ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ ಕಾಲೇಜು ಆವರಣದೊಳಗೆ ಪ್ರವೇಶ ನಿರಾಕರಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಗೇಟಿನ ಬಳಿಯೇ ತಡೆದು, ಸರ್ಕಾರದ ಆದೇಶದಂತೆ ಕಾಲೇಜು ವಸ್ತ್ರಸಂಹೀತೆಯನ್ನು ಎಲ್ಲಾ ವಿದ್ಯಾರ್ಥಿಗಳು ಪಾಲಿಸಬೇಕು ಎಂದು ನಿನ್ನೆಯೇ ಪೋಷಕರ ಸಭೆಯಲ್ಲಿ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಆದೇಶ ಪಾಲಿಸುವುದಿದ್ದರೆ ಮಾತ್ರ ಕಾಲೇಜು ಆವರಣದೊಳಕ್ಕೆ ಬನ್ನಿ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಕಾಲೇಜಿನ ಆವರಣದ ಹೊರಗೆ ನಿಂತ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು, ನಾವು ಭಾರತದ ಪ್ರಜೆಗಳು, ನಮಗೂ ಕಲಿಕೆಗೆ ಅವಕಾಶ ಕೊಡಿ. ಕಾಲೇಜು ಶಿಕ್ಷಣ ಅಂತಿಮ ಹಂತದಲ್ಲಿರುವಾಗ ಇಂತಹ ಕಾನೂನು ತರುವುದು ಸರಿಯಲ್ಲ. ಮೊದಲೇ ಹೇಳಿದ್ದರೆ ನಾವು ಈ ಕಾಲೇಜಿಗೆ ಪ್ರವೇಶ ಪಡೆಯುತ್ತಿರಲಿಲ್ಲ. ಹಿಜಾಬ್ ಕಾರಣವಿಟ್ಟುಕೊಂಡು ನಮ್ಮ ಭವಿಷ್ಯ ಹಾಳುಮಾಡಬೇಡಿ ಎಂದು ಮನವಿ ಮಾಡುತ್ತಾ ಕಣ್ಣೀರು ಹಾಕಿದರು. ಒಂದು ಹಂತದಲ್ಲಿ ಪ್ರಾಂಶುಪಾಲರು ಕಾಲೇಜು ಗೇಟು ಮುಚ್ಚಲು ಮುಂದಾದಾಗ ಆಕ್ರೋಶಗೊಂಡ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದುಡಿಯುವ ಶಕ್ತಿಯನ್ನು ಕಳೆದುಕೊಂಡಾಗ, ಪ್ರತಿ ತಿಂಗಳೂ ಜೀವನ ನಿರ್ವಹಣೆಗಾಗಿ ನಿಶ್ಚಿತ ಮಾಸಿಕ ಆದಾಯ ಬರುವಂತಿರಬೇಕು ಎಂಬ ಆಶಯ ಹೊಂದಿರುತ್ತಾನೆ. ಸರ್ಕಾರಿ ನೌಕರರಿಗಾದರೆ ಸರ್ಕಾರವೇ ಪ್ರತೀ ತಿಂಗಳೂ ನಿವೃತ್ತಿ ವೇತನ ನೀಡುತ್ತದೆ. ಆದರೆ ಯಾವುದೇ ಉದ್ಯೋಗ ಭದ್ರತೆ ಇಲ್ಲದ ಅಸಂಘಟಿತ ಕಾರ್ಮಿಕರು ಮತ್ತು ಸ್ವಯಂ ಉದ್ಯೋಗಿಗಳು ತನ್ನ ದುಡಿಮೆಯ ಅವಧಿಯಲ್ಲಿ ಸಾಕಷ್ಟು ಹಣವನ್ನೂ ಕೂಡಿಡಲೂ ಆಗದೇ ಜೀವನದ ಸಂಧ್ಯಾಕಾಲದಲ್ಲಿ ಆರ್ಥಿಕ ಸಂಕಷ್ಠಕ್ಕೆ ಸಿಲುಕುತ್ತಾರೆ. ಇವರು ಪಿಂಚಣಿ ಸೌಲಭ್ಯದಿಂದ ವಂಚಿತರಾಗುವುದನ್ನು ತಡೆಯಲು ಇವರಿಗೂ ಸಹ 60 ವರ್ಷದ ನಂತರ ಸರ್ಕಾರದಿಂದಲೇ ಪಿಂಚಣಿ ಪಡೆಯುವ ಯೋಜನೆ ಲಭ್ಯವಿದೆ. ಭಾರತ ದೇಶದ ಶೇ.50ರಷ್ಟು ಆದಾಯವು ಅಸಂಘಟಿತ ವಲಯದ ಅಂದಾಜು 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದ್ದು, ಅಸಂಘಟಿತ ವಲಯದಲ್ಲಿ ಗೃಹ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ.ಫೆ.2: ಕುಂದಾಪುರದ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಸ್ಕಾರ್ಫ್ (ಹಿಜಾಬ್) ಧರಿಸುವುದನ್ನು ವಿರೋಧಿಸಿ, ಹಿಂದೂ ಸಮುದಾಯದ ವಿದ್ಯಾರ್ಥಿಗಳು ಬುಧವಾರ ಕೇಸರಿ ಶಾಲು ಧರಿಸಿ ಕಾಲೇಜಿಗೆ ತೆರಳಿರುವುದು ಇದೀಗ ವಿವಾದವಾಗಿ ಮಾರ್ಪಟ್ಟಿದೆ. ಘಟನೆಯನ್ನು ತಿಳಿಗೊಳಿಸಲು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಪೋಷಕರ ಸಭೆ ಫಲಪ್ರದವಾಗಿಲ್ಲ. ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಒಂದಷ್ಟು ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸುವುದನ್ನು ವಿರೋಧಿಸಿ ಮತ್ತೊಂದಷ್ಟು ವಿದ್ಯಾರ್ಥಿಗಳು ಬುಧವಾರ ಕೇಸರಿ ಶಾಲು ಧರಿಸಿ ತೆರಳಿದ್ದರು. ಸುಮಾರು 28 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸುತ್ತಿದ್ದು ಇಂದು 100ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಪರಿಸ್ಥಿತಿ ವಿಕೋಪಕ್ಕೆ ಬರುವ ಲಕ್ಷಣಗಳು ಕಾಣುತ್ತಲೇ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಕರಣವನ್ನು ಸುಖಾಂತ್ಯಗೊಳಿಸಲು ಖುದ್ದು ಕಾಲೇಜಿಗೆ ಭೇಟಿ ನೀಡಿದ್ದರು. ಕೇಸರಿ ಶಾಲು ತೆಗೆಯಬೇಕಿದ್ದರೆ, ಹಿಜಾಬ್ ಕೂಡ ಧರಿಸಬಾರದು ಎಂದು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಟನೆಯಿಂದ ನಿರ್ದೇಶನದ ತನಕ ಮೊದಲ ಬಾರಿಗೆ ಹೊಸ ಪ್ರತಿಭೆಗಳು ಪರಿಚಯಿಸಿಕೊಂಡು ನಿರ್ಮಾಣ ಮಾಡಿರುವ ‘ಕಲ್ಮಶ’ ಕಿರುಚಿತ್ರ ಈಗ ಎಲ್ಲಡೆ ಸದ್ದು ಮಾಡುತ್ತಿದೆ. ಹೊಸಬರ ತಂಡವಾದ ‘ಇಷ್ಟಾರ್ಥ ಪ್ರೊಡಕ್ಷನ್’ ಅವರ ಮೊದಲ ಪ್ರಯತ್ನ ಎಲ್ಲರ ಮನ ಗೆದ್ದಿದೆ. ಗೆಳೆತನದ ನಡುವೆ ಸ್ವಾರ್ಥ ಎಂಬುದು ಬಂದಾಗ ಏನಾಗಬಹುದು ಎಂಬುದನ್ನ ಎಳೆಯಾಗಿ ಇಟ್ಟುಕೊಂಡು ಮಾಡಿರುವ ಚಿತ್ರ, ಪ್ರೇಕ್ಷಕರ ಕುತೂಹಲಕ್ಕೆ ಕೊನೆತನಕ ತಿರುವುಗಳು ನೀಡುತ್ತ, ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಮತ್ತು ನಿರ್ದೇಶನವನ್ನು ಪ್ರಸಾದ್ ನೆಲ್ಲಿಕಟ್ಟೆ ಉತ್ತಮವಾಗಿ ನಿರ್ವಹಿಸಿದ್ದಾರೆ. ಸಹ ನಿರ್ದೇಶನ ಮಾಡಿರುವ ಪ್ರದೀಪ್ ಮೊಗವೀರ ಗುಡಿಬೆಟ್ಟು, ಪ್ರೇಕ್ಷಕರಿಗೆ ಕಥೆಯ ಸಾರಾಂಶವನ್ನು ಸೂಕ್ಷ್ಮವಾಗಿ ತಿಳಿಯುವಂತೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ. ಹೊಸ ಪ್ರತಿಭೆಗಳ ನಟನೆಯನ್ನು ಬಹಳಷ್ಟು ಅಚ್ಚುಕಟ್ಟಾಗಿ ಸೆರೆ ಹಿಡಿಯುವ ಪ್ರಯತ್ನದಲ್ಲಿ ಮೊದಲ ಬಾರಿಗೆ ಛಾಯಾಗ್ರಹಣಕ್ಕೆ ಕಾಲಿಟ್ಟ ಶಾಶ್ವತ್ ಎಸ್ ಶೆಟ್ಟಿ ಯಶಸ್ವಿಯಾಗಿದ್ದಾರೆ. ಇಂಟ್ರೋ ಎಡಿಟಿಂಗ್ ಹಾಗೂ ಹಿನ್ನೆಲೆ ಸಂಗೀತವನ್ನು ಕೆ. ಕ್ರಿಯೆಶನ್ಸ್ ಉತ್ತಮವಾಗಿ ನೀಡಿದ್ದಾರೆ. ಮತ್ತು ಅಜಿತ್ ಮೇಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ‘ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಯ ಅವ್ಯವಸ್ಥೆಯ ಕುರಿತು ಅದೆಷ್ಟು ಬಾರಿ ಜನಪ್ರತಿನಿಧಿಗಳು ಸೂಚಿಸಿದರೂ ಕೆಲಸ ಆಗಿಲ್ಲ. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಜನರ ಬೇಡಿಕೆಗೆ ಸ್ಪಂದನೆವೇ ದೊರೆಯುತ್ತಿಲ್ಲ ಎಂದರೆ ಪ್ರತಿಭಟನೆಯೊಂದೆ ನಮಗಿರುವ ದಾರಿ ಇದು ಜನಪ್ರತಿನಿಧಿ ಸರ್ಕಾರದ ವಿರುದ್ದವಲ್ಲ. ಕಾಮಗಾರಿ ನಡೆಯಬೇಕು ಸರ್ವಿಸ್ ರಸ್ತೆ ಹೊಂಡಗಳು ಮುಚ್ಚಬೇಕು ಎನ್ನುವುದಷ್ಟೆ ನಮ್ಮ ಆಗ್ರಹ. ಇದಕ್ಕಾಗಿ ಹತ್ತು ದಿನಗಳ ಗಡುವು ಕೊಡುತ್ತೇವೆ. ಇದರೊಳಗೆ ಸರಿಯಾಗದೆ ಇದ್ದರೆ 50 ಹೊಂಡಗಳಲ್ಲಿ ಬಾಳೆಗಿಡ ನೆಡುತ್ತೇವೆ’ ಎಂದು ಕುಂದಾಪುರ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಪತ್ರಿಕಾ ಹೇಳಿಕೆಯನ್ನು ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಅವರು, ‘ಕುಂದಾಪುರ ಬಿಜೆಪಿ ಅಧ್ಯಕ್ಷರು ನೀಡಿರುವ ಪತ್ರಿಕಾ ಹೇಳಿಕೆಯನ್ನು ಕುಂದಾಪುರ ಕಾಂಗ್ರೆಸ್ ಸ್ವಾಗತಿಸುತ್ತದೆ. ಹಾಗೆಯೇ ಕಾಂಗ್ರೆಸ್ ಮತ್ತಿತರ ಸಮಾನಮನಸ್ಕ ಸಂಘಟನೆಗಳು ಈ ಕುರಿತು ಹಲವಾರು ಬಾರಿ ಹೆದ್ದಾರಿ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಕೂಡ ಈ ತನಕವೂ ಸಕಾರಾತ್ಮಕವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಅಡಿಯಲ್ಲಿ ರಾಜ್ಯಾದ್ಯಂತ ಆರಂಭಿಸಲಾಗುತ್ತಿರುವ ಕಾಮನ್ ಸರ್ವೀಸ್ ಸೆಂಟರ್‌ನ 5 ಸೇವಾ ಕೇಂದ್ರಗಳು ಎಸ್‌ಕೆಡಿಆರ್‌ಡಿಪಿ ಬೈಂದೂರು ವಲಯ ಕಛೇರಿಯಲ್ಲಿ ಬುಧವಾರ ಲೋಕಾರ್ಪಣೆಗೊಂಡಿತು. ಈ ಸಂದರ್ಭ ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ ಪಿ. ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸೇವೆಗಳು ಜನಸಾಮಾನ್ಯರಿಗೆ ದೊರೆಯುವಂತಾಗಬೇಕು ಎಂಬ ನೆಲೆಯಲ್ಲಿ ಸಿಎಸ್‌ಸಿ ತೆರೆಯಲಾಗಿದೆ. ಸರಕಾರ ನಿಗದಿಪಡಿಸಿದ ದರದಲ್ಲಿಯೇ ಜನರಿಗೆ ಸೇವೆ ನೀಡುವ ಉದ್ದೇಶವಿದ್ದು, ಯಾರೊಂದಿಗೆ ಸ್ವರ್ಧೆಗಿಳಿಯುವ ಇರಾದೆ ಇಲ್ಲ. ಆರಂಭದಲ್ಲಿ ಸ್ವ-ಸ್ವಹಾಯ ಸಂಘದ ಸದಸ್ಯರಿಗೆ ಇ-ಶ್ರಮ್ ಕಾರ್ಡ್ ಮಾಡಿಕೊಡಲು ಆದ್ಯತೆ ನೀಡಲಾಗುತ್ತಿದೆ ಎಂದ ಅವರು ರಾಜ್ಯದಲ್ಲಿ ಒಟ್ಟು 6,000 ಸಿಎಸ್ಸಿ ಕೇಂದ್ರ ಆರಂಭವಾಗುತ್ತಿದ್ದು, ಬೈಂದೂರು ತಾಲೂಕಿನಲ್ಲಿ ಒಟ್ಟು 39 ಸಿಎಸ್ಸಿ ಕೇಂದ್ರಗಳನ್ನು ತೆರೆಯಲಾಗಿದೆ. ಮುಂದಿನ ದಿನದಲ್ಲಿ ಇನ್ನೂ 20 ಕಛೇರಿಗಳು ಆರಂಭವಾಗಲಿದೆ ಎಂದರು. ಎಸ್‌ಕೆಡಿಆರ್‌ಡಿಪಿ, ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ, ಬೈಂದೂರು ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷ ರಘುರಾಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಮಹಾಂಕಾಳಿ ಅಮ್ಮನವರ ದೇವಸ್ಥಾನದ ಪ್ರಸಿದ್ಧ ಮಾರಿಜಾತ್ರೆಯ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ವತಿಯಿಂದ ನಡೆದ ಚಾಯ್ ಪೇ ಜಾತ್ರಾ ಕಾರ್ಯಕ್ರಮವನ್ನು ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿಯವರು ಉದ್ಘಾಟಿಸಿದರು. ಬಿಜೆಪಿ ಮುಖಂಡ ಪುಪ್ಪರಾಜ್ ಶೆಟ್ಟಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ್ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಭಟ್ಕಳ ಅರ್ಬನ್ ಕೋ ಬ್ಯಾಂಕ್ ನಿರ್ದೇಶಕ ತುಳಸಿದಾಸ್ ಮೊಗೆರ, ಗ್ರಾಮ್ ಪಂಚಾಯತ್ ಸದಸ್ಯ ನಾಗರಾಜ್ ಪಿ.ಬಿ, ಬಿಜೆಪಿ ಜಿಲ್ಲಾ ಮೀನುಗಾರರ ಪ್ರಕೋಷ್ಠ ಸಹಸಂಚಾಲಕ ಸಂದೀಪ್ ಖಾರ್ವಿ, ಯುವಮೋರ್ಚಾ ಕಾರ್ಯದರ್ಶಿ ನಿತಿನ್ ಖಾರ್ವಿ ಇವರು ಉಪಸ್ಥಿತರಿದ್ದರು. ಮಹಾಂಕಾಳಿ ಅಮ್ಮನವರ ದೇವಸ್ಥಾನದ ಆಡಳಿತ ಮಂಡಳಿಯ ವಿಶೇಷ ಸಹಕಾರದಿಂದ ಜಾತ್ರ ಮಹೋತ್ಸವದಲ್ಲಿ ನೆರೆದ ಸಾವಿರಾರು ಭಕ್ತರಿಗೆ ಉಚಿತ ಚಹಾ ಹಾಗೂ ಲಘು ಉಪಹಾರವನ್ನು ನೀಡಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೆನರಾ ಬ್ಯಾಂಕ್ ಸಂಸ್ಥಾಪಕರಾದ ದಿ.ಅಮ್ಮಂಬಾಳ ಸುಬ್ಬರಾವ್ ಪೈಯವರ ಸಮಾಜದ ಏಳ್ಗೆಯ ಬಗ್ಗೆ ಅವರಿಗಿದ್ದ ಕಳಕಳಿ ಇಡೀ ಸಮಾಜಕ್ಕೆ ಮಾದರಿಯಾಗಿದೆ. ಇವರ ಸೇವೆ ನಮಗೆಲ್ಲ ದಾರಿ ದೀಪವಾಗಬೇಕು. ಇಂತಹ ವ್ಯಕ್ತಿಯ ಮೂಲಕ ಸ್ಥಾಪಿಸಲ್ಪಟ್ಟ ಕೆನರಾ ಬ್ಯಾಂಕಿನ ಅಧಿಕಾರಿಗಳ ಸಂಘಟನೆಯ ಮೂಲಕ ಈ ಸಂಸ್ಥೆಗೆ ಉತ್ತಮವಾದ ಪ್ರಯೋಗಲಾಯವನ್ನು ಕೊಡುಗೆಯಾಗಿ ನೀಡಿದೆ. ಈ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಮೂಡಿಬರಬೇಕು ಎಂದು ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿಗಳ ಸಂಘಟನೆ ಅಧ್ಯಕ್ಷ ನಾಗರಾಜ್ ಹೇಳಿದರು. ಅವರು ತೆಕ್ಕಟ್ಟೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿಗಳ ಸಂಘಟನೆ ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ೭೭.೧೦೦ ರೂಪಾಯಿಗಳಷ್ಟು ಧನ ಸಹಾಯದಿಂದ ನೀಡಲಾದ ನವೀಕರಣಗೊಂಡ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಉಡುಪಿ ಜಿಲ್ಲಾ ಸಂಘಟನೆಯ ಜತೆ ಕಾರ್ಯದರ್ಶಿ ಯೋಗೀಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಗೀತ, ನಾಟಕ, ಸಾಹಿತ್ಯ ಇವೆಲ್ಲವೂ ನಮ್ಮಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸಿದರೆ ಅದೇ ದೊಡ್ಡ ಯಶಸ್ಸು. ಸತೀಶ್ ಭಟ್ ಮಾಳಕೋಡ್ ಅದೃಷ್ಟವಶಾತ್ ಈ ಕರಾವಳಿ ಭಾಗದಲ್ಲಿ ನೆಲೆ ನಿಂತು ಅನೇಕ ಶಿಷ್ಯರನ್ನು ಹೊಂದಿರುವಂತದ್ದು ನಮಗೆಲ್ಲ ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಉಪನ್ಯಾಸಕ ಸುಜಯೀಂದ್ರ ಹಂದೆ ಹೇಳಿದರು. ಯಶಸ್ವಿ ಕಲಾವೃಂದ ಕೊಮೆ-ತೆಕ್ಕಟ್ಟೆ ಇವರ ಆಶ್ರಯದಲ್ಲಿ ಗುರು ಪರಂಪರಾ ಸಂಗೀತ ಸಭಾ ಕುಂದಾಪುರ ಇವರ ಸಂಗೀತೋಪಾಸನ ಕಾರ್ಯಕ್ರಮದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಜರುಗಿದ ಗುರುವಂದನಾ ಕಾರ‍್ಯಕ್ರಮದಲ್ಲಿ ಭಾರತೀಯ ಸಂಗೀತ ಗುರುಗಳನ್ನು ಅಭಿನಂದಿಸಿ ಮಾತನಾಡಿದರು. ಅವರು ಇಂತಹ ಕರಾವಳಿ ಭಾಗದಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಬೆಳೆಸುವಲ್ಲಿ, ಉಳಿಸುವಲ್ಲಿ, ಆಸಕ್ತಿ ಮೂಡಿಸುವಲ್ಲಿ ಸತೀಶ್ ಭಟ್ ಹಾಗೂ ಪ್ರತಿಮಾ ಭಟ್ ಸಾಕಷ್ಟು ಕೆಲಸ ಮಾಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹ. ಮನೆಮನೆಗೆ ಹೋಗಿ ಪಾಠ ಮಾಡುತ್ತ ಶಿಷ್ಯರ ಜೊತೆಗೆ ಸಲುಗೆ ಮೂಡಿಸಿಕೊಂಡು, ಪ್ರೀತಿಯಿಂದ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸುವ ಮುಖೇನ ಹಿಂದೂಸ್ಥಾನಿ ಸಂಗೀತ ಬೆಳಿಸುವ ಕಾರ್ಯ ಸಮಾಜಕ್ಕೆ ಆರೋಗ್ಯಕರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಗವಂತನ ಸೇವೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಇತಂಹ ಅತಿ ಶ್ರೇಷ್ಠವಾದ ಈ ಬ್ರಹ್ಮಕಲಶೋತ್ಸವ ಸೇವೆ ಮಾಡಲು ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಇತಂಹ ಅವಕಾಶ ಸಿಗುವುದು ಕೆಲವು ಭಕ್ತರಿಗೆ ಮಾತ್ರ. ಅಪಾಯದಂಚಿನಲ್ಲಿದ್ದ ಧ್ವಜಮರವನ್ನು ಭಕ್ತರೆಲ್ಲರ ಏಕತೆಯಿಂದ ನೂತನವಾಗಿ ಪ್ರತಿಷ್ಠಾಪಿಸುವ ಕೆಲಸದೊಂದಿಗೆ ಒಗ್ಗಟ್ಟಿನಿಂದ ದೇವರ ಸೇವೆ ಮಾಡೋಣಾ ಎಂದು ಸಮಾಜ ಸೇವಕ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದರು. ಕೋಟೇಶ್ವರ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸೋಮವಾರ ಸಂಜೆ ಜರುಗಿದ ದೇವಳದ ನೂತನ ಧ್ವಜಸ್ಥಂಭ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮರಥೋತ್ಸವ ಕಾರ‍್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ ಮಾತನಾಡಿ, 68 ವರ್ಷಗಳ ನಂತರ ಈ ಒಂದು ಬ್ರಹ್ಮಕಲಶೋತ್ಸವ ಮಾಡುವ ಸೌಭಾಗ್ಯ ಸಿಕ್ಕಿರುವುದು ನಮ್ಮಲ್ಲರ ಭಾಗ್ಯ. ಈ ಸೇವೆ ಮಾಡಲು ಪ್ರತಿಯೊಬ್ಬರಿಗೂ ಭಗವಂತ ಅವಕಾಶ ನೀಡಿದ್ದಾನೆ. ಕೋವಿಡ್ ಕಾರಣಗಳಿಂದ 2 ವರ್ಷಗಳಿಂದ ಮುಂದೂಡಲ್ಪಟ್ಟ ಈ ಕಾರ‍್ಯಕ್ರಮ ಈ ಬಾರಿ ಅತಿ ಶ್ರದ್ಧೆ ಮತ್ತು…
