟಿವೀಟೀಸ್ ಆಫ್ ಆಫೆಂಡೋಪೈಥಿಕ್ ಫಂಗಿ ಫ್ರಾಮ್ ಮೆಡಿಶಿನಲ್ ಪ್ಲಾಂಟ್ಸ್ ಆಫ್ ಉಡುಪಿ ಡಿಸ್ಟ್ರಿಕ್ಟ್ (Isolation, Identification and Antimicrobial Activities of Endophytic Fungi from Medicinal Plants of Udupi District) ಎಂಬ ಮಹಾಪ್ರಬಂಧವನ್ನು ಪಿಹೆಚ್.ಡಿ ಪದವಿಗಾಗಿ ಮಂಡಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಲ್ಲಿ ಮಾಗಣಿ ಗುರಿಕಾರರು ಮತ್ತು ಸಹಮೊಕ್ತೇಸರರ ಚಿಂತನ ಮಂಥನ ಸಮಾಗಮ ಇತ್ತೀಚೆಗೆ ನಡೆಯಿತು. ದೇಗುಲದ ಆಡಳಿತ ಮೊಕ್ತೇಸರ ಡಾ. ಸಿ. ಜಯರಾಮ ಶೆಟ್ಟಿಗಾರ ಚೆರ್ಕಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಗಣಿ ಗುರಿಕಾರರು ಆಯಾ ಪ್ರದೇಶದ ಕುಟುಂಬಗಳ ಶೋಡಸ ಸಂಸಂಸ್ಕಾರಗಳ ಕಾರ್ಯಗಳಲ್ಲಿ ಹಾಜರಿದ್ದು, ಅಗತ್ಯ ಸಹಕಾರ ನೀಡುವ ಬಗ್ಗೆ ಚಿಂತನೆ ನಡೆಸಲಾಯಿತು, ನಿಶ್ಛಿತಾರ್ಥ ಮತ್ತು ವಿವಾಹದ ಸಮಯದಲ್ಲಿ ಉಪಸ್ಥಿತರಿದ್ದು ಕರಾವಳಿ ಪದ್ಮಶಾಲಿಗರ ಏಕರೂಪ ವಿವಾಹ ಕ್ರಮಗಳ ಬಗ್ಗೆ ಜಾರಿಗೆ ತರುವ ಕುರಿತು ಚಿಂತನೆಗಳಾದವು. ನಮ್ಮ ಸಂಸ್ಕಾರಗಳು ಏಕಾಭಿಪ್ರಾಯ ಮತ್ತು ಒಂದೇ ದಿಕ್ಕಿನತ್ತ ಸಾಗಲು ಮಾಗಣಿ ಗುರಿಕಾರರು, ಕುಲಭಾಂದವರು ವಿಧಿವತ್ತಾಗಿ ಪಾಲಿಸಿ ಮುಂದಿನ ತಲೆಮಾರಿಗೂ ಅನುಸರಣೀಯವಾಗಬೇಕು ಎಂದರು. ಸುಮಾರು ಇನ್ನೂರು ಕಿ.ಮೀ ಗೂ ಹೆಚ್ಚು ವ್ಯಾಪ್ತಿಯುಳ್ಳ ಕುಂದಗನ್ನಡ ತುಳು ಮತ್ತು ಕನ್ನಡ ಮಾತನಾಡುವ ಪ್ರದೇಶವಿದ್ದು, ಆಚರಣೆಗಳು ಪ್ರಾದೇಶಿಕ ಬಿನ್ನತೆ ಇದ್ದು, ಈ ತಾರತಮ್ಯತೆಯ ಬಗ್ಗೆ ಹೋಗಲಾಡಿಸಿ ಏಕಾಭಿಪ್ರಾಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋವಿಡ್– 19 ಸಂಕಷ್ಟದಲ್ಲಿ ಜನರಿರುವಾಗ ತೆರಿಗೆ ಏರಿಕೆ ಮಾಡಿರುವುದು ಜನ ವಿರೋಧಿಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ಕಾಂಗ್ರೆಸ್ ಸದಸ್ಯರು, ಯಾವುದೇ ಕಾರಣಕ್ಕೂ ತೆರಿಗೆ ಏರಿಕೆ ಮಾಡಬಾರದು, ಒಂದು ವೇಳೆ ಏರಿಕೆ ಮಾಡಿದಲ್ಲಿ, ಜನರೊಂದಿಗೆ ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಸಭಾತ್ಯಾಗ ಮಾಡಿದ ಮಾಡಿದ ಘಟನೆ ಸಾಮಾನ್ಯ ಸಭೆಯಲ್ಲಿ ನಡೆಯಿತು. ಕುಂದಾಪುರದ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆ ಸಭೆಯಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ದಶಕದಿಂದ ಶಾಸ್ತ್ರಿ ಸರ್ಕಲ್ ಬಳಿ ಫ್ಲೈಓವರ್ ಕಾಮಗಾರಿ ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆ ಕಂಪನಿಯ ಅಧಿಕಾರಿ ಇದೇ 31 ರೊಳಗೆ ಒಳಗೆ ಕಾಮಗಾರಿ ಮುಗಿಸಿ ಕೊಡುವ ಭರವಸೆ ವ್ಯಕ್ತಪಡಿಸಿದರು. ಫ್ಲೈಓವರ್ ಕಾಮಗಾರಿ ಹಾಗೂ ಜಲಸಿರಿ ಯೋಜನೆಗಳನ್ನು ಅವಧಿಯೊಳಗೆ ಪೂರೈಸದೇ ಇದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಜತೆಗೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುತ್ತದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವ ಹಕ್ಕುಗಳ ಘಟಕ, ರೋಟರಿ ದಕ್ಷಿಣ ಹಾಗೂ ಯುವ ಸ್ಪಂದನ ಉಡುಪಿ ಆಯೋಜಿಸಿದ ‘ಪೋಕ್ಸೊ’ ಖಾಯಿದೆ, ಮಾನವ ಹಕ್ಕುಗಳು ಮತ್ತು ರಸ್ತೆ ಸುರಕ್ಷತೆಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕೋಟ ಪೊಲೀಸ್ ಠಾಣೆಯ ಎ.ಎಸ್.ಐ ಮುಕ್ತಾ ಬಾಯಿ ಹಾಗೂ ಕುಂದಾಪುರದ ನ್ಯಾಯವಾದಿ ರಾಘವೇಂದ್ರ ಚರಣ್ ನಾವಡ ವಿವಿಧ ಖಾಯಿದೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಕುಂದಾಪುರ ಸೌತ್ ರೋಟರಿಯ ಉಪಾಧ್ಯಕ್ಷ ಕೆ.ಪಿ. ಭಟ್, ಯುವ ಪ್ರವರ್ತಕ ನರಸಿಂಹ ಗಾಣಿಗ, ಕಾಲೇಜಿನ ಮಾನವ ಹಕ್ಕುಗಳ ಘಟಕದ ಸಂಯೋಜಕರಾದ ಅವಿತಾ ಕೊರೆಯಾ, ಡಾ. ದೀಪಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರಕ್ಷಿತಾ ಸ್ವಾಗತಿಸಿ, ಶ್ವೇತಾ ವಂದಿಸಿ, ಕಾವ್ಯ ನಿರೂಪಿಸಿದರು.
