‘ಭಾರತದ ಸಂವಿಧಾನ’ ವಿಶೇಷ ಉಪನ್ಯಾಸ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಸಂವಿಧಾನ ದೇಶದ ಎಲ್ಲಾ ಚಟುವಟಿಕೆಗಳ ಭದ್ರಬುನಾದಿಯಾಗಿದ್ದು, ಇಡೀ ಸಂವಿಧಾನದ ಅಂತಃಸತ್ವ ಸಂವಿಧಾನದ ಪ್ರಸ್ತಾವನೆಯಲ್ಲಿದೆ ಎಂದು ಮಂಗಳೂರಿನ ನಿವೃತ್ತ ಪ್ರೊಫೆಸರ್ ಡಾ. ಪಿ. ಅನಂತ ಕೃ? ಭಟ್ ಹೇಳಿದರು.

Call us

Click Here

ಆಳ್ವಾಸ್ ಕಾಲೇಜಿನ ಹ್ಯೂಮಾನಿಟೀಸ್ ವಿಭಾಗವು ಆಯೋಜಿಸಿದ್ದ ’ಭಾರತದ ಸಂವಿಧಾನ’ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಭಾರತ ಸಂವಿಧಾನವು ವಿಶ್ವದಲ್ಲೇ ಅತ್ಯಂತ ದೊಡ್ಡ ಸಂವಿಧಾನ ವಾಗಿದ್ದು, ಸಂವಿಧಾನ ರಚನಾ ಸಭೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡದ ೫ ಮಂದಿ ಸದಸ್ಯರಾಗಿದ್ದದ್ದು ವಿಶೇಷ ಎಂದರು. ಸಕಾರಾತ್ಮಕ ಆಲೋಚನೆ ಹಾಗೂ ಆತ್ಮ ವಿಶ್ವಾಸದಿಂದ ಯುವ ಜನತೆ ಮುನ್ನಡೆದರೆ, ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಅರಿವು ಮೂಡಿಸಿಕೊಂಡಿರುವುದು ಅತೀ ಮುಖ್ಯ. ನಮ್ಮ ದೇಶವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಿವಿಧತೆಯನ್ನು ಹೊಂದಿದೆ. ಈ ಎಲ್ಲಾ ವಿವಿಧತೆಯನ್ನು ನಾವು ಸಂಚರಿಸುವ ಮೂಲಕ ಗ್ರಹಿಸಬೇಕು’ ಎಂದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ವಹಿಸಿದ್ದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃ? ಶೆಟ್ಟಿ, ಹ್ಯೂಮನಿಟಿಸ್ ವಿಭಾಗದ ಡೀನ್ ಸಂಧ್ಯಾ ಕೆ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು

Click here

Click here

Click here

Click Here

Call us

Call us

ಕಾರ್ಯಕ್ರಮವನ್ನು ವಿದ್ಯಾರ್ಥಿ ಕೃ? ನಿರೂಪಿಸಿ, ವಿದ್ಯಾರ್ಥಿ ರೋಹಿತ್ ಕುಮಾರ್ ವಂದಿಸಿದರು.

Leave a Reply